ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ. ಆಫ್ರಿಕಾ ಏಕದಿನ ಸರಣಿ; ಓರ್ವ ಕನ್ನಡಿಗ ಸಹಿತ ಈ 3 ಆಟಗಾರರು ಸರಣಿಯುದ್ದಕ್ಕೂ ಬೆಂಚ್ ಕಾಯಲು ಸೀಮಿತ!

Ind vs SA: 3 Indian players who could be benched for the Throughout ODI Series

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಮಾತ್ರವೇ ಬಾಕಿಯಿದ್ದು ಜನವರಿ 11ರಿಂದ 15ರ ವರೆಗೆ ಈ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಈ ಟೆಸ್ಟ್ ಸರಣಿಯ ಬಳಿಕ ಏಕದಿನ ಸರಣಿ ಆಯೋಜನೆಯಾಗಲಿದೆ. ಏಕದಿನ ಸರಣಿ ಕೂಡ ಮೂರು ಪಂದ್ಯಗಳನ್ನು ಒಳಗೊಂಡಿದ್ದು ಎರಡು ತಂಡಗಳ ಮಧ್ಯೆ ಜಿದ್ದಾಜಿದ್ದಿನ ಕದನವೇರ್ಪಡಲಿದೆ. ಜನವರಿ 19 ಮತ್ತು 21ರಂದು ಮೊದಲ ಎರಡು ಏಕದಿನ ಪಂದ್ಯಗಳು ನಡೆಯಲಿದ್ದು ಈ ಎರಡು ಪಂದ್ಯಗಳು ಪಾರ್ಲ್‌ನ ಬೊಲ್ಯಾಂಡ್ ಪಾರ್ಕ್‌ನಲ್ಲಿ ನಡೆಯಲಿದೆ. ಅಂತಿಮ ಏಕದಿನ ಪಂದ್ಯ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಜನವರಿ 23ರಂದು ನಡೆಯಲಿದೆ.

ಇನ್ನು ಈ ಏಕದಿನ ಸರಣಿಯಿಂದ ರೋಹಿತ್ ಶರ್ಮಾ ಫಿಟ್‌ನೆಸ್ ಕಾರಣದಿಂದ ಹೊರಗುಳಿದಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಾ ತಮಡವನ್ನು ಟೆಂಬಾ ಬವುಮಾ ಮುನ್ನಡೆಸಲಿದ್ದಾರೆ. ಭಾರತ ತಂಡ ಈಗಾಗಲೇ 18 ಸದಸ್ಯರ ತಂಡವನ್ನು ಪ್ರಕಟಿಸಿದ್ದು ಈ ತಂಡ ಯುವ ಹಾಗೂ ಅನುಭವಿ ಆಟಗಾರರಿಂದ ಕೂಡಿದೆ.

ಸಚಿನ್ ಮಗಳು ಸಾರಾ ಮತ್ತು ಶುಭ್ಮನ್ ಗಿಲ್‌ ಡೇಟಿಂಗ್? ಫೋಟೊಗಳಿಂದ ನೆಟಿಜನ್‌ಗಳ ಕೈಗೆ ಸಿಕ್ಕಿಬಿದ್ದರು!ಸಚಿನ್ ಮಗಳು ಸಾರಾ ಮತ್ತು ಶುಭ್ಮನ್ ಗಿಲ್‌ ಡೇಟಿಂಗ್? ಫೋಟೊಗಳಿಂದ ನೆಟಿಜನ್‌ಗಳ ಕೈಗೆ ಸಿಕ್ಕಿಬಿದ್ದರು!

ಆದರೆ ಈ ಸರಣಿಗೆ ಆಯ್ಕೆಯಾಗಿರುವ 18 ಆಟಗಾರರ ಪೈಕಿ ಮೂವರು ಯುವ ಆಟಗಾರರು ಇಡೀ ಸರಣಿಯಲ್ಲಿ ಒಂದು ಅವಕಾಶವನ್ನು ಕೂಡ ಪಡೆಯುವುದು ಅನುಮಾನವೆನಿಸಿದೆ. ಹಾಗಾದರೆ ಈ ಸರಣಿಯಲ್ಲಿ ಆಡುವ ಅವಕಾಶವನ್ನು ಪಡೆಯುವ ಸಾಧ್ಯತೆ ಕಡಿಮೆಯಿರುವ ಆ ಮೂವರು ಆಟಗಾರರು ಯಾರು? ಮುಂದೆ ಓದಿ..

3. ವಾಶಿಂಗ್ಟನ್ ಸುಂದರ್

3. ವಾಶಿಂಗ್ಟನ್ ಸುಂದರ್

ವಾಶಿಂಗ್ಟನ್ ಸುಂದರ್ ಭಾರತೀಯ ಕ್ರಿಕೆಟ್ ತಂಡದ ಪ್ರತಿಭಾವಂತ ಆಟಗಾರರಲ್ಲಿ ವಾಶುಂಗ್ಟನ್ ಸುಂದರ್ ಕೂಡ ಒಬ್ಬರು ಎಂಬುದರಲ್ಲಿ ಅನುಮಾನವಿಲ್ಲ. ಬ್ಯಾಟಿಂಗ್ ಆಲ್‌ರೌಂಡರ್ ಆಗಿರುವ ಸುಂದರ್ ಆಪ್‌ಸ್ಪಿನ್ ಬೌಲಿಂಗ್ ಮೂಲಕ ಮಿಂಚಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಆದರೆ ದಕ್ಷಿಣ ಆಪ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಾಶಿಂಗ್ಟನ್ ಸುಂದರ್ ಅವಕಾಶ ಪಡೆಯುವ ಸಾಧ್ಯತೆ ತೀರಾ ಕಡಿಮೆಯಿದೆ. ಇದಕ್ಕೆ ಕಾರಣ ದಕ್ಷಿಣ ಆಫ್ರಿಕಾದ ಪಿಚ್ ಕಂಡಿಶನ್. ಅಲ್ಲಿನ ಪಿಚ್ ಹೆಚ್ಚಾಗಿ ವೇಗದ ಬೌಲರ್‌ಗಳಿಗೆ ಅನುಕೂಲವನ್ನು ಒದಗಿಸುವ ಕಾರಣ ಮಧ್ಯಮ ವೇಗದ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ವೆಂಕಟೇಶ್ ಐಯ್ಯರ್ ಅವರನ್ನು ಆಡಿಸುವ ಸಾಧ್ಯತೆಯಿದೆ. ಅಲ್ಲದೆ ಆಫ್ ಸ್ಪಿನ್ ಬೌಲರ್ ಆಗಿ ಅನುಭವಿ ಆರ್ ಅಶ್ವಿನ್ ಕೂಡ ಇರು ಕಾರಣ ಸ್ಪಿನ್ ಬೌಲಿಂಗ್‌ನ ಅವಶ್ಯಕತೆ ಮ್ಯಾನೇಜ್‌ಮೆಂಟ್‌ಗೆ ಕಂಡರೆ ಅನುಭವ ಆಟಗಾರನಿಗೆ ಅವಕಾಶ ದೊರೆಯುವ ಸಾಧ್ಯತೆಯಿದೆ. ಅಲ್ಲದೆ ವಾಶಿಂಗ್ಟನ್ ಸುಂದರ್ ಕೇವಲ ಒಂದು ಏಕದಿನ ಪಂದ್ಯವನ್ನು ಆಡಿದ ಅನುಭವ ಮಾತ್ರವೇ ಹೊಂದಿದ್ದಾರೆ.

2. ಪ್ರಸಿದ್ಧ್ ಕೃಷ್ಣ

2. ಪ್ರಸಿದ್ಧ್ ಕೃಷ್ಣ

ಕನ್ನಡಿಗ ಪ್ರಸಿದ್ಧ್ ಕೃಷ್ಣ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ವೇಗಿಗಳ ಪೈಕಿ ಒಬ್ಬರಾಗಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ತಂಡ ತವರಿನಲ್ಲಿ ಹೆಚ್ಚು ಬಲಶಾಲಿಯಾಗಿರುವ ತಂಡವಾಗಿದ್ದು ಈ ತಂಡದ ವಿರುದ್ಧ ಭಾರತ ಅತ್ಯಂತ ಬಲಿಷ್ಠ ಹಾಗೂ ಅನುಭವಿ ವೇಗಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ತಂಡದಲ್ಲಿರುವ ಇತರೆ ವೇಗಿಗಳಾದ ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್ ಹಾಗೂ ದೀಪಕ್ ಚಾಹರ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಯುವ ವೇಗಿ ಪ್ರಸಿಧ್ಧ್ ಕೃಷ್ಣಗಿಂತ ಹೆಚ್ಚಿನ ಅನುಭವ ಹೊಂದಿದ್ದಾರೆ. ಹೀಗಾಗಿ ಪ್ರಸಿಧ್ಧ್ ಕೃಷ್ಣ ಎಕದಿನ ಸರಣಿಯಲ್ಲಿ ಆಡುವ ಅವಕಾಶ ಪಡೆಯುವ ಸಾಧ್ಯತೆ ತೀರಾ ಕಡಿಮೆಯಿದೆ.

1. ಋತುರಾಜ್ ಗಾಯಕ್ವಾಡ್

1. ಋತುರಾಜ್ ಗಾಯಕ್ವಾಡ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯಲ್ಲಿ ಆಡುವ ಅವಕಾಶ ಕಳೆದುಕೊಳ್ಳುವ ಸಾಧ್ಯತೆಯಿರುವ ಮತ್ತೋರ್ವ ಆಟಗಾರನೆಂದರೆ ಯುವ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್. ಆರಂಭಿಕ ಆಟಗಾರನಾಗಿ ಮಾತ್ರವೇ ಕಣಕ್ಕಿಳಿಯುವ ಋತುರಾಜ್ ಗಾಯಕ್ವಾಡ್ ಈ ಸರಣಿಯಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕಡಿಮೆಯಿದೆ. ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ನಾಯಕ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇನ್ನು ಈ ಇಬ್ಬರಲ್ಲಿ ಇಬ್ಬರು ಅಲಭ್ಯವಾದರು ಕೂಡ ಇಶಾನ್ ಕಿಶನ್ ಹಾಗೂ ವೆಂಕಟೇಶ್ ಐಯ್ಯರ್‌ರಂತಾ ಆಟಗಾರರು ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ. ಹೀಗಾಘಿ ಏಕದಿನ ಸರಣಿಯುದ್ದಕ್ಕೂ ಋತುರಾಜ್ ಗಾಯಕ್ವಾಡ್ ಬೆಂಚ್ ಕಾಯುವ ಸಾಧ್ಯತೆ ಹೆಚ್ಚಿದೆ.

ಉತ್ತಮ ನಾಯಕನಾಗಲು Virat ಬಳಿ ಸಲಹೆ ಕೇಳ್ತಾರಾ Rahul? | Oneindia Kannada

Story first published: Monday, January 10, 2022, 15:42 [IST]
Other articles published on Jan 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X