ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA 1st ODI: ಟೀಂ ಇಂಡಿಯಾ ಗೆಲುವಿಗೆ 40 ಓವರ್‌ನಲ್ಲಿ, 250 ರನ್‌ಗಳ ಟಾರ್ಗೆಟ್‌

India vs South africa 1st ODI

ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 40 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಕಲೆಹಾಕಿದ್ದು, ಟೀಂ ಇಂಡಿಯಾ ಗೆಲುವಿಗೆ 250 ರನ್‌ಗಳ ಗುರಿ ನೀಡಿದೆ.

ಮಳೆಯಿಂದಾಗಿ ಟಾಸ್ ಜೊತೆಗೆ ಪಂದ್ಯವೂ ವಿಳಂಭಗೊಂಡ ಹಿನ್ನಲೆಯಲ್ಲಿ ಪಂದ್ಯವನ್ನು 40 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ಶಿಖರ್ ಧವನ್ ನಾಯಕತ್ವದ ಟೀಂ ಇಂಡಿಯಾ ತೇವಾಂಶವಿರುವ ಪಿಚ್‌ನ ಲಾಭ ಪಡೆಯಲು ಮೊದಲು ಬೌಲಿಂಗ್ ಆಯ್ದುಕೊಂಡಿತು. ರುತುರಾಜ್ ಗಾಯಕ್ವಾಡ್ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ರೆ, ರವಿ ಬಿಷ್ಣೋಯಿ ಎರಡನೇ ಸ್ಪಿನ್ನರ್ ಆಗಿ ಆಯ್ಕೆ ಮಾಡಿಕೊಳ್ಳಲಾಯಿತು.

ಉತ್ತಮ ಆರಂಭ ಪಡೆದ್ರೂ ಎಡವಿದ ಮಧ್ಯಮ ಕ್ರಮಾಂಕ

ಉತ್ತಮ ಆರಂಭ ಪಡೆದ್ರೂ ಎಡವಿದ ಮಧ್ಯಮ ಕ್ರಮಾಂಕ

ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆದ್ರೂ ಸಹ, ತನ್ನ ರನ್ ಹರಿವನ್ನ ಮುಂದುವರಿಸುವಲ್ಲಿ ಎಡವಿತು. ಜನ್ನೆಮನ್ ಮಲನ್ 22 ರನ್‌ಗಳಿಸಿ ಶಾರ್ದೂಕ್ ಠಾಕೂರ್‌ ಬೌಲಿಂಗ್‌ನಲ್ಲಿ ಔಟಾದ ಬೆನ್ನಲ್ಲೇ, ತನ್ನ ಕೆಟ್ಟ ಫಾರ್ಮ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಕೇವಲ 8ರನ್‌ಗೆ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡ್ರು.

ಏಡನ್ ಮಕ್ರಾಮ್ ರನ್‌ ಖಾತೆಯನ್ನೇ ತೆರೆಯದೇ ಶೂನ್ಯಕ್ಕೆ ಕುಲ್‌ದೀಪ್ ಯಾದವ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್‌ ಆಗುವ ಮೂಲಕ ತಂಡದ ಕುಸಿತಕ್ಕೆ ಕಾರಣವಾದ್ರು. ದಕ್ಷಿಣ ಆಫ್ರಿಕಾ 71ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಇದೇ ವೇಳೆಯಲ್ಲಿ ಉತ್ತಮವಾಗಿ ಆಡುತ್ತಿದ್ದ ಕ್ವಿಂಟನ್ ಡಿಕಾಕ್ 48 ರನ್‌ಗಳಿಸಿದ್ದಾಗ ರವಿ ಬಿಷ್ಣೊಯಿ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು. ದ.ಆಫ್ರಿಕಾ 110ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡಿತು.

ಟಿ20 ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ವೆಸ್ಟ್ ಇಂಡೀಸ್ ಓಪನರ್, 77 ಎಸೆತಗಳಲ್ಲಿ ಅಜೇಯ 205 ರನ್!

ಭರ್ಜರಿ ಜೊತೆಯಾಟವಾಡಿದ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್

ಐದನೇ ವಿಕೆಟ್‌ಗೆ ಜೊತೆಯಾದ ಹೆನ್ರಿಕ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ದಕ್ಷಿಣ ಆಫ್ರಿಕಾ ತಂಡವನ್ನ ಉತ್ತಮ ಹಂತದತ್ತ ಕೊಂಡೊಯ್ದರು. ಐದನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ಟೀಂ ಇಂಡಿಯಾ ಬೌಲರ್‌ಗಳನ್ನ ಇನ್ನಿಲ್ಲದಂತೆ ಕಾಡಿದ್ರು. ಹೆನ್ರಿಕ್ ಕ್ಲಾಸೆನ್ 65 ಎಸೆತಗಳಲ್ಲಿ ಅಜೇಯ 74 ರನ್‌ ಕಲೆಹಾಕಿದರು. ಇವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿದ್ದವು.

ಇನ್ನು ಟಿ20 ಸರಣಿಯಲ್ಲಿ ಅಮೋಘ ಶತಕ ಸಿಡಿಸಿದ್ದ ಡೇವಿಡ್ ಮಿಲ್ಲರ್ ಏಕದಿನ ಸರಣಿಯಲ್ಲೂ ಅಮೋಘ ಫಾರ್ಮ್ ಮುಂದುವರಿಸಿದ್ದಾರೆ. 63 ಎಸೆತಗಳಲ್ಲಿ ಅಜೇಯ 75 ರನ್ ಕಲೆಹಾಕಿದ ಮಿಲ್ಲರ್ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್‌ ಒಳಗೊಂಡಿತ್ತು. ಈ ಇಬ್ಬರು ಬ್ಯಾಟರ್‌ಗಳ ಜೊತೆಯಾಟದಿಂದಾಗಿ ದಕ್ಷಿಣ ಆಫ್ರಿಕಾ 40 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಕಲೆಹಾಕಿದ್ದು, ಭಾರತಕ್ಕೆ 250 ರನ್‌ಗಳ ಗೆಲುವಿನ ಗುರಿ ನೀಡಿದೆ.

ಭಾರತದ ಪರ ಶಾರ್ದೂಲ್ ಠಾಕೂರ್ 8 ಓವರ್‌ಗಳಲ್ಲಿ 35ರನ್ ನೀಡಿ 2 ವಿಕೆಟ್ ಪಡೆದ್ರೆ, ರವಿ ಬಿಷ್ಣೋಯಿ ಮತ್ತು ಕುಲ್‌ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಮತ್ತು ಅವೇಶ್ ಖಾನ್ ವಿಕೆಟ್ ಪಡೆಯುವಲ್ಲಿ ವಿಫಲರಾದ್ರು.

ಮತ್ತೆ ಅಂಗಳದಲ್ಲಿ ಜೊತೆಯಾದ ಧೋನಿ, ಸಚಿನ್: ಆದರೆ ಕ್ರಿಕೆಟ್ ಮೈದಾನದಲ್ಲಿ ಅಲ್ಲ!

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಭಾರತ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್/ಉಪನಾಯಕ), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್.

ದಕ್ಷಿಣ ಆಫ್ರಿಕಾ: ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ಏಡೆನ್ ಮಾಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ತಬ್ರೈಜ್ ಶಮ್ಸಿ.

Story first published: Thursday, October 6, 2022, 19:18 [IST]
Other articles published on Oct 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X