ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA: ಟಿ20 ಕ್ರಿಕೆಟ್‌ನಲ್ಲಿ ಅಶ್ವಿನ್ ದಾಖಲೆ ಹಿಂದಿಕ್ಕಲು ಎದುರು ನೋಡುತ್ತಿರುವ ಚಹಲ್

Ind vs SA 2022: Yuzvendra Chahal Looks Set To Break R Ashwins Record In T20 Cricket

ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಜೂನ್ 9ರಂದು ನವದೆಹಲಿಯಲ್ಲಿ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಪ್ರಮುಖ ಮೈಲಿಗಲ್ಲು ಸ್ಥಾಪಿಸಲು ಸಿದ್ಧರಾಗಿದ್ದಾರೆ. ಹಿರಿಯ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ ಆಗುವ ಸನಿಹದಲ್ಲಿದ್ದಾರೆ.

ಯುಜ್ವೇಂದ್ರ ಚಹಲ್ ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿರುವ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಅವರಿಗಿಂತ ಕೇವಲ 2 ವಿಕೆಟ್ ಹಿಂದೆ ಇದ್ದಾರೆ. ಜೂನ್ 9ರಿಂದ 19ರವರೆಗೆ ದಕ್ಷಿಣ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯಗಳನ್ನು ಆಡಲಿರುವುದರಿಂದ, ಚಹಲ್ ತನ್ನ ಖಾತೆಗೆ ಮತ್ತಷ್ಟು ವಿಕೆಟ್‌ಗಳ ಸಂಖ್ಯೆಯನ್ನು ಸೇರಿಸಲು ಮತ್ತು ವಿಶ್ವದ ಅಗ್ರರ ಪಟ್ಟಿಯಲ್ಲಿ ಅಶ್ವಿನ್‌ರನ್ನು ಹಿಂದಿಕ್ಕಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ.

ಆರ್ ಅಶ್ವಿನ್ 282 ಪಂದ್ಯಗಳಿಂದ 276 ವಿಕೆಟ್‌

ಆರ್ ಅಶ್ವಿನ್ 282 ಪಂದ್ಯಗಳಿಂದ 276 ವಿಕೆಟ್‌

ಪ್ರಸ್ತುತ 532 ಪಂದ್ಯಗಳಲ್ಲಿ 582 ವಿಕೆಟ್‌ಗಳನ್ನು ಹೊಂದಿರುವ ವೆಸ್ಟ್ ಇಂಡೀಸ್ ಮಾಜಿ ವೇಗಿ ಡ್ವೇನ್ ಬ್ರಾವೋ ಅವರು ಟಿ20 ಕ್ರಿಕೆಟ್‌ನಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ವಿಕೆಟ್ ಪಡೆದು ಮೊದಲನೇ ಸ್ಥಾನದನಲ್ಲಿದ್ದಾರೆ. ಭಾರತದ ಯುಜ್ವೇಂದ್ರ ಚಹಲ್ 18ನೇ ಸ್ಥಾನದಲ್ಲಿದ್ದಾರೆ. ಚಾಹಲ್ 242 ಪಂದ್ಯಗಳಲ್ಲಿ 274 ವಿಕೆಟ್ ಪಡೆದರೆ, ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಟಿ20 ಸರಣಿಯ ಭಾಗವಾಗಿರದ ಆರ್ ಅಶ್ವಿನ್ 282 ಪಂದ್ಯಗಳಿಂದ 276 ವಿಕೆಟ್‌ಗಳನ್ನು ಪಡೆದಿದ್ದಾರೆ.

17 ಪಂದ್ಯಗಳಲ್ಲಿ 27 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್

17 ಪಂದ್ಯಗಳಲ್ಲಿ 27 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್

ಯುಜ್ವೇಂದ್ರ ಚಹಲ್ ಟಿ20 ಕ್ರಿಕೆಟ್‌ನಲ್ಲಿ 2 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಐಪಿಎಲ್ 2022ರಲ್ಲಿ ಇದೇ ಮೊದಲ ಬಾರಿಗೆ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಡಿದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್, 17 ಪಂದ್ಯಗಳಲ್ಲಿ 27 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ಗೆದ್ದರು. 2ನೇ ಬಾರಿಗೆ ಫೈನಲ್ ತಲುಪಿದ್ದ ರಾಜಸ್ಥಾನ ರಾಯಲ್ಸ್, ಗುಜರಾತ್ ಟೈಟನ್ಸ್ ಎದುರು ಮಂಡಿಯೂರಿತು.

ಟಿ20 ಪಂದ್ಯಗಳಲ್ಲಿ ಭಾರತೀಯ ಬೌಲರ್‌ನಿಂದ ಹೆಚ್ಚಿನ ವಿಕೆಟ್‌ಗಳು

ಟಿ20 ಪಂದ್ಯಗಳಲ್ಲಿ ಭಾರತೀಯ ಬೌಲರ್‌ನಿಂದ ಹೆಚ್ಚಿನ ವಿಕೆಟ್‌ಗಳು

ಆರ್. ಅಶ್ವಿನ್- 282 ಪಂದ್ಯಗಳಲ್ಲಿ 276 ವಿಕೆಟ್

ಯುಜ್ವೇಂದ್ರ ಚಹಲ್- 242 ಪಂದ್ಯಗಳಲ್ಲಿ 274 ವಿಕೆಟ್

ಪಿಯೂಷ್ ಚಾವ್ಲಾ- 256 ಪಂದ್ಯಗಳಲ್ಲಿ 270 ವಿಕೆಟ್

ಅಮಿತ್ ಮಿಶ್ರಾ- 236 ಪಂದ್ಯಗಳಲ್ಲಿ 262 ವಿಕೆಟ್

ಜಸ್ಪ್ರೀತ್ ಬುಮ್ರಾ- 207 ಪಂದ್ಯಗಳಲ್ಲಿ 253 ವಿಕೆಟ್

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌

ಗಮನಾರ್ಹವಾದ ಅಂಶವೆಂದರೆ, ಯುಜ್ವೇಂದ್ರ ಚಹಲ್ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳ ದಾಖಲೆಯನ್ನು ಹೊಂದಿದ್ದಾರೆ. ಹರಿಯಾಣದ ಈ ಲೆಗ್ ಸ್ಪಿನ್ನರ್ 54 ಪಂದ್ಯಗಳಲ್ಲಿ 68 ವಿಕೆಟ್ ಪಡೆದಿದ್ದಾರೆ, ದಕ್ಷಿಣ ಆಫ್ರಿಕಾ ವಿರುದ್ಧದ ಭಾರತ ತಂಡದಿಂದ ವಿಶ್ರಾಂತಿ ಪಡೆದಿರುವ ಬುಮ್ರಾಗಿಂತ 1 ವಿಕೆಟ್ ಹೆಚ್ಚು ಪಡೆದಿದ್ದಾರೆ.

ಕಳೆದ ವರ್ಷ ಟಿ20 ವಿಶ್ವಕಪ್‌ಗೆ ಕೈಬಿಟ್ಟ ನಂತರ ಲೆಗ್-ಸ್ಪಿನ್ನರ್‌ ಯುಜ್ವೇಂದ್ರ ಚಹಲ್ ಈ ವರ್ಷ ಅನೇಕ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 4 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್ 2022ರ ಅದ್ಭುತ ಅಭಿಯಾನದ ನಂತರ, ಯುಜ್ವೇಂದ್ರ ಚಹಲ್ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸಹಜವಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ. ಲೆಗ್ ಸ್ಪಿನ್ನರ್ ಕುಲದೀಪ್ ಯಾದವ್, ರವಿ ಬಿಷ್ಣೋಯ್ ಮತ್ತು ಅಕ್ಷರ್ ಪಟೇಲ್ ಅವರೂ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯಲು ಸ್ಪರ್ಧೆಯಲ್ಲಿದ್ದಾರೆ.

Story first published: Tuesday, June 7, 2022, 18:38 [IST]
Other articles published on Jun 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X