ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾಗದ ಪೃಥ್ವಿ ಶಾಗೆ ಬೇಸರ: ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಪೋಸ್ಟ್‌

Prithvi shaw

ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದರೂ ಪೃಥ್ವಿ ಶಾ ಅವರನ್ನು ಆ ತಂಡಕ್ಕೆ ಸೇರಿಸಿಕೊಳ್ಳಲಿಲ್ಲ. ಪ್ರೋಟೀಸ್ ವಿರುದ್ಧದ ಏಕದಿನ ಸರಣಿಗೆ ತಂಡದಲ್ಲಿ ಆಯ್ಕೆಯಾಗುವುದನ್ನ ಮಿಸ್ ಮಾಡಿಕೊಂಡ ಬಳಿಕ ಪೃಥ್ವಿ ಶಾ ಇನ್‌ಸ್ಟಾಗ್ರಾಮ್‌ನಲ್ಲಿನ ತನ್ನ ಬೇಸರವನ್ನ ಹಂಚಿಕೊಂಡಿದ್ದಾರೆ.

22 ವರ್ಷದ ಯುವಕ ತನ್ನ ಸ್ಟೇಟಸ್‌ನಲ್ಲಿ, "ಅವರ ಮಾತುಗಳನ್ನು ನಂಬಬೇಡಿ, ಅವರ ಕಾರ್ಯಗಳನ್ನು ನಂಬಿರಿ ಏಕೆಂದರೆ ಅವರ ಮಾತುಗಳು ಏಕೆ ನಿಷ್ಪ್ರಯೋಜಕವಾಗಿವೆ ಎಂಬುದನ್ನು ಕಾರ್ಯಗಳು ಸಾಬೀತುಪಡಿಸುತ್ತವೆ." ಎಂದು ಸ್ಟೋರಿ ಹಾಕಿದ್ದಾರೆ.

ಪೃಥ್ವಿ ಶಾ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಜುಲೈ 2021 ರಲ್ಲಿ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಅವರು ಕೊನೆಯ ಬಾರಿಗೆ ಭಾರತೀಯ ಜೆರ್ಸಿಯಲ್ಲಿ ಆಡಿದ್ದರು.

ನಿಷೇಧಿತ ಪದಾರ್ಥ ಸೇವನೆಯಿಂದ ತಂಡದಿಂದ ಹೊರಬಿದ್ದ ಮುಂಬೈ ಬ್ಯಾಟರ್

ನಿಷೇಧಿತ ಪದಾರ್ಥ ಸೇವನೆಯಿಂದ ತಂಡದಿಂದ ಹೊರಬಿದ್ದ ಮುಂಬೈ ಬ್ಯಾಟರ್

ಪೃಥ್ವಿ ತನ್ನ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಬಹಳ ನಿರೀಕ್ಷೆಗಳೊಂದಿಗೆ ಪ್ರಾರಂಭಿಸಿದರೂ ನಿಷೇಧಿತ ಪದಾರ್ಥಗಳ ಸೇವನೆಯಿಂದಾಗಿ ದೀರ್ಘಕಾಲ ರಾಷ್ಟ್ರೀಯ ತಂಡದಿಂದ ಹೊರಗುಳಿಯಬೇಕಾಯಿತು. ಅಂದಿನಿಂದ ಈ ಯುವ ಪ್ರತಿಭಾವಂತ ಕ್ರಿಕೆಟಿಗ ಇಲ್ಲಿಯವರೆಗೆ ಭಾರತ ತಂಡದಿಂದ ಹೊರಗುಳಿದಿದ್ದಾರೆ.

ಪೃಥ್ವಿ ಭಾರತ ಪರ ಐದು ಟೆಸ್ಟ್ ಪಂದ್ಯಗಳು, ಆರು ಏಕದಿನ ಪಂದ್ಯಗಳು ಮತ್ತು ಕೇವಲ ಒಂದು ಟಿ20 ಪಂದ್ಯವನ್ನು ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಪೃಥ್ವಿ ಅವರ ಗರಿಷ್ಠ ಸ್ಕೋರ್ 49. ಈ ಮುಂಬೈ ಬ್ಯಾಟ್ಸ್‌ಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ನೂರು ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಏಕೈಕ ಟಿ20 ಪಂದ್ಯದಲ್ಲಿ ಪೃಥ್ವಿ ಶಾ 0 ರನ್‌ಗೆ ಔಟಾದರು.

ಮಹಿಳಾ ಟಿ20 ವಿಶ್ವಕಪ್ 2023 ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ: ಫೆಬ್ರವರಿ 12 ರಂದು ಭಾರತ, ಪಾಕ್ ಮುಖಾಮುಖಿ

ಭಾರತ ಎ ತಂಡದಲ್ಲಿ ಆಡಿದ್ದ ಪೃಥ್ವಿ ಶಾ

ಭಾರತ ಎ ತಂಡದಲ್ಲಿ ಆಡಿದ್ದ ಪೃಥ್ವಿ ಶಾ

ಪೃಥ್ವಿ ಕಳೆದ ತಿಂಗಳು ನ್ಯೂಜಿಲೆಂಡ್ 'ಎ' ತಂಡದ ವಿರುದ್ಧ ಭಾರತ 'ಎ' ತಂಡದ ಪರ ಆಡಿದ್ದರು. ಭಾರತ 'ಎ' ತಂಡದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಪಂದ್ಯದಲ್ಲಿ ಪೃಥ್ವಿ ಶಾ 48 ಎಸೆತಗಳಲ್ಲಿ 77 ರನ್ ಗಳಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡದಲ್ಲಿ ಶಿಖರ್ ಧವನ್, ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್ ಅವರಂತಹ ಕ್ರಿಕೆಟಿಗರಿಗೆ ಅವಕಾಶ ಸಿಕ್ಕಿದೆ.

ಸೌತ್ ಆಫ್ರಿಕಾ ಟಿ20 ಲೀಗ್: ಟೂರ್ನಿಯ ದಿನಾಂಕ ಘೋಷಣೆ, 6 ತಂಡಗಳು ಭಾಗಿ

ಏಕದಿನ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್

ಏಕದಿನ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್

ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ (ಉಪನಾಯಕ), ರಜತ್ ಪಾಟಿಧರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಕೇಶ್ ಕುಮಾರ್, ಆವೇಶ್‌ ಖಾನ್, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಹಾರ್.

Story first published: Monday, October 3, 2022, 23:59 [IST]
Other articles published on Oct 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X