ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ ಗೆಲುವು, ಧೋನಿ ದಾಖಲೆ ಮುರಿದ ರೋಹಿತ್ ಶರ್ಮಾ

ತಿರುವನಂತಪುರದಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಸರಣಿ ಜಯಿಸಿದ ಬಳಿಕ ಹಿಟ್‌ಮ್ಯಾನ್ ಪಡೆ ಹರಿಣಗಳ ವಿರುದ್ಧವೂ ಗೆಲುವಿನ ಓಟ ಮುಂದುವರಿಸಿದೆ.

ಟಾಸ್ ಗೆದ್ದು ದಕ್ಷಿಣ ಆಫ್ರಿಕಾವನ್ನ ಬ್ಯಾಟಿಂಗ್ ಆಹ್ವಾನಿಸಿದ ನಾಯಕ ರೋಹಿತ್ ಶರ್ಮಾ ನಿರ್ಧಾರಕ್ಕೆ ಬೌಲರ್‌ಗಳು ಭರ್ಜರಿಯಾಗಿ ಬೆಂಬಲ ನೀಡಿದರು. ಅರ್ಷ್‌ದೀಪ್ ಸಿಂಗ್ ಮತ್ತು ದೀಪಕ್ ಚಹಾರ್ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 9 ರನ್‌ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು.

ಪವರ್‌ಪ್ಲೇನಲ್ಲೇ ಐದು ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ

ಪವರ್‌ಪ್ಲೇನಲ್ಲೇ ಐದು ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ

ಈ ಸಂದರ್ಭದಲ್ಲಿ ಏಡನ್ ಮಕ್ರಾಮ್ 25ರನ್‌ಗಳಿಸಿ ಹರ್ಷಲ್‌ ಪಟೇಲ್ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರೆ, ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ವೇಯ್ನ್ ಪರ್ನೆಲ್ 37 ಎಸೆತಗಳಲ್ಲಿ 24ರನ್ ಕಲೆಹಾಕಿದ್ರು. ಕೇಶವ್ ಮಹಾರಾಜ್ 35 ಎಸೆತಗಳಲ್ಲಿ 41 ರನ್‌ ಕಲೆಹಾಕಿ ಕೊನೆಯ ಓವರ್‌ನಲ್ಲಿ ಹರ್ಷಲ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಪ್ರವಾಸಿ ತಂಡ 106ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಭಾರತ ಇನ್ನೂ 20 ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಜಯಿಸಿತು.

ಭಾರತ ಪರ 33 ಎಸೆತಗಳಲ್ಲಿ ಸೂರ್ಯಕುಮಾರ್ ಯಾದವ್ ಅರ್ಧಶತಕದ ಗಡಿದಾಟಿದ್ರೆ, ಳ್ಮೆಯುತ ಆಟವಾಡಿದ ಕೆ.ಎಲ್ ರಾಹುಲ್ 16.4ನೇ ಎಸೆತಗಳಲ್ಲಿ ಸ್ವಿಪ್‌ ಮೂಲಕ ಸಿಕ್ಸರ್‌ ಸಿಡಿದ್ದಲ್ಲದೆ ತಂಡಕ್ಕೆ ಗೆಲುವು ತಂದುಕೊಟ್ಟರು. ಹಾಗೆಯೇ 56 ಎಸೆತದಲ್ಲಿ ರಾಹುಲ್ ಅರ್ಧಶತಕದ ಗಡಿದಾಟಿದ್ರು.

ಅದ್ಭುತ ದಾಳಿ ನಡೆಸಿದ ಭಾರತದ ವೇಗಿಗಳು

ಅದ್ಭುತ ದಾಳಿ ನಡೆಸಿದ ಭಾರತದ ವೇಗಿಗಳು

ಇದಕ್ಕೂ ಮುನ್ನ ಭಾರತ ಪರ ಉತ್ತಮ ಬೌಲಿಂಗ್ ಮಾಡಿದ ಅರ್ಷ್‌ದೀಪ್ ಸಿಂಗ್ 32 ರನ್ ನೀಡಿ 3 ವಿಕೆಟ್ ಪಡೆದ್ರೆ, ದೀಪಕ್ ಚಹಾರ್ 24 ರನ್ ನೀಡಿ 2 ವಿಕೆಟ್ ಸಂಪಾದಿಸಿದರು. ಇನ್ನು ಹರ್ಷಲ್ ಪಟೇಲ್ 26 ರನ್‌ ನೀಡಿ 2 ವಿಕೆಟ್ ಉರುಳಿಸಿದರು. ಅಕ್ಷರ್ ಪಟೇಲ್ ಕೇವಲ 16 ರನ್ ನೀಡಿ 1 ವಿಕೆಟ್ ತನ್ನ ಖಾತೆಗೆ ಹಾಕಿಕೊಂಡರು.

ಪಂದ್ಯದ ಎರಡನೇ ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸಿದ ಅರ್ಷ್‌ದೀಪ್ ಸಿಂಗ್ ಟಿ20 ಫಾರ್ಮೆಟ್‌ನಲ್ಲಿ ಚೊಚ್ಚಲ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನ ಪಡೆದರು.

ದ.ಆಫ್ರಿಕಾ ವಿರುದ್ಧದ T20 ಪಂದ್ಯದಿಂದ ಹೊರಗುಳಿದ ಬುಮ್ರಾ: ಫ್ಯಾನ್ಸ್‌ ಅಸಮಾಧಾನ

ನಾಯಕನಾಗಿ ಧೋನಿ ದಾಖಲೆ ಮುರಿದ ರೋಹಿತ್ ಶರ್ಮಾ

ನಾಯಕನಾಗಿ ಧೋನಿ ದಾಖಲೆ ಮುರಿದ ರೋಹಿತ್ ಶರ್ಮಾ

ಇನ್ನು ಟೀಂ ಇಂಡಿಯಾ ಈಗಾಗಲೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ದಾಖಲೆಯನ್ನು ಮಾಡಿದೆ. ಈ ಮೂಲಕ ಪಾಕಿಸ್ತಾನದ ರೆಕಾರ್ಡ್ ಬ್ರೇಕ್ ಆಗಿದೆ. ಆದ್ರೆ ಇದ್ರ ಜೊತೆಗೆ ನಾಯಕನಾಗಿ ರೋಹಿತ್ ಶರ್ಮಾ ಹೊಸ ಮೈಲಿಗಲ್ಲು ತಲುಪಿದ್ದಾರೆ. ಹಿಟ್‌ಮ್ಯಾನ್ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ಪಂದ್ಯ ಗೆದ್ದ ಟೀಂ ಇಂಡಿಯಾ ನಾಯಕ ಎಂಬ ಸಾಧನೆ ಮಾಡಿದ್ದಾರೆ.

Ind vs SA 1st T20I: ಬೌಲಿಂಗ್ ವೇಳೆ ಅರ್ಷ್‌ದೀಪ್‌ಗೆ ಅಂಪೈರ್ ವಾರ್ನಿಂಗ್‌

ಈ ಮೊದಲು ಮಹೇಂದ್ರ ಸಿಂಗ್ ಧೋನಿ 2016ರಲ್ಲಿ 15 ಪಂದ್ಯಗಳನ್ನ ಜಯಿಸಿದ್ರು. ಆದ್ರೆ ಈ ದಾಖಲೆ ಮುರಿದ ಹಿಟ್‌ಮ್ಯಾನ್‌ 2022ರಲ್ಲಿ ಪ್ರಸ್ತುತ 16 ಗೆಲುವನ್ನ ಸಂಪಾದಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಇನ್ನೂ ಎರಡು ಪಂದ್ಯಗಳು ಬಾಕಿ ಇರುವುದರ ಜೊತೆಗೆ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಕೂಡ ನಡೆಯುವುದರಿಂದ ರೋಹಿತ್ ಶರ್ಮಾ ದಾಖಲೆ ಮತ್ತಷ್ಟು ಎತ್ತರಕ್ಕೆ ತಲುಪುವ ಸಾಧ್ಯತೆ ಇದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್

ಭಾರತ ಮತ್ತು ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್
ಭಾರತದ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಅರ್ಷದೀಪ್ ಸಿಂಗ್

ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11
ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಟೆಂಬಾ ಬವುಮಾ(ನಾಯಕ), ರಿಲೀ ರೋಸ್ಸೌ, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಎರ್ನಿಕ್ ನೊರ್ಕಿಯಾ, ತಬ್ರೈಜ್ ಶಮ್ಸಿ

For Quick Alerts
ALLOW NOTIFICATIONS
For Daily Alerts
Story first published: Thursday, September 29, 2022, 1:04 [IST]
Other articles published on Sep 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X