ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾಂಡರರ್ಸ್ ಕ್ರೀಡಾಂಗಣದಲ್ಲಿ ರನ್ ಬೆನ್ನಟ್ಟಿದ ದಾಖಲೆ ಹೇಗಿದೆ? ಯಾರಿಗಿದೆ ಗೆಲುವಿನ ಅವಕಾಶ?

Ind vs SA; 2nd test, highest run chases record in Test at Wanderers Stadium, Johannesburg

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ರೋಚಕ ಘಟ್ಟವನ್ನು ತಲುಪಿದೆ. ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಹೋರಾಟದ ಪ್ರದರ್ಶನ ನೀಡಿದ್ದು ದಕ್ಷಿಣ ಆಫ್ರಿಕಾಗೆ ಸವಾಲಿನ ಗುರಿಯನ್ನು ನಿಗದಿಪಡಿಸಿದೆ. ವಾಂಡರರ್ಸ್ ಕ್ರೀಡಾಂಗಣದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 229 ರನ್‌ಗಳಿಸಿ ಆಲೌಟ್ ಆಗಿದ್ದ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ 240 ರನ್‌ಗಳ ಗುರಿಯನ್ನು ಬೆನ್ನಟ್ಟಲು ಯಶಸ್ವಿಯಾಗುತ್ತದಾ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.

ಆದರೆ ಜೋಹನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದ ಇತಿಹಾಸವನ್ನು ನೋಡಿದರೆ ರನ್ ಬೆನ್ನಟ್ಟಿದ ದಾಖಲೆ ಹೇಗಿದೆ? ಈವರೆಗೆ ಈ ಕ್ರೀಡಾಂಗಣದಲ್ಲಿ ಬೆನ್ನಟ್ಟಿ ಗೆದ್ದ ದೊಡ್ಡ ಮೊತ್ತ ಯಾವುದು ಎಂಬ ಕುತೂಹಲ ನಿಮ್ಮಲ್ಲಿರಬಹುದು. ಅದಕ್ಕೆ ಈ ವರದಿಯಲ್ಲಿದೆ ಉತ್ತರ.

ಶಾರ್ದೂಲ್ ಶಾರ್ದೂಲ್ "ಲಾರ್ಡ್ ಶಾರ್ದೂಲ್" ಆಗಿದ್ದು ಹೇಗೆ, ಎಲ್ಲಿ? ಕುತೂಹಲಕಾರಿ ಸಂಗತಿ ವಿವರಿಸಿದ ವೇಗಿ

ಜೋಹನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತಂಡ ಅತಿ ಹೆಚ್ಚಿನ ಗುರಿಯನ್ನು ಬೆನ್ನಟ್ಟಿದ್ದು 6 ವಿಕೆಟ್ ಕಳೆದುಕೊಂಡು 220 ರನ್‌ಗಳಿಸಿರುವುದು ಈವರೆಗಿನ ದಾಖಲಾಗಿದೆ. 2006ರಲ್ಲಿ ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿತ್ತು. ಅದಕ್ಕೂ ಹಿಂದೆ 1998ರಲ್ಲಿ 164 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದು ದಾಖಲೆಯಾಗಿತ್ತು. ಇದೀಗ ದಕ್ಷಿಣ ಆಫ್ರಿಕಾ ಭಾರತ ನೀಡಿದ 240 ರನ್‌ಗಳ ಗುರಿಯನ್ನು ಬೆನ್ನಟ್ಟಿದರೆ ಈ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತನ್ನ ಹೊಸ ದಾಖಲೆ ಬರೆದಂತಾಗುತ್ತದೆ

ಆದರೆ ದಕ್ಷಿಣ ಆಫ್ರಿಕಾ ಈ ಹಿಂದೆ ರನ್ ಬೆನ್ನಟ್ಟಿ ಗೆದ್ದಂತೆ ಈ ಬಾರಿ ಗೆಲುವು ಸಾಧಿಸುವುದು ಸುಲಭವಿಲ್ಲ. ಅದಕ್ಕೆ ಕಾರಣ ಆ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ತಂಡ ವಿಶ್ವ ಶ್ರೇಷ್ಠ ಆಟಗಾರರನ್ನು ಹೊಂದಿತ್ತು. ಗ್ರೇಮ್ ಸ್ಮಿತ್, ಜಾಕ್ ಕ್ಯಾಲೀಸ್ ಎಬಿ ಡಿವಿಲಿಯರ್ಸ್ ಅವರಂತಾ ಆಟಗಾರರು ದಕ್ಷಿಣ ಆಫ್ರಿಕಾ ತಂಡದಲ್ಲಿದ್ದರು. ಇಂತಾ ಬಲಿಷ್ಠ ಆಟಗಾರರ ಕೊರತೆ ಈಗಿನ ತಂಡಕ್ಕೆ ಕಾಡುತ್ತಿದೆ. ದಕ್ಷಿಣ ಆಫ್ರಿಕಾ ತಂಡ ಈಗ ನಾಯಕ ಡೀನ್ ಎಲ್ಗರ್, ಅನುಭವಿ ಟೆಂಬಾ ಬವುಮಾ, ಐಡೆನ್ ಮಾರ್ಕ್ರಮ್ ಹಾಗೂ ಕೀಗನ್ ಪೀಟರ್ಸನ್ ಅವರ ಮೇಲೆ ಎಲ್ಲಾ ಭಾರ ಹಾಕಿ ನಿರೀಕ್ಷೆ ಮಾಡುತ್ತಿದೆ.

ಯಾರಪ್ಪಾ ನೀನು? ಬೌಲಿಂಗ್ ಮಾಡಿದಾಗ್ಲೆಲ್ಲಾ ವಿಕೆಟ್ ಬೀಳುತ್ತಿದ್ಯಲ್ಲಾ: ಶಾರ್ದೂಲ್ ಕುರಿತು ಅಚ್ಚರಿ ಪಟ್ಟ ಅಶ್ವಿನ್ಯಾರಪ್ಪಾ ನೀನು? ಬೌಲಿಂಗ್ ಮಾಡಿದಾಗ್ಲೆಲ್ಲಾ ವಿಕೆಟ್ ಬೀಳುತ್ತಿದ್ಯಲ್ಲಾ: ಶಾರ್ದೂಲ್ ಕುರಿತು ಅಚ್ಚರಿ ಪಟ್ಟ ಅಶ್ವಿನ್

ಇನ್ನು ವಾಂಡರರ್ಸ್ ಕ್ರೀಡಾಂಗಣದಲ್ಲಿ ಒಟ್ಟಾರೆಯಾಗಿ ಅತಿ ಹೆಚ್ಚಿನ ರನ್ ಬೆನ್ನಟ್ಟಿ ಗೆದ್ದ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿದ್ದು 8 ವಿಕೆಟ್ ಕಳೆದುಕೊಂಡು 310 ರನ್‌ಗಳನ್ನು ಬೆನ್ನಟ್ಟಿದ್ದು ಈವರೆಗಿನ ದಾಖಲೆಯಾಗಿದೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಕೂಡ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿಯೇ ಇದ್ದು 2006ರಲ್ಲಿ ಆಸ್ಟ್ರೇಲಿಯಾ 298/8 ರನ್‌ಗಳನ್ನು ಬೆನ್ನಟ್ಟಿ ಗೆದ್ದಿತ್ತು. 3ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡವಿದ್ದು 2006ರಲ್ಲಿ ನ್ಯೂಜಿಲೆಂಡ್ ವಿರುದ್ಧ 220 ರನ್‌ಗಳನ್ನು ಬೆನ್ನಟ್ಟಿ ಗೆದ್ದಿತ್ತು. ಇನ್ನು 4ನೇ ಸ್ಥಾನದಲ್ಲಿ 1998ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 164/6 ರನ್‌ಗಳನ್ನು ಬೆನ್ನಟ್ಟಿದ ದಾಖಲೆಯಿದೆ.

ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶಕ್ಕೆ ಗೆಲುವು: ಹೊಸ ದಾಖಲೆವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶಕ್ಕೆ ಗೆಲುವು: ಹೊಸ ದಾಖಲೆ

ಇನ್ನು ವಾಂಡರರ್ಸ್ ಕ್ರೀಡಾಂಗಣದಲಲ್ಇ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 202 ರನ್‌ಗಳಿಗೆ ಆಲೌಟ್ ಆಗಿತ್ತು. ನಾಯಕ ಕೆಎಲ್ ರಾಹುಲ್ 50 ರನ್ ಹಾಗೂ ಆರ್ ಅಶ್ವಿನ್ 46 ರನ್‌ಗಳಿಸಿತ್ತು ತ,ಡದ ಪರವಾಗಿ ಗಳಿಸಿದ ಅತ್ಯುತ್ತಮ ಮೊತ್ತವಾಗಿತ್ತು. ಇದಕ್ಕೆ ಪ್ರತಿಯಾಗಿ ದಕ್ಷಿಣ ಆಪ್ರಿಕಾ ತಂಡ 229 ರನ್‌ಗಳನ್ನು ಗಳಿಸಿ ಆಲೌಟ್ ಆಗಿತ್ತು. ಭಾರತದ ಪರವಾಗಿ 7ವಿಕೆಟ್‌ಗಳನ್ನು ಕಿತ್ತು ಶಾರ್ದೂಲ್ ಠಾಕೂರ್ ಮಿಂಚಿದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಭಾರತ ತಂಡ 266 ರನ್‌ಗಳನ್ನು ಗಳಿಸಿ ಆಲೌಟ್ ಆಗಿದ್ದು 240 ರನ್‌ಗಳ ಗುರಿಯನ್ನು ನಿಗದಿಪಡಿಸಿದೆ.

ರಾಹುಲ್ ಔಟ್ ಆದ್ಮೇಲೆ ಎಲ್ಗರ್ ಜೊತೆ ಮಾತಿನ ಚಕಮಕಿ ನಡೆಸಿರೋ ವಿಡಿಯೋ ವೈರಲ್ | Oneindia Kannada

ಈ ಗುರಿಯನ್ನು ಬೆನ್ನತ್ತಿರುವ ದಕ್ಷಿಣ ಆಫ್ರಿಕಾ ತಮಡಕ್ಕೆ ಉತ್ತಮ ಆರಂಭ ದೊರೆತಿದೆ. ಹೀಗಾಗಿ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಸಮಬಲಗೊಳಿಸುವ ಅವಕಾಶ ದಕ್ಷಿಣ ಆಫ್ರಿಕಾ ತಂಡದ ಮುಂದಿದೆ.

Story first published: Wednesday, January 5, 2022, 21:01 [IST]
Other articles published on Jan 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X