ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಜಿಂಕ್ಯ ರಹಾನೆ ಔಟಾದ ರೀತಿಗೆ ಬೇಸರ ವ್ಯಕ್ತಪಡಿಸಿದ ಸಂಜಯ್ ಬಂಗಾರ್

Ajinkya rahane

ಟೀಂ ಇಂಡಿಯಾ ಟೆಸ್ಟ್ ಉಪನಾಯಕತ್ವ ಕಳೆದುಕೊಂಡಿದ್ದ ಅಜಿಂಕ್ಯ ರಹಾನೆ ಬ್ಯಾಟಿಂಗ್ ಕುರಿತಾಗಿ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಪ್ಲೇಯಿಂಗ್ 11ನಲ್ಲಿ ಸ್ಥಾನ ನೀಡುವ ಮೊದಲೇ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಆದ್ರೆ ಸೆಂಚುರಿಯನ್‌ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಮೊದಲ ದಿನದಾಟದಲ್ಲಿ ಅಜೇಯ 40 ರನ್ ಕಲೆಹಾಕುವ ಮೂಲಕ ತಮ್ಮ ಸಾಮರ್ಥ್ಯವನ್ನ ಸಾಭೀತುಪಡಿಸುವ ಪ್ರಯತ್ನ ನಡೆಸಿದ್ರು.

ಎರಡನೇ ದಿನ ಮಳೆಯಿಂದಾಗಿ ಒಂದೇ ಒಂದು ಎಸೆತವೂ ಆಡದೇ ಮೂರನೇ ದಿನ ಆಟ ಆರಂಭವಾದಾಗ ಭಾರತದ ಬ್ಯಾಟಿಂಗ್ ಕುಸಿತ ಕಂಡಿತ್ತು. ರಹಾನೆ ಕೂಡ ತಮ್ಮ ಸ್ಕೋರಿಗೆ ಕೇವಲ 8 ರನ್ ಸೇರಿಸಲಷ್ಟೇ ಶಕ್ತರಾದರು. ಅವರಿಂದ ದೊಡ್ಡ ಇನ್ನಿಂಗ್ಸ್ ತೀರಾ ಅಗತ್ಯವಿದ್ದಾಗ ಔಟಾಗುವ ಮೂಲಕ ಸಾಕಷ್ಟು ನಿರಾಸೆ ಮೂಡಿಸಿದ್ರು.

ಭಾರತದ ಬ್ಯಾಟಿಂಗ್ ಕುಸಿತಕ್ಕೆ ರಹಾನೆ ಕಾರಣ?

ಭಾರತದ ಬ್ಯಾಟಿಂಗ್ ಕುಸಿತಕ್ಕೆ ರಹಾನೆ ಕಾರಣ?

ಲುಂಗಿ ಎನ್‌ಗಿಡಿ ಎಸೆತದಲ್ಲಿ ರಹಾನೆ 48 ರನ್‌ಗಳಿಗೆ ಔಟಾದರು. ಇದಕ್ಕೂ ಮೊದಲು ಅಜೇಯ 122ರನ್‌ ಗಳಿಸಿದ್ದ ರಾಹುಲ್ ಕೇವಲ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸುತ್ತಿದ್ದಂತೆ ಭಾರತದ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪರೇಡ್ ಆರಂಭವಾಯಿತು.

ಭಾರತದ ಬ್ಯಾಟಿಂಗ್ ದೊಡ್ಡ ಮಟ್ಟಿಗೆ ಕುಸಿತ ಕಾಣಲು ಅಜಿಂಕ್ಯ ರಹಾನೆ ಕಾರಣ ಎಂಬುದು ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಆರೋಪಿಸಿದ್ದಾರೆ. ರಾಹುಲ್ ಔಟಾದ ಬಳಿಕ ತಂಡದ ಬೆನ್ನಲುಬು ಆಗಿ ರಹಾನೆ ಆಡಬೇಕಿತ್ತು. ಆದರೆ ಅಜಿಂಕ್ಯ ರಹಾನೆ ಸುಲಭವಾಗಿ ಲುಂಗಿ ಎನ್‌ಗಿಡಿಗೆ ವಿಕೆಟ್ ಒಪ್ಪಿಸಿದ್ರು. ಇದಾದ ಬಳಿಕ ರಿದಂನಲ್ಲಿ ಬೌಲ್‌ ಮಾಡಿದ ಎನ್‌ಗಿಡಿ 6 ವಿಕೆಟ್‌ ಕಬಳಿಸಿ ಭಾರತೀಯರ ಕುಸಿತಕ್ಕೆ ಕಾರಣವಾದ್ರು.

ಇಂಗ್ಲೆಂಡ್‌ಗೆ ಹೀನಾಯ ಸೋಲು: ''ತುಂಬಾ ಮುಜುಗರ ಆಗಿದೆ'' ಎಂದ ಮೈಕಲ್ ವಾನ್!

ರಹಾನೆ ಆರಂಭದಲ್ಲಿಯೂ ಸ್ವಲ್ಪ ಎಚ್ಚರ ತಪ್ಪಿದರು: ಬಂಗಾರ್

ರಹಾನೆ ಆರಂಭದಲ್ಲಿಯೂ ಸ್ವಲ್ಪ ಎಚ್ಚರ ತಪ್ಪಿದರು: ಬಂಗಾರ್

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಸಂಜಯ್ ಬಂಗಾರ್, "ಅವರು (ರಹಾನೆ) ಆರಂಭದಲ್ಲಿ ಸ್ವಲ್ಪ ಎಚ್ಚರದಿಂದಿದ್ದರು, ಅವರು ಚೆಂಡಿನ ಮೇಲೆ ಕಣ್ಣಿಟ್ಟಿದ್ದರು, ಆದ್ರೆ ಅವರು ಎಚ್ಚರ ತಪ್ಪಿದರು. ಹೀಗಾಗಿಯೇ ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

IndiGo ವಿಮಾನದಲ್ಲಿ ಕೇಳಿಬಂತು ತುಳುಭಾಷೆಯಲ್ಲಿ ಅನೌನ್ಸ್ಮೆಂಟ್ | Oneindia Kannada
ರಹಾನೆ-ರಾಹುಲ್ ನಡುವೆ ಉತ್ತಮ ಜೊತೆಯಾಟ ಇತ್ತು

ರಹಾನೆ-ರಾಹುಲ್ ನಡುವೆ ಉತ್ತಮ ಜೊತೆಯಾಟ ಇತ್ತು

ಅಂದಹಾಗೆ, ರಾಹುಲ್ ಜೊತೆ 79 ರನ್ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ರಹಾನೆ ಭಾರತದ ಸ್ಕೋರ್ ಹೆಚ್ಚಿಸಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಉತ್ತಮ ಶಿಸ್ತನ್ನು ಪ್ರದರ್ಶಿಸಿದ್ರು. ಆದರೆ ಅದು ಮಂಗಳವಾರ ಮುರಿದುಬಿತ್ತು. ಭಾರತ 7 ವಿಕೆಟ್‌ ನಷ್ಟಕ್ಕೆ ಕೇವಲ 55 ರನ್ ಸೇರಿಸಿತು ಮತ್ತು ಶಾರ್ದೂಲ್ ಠಾಕೂರ್ 4 ರನ್, ಆರ್ ಅಶ್ವಿನ್ 4 ರನ್ ಮತ್ತು ರಿಷಬ್ ಪಂತ್ 8 ರನ್ ಗಳಿಸಿ ಔಟಾದರು. ಲುಂಗಿ ಎನ್‌ಗಿಡಿ 71ಕ್ಕೆ 6 ವಿಕೆಟ್ ಪಡೆದರು, ಕಗಿಸೊ ರಬಾಡ ಮಂಗಳವಾರ ಮೂರು ವಿಕೆಟ್ ಪಡೆದರು.

ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಭಾರತದ ಬೌಲಿಂಗ್ ದಾಳಿಗೆ ನಲುಗಿ 197 ರನ್‌ಗಳಿಗೆ ಆಲೌಟ್ ಆಗಿದ್ದು 130 ರನ್‌ಗಳ ಹಿನ್ನಡೆ ಅನುಭವಿಸಿದೆ.

Story first published: Tuesday, December 28, 2021, 21:38 [IST]
Other articles published on Dec 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X