ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ. ಆಫ್ರಿಕಾ: ಮೊದಲ ದಿನ ಕನ್ನಡಿಗರದ್ದೇ ಅಬ್ಬರ: ಶತಕ ಸಿಡಿಸಿದ ರಾಹುಲ್ ಹೆಸರಿನಲ್ಲಿ ಹಲವು ದಾಖಲೆ!

Ind vs SA, 1st test: KL Rahul century, Mayank half century, day 1 Highlights

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿದೆ. ಭಾರತದ ಆರಂಭಿಕ ಜೋಡಿಯಿಂದ ಮೊದಲ ವಿಕೆಟ್‌ಗೆ ಬಂದ ಅದ್ಭುತ ಶತಕದ ಜೊತೆಯಾಟದ ನೆರವಿನಿಂದ ಭಾರತ ಮೊದಲ ದಿನದ ಸಂಪೂರ್ಣ ಗೌರವವನ್ನು ಪಡೆದುಕೊಂಡಿದೆ. ಭಾರತೀಯ ಆರಂಭಿಕ ಆಟಗಾರರ ಈ ಪ್ರದರ್ಶನ ಟೀಮ್ ಇಂಡಿಯಾದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಕನ್ನಡಿಗ ಜೋಡಿಯಾದ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಅವರ ಜೊತೆಯಾಟ ಮೊದಲ ದಿನದ ಪ್ರಮುಖ ಹೈಲೈಟ್ಸ್ ಆಗಿದೆ. ಹರಿಣಗಳ ನಾಡಿನಲ್ಲಿ ತೀಕ್ಷ್ಣ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಮೊದಲ ವಿಕೆಟ್‌ಗೆ ಭರ್ಜರಿ 117 ರನ್‌ಗಳ ಜೊತೆಯಾಟವನ್ನು ನೀಡಿದರು. ಭಾರತದ ಆರಂಭಿಕರಿಂದ ಬಂದ ಈ ಪ್ರದರ್ಶನ ತಂಡಕ್ಕೆ ದೊಡ್ಡ ಬಲವನ್ನು ನೀಡಿದೆ. ಮಯಾಂಕ್ ಅಗರ್ವಾಲ್ 123 ಎಸೆತಗಳಲ್ಲಿ 60 ರನ್ ಸಿಡಿಸಿ ಲುಂಗಿ ಎನ್‌ಗಿಡಿಗೆ ವಿಕೆಟ್ ಒಪ್ಪಿಸುವ ಮೂಲಕ ಇನ್ನಿಂಗ್ಸ್‌ ಮುಗಿಸಿದರು. ಈ ಮೂಲಕ ತಮ್ಮ ಉತ್ತಮ ಫಾರ್ಮ್‌ಅನ್ನು ದಕ್ಷಿಣ ಆಫ್ರಿಕಾದಲ್ಲಿಯೂ ಮುಂದುವರಿಸಿದ್ದಾರೆ.

ಟೀಮ್ ಇಂಡಿಯಾದಲ್ಲಿ ಆ ಅದ್ಭುತ ಟ್ರೆಂಡ್ ಹುಟ್ಟುಹಾಕಿದ್ದೇ ಕೊಹ್ಲಿ ಎಂದು ಹೊಗಳಿದ ದ್ರಾವಿಡ್ಟೀಮ್ ಇಂಡಿಯಾದಲ್ಲಿ ಆ ಅದ್ಭುತ ಟ್ರೆಂಡ್ ಹುಟ್ಟುಹಾಕಿದ್ದೇ ಕೊಹ್ಲಿ ಎಂದು ಹೊಗಳಿದ ದ್ರಾವಿಡ್

ಕೆಎಲ್ ರಾಹುಲ್ ಸೊಗಸಾದ ಇನ್ನಿಂಗ್ಸ್

ಕೆಎಲ್ ರಾಹುಲ್ ಸೊಗಸಾದ ಇನ್ನಿಂಗ್ಸ್

ಇನ್ನು ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡ ನಂತರ ಮುಂದಿನ ಎಸೆತದಲ್ಲಿಯೇ ಭಾರತ ಚೇತೇಶ್ವರ್ ಪೂಜಾರ ವಿಕೆಟ್ ಕಳೆದುಕೊಂಡಿತು. ಆದರೆ ಕೆಎಲ್ ರಾಹುಲ್ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದರು. ನಾಯಕ ವಿರಾಟ್ ಕೊಹ್ಲಿ ಜೊತೆಗೆ ಜೊತೆಯಾಟವನ್ನು ಮುಂದುವರಿಸಿದ ಕೆಎಲ್ ರಾಹುಲ್ ಕೊಹ್ಲಿ ವಿಕೆಟ್ ಕಳೆದುಕೊಂಡ ನಂತರ ಅಜಿಂಕ್ಯಾ ರಹಾನೆ ಕೂಡ ರಾಹುಲ್‌ಗೆ ಉತ್ತಮವಾಗಿ ಸಾಥ್ ನೀಡಿದರು. ಈ ಸಂದರ್ಭದಲ್ಲಿ ರಾಹುಲ್ ಭರ್ಜರಿ ಶತಕವನ್ನು ಪೂರ್ಣಗೊಳಿಸಿದ್ದಾರೆ.

ಟೆಸ್ಟ್ ಆಡಿದ 6 ದೇಶಗಳಲ್ಲಿ ಶತಕ ಸಿಡಿಸಿದ ರಾಹುಲ್

ಟೆಸ್ಟ್ ಆಡಿದ 6 ದೇಶಗಳಲ್ಲಿ ಶತಕ ಸಿಡಿಸಿದ ರಾಹುಲ್

ಇನ್ನು ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 7ನೇ ಶತಕವನ್ನು ಸಿಡಿಸಿದ್ದಾರೆ. ವಿಶೇಷವೆಂದರೆ ಕೆಎಲ್ ರಾಹುಲ್ ತವರಿಗಿಂತ ವಿದೇಶದಲ್ಲಿಯೇ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ ಎಂಬುದು ಅವರ ಈ ಅಂಕಿಅಂಶಗಳಿಂದಲೇ ಸ್ಪಷ್ಟವಾಗುತ್ತದೆ. ಭಾರತ ಸೇರಿದಂತೆ ಒಟ್ಟು ಟೆಸ್ಟ್ ಆಡುವ ಒಟ್ಟು ಆರು ದೇಶಗಳಲ್ಲಿ ರಾಹುಲ್ ಶತಕವನ್ನು ಸಿಡಿಸಿದ್ದಾರೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾದಲ್ಲಿ ಕೆಎಲ್ ರಾಹುಲ್ ಶತಕವನ್ನು ಸಿಡಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ರಾಹುಲ್ ಎರಡು ಶತಕವನ್ನು ಗಳಿಸಿದ್ದಾರೆ.

ಆರಂಭಿಕನಾಗಿ ವಿಶೇಷ ದಾಖಲೆ ಬರೆದ ರಾಹುಲ್

ಆರಂಭಿಕನಾಗಿ ವಿಶೇಷ ದಾಖಲೆ ಬರೆದ ರಾಹುಲ್

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಈ ಟೆಸ್ಟ್‌ನಲ್ಲಿ ಅದ್ಭುತ ಶತಕವನ್ನು ಬಾರಿಸುವ ಮೂಲಕ ರಾಹುಲ್ ವಿಶೇಷವಾದ ದಾಖಲೆಯೊಂದನ್ನು ಕೂಡ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಆರಂಭಿಕನಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಶತಕವನ್ನು ಸಿಡಿಸಿದ ಭಾರತದ ಆಟಗಾರ ಎನಿಸಿದ್ದಾರೆ ಕೆಎಲ್ ರಾಹುಲ್.

Cheteshwar Pujara ಕಳಪೆ ಪ್ರದರ್ಶನ ನೋಡಿ Dravid ಮಾಡಿದ್ದೇನು | Oneindia Kannada
ಮೊದಲ ದಿನದ ಗೌರವ ಸಂಪಾದಿಸಿದ ಭಾರತ

ಮೊದಲ ದಿನದ ಗೌರವ ಸಂಪಾದಿಸಿದ ಭಾರತ

ಇನ್ನು ದಕ್ಷಿಣ ಆಫ್ರಿಕಾದ ವೇಗಿಗಳ ಸವಾಲನ್ನು ಅದ್ಭುತವಾಗಿ ಎದುರಸಿದ ಭಾರತ ಮೊದಲ ದಿನದಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದೆ. ಈ ಮೂಲಕ ಟೆಸ್ಟ್‌ನಲ್ಲಿ ಮೊದಲ ದಿನ ಭಾರತ ಮೇಲುಗೈ ಸಾಧಿಸಿದೆ. ಭಾರತದ ಮೂವರನ್ನು ಮಾತ್ರವೇ ಔಟ್ ಮಾಡಲು ಸಾಧ್ಯವಾಗಿದ್ದು ಭಾರತದ ಯಶಸ್ಸಿಗೆ ಸಾಕ್ಷಿಯಾಗಿದೆ. ಚೇತೇಶ್ವರ್ ಪೂಜಾರ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ ನಾಯಕ ವಿರಾಟ್ ಕೊಹ್ಲಿ 35 ರನ್‌ಗಳ ಕೊಡುಗೆಯನ್ನು ನೀಡಿ ಔಟಾಗಿ ಹೊರನಡೆದರು. ಇನ್ನು ದಕ್ಷಿಣ ಆಫ್ರಿಕಾದ ಪರವಾಗಿ ಲುಂಗಿ ಎನ್‌ಗಿಡಿ ಮೂರು ವಿಕೆಟ್ ಸಂಪಾದಿಸಿರು.

ಭಾರತ ಆಡುವ ಬಳಗ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಬ್ ಪಂತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಶ್ರೇಯಸ್ ಅಯ್ಯರ್, ಜಯಂತ್ ಯಾದವ್, ಹನುಮ ವಿಹಾರಿ, ಪ್ರಿಯಾಂಕ್ ಪಾಂಚಾಲ್, ಇಶಾಂತ್ ಶರ್ಮಾ

ದಕ್ಷಿಣ ಆಫ್ರಿಕಾ ಆಡುವ XI : ಡೀನ್ ಎಲ್ಗರ್ (ನಾಯಕ), ಏಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸಮೊದಲ ದಿನದ ಗೌರವ ಸಂಪಾದಿಸಿದ ಭಾರತ
ನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್,ಲುಂಗಿ ಎನ್ಗಿಡಿ
ಬೆಂಚ್: ಡುವಾನ್ನೆ ಒಲಿವಿಯರ್, ಬ್ಯೂರಾನ್ ಹೆಂಡ್ರಿಕ್ಸ್, ಸಿಸಂಡಾ ಮಗಾಲಾ, ಪ್ರೆನೆಲನ್ ಸುಬ್ರಾಯೆನ್, ಜಾರ್ಜ್ ಲಿಂಡೆ, ಕೈಲ್ ವೆರ್ರೆನ್, ಸರೆಲ್ ಎರ್ವೀ, ರಿಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್

Story first published: Monday, December 27, 2021, 11:16 [IST]
Other articles published on Dec 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X