ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA 2nd ODI: ದ. ಆಫ್ರಿಕಾಗೆ 7 ವಿಕೆಟ್‌ಗಳ ಜಯ, ಸರಣಿ ಗೆಲುವು

India vs South africa

ಪಾರ್ಲ್‌ನ ಬೊಲ್ಯಾಂಡ್ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಟೀಂ ಇಂಡಿಯಾ ನೀಡಿದ 288 ರನ್‌ಗಳ ಗುರಿಯನ್ನ ಸುಲಭವಾಗಿ ಬೆನ್ನತ್ತಿ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಲ್ಲಿ ಗೆಲುವು ಸಾಧಿಸಿದೆ.

ಭಾರತದ 288 ರನ್‌ಗಳ ಗುರಿ ಬೆನ್ನತ್ತಿ ದಕ್ಷಿಣ ಆಫ್ರಿಕಾ ಭರ್ಜರಿ ಆರಂಭವನ್ನ ಪಡೆಯಿತು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಮತ್ತು ಜನ್ನೆಮನ್ ಮಲನ್ ಶತಕದ ಜೊತೆಯಾಟದ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು.

91 ರನ್ ಸಿಡಿಸಿದ ಮಲನ್, ಕ್ವಿಂಟನ್ ಡಿ ಕಾಕ್ 78ರನ್

91 ರನ್ ಸಿಡಿಸಿದ ಮಲನ್, ಕ್ವಿಂಟನ್ ಡಿ ಕಾಕ್ 78ರನ್

ಓಪನರ್‌ಗಳಾದ ಕ್ವಿಂಟನ್ ಡಿಕಾಕ್ 66 ಎಸೆತಗಳಲ್ಲಿ 77ರನ್‌ ಕಲೆಹಾಕುವ ಮೂಲಕ ಸ್ಫೋಟಕ ಆಟವಾಡಿದ್ರು. ಇವರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿದ್ದವು. ಮತ್ತೊಂದೆಡೆ ಜನ್ನೆಮನ್ ಮಲನ್ ಕೇವಲ 9 ರನ್‌ಗಳ ಅಂತರದಲ್ಲಿ ಸೆಂಚುರಿ ಮಿಸ್ ಮಾಡಿಕೊಂಡ್ರು. 108 ಎಸೆತಗಳಲ್ಲಿ 91 ರನ್‌ ಕಲೆಹಾಕಿದ ಮಲನ್ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್‌ಗಳಿಸಿದ್ರು.

ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲ ಪ್ರದರ್ಶನ

ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲ ಪ್ರದರ್ಶನ

ಮೊದಲ ವಿಕೆಟ್‌ಗೆ 132 ರನ್‌ಗಳ ಜೊತೆಯಾಟವಾಡಿದ ದಕ್ಷಿಣ ಆಫ್ರಿಕಾ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೂಡ ಉತ್ತಮ ಕೊಡುಗೆ ನೀಡಿದ್ರು. ನಾಯಕ ಟೆಂಬಾ ಬವುಮಾ 35, ಏಡನ್ ಮಕ್ರಾಮ್ ಅಜೇಯ 37 ರನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಅಜೇಯ 37 ರನ್‌ ಕಲೆಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

ಭಾರತದ ಪರ ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಯುಜವೇಂದ್ರ ಚಹಾಲ್ ತಲಾ 1 ವಿಕೆಟ್ ಪಡೆದರು.

ಉತ್ತಮ ಆರಂಭ ಪಡೆದರೂ ಜೊತೆಯಾಟದಲ್ಲಿ ಎಡವಿದ ಭಾರತ

ಉತ್ತಮ ಆರಂಭ ಪಡೆದರೂ ಜೊತೆಯಾಟದಲ್ಲಿ ಎಡವಿದ ಭಾರತ

ಇದಕ್ಕೂ ಮೊದಲು ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಅರ್ಧಶತಕದ ಜೊತೆಯಾಟದ ಬಳಿಕ, ಕಳೆದ ಪಂದ್ಯದ ಗರಿಷ್ಠ ಸ್ಕೋರರ್ ಶಿಖರ್ ಧವನ್ 29 ರನ್‌ಗಳಿಸಿದ್ದಾಗ ಪಾರ್ಟ್‌ ಟೈಮ್ ಸ್ಪಿನ್ನರ್ ಏಡನ್ ಮಕ್ರಾಮ್‌ಗೆ ವಿಕೆಟ್ ಒಪ್ಪಿಸಿದ್ರು.

ಇದ್ರ ಬೆನ್ನಲ್ಲೇ ಟೀಂ ಇಂಡಿಯಾಗೆ ಆಘಾತ ಎದುರಾಯಿತು. ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ವಿರಾಟ್ ಕೊಹ್ಲಿ ಶೂನ್ಯಕ್ಕೆ ಕೇಶವ್ ಮಹಾರಾಜಗೆ ವಿಕೆಟ್ ಒಪ್ಪಿಸಿದ್ರು. ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಮೊದಲ ಬಾರಿಗೆ ಶೂನ್ಯಕ್ಕೆ ಸ್ಪಿನ್ನರ್‌ಗೆ ವಿಕೆಟ್ ನೀಡಿದ್ರು. ಇದ್ರಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಆಧಾರವಾಗಿದ್ದು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು ಕೆ.ಎಲ್ ರಾಹುಲ್.

ಅಬ್ಬರಿಸಿದ ರಿಷಭ್ ಪಂತ್

ಅಬ್ಬರಿಸಿದ ರಿಷಭ್ ಪಂತ್

ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ದಕ್ಷಿಣ ಆಫ್ರಿಕಾದ ದಾಳಿಯನ್ನ ಹಿಮ್ಮೆಟ್ಟಿಸಿತು. ಟೀಂ ಇಂಡಿಯಾ 200ರ ಗಡಿ ದಾಟಲು ನೆರವಾದ್ರು. ಅದ್ರಲ್ಲೂ ತನ್ನ ಅಗ್ರೆಸ್ಸಿವ್ ಇನ್ನಿಂಗ್ಸ್‌ ಆಡಿದ ಪಂತ್ 43 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ರು.

ಉತ್ತಮ ಜೊತೆಯಾಟ ಸಾಗುತ್ತಿದ್ದಾಗ ದಕ್ಷಿಣ ಆಫ್ರಿಕಾದ ಬೌಲರ್ ಸಿಸಂದ ಮಗಲಾ ಜೊತೆಯಾಟ ಬ್ರೇಕ್ ಮಾಡುವಲ್ಲಿ ಯಶಸ್ವಿಯಾದ್ರು. 55 ರನ್‌ಗಳಿಸಿದ್ದ ಕೆ.ಎಲ್ ರಾಹುಲ್ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.

ಆದ್ರೆ ತನ್ನ ಸ್ವಾಭಾವಿಕ ಆಕ್ರಮಣಾಕಾರಿ ಆಟ ಪ್ರದರ್ಶಿಸಿದ ರಿಷಭ್ ಪಂತ್ 10 ಬೌಂಡರಿ ಮತ್ತು 2 ಅಮೋಘ ಸಿಕ್ಸರ್‌ಗಳಿಂದ 71 ಎಸೆತಗಳಲ್ಲಿ 85 ರನ್ ಕಲೆಹಾಕಿ ಮಿಂಚಿದ್ರು. ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕದತ್ತ ಹೆಜ್ಜೆ ಹಾಕಿದ್ದ ಪಂತ್‌ಗೆ ದಕ್ಷಿಣ ಆಫ್ರಿಕಾ ಸ್ಪಿನ್ನರ್ ತಬ್ರೈಜ್ ಶಮ್ಸಿ ತಡೆಯೊಡ್ಡಿದ್ರು.

33ನೇ ಓವರ್‌ನಲ್ಲಿ ಎಡಗೈ ಚೈನಾಮೆನ್ ಬೌಲರ್ ಶಮ್ಸಿ ರಿಷಭ್‌ ಪಂತ್‌ರನ್ನ ತನ್ನ ಬಲೆಯಲ್ಲಿ ಕೆಡವುವಲ್ಲಿ ಯಶಸ್ವಿಯಾದ್ರು. ಬಿಗ್ ಶಾಟ್ ಹೊಡೆಯಲು ಪ್ರಯತ್ನಿಸಿದ ಪಂತ್ ಏಡನ್ ಮಕ್ರಾಮ್ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದ್ರು.

Virat Kohli ಬ್ಯಾಟಿಂಗ್ ಮುಗಿಸಿ Dance ಮಾಡಿಕೊಂಡು ಕೂತಿದ್ರಾ | Oneindia Kannada
ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಕೊಡುಗೆ

ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಕೊಡುಗೆ

ಪಂತ್ ಔಟಾದ ಬಳಿಕ ಶ್ರೇಯಸ್ ಅಯ್ಯರ್ 11ರನ್‌ಗೆ ಶಮ್ಸಿಯ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು. ಉತ್ತಮವಾಗಿ ಇನ್ನಿಂಗ್ಸ್‌ ಕಟ್ಟುತ್ತಿದ್ದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ 22 ರನ್‌ಗಳಿಸಿದ್ದಾಗ ಆಂಡಿಲೆ ಫೆಹ್ಲುಕ್ವಾಯೊಗೆ ವಿಕೆಟ್ ಒಪ್ಪಿಸಿದ್ರು.

ಇದಾದ ಬಳಿಕ ಏಳನೇ ವಿಕೆಟ್‌ಗೆ 48ರನ್‌ಗಳ ಅಮೂಲ್ಯ ಜೊತೆಯಾಟವಾಡಿದ ಶಾರ್ದೂಲ್ ಠಾಕೂರ್ ಮತ್ತು ಆರ್. ಅಶ್ವಿನ್ ತಂಡದ ಮೊತ್ತವನ್ನ 280ರ ಗಡಿದಾಟಿಸಿದ್ರು. ಶಾರ್ದೂಲ್ 38 ಎಸೆತಗಳಲ್ಲಿ ಅಜೇಯ 40 ರನ್ ಕಲೆಹಾಕಿದ್ರೆ, ಅಶ್ವಿನ್ 24 ಎಸೆತಗಳಲ್ಲಿ ಅಜೇಯ 25 ರನ್ ಕಲೆಹಾಕಿ ತಂಡಕ್ಕೆ ಆಧಾರವಾದ್ರು. ಅಂತಿಮವಾಗಿ ಭಾರತ 6 ವಿಕೆಟ್ ನಷ್ಟಕ್ಕೆ 287 ರನ್ ಕಲೆಹಾಕಿತು. ದಕ್ಷಿಣ ಆಫ್ರಿಕಾ ಪರ ಶಮ್ಸಿ 2, ಸಿಸಂದ ಮಗಲಾ, ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಏಡನ್ ಮಕ್ರಾಮ್ ತಲಾ 1 ವಿಕೆಟ್ ಮಿಂಚಿದ್ದಾರೆ.

Story first published: Saturday, January 22, 2022, 10:57 [IST]
Other articles published on Jan 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X