ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಳೆಯಿಂದಾಗಿ ಅಂತಿಮ ಟಿ20 ಪಂದ್ಯ ರದ್ದು: ಟಿಕೆಟ್‌ಗಳ ಶೇ. 50ರಷ್ಟು ಹಣ ಮರುಪಾವತಿ

Chinnaswamy Stadium

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಭಾರತ- ದಕ್ಷಿಣ ಆಫ್ರಿಕಾ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಮಳೆಯಿಂದಾಗಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿತು. ಪರಿಣಾಮ ಐದು ಪಂದ್ಯಗಳ ಟಿ20 ಸರಣಿಯು 2-2ರಿಂದ ಸಮಬಲಗೊಂಡಿದ್ದು, ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

ಹೀಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಕೇವಲ ಮೂರು ಓವರ್‌ಗಳಿಗೆ ಪಂದ್ಯ ರದ್ದುಗೊಂಡ ಪರಿಣಾಮ ವಿಷಾದ ವ್ಯಕ್ತಪಡಿಸಿದೆ. ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಒಂದು ಎಸೆತ ಆಗಿದ್ದರೂ ಸಹ ಮರುಪಾವತಿಯ ಪ್ರಶ್ನೆ ಇರುವುದಿಲ್ಲ. ಆದಾಗ್ಯೂ ಕೆಎಸ್‌ಸಿಎ ಕ್ರಿಕೆಟ್ ಅಭಿಮಾನಿಗಳಿಗೆ ಕೊಡುಗೆ ನೀಡಲು ಆಸೆ ವ್ಯಕ್ತಪಡಿಸಿದೆ.

Ind vs SA 5ನೇ ಟಿ20: ಮಳೆಗಾಹುತಿಯಾದ ನಿರ್ಣಾಯಕ ಪಂದ್ಯ; ಸರಣಿ ಸಮಬಲInd vs SA 5ನೇ ಟಿ20: ಮಳೆಗಾಹುತಿಯಾದ ನಿರ್ಣಾಯಕ ಪಂದ್ಯ; ಸರಣಿ ಸಮಬಲ

ಹೀಗಾಗಿ ಪಂದ್ಯದಲ್ಲಿ ಪಾವತಿಸಿದ ಎಲ್ಲಾ ಟಿಕೆಟ್‌ಗಳಿಗೆ ಶೇಕಡಾ 50ರಷ್ಟು ಮೊತ್ತವನ್ನು ಮರುಪಾವತಿಸಲು ನಿರ್ಧರಿಸಿದೆ. ದಿನಾಂಕ, ಸಮಯ ಮತ್ತು ಸ್ಥಳದೊಂದಿಗೆ ಮರುಪಾವತಿಗೆ ಸಂಬಂಧಿಸಿದಂತೆ ವಿಧಾನಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಎಲ್ಲಾ ಪಾವತಿಸಿದ ಟಿಕೆಟ್ ಹೊಂದಿರುವವರು ಮರುಪಾವತಿಯನ್ನು ಪಡೆಯಲು ತಮ್ಮ ಮೂಲ ಟಿಕೆಟ್‌ಗಳನ್ನು ಉಳಿಸಿಕೊಳ್ಳಲು ವಿನಂತಿಸಲಾಗಿದೆ.

ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿದ್ದು, ಟೀಂ ಇಂಡಿಯಾವನ್ನ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮಳೆಯಿಂದಾಗಿ ಪಂದ್ಯ ನಿಧಾನಗತಿಯಲ್ಲಿ ಪ್ರಾರಂಭಗೊಂಡು ಒಂದು ಓವರ್ ಕಡಿತಗೊಂಡು 19 ಓವರ್‌ಗೆ ನಿಗದಿಯಾಯಿತು. ಆದ್ರೆ ಟೀಂ ಇಂಡಿಯಾ 3.3 ಓವರ್‌ಗಳಿಗೆ 2 ವಿಕೆಟ್ ನಷ್ಟಕ್ಕೆ 28 ರನ್ ಕಲೆಹಾಕಿದ್ದರ ವೇಳೆ ಮಳೆ ನಿಲ್ಲದ ಪರಿಣಾಮ ಪಂದ್ಯವನ್ನ ರದ್ದುಗೊಳಿಸಲಾಗಿದೆ. ಸರಣಿ 2-2ರಿಂದ ಸಮಬಲಗೊಂಡಿದ್ದು, ಲಿಮಿಟೆಡ್‌ ಓವರ್‌ ಕ್ರಿಕೆಟ್‌ನಲ್ಲಿ ಭಾರತದ ನೆಲದಲ್ಲಿ ದಕ್ಷಿಣ ಆಫ್ರಿಕಾ ತನ್ನ ಅಜೇಯ ಓಟ ಮುಂದುವರಿಸಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ದಕ್ಷಿಣ ಆಫ್ರಿಕಾ
ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್, ಟ್ರಿಸ್ಟಾನ್ ಸ್ಟಬ್ಸ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ಕೇಶವ್ ಮಹಾರಾಜ್(ನಾಯಕ), ಲುಂಗಿ ಎನ್‌ಗಿಡಿ, ಅನ್ರಿಕ್ ನೊರ್ಕಿಯಾ

Dinesh Karthik ಹಾಗು Rohit ನಡುವೆ ನಡೆದ ಸಂಭಾಷಣೆ ಈಗ ವೈರಲ್ | *Cricket | OneIndia Kannada

ಟೀಂ ಇಂಡಿಯಾ
ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ನಾಯಕ ಮತ್ತು ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜವೇಂದ್ರ ಚಾಹಲ್, ಅವೇಶ್ ಖಾನ್

Story first published: Monday, June 20, 2022, 10:07 [IST]
Other articles published on Jun 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X