ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA 2ನೇ ಟಿ20: ಗೆಲುವಿನೊಂದಿಗೆ ಕಮ್ ಬ್ಯಾಕ್ ಮಾಡಲು ಭಾರತದ ಸ್ಟ್ರಾಟಜಿ ಏನು?

IND Vs SA 2nd T20: What Is India Team Strategy To Come Back With Winnings?

ಭಾನುವಾರ ಕಟಕ್‌ನಲ್ಲಿ ನಡೆಯಲಿರುವ ಐದು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನೊಂದಿಗೆ ಕಮ್ ಬ್ಯಾಕ್ ಮಾಡುವ ಉತ್ಸಾಹದಲ್ಲಿ ಭಾರತ ತಂಡವಿದೆ. ಈ ಮೂಲಕ ಸಾಂದರ್ಭಿಕ ನಾಯಕ ರಿಷಭ್ ಪಂತ್ ಅವರು ಭಾರತ ಬೌಲರ್‌ಗಳಿಂದ ಸುಧಾರಿತ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದಾರೆ.

ಡೇವಿಡ್ ಮಿಲ್ಲರ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಜೋಡಿ ಅತ್ಯಂತ ನಿರಾಯಾಸವಾಗಿ 212 ರನ್ ಬೃಹತ್ ಗುರಿಯನ್ನು ತಲುಪಿದರು ಮತ್ತು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು. ಆದರೆ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಿದ ರಿಷಭ್ ಪಂತ್‌ಗೆ ಮಾತ್ರ ಕಹಿ ಅನುಭವವಾಯಿತು.

IND vs SA: 2ನೇ ಪಂದ್ಯಕ್ಕೂ ಮುನ್ನ ಶ್ರೇಯಸ್ ಅಯ್ಯರ್‌ಗೆ ಮಹತ್ವದ ಸಲಹೆ ನೀಡಿದ ವಾಸಿಂ ಜಾಫರ್IND vs SA: 2ನೇ ಪಂದ್ಯಕ್ಕೂ ಮುನ್ನ ಶ್ರೇಯಸ್ ಅಯ್ಯರ್‌ಗೆ ಮಹತ್ವದ ಸಲಹೆ ನೀಡಿದ ವಾಸಿಂ ಜಾಫರ್

ರಿಷಭ್ ಪಂತ್‌ ಅವರು ಈ ಬಾರಿ ಮರೆಯಲಾಗದ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಹೊಂದಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ಲೇಆಫ್‌ಗೆ ಮುನ್ನಡೆಸಲು ವಿಫಲರಾದರು. ಇನ್ನು ಭವಿಷ್ಯದ ವೈಟ್ ಬಾಲ್ ನಾಯಕನಾಗಿ ನೋಡಿದಾಗ, ಐಪಿಎಲ್ ನಂತರ ರಿಷಭ್ ಪಂತ್ ಅವರಿಗಿಂತ ಹಾರ್ದಿಕ್ ಪಾಂಡ್ಯ ಹೆಚ್ಚು ಪ್ರಭಾವಿಯಾಗಿದ್ದಾರೆ.

'ಹಾರ್ದಿಕ್ ಪಾಂಡ್ಯ ಅವರು ಭಾರತದ ಮುಂದಿನ ವೈಟ್-ಬಾಲ್ ನಾಯಕ' ಎಂದು ಬೆಳೆಯುತ್ತಿರುವ ದನಿಯ ನಡುವೆ, ರಿಷಭ್ ಪಂತ್ ಮುಂದಿನ ಪಂದ್ಯದಲ್ಲಿ ಮಾಸ್ಟರ್‌ಮೈಂಡ್‌ನಂತೆ ತಂಡವನ್ನು ಗೆಲ್ಲಿಸಬೇಕಿದೆ.

12 ಎಸೆತಗಳಲ್ಲಿ 31 ರನ್ ಗಳಿಸಿದರು

12 ಎಸೆತಗಳಲ್ಲಿ 31 ರನ್ ಗಳಿಸಿದರು

ನಾಯಕ ರಿಷಭ್ ಪಂತ್‌ಗೆ ಇದು ಇನ್ನೂ ಆರಂಭಿಕ ದಿನಗಳಾಗಿರಬಹುದು, ಆದರೆ ಮೊದಲ ಪಂದ್ಯದಲ್ಲಿ ಅವರ ದೇಹ ಭಾಷೆ ಎಂದಿಗೂ ಎದ್ದು ಕಾಣಲಿಲ್ಲ ಮತ್ತು ಅವರ ಚೊಚ್ಚಲ ನಾಯಕತ್ವದ ಸಮಯದಲ್ಲಿ ಪಂತ್ ಒತ್ತಡದಲ್ಲಿದ್ದರು. ಅವರು ಐಪಿಎಲ್ ಪರ್ಪಲ್ ಕ್ಯಾಪ್ ವಿಜೇತ ಯುಜ್ವೇಂದ್ರ ಚಹಲ್ ಅವರನ್ನು ಕೊನೆಯ ಓವರ್‌ನಲ್ಲಿ ಆಡಲಿಳಿಸಿದರು. ಆದರೆ ಆ ಪಂದ್ಯದಲ್ಲಿ ಕೇವಲ ಎರಡು ಪೂರ್ಣ ಓವರ್ ಮಾಡಿದರು.

ಕಳೆದ ವರ್ಷ ನವೆಂಬರ್‌ನಲ್ಲಿ 2021ರ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ಕೊನೆಯ ಬಾರಿಗೆ ಆಡಿದ್ದ ಹಾರ್ದಿಕ್ ಪಾಂಡ್ಯ, ಕಳೆದ ಪಂದ್ಯದಲ್ಲಿ 12 ಎಸೆತಗಳಲ್ಲಿ 31 ರನ್ ಗಳಿಸಿದ್ದರು ಮತ್ತು ತಂಡದ ಮೊತ್ತವನ್ನು 200 ರನ್ ಗಡಿ ದಾಟಿಸಿ ಬ್ಯಾಟ್‌ನೊಂದಿಗೆ ಉತ್ತಮವಾಗಿ ಆಡಿದರು.

ಪಾಂಡ್ಯ ಬೌಲಿಂಗ್‌ನಲ್ಲಿ ಪ್ರಭಾವ ಬೀರಲು ವಿಫಲ

ಪಾಂಡ್ಯ ಬೌಲಿಂಗ್‌ನಲ್ಲಿ ಪ್ರಭಾವ ಬೀರಲು ವಿಫಲ

ಆದರೆ ಪಾಂಡ್ಯ ಬೌಲಿಂಗ್‌ನಲ್ಲಿ ಪ್ರಭಾವ ಬೀರಲು ವಿಫಲರಾದರು ಮತ್ತು ಅವರ ಏಕೈಕ ಓವರ್‌ನಲ್ಲಿ 18 ರನ್‌ಗಳನ್ನು ಬಿಟ್ಟುಕೊಟ್ಟರು. ನಾಯಕ ರಿಷಭ್ ಪಂತ್‌ಗೆ ಬೌಲಿಂಗ್ ವಿಭಾಗವೇ ದೊಡ್ಡ ತಲೆನೋವಾಗಿದ್ದು, ಮುಂದಿನ ಪಂದ್ಯದಲ್ಲಿ ಅರ್ಶ್‌ದೀಪ್ ಸಿಂಗ್ ಅಥವಾ ಫಾಸ್ಟ್ ಬೌಲರ್ ಉಮ್ರಾನ್ ಮಲಿಕ್ ನಡುವೆ ಒಬ್ಬರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ. ಬ್ಯಾಟಿಂಗ್ ವಿಭಾಗ ಉತ್ತಮವಾಗಿದ್ದು, ಬೌಲಿಂಗ್ ವಿಭಾಗ ಸ್ವಲ್ಪ ಮೊನಚು ಕಾಣಬೇಕಿದೆ.

ಹಿರಿಯ ಭುವನೇಶ್ವರ್ ಕುಮಾರ್ ಮೊದಲು ನಿಯಂತ್ರಣ ಮಾಡಿದ್ದರೆ, ಡೆತ್ ಓವರ್‌ಗಳಲ್ಲಿ ರನ್ ಬಿಟ್ಟುಕೊಟ್ಟರು. ಹರ್ಷಲ್ ಪಟೇಲ್ ಕೂಡ ಹೆಚ್ಚು ರನ್ ಬಾರಿಸಿಕೊಂಡರು. ಯುವ ಆಟಗಾರ ಅವೇಶ್ ಖಾನ್ ಕೂಡ ಈ ಮೂವರಲ್ಲಿ ಹೆಚ್ಚು ಮಿತವ್ಯಯ ರನ್ ನೀಡಿದ್ದರೂ, ಪ್ರಭಾವ ಬೀರಲು ವಿಫಲರಾದರು.

ಸತತವಾಗಿ ಮೂರು ಪಂದ್ಯ ಗೆಲ್ಲುವ ಕಷ್ಟದ ಗುರಿ

ಸತತವಾಗಿ ಮೂರು ಪಂದ್ಯ ಗೆಲ್ಲುವ ಕಷ್ಟದ ಗುರಿ

ಅರ್ಶ್‌ದೀಪ್ ಮತ್ತು ಉಮ್ರಾನ್ ಮಲಿಕ್ ಜೋಡಿಯು ತಮ್ಮ ವೇಗ ಮತ್ತು ನಿಖರತೆಯೊಂದಿಗೆ ನೆಟ್‌ನಲ್ಲಿ ಪ್ರಭಾವ ಬೀರಲು ಶ್ರಮಿಸುತ್ತಿರುವುದರಿಂದ ಈ ಜೋಡಿಯಲ್ಲಿ ಒಬ್ಬರು ಶನಿವಾರ ಚೊಚ್ಚಲ ಪಂದ್ಯಕ್ಕೆ ಸಿದ್ಧರಾಗುವ ಸಾಧ್ಯತೆಯಿದೆ. ಮತ್ತೊಂದು ಪ್ರಮುಖ ಅಂಶವೆಂದರೆ ರಿಷಭ್ ಪಂತ್ ನೇತೃತ್ವದ ತಂಡವು ಸತತವಾಗಿ ಮೂರು ಪಂದ್ಯ ಗೆಲ್ಲುವ ಕಷ್ಟದ ಗುರಿ ಹೊಂದಿರುವುದರಿಂದ ಇದು ಸುಲಭದ ಕೆಲಸವಲ್ಲ.

ಗುಜರಾತ್ ಟೈಟನ್ಸ್ ತಂಡದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿ, ಐಪಿಎಲ್‌ನಲ್ಲಿ 68.71ರ ಸರಾಸರಿಯಲ್ಲಿ 481 ರನ್ ಗಳಿಸಿದ ಡೇವಿಡ್ ಮಿಲ್ಲರ್, ಬಿರುಸಿನ ಶೈಲಿಯಲ್ಲಿ ಬ್ಯಾಟಿಗ್ ಮಾಡಿದರು ಮತ್ತು ಫಿರೋಜ್ ಶಾ ಕೋಟ್ಲಾದಲ್ಲಿ ಸ್ಪಿನ್ ಮತ್ತು ವೇಗ ಎರಡರ ವಿರುದ್ಧವೂ ಅಬ್ಬರಿಸಿದರು.

ಭಾರತ- ಸೌತ್ ಆಫ್ರಿಕಾ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಹೊಡೆದಾಟ ಬಡಿದಾಟದ ವಿಡಿಯೋ ವೈರಲ್ | *Cricket
ಎರಡು ತಂಡಗಳ ಸಂಭಾವ್ಯ ಸದಸ್ಯರು

ಎರಡು ತಂಡಗಳ ಸಂಭಾವ್ಯ ಸದಸ್ಯರು

ಭಾರತ ತಂಡ: ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್.

ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ತಬ್ರೈಜ್ ಶಹಮ್ಸಿ, ತಬ್ರೈಜ್ ಸ್ಟಬ್ಸ್, ರಾಸ್ಸೀ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್.

Story first published: Saturday, June 11, 2022, 17:35 [IST]
Other articles published on Jun 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X