ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ. ಆಫ್ರಿಕಾ: ಮಹತ್ವದ ಪಂದ್ಯಕ್ಕೆ ಮಳೆ ಭೀತಿ? ಪಿಚ್ ರಿಪೋರ್ಟ್ ಮಾಹಿತಿ

Ind vs SA, 5th T20I: Pitch Report of Bangalore Chinnaswamy Stadium and Bengaluru Weather Forecast

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ಸರಣಿ ಅಂತಿಮ ಹಂತವನ್ನು ತಲುಪಿದ್ದು ಒಂದು ಪಂದ್ಯ ಮಾತ್ರವೇ ಬಾಕಿಯಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಅಂತಿಮ ಪಂದ್ಯ ನಡೆಯಲಿದ್ದು ಇಲ್ಲಿ ಗೆದ್ದ ತಂಡ ಟ್ರೋಫಿ ಎತ್ತಿಹಿಡಿಯಲಿದೆ. ಐದು ಪಂದ್ಯಗಳ ಈ ಸರಣಿ ಈಗ 2-2 ಅಂತರದಿಂದ ಸಮಬಲದಲ್ಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಸುದೀರ್ಘ ಕಾಲದ ಬಳಿಕ ಅಂತಾರಾಷ್ಟ್ರೀಯ ಟಿ20 ಪಂದ್ಯ ನಡೆಯಲಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ಪಂದ್ಯಕ್ಕೆ ಹವಾಮಾನ ಯಾವ ರೀತಿಯಲ್ಲಿ ಸಾಥ್ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಬೆಂಗಳುರಿನಲ್ಲಿ ಸಂಜೆಯಾಗುತ್ತಿದ್ದಂತೆ ಮಳೆಯಾಗುತ್ತಿರುವ ಕಾರಣ ಪಂದ್ಯದ ದಿನವೂ ಮಳೆಯಾಗಲಿದೆಎಯಾ ಎಂಬುದು ಈಗ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ.

498 ರನ್ ಚಚ್ಚಿ ಇತಿಹಾಸ ಬರೆದ ಇಂಗ್ಲೆಂಡ್; ಏಕದಿನ ಕ್ರಿಕೆಟ್‍ನಲ್ಲಿ ಹೆಚ್ಚು ರನ್ ಕಲೆಹಾಕಿರುವ ತಂಡಗಳ ಪಟ್ಟಿ498 ರನ್ ಚಚ್ಚಿ ಇತಿಹಾಸ ಬರೆದ ಇಂಗ್ಲೆಂಡ್; ಏಕದಿನ ಕ್ರಿಕೆಟ್‍ನಲ್ಲಿ ಹೆಚ್ಚು ರನ್ ಕಲೆಹಾಕಿರುವ ತಂಡಗಳ ಪಟ್ಟಿ

ಈ ನಿರ್ಣಾಯಕ ಪಂದ್ಯದ ಸಂದರ್ಭದಲ್ಲಿ ಹವಾಮಾನ ವರದಿ ಏನು ಹೇಳುತ್ತಿದೆ? ಬೆಂಗಳೂರಿನ ಪಿಚ್ ರಿಪೋರ್ಟ್ ಹೇಗಿದೆ? ಮುಂದೆ ಓದಿ..

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ರಿಪೋರ್ಟ್

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ರಿಪೋರ್ಟ್

ಚಿನ್ನಸ್ವಾಮಿ ಕ್ರೀಡಾಂಗಣ ಟಿ20 ಮಾದರಿಯಲ್ಲಿ ಬ್ಯಾಟರ್‌ಗಳಿಗೆ ಚೆನ್ನಾಗಿ ನೆರವಾಗುವ ಪಿಚ್‌ಅನ್ನು ಹೊಂದಿದೆ. ಪಂದ್ಯದುದ್ದಕ್ಕೂ ಪಿಚ್ ಒಂದೇ ರೀತಿಯಾಗಿ ವರ್ತಿಸಲಿದೆ. ಇನ್ನು ಬೌಂಡರಿ ಗೆರೆ ಹತ್ತಿರದಲ್ಲಿದ್ದು ಔಟ್‌ಫಿಲ್ಡ್‌ ಬಹಳ ವೇಗವಾಗಿದೆ. ಬ್ಯಾಟರ್‌ಗಳು ಸ್ವಲ್ಪ ಎಡವಿದರೆ ಬೌಲರ್‌ಗಳು ಲಾಭ ಪಡೆಯಲಿದ್ದಾರೆ.

ಟಿ20 ಅರ್ಧಶತಕ ಸಿಡಿಸಿದ ಹೆಚ್ಚು ವಯಸ್ಸಾದ ಕ್ರಿಕೆಟಿಗರ ಪಟ್ಟಿ; ಧೋನಿ ಸೇರಿದಂತೆ ಇಬ್ಬರನ್ನು ಹಿಂದಿಕ್ಕಿದ ಡಿಕೆ!

ಬೆಂಗಳೂರು ಹವಾಮಾನ ವರದಿ

ಬೆಂಗಳೂರು ಹವಾಮಾನ ವರದಿ

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು ಸಂಜೆಯ ವೇಲೆಗೆ ಮಳೆಯಾಗುತ್ತಿದೆ. ಪಂದ್ಯದ ದಿನವಾದ ಭಾನುವಾರ (ಜೂನ್ 19) ಕೂಡ ಮಳೆಯ ಭಿತಿ ಇದ್ದೇ ಇದೆ. ರಾತ್ರಿಯ ಉಷ್ಣಂಶ 20 ಡಿಗ್ರಿಗಳಷ್ಟು ಇರಲಿದೆ. ಗುಡುಗು ಸಿಡಿಲಿನ ಸಹಿತ ಮಳೆಯಾಗುವ ಸಾಧ್ಯತೆ ಶೇಕಡಾ 34ರಷ್ಟಿದೆ. ಆದರೆ ಪ್ರಮುಖ ಸಂಗತಿಯೆಂದರೆ ಭಾನುವಾರ ಹಗಲಿನ ವೇಳೆ ಮಳೆಯಾಗುವ ಸಾಧ್ಯತೆ 56 ಶೇಕಡಾದಷ್ಟಿದ್ದು ಇದರಿಂದಾಗಿ ಪಂದ್ಯ ಆರಂಭವಾಗುವುದು ತಡವಾಗಬಹುದು. ಜೊತೆಗೆ ಕೆಲ ಓವರ್‌ಗಳ ಕಡಿತದೊಂದಿಗೆ ಪಂದ್ಯ ನಡೆದರೂ ಅಚ್ಚರಿಯಿಲ್ಲ.

ಪಾಕಿಸ್ತಾನ್ ಆಟಗಾರರಿಗೆ ಅವಕಾಶ ಸಿಗ್ತಿಲ್ಲ ! | *Cricket | OneIndia Kannada
ಸ್ಕ್ವಾಡ್‌ಗಳು ಹೀಗಿದೆ

ಸ್ಕ್ವಾಡ್‌ಗಳು ಹೀಗಿದೆ

ಭಾರತ: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅರ್ಷ್‌ದೀಪ್ ಸಿಂಗ್, ರವಿ ಬಿಷ್ಣೋಯಿ ಉಮ್ರಾನ್ ಮಲಿಕ್

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಮಾರ್ಕೊ ಜಾನ್ಸೆನ್, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ, ಅನ್ರಿಚ್ ನಾರ್ಟ್ಜೆ, ರೀಜಾ ಹೆಂಡ್ರಿಕ್ಸ್, ವೇಯ್ನೆ ಪರ್ಸೆಲ್‌ಬಾ , ಟ್ರಿಸ್ಟಾನ್ ಸ್ಟಬ್ಸ್

Story first published: Saturday, June 18, 2022, 17:02 [IST]
Other articles published on Jun 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X