Ind vs SA 1st ODI: ಟೀಂ ಇಂಡಿಯಾ ಗೆಲುವಿಗೆ 297 ರನ್‌ಗಳ ಟಾರ್ಗೆಟ್‌

ಪಾರ್ಲ್‌ನ ಬೊಲ್ಯಾಂಡ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯದಲ್ಲಿ ಆರಂಭೀಕ ಆಘಾತ ಅನುಭವಿಸಿದ್ರೂ, ನಾಲ್ಕನೇ ವಿಕೆಟ್‌ಗೆ ಅಮೋಘ ಜೊತೆಯಾಟದ ಮೂಲಕ ದಕ್ಷಿಣ ಆಫ್ರಿಕಾ 4 ವಿಕೆಟ್‌ ನಷ್ಟಕ್ಕೆ 296 ರನ್‌ ಕಲೆಹಾಕಿದ್ದು, ಟೀಂ ಇಂಡಿಯಾಗೆ 297 ರನ್‌ಗಳ ಗೆಲುವಿನ ಗುರಿಯನ್ನ ನೀಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಪವರ್‌ಪ್ಲೇ ಓವರ್‌ಗಳಲ್ಲೇ ಓಪನರ್‌ ವಿಕೆಟ್ ಕಳೆದಕೊಂಡು ಆಘಾತ ಅನುಭವಿಸಿತು. ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ 6ರನ್‌ ಗಳಿಸಿದ್ದ ಜನ್ನೆಮನ್ ಮಲನ್ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.

ಇದಾದ ಬೆನ್ನಲ್ಲಿ ಎರಡನೇ ವಿಕೆಟ್‌ಗೆ ಕ್ವಿಂಟನ್ ಡಿಕಾಕ್ ಮತ್ತು ನಾಯಕ ಟೆಂಬಾ ಬವುಮಾ ಉತ್ತಮ ಜೊತೆಯಾಟದ ಭರವಸೆ ಮೂಡಿಸಿದ್ರು. ಟೆಸ್ಟ್‌ ಸರಣಿಯಲ್ಲಿ ಅರ್ಧದಲ್ಲೇ ನಿವೃತ್ತಿ ಘೋಷಿಸಿ ರಜೆ ಹೋಗಿದ್ದ ಕ್ವಿಂಟನ್ ಡಿಕಾಕ್ ಕಂಬ್ಯಾಕ್ ಪಂದ್ಯವು 27 ರನ್‌ಗೆ ಮುಕ್ತಾಯಗೊಂಡಿತು. ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸ್ಪಿನ್ ಮರ್ಮವನ್ನ ಅರಿಯದೇ ಡಿಕಾಕ್ ಕ್ಲೀನ್ ಬೌಲ್ಡ್ ಆದ್ರು.

58 ರನ್‌ಗೆ ಎರಡು ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾಗೆ ಇದ್ರ ಬೆನ್ನಲ್ಲೇ ಮತ್ತೊಂದು ಆಘಾತ ಎದುರಾಯಿತು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಏಡನ್ ಮಕ್ರಾಮ್ ಆತುರದ ರನ್ ಕದಿಯಲು ಹೋಗಿ 4 ರನ್‌ಗಳಿಸಿದ್ದಾಗ ರನೌಟ್‌ಗೆ ಬಲಿಯಾದ್ರು. ಆಲ್‌ರೌಂಡರ್‌ ವೆಂಕಟೇಶ್ ಅಯ್ಯರ್ ಚುರುಕು ಫೀಲ್ಡಿಂಗ್‌ಗೆ ಏಡನ್ ಮಕ್ರಾಮ್‌ ರನೌಟ್‌ ಆದ್ರು.

4ನೇ ವಿಕೆಟ್‌ಗೆ ದ್ವಿಶತಕ ಜೊತೆಯಾಟ
ಹೀಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಪರ ಟೆಂಬಾ ಬವುಮಾ ಮತ್ತು ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ನಾಲ್ಕನೇ ವಿಕೆಟ್‌ಗೆ ದ್ವಿಶಕದ ಜೊತೆಯಾಟದ ಮೂಲಕ ತಂಡಕ್ಕೆ ಆಧಾರವಾದ್ರು.

ಏಕದಿನ ಕ್ರಿಕೆಟ್‌ನಲ್ಲಿ 2ನೇ ಶತಕ ಸಿಡಿಸಿದ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ 134.38 ಸ್ಟ್ರೈಕ್‌ರೇಟ್‌ ಬ್ಯಾಟ್‌ ಬೀಸುವ ಮೂಲಕ 96 ಎಸೆತಗಳಲ್ಲಿ ಅಜೇಯ 129 ರನ್‌ ಕಲೆಹಾಕುವ ಮೂಲಕ
ಮಿಂಚಿನ ಆಟವಾಡಿದ್ರು. ರಾಸ್ಸಿ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳಿದ್ದವು.

ಇನ್ನು ತಾಳ್ಮೆಯ ಆಟವಾಡಿದ ನಾಯಕ ಟೆಂಬಾ ಬವುಮಾ 143 ಎಸೆತಗಳಲ್ಲಿ 110 ರನ್‌ ಕಲೆಹಾಕುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಶತಕ ಸಿಡಿಸಿ ತಂಡದ ಮೊತ್ತವನ್ನ 300ರ ಗಡಿ ಸಮೀಪಿಸಲು ನೆರವಾದ್ರು. 110 ರನ್‌ಗಳಿಸಿದ್ದಾಗ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ್ರು. ಈ ಮೂಲಕ ಭಾರತ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಯ 204ರನ್‌ಗಳ ಜೊತೆಯಾಟವಾಡಿದ ಟೆಂಬಾ ಬವುಮಾ ಹಾಗೂ ರಾಸ್ಸಿ ಜೋಡಿ ಬೇರ್ಪಟ್ಟಿತು.

ಕೊನೆಯಲ್ಲಿ ವೇಗವಾಗಿ ರನ್‌ ಕಲೆಹಾಕಿದ ರಾಸ್ಸಿ ಅಜೇಯ 129 ಸಿಡಿಸಿ ತಂಡದ ಆ್ಯಂಕರ್ ಇನ್ನಿಂಗ್ಸ್‌ ಆಡಿದ್ರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 296 ರನ್‌ ಕಲೆಹಾಕಿದೆ. ಭಾರತ ಪರ ಜಸ್ಪ್ರೀತ್ ಬುಮ್ರಾ 2 ವಿಕೆಟ್, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್, ಯುಜವೇಂದ್ರ ಚಹಾಲ್ ಹಾಗೂ ಶಾರ್ದೂಲ್ ಠಾಕೂರ್ ವಿಕೆಟ್‌ ಇಲ್ಲದೆ ನಿರಾಸೆಯಿಂದ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ್ದಾರೆ.

ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ 10 ಓವರ್‌ಗಳಲ್ಲಿ 72 ರನ್‌ ನೀಡುವ ಮೂಲಕ ದುಬಾರಿ ಬೌಲರ್ ಎನಿಸಿಕೊಂಡ್ರು. 297 ರನ್‌ಗಳ ಗುರಿ ಬೆನ್ನತ್ತಲಿರುವ ಭಾರತ ಉತ್ತಮ ಜೊತೆಯಾಟದ ಆಟವಾಡಬೇಕಿದೆ. ಈ ಪಿಚ್‌ನಲ್ಲಿ ಕಳೆದ 13 ಏಕದಿನ ಪಂದ್ಯಗಳಲ್ಲಿ 2001ರಲ್ಲಿ ಶ್ರೀಲಂಕಾ ವಿರುದ್ಧ 248 ರನ್‌ಗಳು ದಕ್ಷಿಣ ಆಫ್ರಿಕಾ ಬೆನ್ನಟ್ಟಿದ್ದೇ ಗರಿಷ್ಠ ಗುರಿಯಾಗಿದೆ.

ಭಾರತ ಪ್ಲೇಯಿಂಗ್ 11
ಕೆ.ಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಶಾರ್ದೂಲ್ ಠಾಕೂರ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜವೇಂದ್ರ ಚಹಾಲ್

ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11
ಕ್ವಿಂಟನ್ ಡಿ ಕಾಕ್, ಜನ್ನೆಮನ್ ಮಲನ್, ಟೆಂಬಾ ಬವುಮಾ (ಸಿ), ಏಡನ್ ಮಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸನ್, ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ

For Quick Alerts
ALLOW NOTIFICATIONS
For Daily Alerts
Story first published: Wednesday, January 19, 2022, 18:07 [IST]
Other articles published on Jan 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X