ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್ ಅಬ್ಬರ, ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ 1000 ರನ್‌ ದಾಖಲೆ

Suryakumar yadav

ಗುವಾಹಟಿಯ ಬರ್ಸಾಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಯ ಮೊತ್ತ ಪೇರಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಭರ್ಜರಿ ಜೊತೆಯಾಟದ ಆರಂಭ ಪಡೆಯಿತು.

ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಜೋಡಿ 96ರನ್‌ಗಳ ಜೊತೆಯಾಟದ ಬಳಿಕ ಜೊತೆಯಾದ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಹರಿಣಗಳ ಬೌಲರ್‌ಗಳನ್ನ ಧೂಳೀಪಟ ಮಾಡಿದ್ರು. ಅದ್ರಲ್ಲೂ ಸೂರ್ಯಕುಮಾರ್ ಯಾದವ್ ಆಫ್ರಿಕಾ ಬೌಲರ್‌ಗಳು ಕನಸಿನಲ್ಲೂ ಬೆಚ್ಚಿ ಬೀಳುವಂತೆ ಬ್ಯಾಟ್ ಬೀಸಿದ್ರು.

24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಕೆ.ಎಲ್ ರಾಹುಲ್

24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಕೆ.ಎಲ್ ರಾಹುಲ್

ಟೀಂ ಇಂಡಿಯಾ ಪರ ಸ್ಫೋಟಕ ಇನ್ನಿಂಗ್ಸ್‌ ಮೂಲಕ ಉತ್ತಮ ಆರಂಭ ಒದಗಿಸಿದ್ದು ಕೆ.ಎಲ್ ರಾಹುಲ್. ಒಂದೆಡೆ ರೋಹಿತ್ ಶರ್ಮಾ 37 ಎಸೆತಗಳಲ್ಲಿ 43ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರೆ, ಮತ್ತೊಂದೆಡೆ ಕೆ.ಎಲ್ ರಾಹುಲ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಅಬ್ಬರಿಸಿದ್ರು. ದ. ಆಫ್ರಿಕಾ ವಿರುದ್ಧ ವೇಗದ ಅರ್ಧಶತಕ ಸಿಡಿಸಿದ ಭಾರತದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ರಾಹುಲ್ 28 ಎಸೆತಗಳಲ್ಲಿ 57 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿ ಒಳಗೊಂಡಿದ್ದವು.

ಡಾನ್ ಬ್ರಾಡ್‌ಮನ್‌ರನ್ನ ಹಿಂದಿಕ್ಕಿದ ಸರ್ಫರಾಜ್ ಖಾನ್: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲೆ!

3ನೇ ವಿಕೆಟ್‌ಗೆ ಕೊಹ್ಲಿ-ಸೂರ್ಯಕುಮಾರ್ ವೇಗದ ಶತಕದ ಜೊತೆಯಾಟ

3ನೇ ವಿಕೆಟ್‌ಗೆ ಕೊಹ್ಲಿ-ಸೂರ್ಯಕುಮಾರ್ ವೇಗದ ಶತಕದ ಜೊತೆಯಾಟ

ಟೀಂ ಇಂಡಿಯಾ ರನ್‌ರೇಟ್‌ ವಿಚಾರದಲ್ಲಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅತ್ಯಂತ ವೇಗದ ಶತಕ ಜೊತೆಯಾಟವಾಡಿದ್ದಾರೆ. ಮೂರನೇ ವಿಕೆಟ್‌ಗೆ 14.57ರ ರನ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಈ ಜೋಡಿ 42 ಎಸೆತಗಳಲ್ಲಿ ಭರ್ಜರಿಯಾಗಿ 102 ರನ್ ಸಿಡಿಸಿದ್ರು.

ಈ ಜೊತೆಯಾಟದಲ್ಲಿ ಸೂರ್ಯಕುಮಾರ್ ಪಾಲು ಬಹುದೊಡ್ಡದು ಮೈದಾನದ ಮೂಲೆ ಮೂಲೆಗೆ ಚೆಂಡನ್ನ ಅಟ್ಟಿದ ಸೂರ್ಯಕುಮಾರ್ ಯಾದವ್ 22 ಎಸೆತಗಳಲ್ಲಿ 61 ರನ್‌ಗಳನ್ನ ದಾಖಲಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್‌ಗಳಿದ್ದವು. ಸೂರ್ಯನ ಸ್ಫೋಟಕ ಬ್ಯಾಟಿಂಗ್‌ಗೆ ಸಾಕ್ಷಿಯಾಗಿದ್ದು ಅವರ 277.27 ಸ್ಟ್ರೈಕ್‌ರೇಟ್‌.

ಮತ್ತೊಂದಡೆ ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ ಅಜೇಯ 49ರನ್‌ಗಳಿಸಿ ಒಂದು ರನ್‌ಗಳಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡ್ರು. ಇನ್ನು ಫಿನಿಷರ್ ಡಿಕೆ 7 ಎಸೆಗಳಲ್ಲಿ 17ರನ್ ಚಚ್ಚಿದ್ರು. ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆಯ 237ರನ್ ಕಲೆಹಾಕಿತು.

Ind Vs SA T20: ರಾಹುಲ್, ಸೂರ್ಯಕುಮಾರ್, ಕೊಹ್ಲಿ ಆರ್ಭಟ 237 ರನ್ ಕಲೆಹಾಕಿದ ಟೀಂ ಇಂಡಿಯಾ

ಟಿ20 ಕ್ರಿಕೆಟ್‌ನಲ್ಲಿ ವೇಗದ 1000ರನ್ ಸಿಡಿಸಿದ ಸೂರ್ಯಕುಮಾರ್

ಟಿ20 ಕ್ರಿಕೆಟ್‌ನಲ್ಲಿ ವೇಗದ 1000ರನ್ ಸಿಡಿಸಿದ ಸೂರ್ಯಕುಮಾರ್

ಟಿ20 ಕ್ರಿಕೆಟ್‌ನಲ್ಲಿ ಇದುವರೆಗೂ ಯಾರೂ ಮಾಡದ ಸಾಧನೆಯನ್ನ ಸೂರ್ಯಕುಮಾರ್ ಯಾದವ್ ಮಾಡಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಎದುರಿಸಿದ ಚೆಂಡಿನ ಆಧಾರದ ಮೇಲೆ ವೇಗವಾಗಿ ಸಹಸ್ರ ರನ್ ದಾಖಲಿಸಿದ ಸಾಧನೆಯನ್ನ ಸೂರ್ಯಕುಮಾರ್ ಯಾದವ್ ಮಾಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನ ಹಿಂದಿಕ್ಕಿದ್ದಾರೆ.

ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಡಿದಾಟಿದ ಸೂರ್ಯಕುಮಾರ್ ಯಾದವ್ ವೇಗದ ಅರ್ಧಶತಕ ದಾಖಲಿಸಿದ ಭಾರತದ ಎರಡನೇ ಬ್ಯಾಟರ್ ಎಂಬ ಸಾಧನೆಯನ್ನ ಕೆ.ಎಲ್ ರಾಹುಲ್ ಜೊತೆಗೆ ಹಂಚಿಕೊಂಡಿದ್ದಾರೆ. ಇದೇ ವೇಳೆಯಲ್ಲಿ ಸೂರ್ಯ ಅತ್ಯಂತ ಕಡಿಮೆ ಎಸೆತದಲ್ಲಿ 1000ರನ್ ಸಿಡಿಸಿದ್ದಾರೆ.

174ರ ಸ್ಟ್ರೈಕ್‌ರೇಟ್‌ನಲ್ಲಿ 573 ಎಸೆತಗಳಲ್ಲಿ ಸೂರ್ಯಕುಮಾರ್ ಯಾದವ್ 1000 ರನ್ ಸಿಡಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಇಷ್ಟು ವರ್ಷ ಮ್ಯಾಕ್ಸ್‌ವೆಲ್ ಹೆಸರಲ್ಲಿದ್ದ ದಾಖಲೆ ಮುರಿದಿದೆ. ಅತ್ಯಂತ ಕಡಿಮೆ ಎಸೆತದಲ್ಲಿ ಸಾವಿರ ರನ್ ದಾಖಲಿಸಿರುವ ಬ್ಯಾಟರ್‌ಗಳ ಪಟ್ಟಿ ಈ ಕೆಳಗಿದ್ದು, ಜೊತೆಗೆ ಸ್ಟ್ರೈಕ್‌ರೇಟ್ ಕೂಡ ನೀಡಲಾಗಿದೆ.

573 ಸೂರ್ಯಕುಮಾರ್ ಯಾದವ್ (ಸ್ಟ್ರೈಕ್‌ರೇಟ್ 174)

604 ಗ್ಲೆನ್ ಮ್ಯಾಕ್ಸ್‌ವೆಲ್ (ಸ್ಟ್ರೈಕ್‌ರೇಟ್ 166)

635 ಕಾಲಿನ್ ಮನ್ರೋ (ಸ್ಟ್ರೈಕ್‌ರೇಟ್ 157)

640 ಎವಿನ್ ಲಿವಿಸ್ (ಸ್ಟ್ರೈಕ್‌ರೇಟ್ 156)

654 ತಿಸಾರ ಪೆರೆರಾ (ಸ್ಟ್ರೈಕ್‌ರೇಟ್ 153)

Story first published: Sunday, October 2, 2022, 22:11 [IST]
Other articles published on Oct 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X