ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಇಲ್ಲದೇ ಯಾರು ಆರಂಭಿಕರಾಗ್ತಾರೆ? ದ.ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ

IND vs SA: In the absence of Rohit Mayank Agarwal likely to open with KL Rahul in the first test

ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಮತ್ತು ಟಿ ಟ್ವೆಂಟಿ ಎರಡೂ ಸರಣಿಗಳಲ್ಲಿ ಜಯ ಗಳಿಸಿರುವ ಭಾರತ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದು ಹರಿಣಗಳ ನೆಲದಲ್ಲಿಯೂ ಕೂಡ ವಿಜಯ ಪತಾಕೆಯನ್ನು ಹಾರಿಸುವ ಯೋಜನೆಯಲ್ಲಿದೆ. ಹೌದು, ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಮೊದಲಿಗೆ ಹರಿಣಗಳ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸಲಿದ್ದು ಈ ಸರಣಿಯಲ್ಲಿ ಜಯ ಸಾಧಿಸುವ ಮೂಲಕ ಹೊಸ ಇತಿಹಾಸ ಬರೆಯುವ ತವಕದಲ್ಲಿದೆ. ಇದುವರೆಗೂ ಒಟ್ಟು 7 ಬಾರಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಯಾವುದೇ ಬಾರಿ ಕೂಡ ಟೆಸ್ಟ್ ಸರಣಿಯನ್ನು ಗೆಲ್ಲಲು ಆಗಿಲ್ಲ.

ಹೀಗಾಗಿ ಎಂಟನೇ ಬಾರಿಗೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಜಯ ಸಾಧಿಸಿದರೆ ಹೊಸ ಇತಿಹಾಸವನ್ನೇ ಬರೆದಂತಾಗಲಿದೆ ಹಾಗೂ ತನ್ನ ಕೆಟ್ಟ ದಾಖಲೆಗೆ ಅಂತ್ಯ ಸಿಗಲಿದೆ. ಹಾಗೆಂದ ಮಾತ್ರಕ್ಕೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಸುಲಭವಾಗಿ ಗೆಲ್ಲಲಾಗುವುದಿಲ್ಲ. ಅಲ್ಲಿನ ಕ್ರೀಡಾಂಗಣಗಳ ಪಿಚ್ ತುಂಬಾ ವ್ಯತ್ಯಾಸದಿಂದ ಕೂಡಿರಲಿದ್ದು ಹೆಚ್ಚು ಹುಲ್ಲಿನಿಂದ ತಯಾರಿಸಲ್ಪಟ್ಟಿರುತ್ತವೆ. ಹೀಗಾಗಿ ಅಂತಹ ಸವಾಲಿನ ಪಿಚ್‌ಗಳಲ್ಲಿ ಎದುರಾಳಿಗೆ ತಕ್ಕ ಉತ್ತರ ನೀಡಬಲ್ಲಂತಹ ತಂಡವನ್ನು ಕಣಕ್ಕಿಳಿಸಿದರೆ ಮಾತ್ರ ವಿಜಯಲಕ್ಷ್ಮಿ ಒಲಿಯಲಿದ್ದಾಳೆ.

ರವಿಶಾಸ್ತ್ರಿಯ ಆ ಒಂದು ಹೇಳಿಕೆ ನನಗೆ ಬಹಳ ನೋವು ತಂದಿತು: ಆರ್‌. ಅಶ್ವಿನ್ರವಿಶಾಸ್ತ್ರಿಯ ಆ ಒಂದು ಹೇಳಿಕೆ ನನಗೆ ಬಹಳ ನೋವು ತಂದಿತು: ಆರ್‌. ಅಶ್ವಿನ್

ಈ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ಆಫ್ರಿಕಾ ಪ್ರವಾಸಕ್ಕೆ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿಯೇ 18 ಆಟಗಾರರ ಬಲಿಷ್ಠ ತಂಡವನ್ನು ಬಿಸಿಸಿಐ ಕಳುಹಿಸಿದ್ದು, ಈ ತಂಡದ ಪೈಕಿ ಯಾವ ಆಟಗಾರರು ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡು ಕಣಕ್ಕಿಲಿಯಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಹೀಗೆ ಮೊದಲು ಪ್ರಕಟವಾಗಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ರೋಹಿತ್ ಶರ್ಮಾ ನಂತರ ಗಾಯದ ಸಮಸ್ಯೆಗೊಳಗಾಗಿ ಸರಣಿಯಿಂದ ಹೊರಬಿದ್ದರು. ಹೀಗಾಗಿ ಈ ಹಿಂದೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಈ ಬಾರಿ ಯಾರು ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡದಲ್ಲಿ ಯಾವ ಆಟಗಾರರು ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ರಾಹುಲ್ - ಮಯಾಂಕ್ ಆರಂಭಿಕರು

ರಾಹುಲ್ - ಮಯಾಂಕ್ ಆರಂಭಿಕರು

ರೋಹಿತ್ ಶರ್ಮಾ ಅಲಭ್ಯರಾಗಿರುವ ಕಾರಣ ಕನ್ನಡಿಗ ಕೆಎಲ್ ರಾಹುಲ್ ಜೊತೆ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಭಾರತದ ಆರಂಭಿಕ ಆಟಗಾರರು ದಕ್ಷಿಣ ಆಫ್ರಿಕಾ ನೆಲದಲ್ಲಿ ಉತ್ತಮ ಆರಂಭ ಪಡೆದುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂಬ ಮಾತನ್ನು ಈ ಜೋಡಿ ಹುಸಿ ಮಾಡಬೇಕಿದೆ.

ಓರ್ವನೇ ಸ್ಪಿನ್ನರ್

ಓರ್ವನೇ ಸ್ಪಿನ್ನರ್

ಇನ್ನು ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿದ್ದು ನಾಲ್ಕನೇ ಕ್ರಮಾಂಕದಲ್ಲಿ ಎಲ್ಲರಿಗೂ ತಿಳಿದಿರುವ ಹಾಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನುಳಿದಂತೆ ಶ್ರೇಯಸ್ ಅಯ್ಯರ್, ಹನುಮ ವಿಹಾರಿ ಮತ್ತು ರಿಷಭ್ ಪಂತ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಈ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕೇವಲ ಓರ್ವ ಸ್ಪಿನ್ನರ್ ಇರಲಿದ್ದು ರವಿಚಂದ್ರನ್ ಅಶ್ವಿನ್ ಭಾಗವಹಿಸುವುದು ಖಚಿತ. ಇನ್ನುಳಿದಂತೆ ಮೊಹಮ್ಮದ್ ಶಮಿ, ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳುವುದು ಬಹುತೇಕ ಖಚಿತ.

South Africa ನೆಲದಲ್ಲಿ ಮೊದಲ ಬಾರಿಗೆ ಗೆದ್ದರೆ Kohliಗೆ ನೆಮ್ಮದಿ | Oneindia Kannada
ಪ್ರಥಮ ಟೆಸ್ಟ್‌ಗೆ ಭಾರತ ಸಂಭಾವ್ಯ ಆಡುವ ಬಳಗ

ಪ್ರಥಮ ಟೆಸ್ಟ್‌ಗೆ ಭಾರತ ಸಂಭಾವ್ಯ ಆಡುವ ಬಳಗ

ಟೀಮ್ ಇಂಡಿಯಾ ಸಂಭಾವ್ಯ ಆಡುವ ಬಳಗ: ಕೆಎಲ್ ರಾಹುಲ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹನುಮ ವಿಹಾರಿ, ರವಿ ಅಶ್ವಿನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್

Story first published: Wednesday, December 22, 2021, 11:55 [IST]
Other articles published on Dec 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X