ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ. ಆಫ್ರಿಕಾ: ಕಿಲ್ಲರ್ ಮಿಲ್ಲರ್‌ಗೆ ವಿಶೇಷ ಯೋಜನೆ ರೂಪಿಸಿದ ರಾಹುಲ್ ದ್ರಾವಿಡ್

IND vs SA 2nd T20: Team India plane ready; Coach Dravid and bowlers Special plane to contain David Miller

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶನ ನಿಡಿದ ಹೊರತಾಗಿಯೂ ಬೌಲಿಂಗ್‌ನಲ್ಲಿ ಮಾಡಿದ ತಪ್ಪಿನಿಂದಾಗಿ ಸೋಲು ಅನುಭವಿಸಿದೆ. ಹೀಗಾಗಿ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನ ಭಾರತ ಮೊದಲ ಪಂದ್ಯದಲ್ಲಿ ಮಾಡಿದ ತಪ್ಪನ್ನು ಪುನರಾವರ್ತಿಸದಂತೆ ಎಚ್ಚರಿವಹಿಸಲಿದೆ.

ಮೊದಲ ಪಂದ್ಯದಲ್ಲಿ ಭಾರತದ ಸೋಲಿಗೆ ಪ್ರಮುಖವಾಗಿ ಕಾರಣವಾಗಿದ್ದು ದಕ್ಷಿಣ ಆಫ್ರಿಕಾದ ಸ್ಪೋಟಕ ಆಟಗಾರ ಡೇವಿಡ್ ಮಿಲ್ಲರ್. ಟೀಮ್ ಇಂಡಿಯಾದ ಎಲ್ಲಾ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಮಿಲ್ಲರ್ ಸಿಕ್ಸರ್ ಬೌಂಡರಿಯ ಸುರಿಮಳೆಗೈದರು. ಹೀಗಾಗಿ ಎರಡನೇ ಪಂದ್ಯದಲ್ಲಿ ಈ ಆಟಗಾರನಿಗೆ ಭಾರತದ ಕೋಚ್ ರಾಹುಲ್ ದ್ರಾವಿಡ್ ವಿಶೇಷ ರಣತಂತ್ರವನ್ನು ರೂಪಿಸಿದ್ದಾರೆ. ಶನುವಾರದ ಅಭ್ಯಾಸದ ಸಂದರ್ಭದಲ್ಲಿ ಈ ಅಂಶಗಳು ಸ್ಪಷ್ಟವಾಗಿದೆ.

IND vs SA: ಟೀಂ ಇಂಡಿಯಾಗೆ ಪುನರಾಗಮನ ಮಾಡಿದ ನಂತರ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?IND vs SA: ಟೀಂ ಇಂಡಿಯಾಗೆ ಪುನರಾಗಮನ ಮಾಡಿದ ನಂತರ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

ಬೌಲರ್‌ಗಳ ಜೊತೆ ಕೋಚ್‌ಗಳ ಚರ್ಚೆ

ಬೌಲರ್‌ಗಳ ಜೊತೆ ಕೋಚ್‌ಗಳ ಚರ್ಚೆ

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಎಲ್ಲಾ ಮಾದರಿಯಲ್ಲಿ ಸತತ 9ನೇ 50 ಪ್ಲಸ್ ರನ್ ಬಾರಿಸಿದ್ದಾರೆ. ಇದರಿಂದಾಗಿ ಮುಲ್ತಾನ್‌ನಲ್ಲಿ ನಡೆಯುತ್ತಿರುವ ಂಊರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 2-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ ಬಳಿಕ ಅಜಂ ಎರಡನೇ ಪಂದ್ಯದಲ್ಲಿಯೂ 93 ಎಸೆತಗಳಲ್ಲಿ 77 ರನ್‌ಗಳನ್ನು ಬಾರಿಸಿ ಮಿಂಚಿದ್ದಾರೆ. ಆದರೆ ಫೀಲ್ಡಿಂಗ್‌ನ ಸಂದರ್ಭದಲ್ಲಿ ನಡೆದುಕೊಂಡ ವಿವಾದಾತ್ಮಕ ರೀತಿಯಿಂದಾಗಿ ಪಾಕಿಸ್ತಾನ ತಂಡಕ್ಕೆ ದುಬಾರಿಯಾಯಿತು. ಎದುರಾಳಿ ವೆಸ್ಟ್ ಇಂಡೀಸ್ ತಂಡಕ್ಕೆ ಐದು ರನ್‌ಗಳನ್ನು ದಂಡದ ರೂಪದಲ್ಲಿ ನೀಡಲಾಯಿತು.

ಲೆಂತ್‌ನಲ್ಲಿ ಬದಲಾವಣೆ, ಯಾರ್ಕರ್ ದಾಳಿ

ಲೆಂತ್‌ನಲ್ಲಿ ಬದಲಾವಣೆ, ಯಾರ್ಕರ್ ದಾಳಿ

ಮೊದಲ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿ ದುರ್ಬಲವೆನಿಸಲು ಕಾರಣವಾಗಿದ್ದು ಯಾರ್ಕರ್ ಎಸೆತಗಳ ಕೊರತೆ. ಹರ್ಷಲ್ ಪಟೇಲ್ ಎಂದಷ್ಟು ಯಾರ್ಕರ್ ಎಸೆತಗಳನ್ನು ಪ್ರಯತ್ನಿಸಿದರೂ ಅದು ಫುಲ್‌ಟಾಸ್ ಆಗಿ ಪರಿವರ್ತನೆಯಾಗಿತ್ತು. ವಿಪರ್ಯಾಸವೆಂದರೆ ಭುವನೇಶ್ವರ್ ಕುಮಾರ್ ಹಾಗೂ ಆವೇಶ್ ಖಾನ್ ಅವರಿಂದ ಯಾರ್ಕರ್ ಎಸೆತಗಳೇ ಬರಲಿಲ್ಲ. ಹೀಗಾಗಿ ಎರಡನೇ ಪಂದ್ಯದಲ್ಲಿ ಕೋಚ್ ದ್ರಾವಿಡ್ ಅವರು ಬೌಲರ್‌ಗಳಿಂದ ಹೆಚ್ಚಿನ ಯಾರ್ಕರ್ ನಿರೀಕ್ಷಿಸುತ್ತಿದ್ದಾರೆ.

ಮಿಲ್ಲರ್ ಮಿರುದ್ಧ ಚಾಹಲ್ ಬಳಕೆ

ಮಿಲ್ಲರ್ ಮಿರುದ್ಧ ಚಾಹಲ್ ಬಳಕೆ

ಕಳೆದ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ಬೌಲರ್‌ಗಳನ್ನು ಬಳಸಿಕೊಂಡ ಬಗ್ಗೆ ಚರ್ಚೆಗಳಿ ನಡೆದಿದೆ. ಅದರಲ್ಲೂ ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಧರಿಸಿದ ಯುಜುವೇಂದ್ರ ಚಾಹಲ್ ಅವರನ್ನು ಬಳಸಿಕೊಂಡ ರೋತಿಗೆ ಭಾರೀ ಟೀಕೆಗಳು ವ್ಯಕ್ತವಾಗಿದೆ. ಚಾಹಲ್ ಕೇವಲ 2.1 ಓವರ್‌ಗಳನ್ನು ಮಾತ್ರವೇ ಬಳಸಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಅಭಿಮಾನಿಗಳು ಕಳೆದ ಪಂದ್ಯದಲ್ಲಿ ಅಜೇಯವಾಗುಳಿದಿದ್ದ ಡೇಚಿಡ್ ಮಿಲ್ಲರ್ ವಿರುದ್ಧ ಚಾಹಲ್ ಅವರನ್ನು ಬಳಸಲು ನಿರೀಕ್ಷಿಸುತ್ತಿದ್ದಾರೆ.

ಆಪ್ತ ಸ್ನೇಹಿತನನ್ನು ಬಳಸಲು ಸಲಹೆ

ಆಪ್ತ ಸ್ನೇಹಿತನನ್ನು ಬಳಸಲು ಸಲಹೆ

ಕಳೆದ ಪಂದ್ಯದಲ್ಲಿ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಮಿಂಚಲು ವಿಫಲವಾದರು. ಬೌಲಿಂಗ್ ಮಾಡಿದ ಒಂದು ಓವರ್‌ನಲ್ಲಿ ಹಾರ್ದಿಕ್ 18 ರನ್ ಬಿಟ್ಟುಕೊಟ್ಟರು. ಹಾಗಿದ್ದರೂ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಡೇವಿಡ್ ಮಿಲ್ಲರ್ ವಿರುದ್ಧ ಬಳಸಬಹುದು ಎಂಬುದು ಲೆಕ್ಕಾಚಾರ. ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಎರಡು ಪ್ರಮುಖ ಆಧಾರ ಸ್ಥಂಬಗಳಾಗಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಡೇವಿಡ್ ಮಿಲ್ಲರ್ ಪರಸ್ಪರ ಒಪ್ಪರನ್ನೊಬ್ಬರು ಚೆನ್ನಾಗಿ ಅರಿತುಕೊಂಡಿದ್ದಾರೆ. ಇದು ಭಾರತೀಯ ತಂಡಕ್ಕೆ ಲಾಭವಾಗಬಹುದು.

Story first published: Sunday, June 12, 2022, 12:12 [IST]
Other articles published on Jun 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X