IND vs SA 2nd T20: ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ಇತಿಹಾಸ ಮತ್ತು ಟಿ20 ದಾಖಲೆಗಳು

ತಿರುವನಂತಪುರಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ದೊಡ್ಡ ಗೆಲುವಿನ ನಂತರ, ಭಾರತ ತಂಡವು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ತನ್ನ ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆತಿಥ್ಯ ವಹಿಸಲಿದೆ.

ಮೆನ್ ಇನ್ ಬ್ಲೂ ಭಾನುವಾರ (ಅಕ್ಟೋಬರ್ 2) ಫೇವರಿಟ್ ತಂಡವಾಗಿ ಪಂದ್ಯವನ್ನು ಪ್ರಾರಂಭಸಲಿದೆ. ಏಕೆಂದರೆ ಅವರು ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಮೂರು ಟಿ20 ಪಂದ್ಯಗಳನ್ನು ಗೆದ್ದಿದ್ದಾರೆ.

Asia Cup 2022: ಜೆಮಿಮಾ ರೋಡ್ರಿಗಸ್ ಸ್ಫೋಟಕ ಬ್ಯಾಟಿಂಗ್; ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯAsia Cup 2022: ಜೆಮಿಮಾ ರೋಡ್ರಿಗಸ್ ಸ್ಫೋಟಕ ಬ್ಯಾಟಿಂಗ್; ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ

ಕುತೂಹಲಕಾರಿಯಾದ ಅಂಶವೆಂದರೆ, ಎರಡು ಪಂದ್ಯಗಳಲ್ಲಿ ಆಡಿದ್ದರೂ ಭಾರತ ತಂಡವು ಈ ಸ್ಥಳದಲ್ಲಿ ಟಿ20 ಪಂದ್ಯವನ್ನು ಗೆದ್ದಿಲ್ಲ. ಅವುಗಳಲ್ಲಿ ಒಂದು ಮಳೆಯಿಂದಾಗಿ ರದ್ದಾಗಿದ್ದರೆ, ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಎಂಟು ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಯ ಎರಡನೇ ಟಿ20 ಪಂದ್ಯ ಪ್ರಾರಂಭವಾಗುವ ಮೊದಲು, ಈ ಕ್ರೀಡಾಂಗಣದಲ್ಲಿ ನಡೆದ ಹಿಂದಿನ ಪಂದ್ಯಗಳಿಂದ ನೀವು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ಅಂಕಿಅಂಶಗಳ ನೋಟ ಇಲ್ಲಿದೆ.

ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ಟಿ20 ಅಂಕಿಅಂಶಗಳು

ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ಟಿ20 ಅಂಕಿಅಂಶಗಳು

ಆಡಿದ ಟಿ20 ಪಂದ್ಯಗಳು: 2.

ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದ ಪಂದ್ಯಗಳು: 0.

ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು ಗೆದ್ದ ಪಂದ್ಯ: 1.

ಪಂದ್ಯ ಟೈ: 0.

ರದ್ದಾದ ಪಂದ್ಯ: 1.

ಗರಿಷ್ಠ ವೈಯಕ್ತಿಕ ಸ್ಕೋರ್: 62* - ಮೊಯಿಸೆಸ್ ಹೆನ್ರಿಕ್ಸ್ (ಆಸ್ಟ್ರೇಲಿಯ) ವಿರುದ್ಧ ಭಾರತ, 2017.

ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು: 4/21 - ಜೇಸನ್ ಬೆಹ್ರೆನ್ಡಾರ್ಫ್ (ಆಸ್ಟ್ರೇಲಿಯ) ವಿರುದ್ಧ ಭಾರತ, 2017.

ಗುವಾಹಟಿ ಪಿಚ್ ಟಿ20 ದಾಖಲೆಗಳು

ಗುವಾಹಟಿ ಪಿಚ್ ಟಿ20 ದಾಖಲೆಗಳು

ಹೆಚ್ಚಿನ ತಂಡದ ಸ್ಕೋರ್: 122/2 - ಆಸ್ಟ್ರೇಲಿಯಾ ವಿರುದ್ಧ ಭಾರತ, 2017.

ಕಡಿಮೆ ತಂಡದ ಸ್ಕೋರ್: 118 - ಭಾರತ ವಿರುದ್ಧ ಆಸ್ಟ್ರೇಲಿಯಾ, 2017.

ಅತ್ಯಧಿಕ ಯಶಸ್ವಿ ರನ್ ಚೇಸ್: 122/2 - ಆಸ್ಟ್ರೇಲಿಯಾ ವಿರುದ್ಧ ಭಾರತ, 2017.

ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್: 118.

ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ಕೊನೆಯ ಟಿ20 ಪಂದ್ಯ

ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ಕೊನೆಯ ಟಿ20 ಪಂದ್ಯ

ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಕೈಕ ಟಿ20 ಪಂದ್ಯದಲ್ಲಿ ಭಾರತ ಎಂಟು ವಿಕೆಟ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ಆತಿಥೇಯ ತಂಡ 20 ಓವರ್‌ಗಳಲ್ಲಿ 118 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಯಾವೊಬ್ಬ ಆಟಗಾರನೂ 30 ರನ್‌ಗಳ ಗಡಿ ಮುಟ್ಟಲಿಲ್ಲ.

ಗೆಲುವಿಗಾಗಿ 119 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 16ನೇ ಓವರ್‌ನಲ್ಲಿ ಆಲ್‌ರೌಂಡರ್ ಮೊಯಿಸೆಸ್ ಹೆನ್ರಿಕ್ಸ್ ಅವರ ಅರ್ಧಶತಕದ ನೆರವಿನಿಂದ ಪಂದ್ಯವನ್ನು ಗೆದ್ದುಕೊಂಡಿತು.

ಎರಡೂ ಇನ್ನಿಂಗ್ಸ್‌ಗಳಲ್ಲಿ ಬಿದ್ದ 12 ವಿಕೆಟ್‌ಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದ ವೇಗದ ಬೌಲರ್‌ಗಳು ಆ ಪಂದ್ಯದಲ್ಲಿ ಗುವಾಹಟಿಯಲ್ಲಿ ಉತ್ತಮ ರಾತ್ರಿಯನ್ನು ಹೊಂದಿದ್ದರು. ಎರಡು ತಂಡಗಳ ಬ್ಯಾಟರ್‌ಗಳು ಕಡಿಮೆ ಸ್ಕೋರಿಂಗ್ ಮುಖಾಮುಖಿಯಲ್ಲಿ ಒಟ್ಟು ಏಳು ಸಿಕ್ಸರ್‌ಗಳನ್ನು ಮಾತ್ರ ಹೊಡೆದರು.

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಸಂಭಾವ್ಯ ತಂಡಗಳು

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಸಂಭಾವ್ಯ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಅರ್ಷದೀಪ್ ಸಿಂಗ್

ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಟೆಂಬಾ ಬವುಮಾ(ನಾಯಕ), ರಿಲೀ ರೋಸ್ಸೌ, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಎರ್ನಿಕ್ ನಾರ್ಟ್ಜೆ, ತಬ್ರೈಜ್ ಶಮ್ಸಿ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, October 1, 2022, 18:34 [IST]
Other articles published on Oct 1, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X