ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಅರ್ಧಶತಕ ಸಿಡಿಸಿದ ಹೆಚ್ಚು ವಯಸ್ಸಾದ ಕ್ರಿಕೆಟಿಗರ ಪಟ್ಟಿ; ಧೋನಿ ಸೇರಿದಂತೆ ಇಬ್ಬರನ್ನು ಹಿಂದಿಕ್ಕಿದ ಡಿಕೆ!

IND vs SA: Dinesh Karthik broke MS Dhonis Oldest Indian to hit T20I fifty record

ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಭಾರತ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಭಾಗವಹಿಸುತ್ತಿದೆ.

ರಣಜಿ ಸೆಮಿಫೈನಲ್‌: ಬೆಂಗಾಲ್ ಗೆಲುವಿಗೆ 254ರನ್ ಬಾಕಿ, ಮುಂಬೈಗೆ 662ರನ್ ಬೃಹತ್ ಮುನ್ನಡೆರಣಜಿ ಸೆಮಿಫೈನಲ್‌: ಬೆಂಗಾಲ್ ಗೆಲುವಿಗೆ 254ರನ್ ಬಾಕಿ, ಮುಂಬೈಗೆ 662ರನ್ ಬೃಹತ್ ಮುನ್ನಡೆ

ಇತ್ತಂಡಗಳ ನಡುವಿನ ಈ ಸರಣಿಯ 4 ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಎರಡೂ ತಂಡಗಳು ತಲಾ 2 ಪಂದ್ಯಗಳಲ್ಲಿ ಗೆದ್ದು ಸರಣಿಯಲ್ಲಿ 2 - 2ರ ಸಮಬಲವನ್ನು ಸಾಧಿಸಿವೆ. ಹೌದು, ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸತತವಾಗಿ ಗೆದ್ದು ಬಿಗಿದ ದಕ್ಷಿಣ ಆಫ್ರಿಕಾ ನಂತರದ ನಂತರ ನಡೆದ 3 ಮತ್ತು 4ನೇ ಪಂದ್ಯಗಳಲ್ಲಿ ಟೀಮ್ ಇಂಡಿಯಾ ವಿರುದ್ಧ ಹೀನಾಯ ಸೋಲುಗಳನ್ನು ಕಂಡು ಮಂಕಾಗಿದೆ. ಹೀಗಾಗಿ ಸರಣಿಯ ಅಂತಿಮ ಪಂದ್ಯ ಇದೀಗ ಫೈನಲ್ ಪಂದ್ಯವಾಗಿ ಮಾರ್ಪಟ್ಟಿದ್ದು, ಈ ಪಂದ್ಯ ಸರಣಿಯಲ್ಲಿ ವಿಜೇತರು ಯಾರು ಎಂಬುದನ್ನು ನಿರ್ಧರಿಸಲಿದೆ.

ಸ್ವಲ್ಪದರಲ್ಲೇ ವಿಶ್ವದಾಖಲೆ ಮಿಸ್ ಮಾಡಿಕೊಂಡ ಜಾಸ್ ಬಟ್ಲರ್‌: ABD ರೆಕಾರ್ಡ್‌ ಸೇಫ್!ಸ್ವಲ್ಪದರಲ್ಲೇ ವಿಶ್ವದಾಖಲೆ ಮಿಸ್ ಮಾಡಿಕೊಂಡ ಜಾಸ್ ಬಟ್ಲರ್‌: ABD ರೆಕಾರ್ಡ್‌ ಸೇಫ್!

ಇನ್ನು ನಿನ್ನೆ ( ಜೂನ್ 17 ) ರಾಜ್ ಕೋಟ್ ನಗರದ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟಿ ಟ್ವೆಂಟಿ ಪಂದ್ಯದಲ್ಲಿ ಗೆದ್ದ ಟೀಮ್ ಇಂಡಿಯಾ ಸರಣಿ ಗೆಲುವಿನ ಕನಸನ್ನು ನನಸಾಗಿ ಉಳಿಸಿಕೊಂಡಿತು. ಅಲ್ಪ ಮೊತ್ತಕ್ಕೆ ತನ್ನ ಪ್ರಮುಖ 4 ವಿಕೆಟ್‍ಗಳನ್ನು ಕಳೆದುಕೊಂಡಿದ್ದ ಟೀಮ್ ಇಂಡಿಯಾಗೆ ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಆಸರೆಯಾದರು. ಅದರಲ್ಲಿಯೂ ದಿನೇಶ್ ಕಾರ್ತಿಕ್ 27 ಎಸೆತಗಳಲ್ಲಿ 55 ರನ್ ಚಚ್ಚಿ ತಂಡ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಈ ಮೂಲಕ ದಿನೇಶ್ ಕಾರ್ತಿಕ್ ಭಾರತೀಯ ಕ್ರಿಕೆಟಿಗರ ಪರ ನೂತನ ದಾಖಲೆಯನ್ನು ಕೂಡ ಬರೆದರು. ಹೆಚ್ಚು ವಯಸ್ಸಾದ ನಂತರ ಅಂತರರಾಷ್ಟ್ರೀಯ ಟಿ ಟ್ವೆಂಟಿ ಅರ್ಧಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ದಿನೇಶ್ ಕಾರ್ತಿಕ್ ತಮ್ಮ ಹೆಸರಿಗೆ ಬರೆದುಕೊಂಡರು. ಈ ಕುರಿತ ವಿವರ ಮುಂದಿದೆ..

ಹೆಚ್ಚು ವಯಸ್ಸಾದ ನಂತರ ಟಿಟ್ವೆಂಟಿ ಅರ್ಧಶತಕ ಬಾರಿಸಿದ ಭಾರತೀಯ ಆಟಗಾರರು

ಹೆಚ್ಚು ವಯಸ್ಸಾದ ನಂತರ ಟಿಟ್ವೆಂಟಿ ಅರ್ಧಶತಕ ಬಾರಿಸಿದ ಭಾರತೀಯ ಆಟಗಾರರು

ಹೆಚ್ಚು ವಯಸ್ಸಾದ ನಂತರ ಟಿ ಟ್ವೆಂಟಿ ಅರ್ಧಶತಕ ಬಾರಿಸಿರುವ ಭಾರತೀಯ ಆಟಗಾರರ ಟಾಪ್ 3 ಪಟ್ಟಿ ಈ ಕೆಳಕಂಡಂತಿದೆ.

1. ದಿನೇಶ್ ಕಾರ್ತಿಕ್ - 37 ವರ್ಷ 16 ದಿನ ದಿನಗಳು vs ದಕ್ಷಿಣ ಆಫ್ರಿಕಾ - 2022

2. ಎಂಎಸ್ ಧೋನಿ - 36 ವರ್ಷ 229 ದಿನಗಳು - vs ದಕ್ಷಿಣ ಆಫ್ರಿಕಾ - 2018

3. ಶಿಖರ್ ಧವನ್ - 35 ವರ್ಷ 1 ದಿನ - vs ಆಸ್ಟ್ರೇಲಿಯಾ - 2020

ಧೋನಿ ದಾಖಲೆ ಸರಿಗಟ್ಟಿದ ದಿನೇಶ್ ಕಾರ್ತಿಕ್

ಧೋನಿ ದಾಖಲೆ ಸರಿಗಟ್ಟಿದ ದಿನೇಶ್ ಕಾರ್ತಿಕ್

ಇನ್ನು 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಟಿ ಟ್ವೆಂಟಿ ಪಂದ್ಯವೊಂದರಲ್ಲಿ ತನ್ನ ವೃತ್ತಿ ಜೀವನದ ಎರಡನೇ ಅಂತರರಾಷ್ಟ್ರೀಯ ಟಿ ಟ್ವೆಂಟಿ ಅರ್ಧಶತಕ ಬಾರಿಸಿದ್ದ ಎಂಎಸ್ ಧೋನಿ ಹೆಚ್ಚು ವಯಸ್ಸಾದ ನಂತರ ಟಿಟ್ವೆಂಟಿ ಅರ್ಧಶತಕ ಬಾರಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದರು. ಆದರೆ ಇದೀಗ ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ ಟ್ವೆಂಟಿ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಎಂಎಸ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಮೂಲಕ ದಿನೇಶ್ ಕಾರ್ತಿಕ್ ಶಿಖರ್ ಧವನ್ ಹಾಗೂ ಎಂಎಸ್ ಧೋನಿ ಅವರನ್ನು ಈ ಪಟ್ಟಿಯಲ್ಲಿ ಹಿಂದಿಕ್ಕಿದ್ದಾರೆ.

Virat Kohli & Babar Azam ಒಂದೇ ತಂಡದಲ್ಲಿ ಆಡೋದು ಗ್ಯಾರೆಂಟಿ | *Cricket | Oneindia Kannada
ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿದ ದಿನೇಶ್ ಕಾರ್ತಿಕ್

ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿದ ದಿನೇಶ್ ಕಾರ್ತಿಕ್

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಈ ನಾಲ್ಕನೇ ಟಿ ಟ್ವೆಂಟಿ ಪಂದ್ಯದಲ್ಲಿ ತಂಡ ಅಲ್ಪ ಮೊತ್ತಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ 9 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 55 ರನ್ ಚಚ್ಚಿ ಅಬ್ಬರಿಸಿದರು. ಹಾರ್ದಿಕ್ ಪಾಂಡ್ಯ ಜತೆ 65 ರನ್‌ಗಳ ಜತೆಯಾಟವಾಡಿ ತಂಡ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Story first published: Saturday, June 18, 2022, 11:14 [IST]
Other articles published on Jun 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X