ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA 1st T20: ದೀಪ್ತಿ ಶರ್ಮಾ ಆಲ್‌ರೌಂಡ್ ಆಟ; ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಭಾರತ ಮಹಿಳಾ ತಂಡ

IND vs SA 1st T20: India womens Team Wins Against South Africa By 27 Runs

ಗುರುವಾರ, ಜನವರಿ 19ರಂದು ಪೂರ್ವ ಲಂಡನ್‌ನ ಬಫೆಲೋ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಟಿ20 ಅಂತಾರಾಷ್ಟ್ರೀಯ ತ್ರಿಕೋನ ಸರಣಿಯ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಭಾರತೀಯ ವನಿತೆಯರು ಭರ್ಜರಿ ಗೆಲುವು ಸಾಧಿಸಿದರು.

ಭಾರತ- ಇಂಗ್ಲೆಂಡ್- ವೆಸ್ಟ್ ಇಂಡೀಸ್ ನಡುವಿನ ತ್ರಿಕೋನ ಸರಣಿಯನ್ನು ಗೆಲ್ಲಲು ದೀಪ್ತಿ ಶರ್ಮಾ ಮತ್ತು ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ ಅಮನ್ಜೋತ್ ಕೌರ್ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ 27 ರನ್‌ಗಳ ಅಮೋಘ ಜಯ ಸಾಧಿಸಲು ನೆರವಾದರು.

ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 147 ರನ್

ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 147 ರನ್

ದೀಪ್ತಿ ಶರ್ಮಾ ಮತ್ತು ಅಮನ್ಜೋತ್ ಕೌರ್ ಆರನೇ ವಿಕೆಟ್‌ಗೆ ಪ್ರಮುಖ ಅರ್ಧಶತಕದ ಜೊತೆಯಾಟದ ಸಹಾಯದಿಂದ ಭಾರತ ಮಹಿಳಾ ತಂಡವು ತಮ್ಮ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 147 ರನ್ ಗಳಿಸಿದರು. ನಂತರ ಬೌಲಿಂಗ್‌ನಲ್ಲಿಯೂ ಮಿಂಚಿದ ದೀಪ್ತಿ ಶರ್ಮಾ 30 ರನ್‌ಗೆ 3 ವಿಕೆಟ್ ಪಡೆದು, ದಕ್ಷಿಣ ಆಫ್ರಿಕಾ ಮಹಿಳಾ ತಂಡ 9 ವಿಕೆಟ್‌ಗೆ 120 ರನ್‌ ಗಳಿಸಲಷ್ಟೇ ಶಕ್ತವಾಯಿತು ಮತ್ತು 27 ರನ್‌ಗಳ ಸೋಲು ಕಂಡಿತು.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ ಪವರ್‌ಪ್ಲೇನಲ್ಲಿ 7 ರನ್ ಗಳಿಸಿದ್ದ ಹಂಗಾಮಿ ನಾಯಕಿ ಸ್ಮೃತಿ ಮಂಧಾನ ವಿಕೆಟ್ ಪಡೆದು ಭಾರತವನ್ನು 29 ರನ್ 1 ನಲ್ಲಿ ಇರಿಸಿದರು. ನಂತರ ಬಂದ ಹರ್ಲೀನ್ ಡಿಯೋಲ್ 8 ರನ್ ಗಳಿಸಿ ಔಟಾದರು.

ದೀಪ್ತಿ ಶರ್ಮಾ 33 ರನ್ ಹಾಗೂ 30 ರನ್‌ಗೆ 3 ವಿಕೆಟ್

ದೀಪ್ತಿ ಶರ್ಮಾ 33 ರನ್ ಹಾಗೂ 30 ರನ್‌ಗೆ 3 ವಿಕೆಟ್

ಆದರೆ, ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಾಟಿಯಾ 34 ಎಸೆತಗಳಲ್ಲಿ 35 ರನ್ ಗಳಿಸಿ ಭಾರತ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿ ಔಟಾದರು. 12ನೇ ಓವರ್‌ನಲ್ಲಿ ಭಾರತವು 69 ರನ್‌ಗೆ 5 ವಿಕೆಟ್ ಕಳೆದುಕೊಂಡು ತತ್ತರಿಸುವಂತೆ ಮಾಡಿತು.

ಆಗ ದೀಪ್ತಿ ಶರ್ಮಾ (33) ಮತ್ತು ಅಮನ್ಜೋತ್ ಕೌರ್ (ಅಜೇಯ 41) ನಡುವಿನ ಆರನೇ ವಿಕೆಟ್‌ಗೆ ನಿರ್ಣಾಯಕ 76 ರನ್‌ಗಳ ಜೊತೆಯಾಟದ ಸಹಾಯದಿಂದ ಭಾರತ ತಂಡ ಮತ್ತೆ ಲಯಕ್ಕೆ ಮರಳಿತು ಮತ್ತು ಭಾರತ ಮೂರಂಕಿ ಮೊತ್ತ ದಾಟಲು ನೆರವಾದರು. ಅಂತಿಮವಾಗಿ ಭಾರತವು 6 ವಿಕೆಟ್‌ಗೆ 147 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ತ್ರಿಕೋನ ಸ್ಪರ್ಧೆಯಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ ಭಾರತ

ತ್ರಿಕೋನ ಸ್ಪರ್ಧೆಯಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ ಭಾರತ

ಗೆಲುವಿಗಾಗಿ 148 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಭಾರತವು ಅಂತಿಮ ಎರಡು ಓವರ್‌ಗಳಲ್ಲಿ ಮೂರು ತ್ವರಿತ ವಿಕೆಟ್‌ಗಳನ್ನು ಪಡೆಯುವುದರೊಂದಿಗೆ 27 ರನ್‌ಗಳ ಗೆಲುವನ್ನು ಚಿತಪಡಿಸಿತು ಮತ್ತು ತ್ರಿಕೋನ ಸ್ಪರ್ಧೆಯಲ್ಲಿ ಆರಂಭಿಕ ಮುನ್ನಡೆ ಸಾಧಿಸಿತು.

ಫೆಬ್ರವರಿ 10ರಿಂದ 26 ರವರೆಗೆ ಕೇಪ್ ಟೌನ್, ಪಾರ್ಲ್ ಮತ್ತು ಗ್ಕೆಬರ್ಹಾದಲ್ಲಿ ನಡೆಯುವ ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಆತಿಥ್ಯದಲ್ಲಿ ತಮ್ಮ ಪ್ರಯಾಣವನ್ನು ಮುಂದುವರೆಸುವ ಮೂಲಕ ದಕ್ಷಿಣ ಆಫ್ರಿಕಾವು ಜನವರಿ 21ರ ಶನಿವಾರದಂದು ವೆಸ್ಟ್ ಇಂಡೀಸ್ ತಂಡವನ್ನು ಇದೇ ಮೈದಾನದಲ್ಲಿ ಎದುರಿಸಲಿದೆ.

Story first published: Friday, January 20, 2023, 10:46 [IST]
Other articles published on Jan 20, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X