ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA: 3ನೇ ಟಿ20 ಪಂದ್ಯಕ್ಕೆ ಮುಂಚಿತವಾಗಿ ರಾಹುಲ್ ದ್ರಾವಿಡ್ ಇದನ್ನು ಮಾಡಬೇಕು ಎಂದ ಜಹೀರ್ ಖಾನ್

Ind vs SA: Head Coach Rahul Dravid Must Do This Before The 3rd T20 Match Says Zaheer Khan

ಭಾನುವಾರ (ಜೂನ್ 12) ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತು ಸುಣ್ಣವಾದ ನಂತರ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ತಂಡಕ್ಕೆ ಕಠಿಣ ಮಾತುಗಳಿಂದ ಎಚ್ಚರಿಕೆ ಎಂದು ಮಾಜಿ ಎಡಗೈ ವೇಗಿ ಜಹೀರ್ ಖಾನ್ ಹೇಳಿದ್ದಾರೆ.

ಭಾರತ ತಂಡವು ಕಳೆದು ಎರಡು ಟಿ20 ಪಂದ್ಯಗಳಲ್ಲಿ ತಮ್ಮ ಟ್ರೇಡ್‌ಮಾರ್ಕ್ ಹೋರಾಟದ ಮನೋಭಾವವನ್ನು ಹೊಂದಿರಲಿಲ್ಲ ಮತ್ತು ಪರಿಸ್ಥಿತಿಗಳು ಅವರಿಗೆ ಅನುಕೂಲಕರವಾಗಿಲ್ಲದಿದ್ದಾಗ ತಮ್ಮ ಉತ್ಸಾಹರಹಿತವಾಗಿ ಆಡುತ್ತಿದ್ದಾರೆ ಎಂದು ಜಹೀರ್ ಖಾನ್ ತಿಳಿಸಿದರು.

ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ

ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ

ಹೊಸ ಬಾಲ್‌ನಲ್ಲಿ ಉತ್ತಮವಾಗಿ ಆರಂಭಗೊಂಡು, ಪವರ್‌ಪ್ಲೇಯಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ ನಂತರವೂ, ಭಾರತ ತಂಡ ಹೆಂಡ್ರಿಕ್ ಕ್ಲಾಸೆನ್ ಮತ್ತು ನಾಯಕ ತೆಂಬಾ ಬವುಮಾ ನಡುವಿನ 41 ಎಸೆತಗಳಲ್ಲಿ ಸ್ಥಿರವಾದ 64 ರನ್‌ಗಳ ಜೊತೆಯಾಟವನ್ನು ಬೇಗನೆ ಮುರಿಯಲಾಗಲಿಲ್ಲ.

ಈ ಇಬ್ಬರು ಆಟಗಾರರು ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದಾಗ ಪಂದ್ಯವು ಆವೇಗವನ್ನು ಕಳೆದುಕೊಂಡಿತು. 13ನೇ ಓವರ್‌ನ ಎರಡನೇ ಎಸೆತದಲ್ಲಿ ತೆಂಬಾ ಬವುಮಾ ಔಟಾದ ನಂತರ, ಕ್ಲಾಸೆನ್ ಬ್ಯಾಟಿಂಗ್ ಜವಾಬ್ದಾರಿ ತೆಗೆದುಕೊಂಡರು ಮತ್ತು ದಕ್ಷಿಣ ಆಫ್ರಿಕಾವನ್ನು ಗೆಲುವಿನ ಗಡಿ ದಾಟಿಸಿದರು. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದರು.

40 ಓವರ್‌ವರೆಗೆ ಹೋರಾಡುವುದು ಹೇಗೆ ಎಂಬುದನ್ನು ಅರ್ಥ ಮಾಡಿಸಬೇಕು

40 ಓವರ್‌ವರೆಗೆ ಹೋರಾಡುವುದು ಹೇಗೆ ಎಂಬುದನ್ನು ಅರ್ಥ ಮಾಡಿಸಬೇಕು

"ಕ್ಲಾಸೆನ್-ಬವುಮಾ ಉತ್ತಮ ಜೊತೆಯಾಟವನ್ನು ನಿರ್ಮಿಸುತ್ತಿದ್ದಾಗ ಭಾರತ ತಂಡದಲ್ಲಿ ಜೋಶ್ ಕಡಿಮೆಯಾಗುತ್ತಿದೆ ಎಂದು ನೀವು ಭಾವಿಸಬಹುದು, ಇದು ಮೈದಾನದಲ್ಲಿ ಸ್ಪಷ್ಟವಾಗಿತ್ತು. ಕೋಚ್ ರಾಹುಲ್ ದ್ರಾವಿಡ್ ಮತ್ತವರ ಕಂಪನಿಯು ಪರಿಹರಿಸಬೇಕಾದ ವಿಷಯಗಳು ಮತ್ತು ಅದನ್ನು ತ್ವರಿತವಾಗಿ ಮಾಡಬೇಕಾಗಿದೆ. ಏಕೆಂದರೆ 3ನೇ ಟಿ20 ಮೊದಲು ನಡುವೆ ಕೇವಲ ಒಂದು ದಿನವಿದ್ದು, ದ್ರಾವಿಡ್ ಅವರು ಮತ್ತೆ ತಂಡವಾಗಿ ಗುಂಪುಗೂಡಬೇಕು, ಕೆಲವು ಕಠಿಣ ಸಂಭಾಷಣೆಗಳನ್ನು ನಡೆಸಬೇಕು. 40 ಓವರ್‌ಗಳವರೆಗೆ ಹೋರಾಡುವುದು ಹೇಗೆ ಎಂಬುದನ್ನು ಆಟಗಾರರಿಗೆ ಅರ್ಥ ಮಾಡಿಸಬೇಕು," ಎಂದು ಜಹೀರ್ ಖಾನ್ ಕ್ರಿಕ್‌ಬಜ್‌ನೊಂದಿಗಿನ ಚರ್ಚೆಯಲ್ಲಿ ಹೇಳಿದರು.

ಮೊದಲ ಓವರ್‌ನಲ್ಲಿ ಹೆಂಡ್ರಿಕ್ಸ್‌ನ ಔಟ್

ಮೊದಲ ಓವರ್‌ನಲ್ಲಿ ಹೆಂಡ್ರಿಕ್ಸ್‌ನ ಔಟ್

148/6 ಸಾಧಾರಣ ಮೊತ್ತವನ್ನು ರಕ್ಷಿಸುವ ಭಾರತಕ್ಕೆ ಆರಂಭದಲ್ಲಿಯೇ ವಿಕೆಟ್‌ಗಳ ಅಗತ್ಯವಿತ್ತು. ಮೊದಲ ಓವರ್‌ನಲ್ಲಿ ಹೆಂಡ್ರಿಕ್ಸ್‌ನ ಔಟಾಗಿ ಹೋದ ಹೋದ ನಂತರ ಭುವನೇಶ್ವರ್ ಕುಮಾರ್, ಡ್ವೈನ್ ಪ್ರಿಟೋರಿಯಸ್ ಅವರನ್ನು ಔಟ್ ಮಾಡಿದರು. ಮೊದಲ ಪಂದ್ಯದಂತೆ ಸಿಕ್ಸರ್ ಬಾರಿಸಲು ಪ್ರಯತ್ನಿಸಿದರು, ಆದರೆ ಪ್ರತಿಫಲವನ್ನು ಪಡೆಯಲಿಲ್ಲ. ಏಕೆಂದರೆ ಪ್ರಿಟೋರಿಯಸ್ ಅನುಭವಿ ವೇಗದ ಬೌಲರ್‌ನ ನಾಕಲ್‌ಬಾಲ್‌ನಿಂದ ಮೋಸಗೊಂಡರು.

ಆನತರ ಆರನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ತಮ್ಮ ಮೂರನೇ ವಿಕೆಟ್ ಅನ್ನು ನಿಪ್-ಬ್ಯಾಕ್‌ನೊಂದಿಗೆ ಅಪಾಯಕಾರಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರನ್ನು ಔಟ್ ಮಾಡಿದರು. ಫೀಲ್ಡಿಂಗ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರವೂ ಹೆಚ್ಚು ಸ್ಕೋರ್ ಮಾಡುವುದರ ಮೇಲೆ ನಿಯಂತ್ರಣ ಹೇರಲು ಭಾರತ ಪ್ರಯತ್ನಿಸಿತು. ಪವರ್‌ಪ್ಲೇ ನಂತರ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 36/3ಕ್ಕೆ ನಿಯಂತ್ರಿಸಿತ್ತು.

ಐರ್ಲೆಂಡ್ ವಿರುದ್ಧದ ಸರಣಿಗೆ VVS ಲಕ್ಷ್ಮಣ್ ಕೋಚ್:ಹಾಗಾದ್ರೆ ದ್ರಾವಿಡ್ ಕಥೆ??? | *Cricket | Oneindia Kannada
ಉಳಿದ ಮೂರೂ ಪಂದ್ಯಗಳನ್ನು ಸತತವಾಗಿ ಗೆಲ್ಲಬೇಕಿದೆ

ಉಳಿದ ಮೂರೂ ಪಂದ್ಯಗಳನ್ನು ಸತತವಾಗಿ ಗೆಲ್ಲಬೇಕಿದೆ

"ಮೊದಲ ಪಂದ್ಯದಲ್ಲಿ ಭಾರತವು ಇಕ್ಕಟ್ಟಿನ ಪರಿಸ್ಥಿತಿಯಲ್ಲಿತ್ತು. ಆದರೆ ಎರಡನೇ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಚೆಂಡಿನೊಂದಿಗೆ ಉತ್ತಮ ಆರಂಭವನ್ನು ಹೊಂದಿದ್ದರು. ಭುವನೇಶ್ವರ್ ಕುಮಾರ್ ಅವರು ಅತ್ಯುತ್ತಮವಾಗಿ ಬೌಲ್ ಮಾಡಿದರು, ಆದರೆ ಅವರು ಪಂದ್ಯಗಳನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗಲಿಲ್ಲ".

ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಮತ್ತು ಅವರ ತಂಡಕ್ಕೆ 0-2 ಮುನ್ನಡೆಯನ್ನು ಬಿಟ್ಟುಕೊಟ್ಟ ನಂತರ ಭಾರತ ತಂಡವು ಜೂನ್ 14, ಮಂಗಳವಾರದಂದು ತಮ್ಮ ಮೊದಲ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ ಮತ್ತು ಈ ಸರಣಿಯನ್ನು ವಶಪಡಿಸಿಕೊಳ್ಳಬೇಕಾದರೆ ಉಳಿದ ಮೂರೂ ಪಂದ್ಯಗಳನ್ನು ಸತತವಾಗಿ ಗೆಲ್ಲಬೇಕಿದೆ.

Story first published: Monday, June 13, 2022, 23:07 [IST]
Other articles published on Jun 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X