ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಿಕೆಗೆ ಟೀಮ್ ಇಂಡಿಯಾ ಸ್ಥಾನ ಸಿಕ್ಕಿದೆ ಅಂದಮೇಲೆ ಆ ಒಳ್ಳೆ ಆಟಗಾರನಿಗೆ ಸ್ಥಾನ ಏಕಿಲ್ಲ?; ರೈನಾ ಕಿಡಿ!

IND vs SA: If Dinesh Karthik can comeback to team india then why not Shikhar Dhawan says Suresh Raina

ಭಾನುವಾರ ( ಮೇ 22 ) ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳಿಗೆ ತೆರೆ ಬಿದ್ದಿದೆ. ಈ ಮೂಲಕ ಕಳೆದ ಮಾರ್ಚ್ ತಿಂಗಳ ಅಂತಿಮ ವಾರದಲ್ಲಿ ಆರಂಭವಾದ ಈ ಟೂರ್ನಿಯ 70 ಲೀಗ್ ಪಂದ್ಯಗಳು ಯಶಸ್ವಿಯಾಗಿ ಮುಗಿದಿದ್ದು, ಇನ್ನು ಪ್ಲೇಆಫ್ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಹೀಗೆ ಈ ವಿಶ್ವದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಿ ಮುಕ್ತಾಯವಾದ ನಂತರ ನಡೆಯಲಿರುವ ಪಂದ್ಯಗಳತ್ತ ಬಿಸಿಸಿಐ ಚಿತ್ತ ನೆಟ್ಟಿದ್ದು, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟಿ ಟ್ವೆಂಟಿ ಸರಣಿಗೆ ಬಿಸಿಸಿಐ 18 ಆಟಗಾರರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೆ ಪ್ರಕಟವಾದ ತಂಡದಲ್ಲಿ ಈ ಮೂವರಿಗೆ ಅವಕಾಶ ನೀಡಿದ್ದೇ ಆ‍ಶ್ಚರ್ಯ!ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೆ ಪ್ರಕಟವಾದ ತಂಡದಲ್ಲಿ ಈ ಮೂವರಿಗೆ ಅವಕಾಶ ನೀಡಿದ್ದೇ ಆ‍ಶ್ಚರ್ಯ!

ಹೀಗೆ ಪ್ರಕಟವಾದ ಭಾರತ ತಂಡದಿಂದ ಹಲವು ಹಿರಿಯ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಿದ್ದು, ಕೆಎಲ್ ರಾಹುಲ್‌ಗೆ ನಾಯಕ ಪಟ್ಟ ಮತ್ತು ರಿಷಭ್ ಪಂತ್‌ಗೆ ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. ಹಾಗೂ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ ದಿನೇಶ್ ಕಾರ್ತಿಕ್‌ಗೆ ಸ್ಥಾನ ದೊರೆತಿದ್ದು ಒಂದು ಕಡೆ ಕ್ರಿಕೆಟ್ ಅಭಿಮಾನಿಗಳಲ್ಲಿ ಖುಷಿಯನ್ನು ತಂದಿದ್ದರೆ, ಮತ್ತೊಂದೆಡೆ ಈ ಬಾರಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಲವು ಆಟಗಾರರಿಗೆ ಅವಕಾಶ ಸಿಗದೇ ಇರುವುದರ ಕುರಿತು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

GT vs RR ಕ್ವಾಲಿಫೈಯರ್ 1: ಪಂದ್ಯದಲ್ಲಿ ಗೆಲ್ಲಲು ನಿಮ್ಮ ಡ್ರೀಮ್ ಟೀಮ್ ಹೀಗಿರಲಿ; ಈತನಿಗೆ ನಾಯಕತ್ವ ನೀಡಿGT vs RR ಕ್ವಾಲಿಫೈಯರ್ 1: ಪಂದ್ಯದಲ್ಲಿ ಗೆಲ್ಲಲು ನಿಮ್ಮ ಡ್ರೀಮ್ ಟೀಮ್ ಹೀಗಿರಲಿ; ಈತನಿಗೆ ನಾಯಕತ್ವ ನೀಡಿ

ಅದೇ ಸಾಲಿಗೆ ಇದೀಗ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸೇರಿಕೊಂಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿರುವ ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಒಳ್ಳೆಯ ಆಟಗಾರನಿಗೆ ಅವಕಾಶ ಸಿಗದೇ ಇರುವುದರ ಕುರಿತು ಈ ಕೆಳಕಂಡಂತೆ ಪ್ರತಿಕ್ರಿಯಿಸಿದ್ದಾರೆ.

ಶಿಖರ್ ಧವನ್ ಪರ ಬ್ಯಾಟ್ ಬೀಸಿದ ರೈನಾ

ಶಿಖರ್ ಧವನ್ ಪರ ಬ್ಯಾಟ್ ಬೀಸಿದ ರೈನಾ

ದಕ್ಷಿಣ ಆಫ್ರಿಕಾ ಸರಣಿಗೆ ಪ್ರಕಟವಾಗಿರುವ ಟೀಮ್ ಇಂಡಿಯಾ ಕುರಿತು ಮಾತನಾಡಿರುವ ಸುರೇಶ್ ರೈನಾ ಶಿಖರ್ ಧವನ್‌ಗೆ ಅವಕಾಶ ಸಿಗದೇ ಇರುವುದರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಶಿಖರ್ ಧವನ್‌ಗೆ ಅವಕಾಶ ಸಿಗಬೇಕಿತ್ತು ಎಂದಿರುವ ರೈನಾ ಧವನ್ ತಂಡದಲ್ಲಿ ಇತರೆ ಆಟಗಾರರ ಜೊತೆ ಚೆನ್ನಾಗಿ ಬೆರೆಯುವ ಉತ್ತಮ ಆಟಗಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಿನೇಶ್ ಕಾರ್ತಿಕ್‌ಗೆ ಅವಕಾಶ ಸಿಕ್ಕಿರುವಾಗ ಧವನ್‌ಗೇಕಿಲ್ಲ?

ದಿನೇಶ್ ಕಾರ್ತಿಕ್‌ಗೆ ಅವಕಾಶ ಸಿಕ್ಕಿರುವಾಗ ಧವನ್‌ಗೇಕಿಲ್ಲ?

ಇನ್ನೂ ಮುಂದುವರೆದು ಮಾತನಾಡಿರುವ ಮಿಸ್ಟರ್ ಐಪಿಎಲ್ ದ. ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ದಿನೇಶ್ ಕಾರ್ತಿಕ್‌ರನ್ನು ಉದಾಹರಣೆಗೆ ಎಳೆದಿದ್ದಾರೆ. ದಿನೇಶ್ ಕಾರ್ತಿಕ್ ಕಮ್‌ಬ್ಯಾಕ್ ಮಾಡಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕಾದರೆ ಶಿಖರ್ ಧವನ್‌ಗೇಕಿಲ್ಲ ಎಂಬ ಪ್ರಶ್ನೆಯನ್ನು ರೈನಾ ಬಿಸಿಸಿಐಗೆ ಸ್ಥಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಸಂದರ್ಶನದ ಮೂಲಕ ಎಸೆದಿದ್ದಾರೆ.

IPL ಪ್ಲೇಆಫ್ ಇತಿಹಾಸ ನೋಡಿದ್ರೆ RCB ಈ ಸಲ ಕಪ್‌ ಗೆಲ್ಲೋದು ಡೌಟೇ!!! | #cricket | #IPL2022 | Oneindia Kannda
ಧವನ್ ಐಪಿಎಲ್ ಅಂಕಿಅಂಶ

ಧವನ್ ಐಪಿಎಲ್ ಅಂಕಿಅಂಶ

ಈ ಬಾರಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಶಿಖರ್ ಧವನ್ 14 ಪಂದ್ಯಗಳನ್ನಾಡಿ 460 ರನ್ ಕಲೆಹಾಕಿದ್ದಾರೆ. ಶಿಖರ್ ಧವನ್‌ರ ಈ ಆಟದಲ್ಲಿ ಮೂರು ಅರ್ಧಶತಕಗಳೂ ಸೇರಿದ್ದು, ಅಜೇಯ 88 ಶಿಖರ್ ಧವನ್ ಗಳಿಸಿದ ಗರಿಷ್ಟ ರನ್ ಆಗಿದೆ. ಇನ್ನು ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆಯದ ಶಿಖರ್ ಧವನ್ ಈ ಬಾರಿಯಾದರೂ ಆ ಅವಕಾಶವನ್ನು ಪಡೆಯಬಹುದಾ ಎಂಬ ಕುತೂಹಲವಿತ್ತು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಅವಕಾಶ ಸಿಗದ ಧವನ್‌ಗೆ ಟಿ ಟ್ವೆಂಟಿ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡುವುದು ದೂರದ ಮಾತು.

Story first published: Monday, May 23, 2022, 18:24 [IST]
Other articles published on May 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X