ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA: ಹಾರ್ದಿಕ್ ಪಾಂಡ್ಯ ನಾಯಕತ್ವದ ಕುರಿತು ಕೋಚ್ ರಾಹುಲ್ ದ್ರಾವಿಡ್ ಅಚ್ಚರಿ ಹೇಳಿಕೆ!

Ind vs SA: India Head Coach Rahul Dravid Surprised Statement About Hardik Pandya

ಟೀಂ ಇಂಡಿಯಾ ಆಲ್‌ರೌಂಡರ್ ಮತ್ತು ಐಪಿಎಲ್ 2022 ವಿಜೇತ ನಾಯಕ ಹಾರ್ದಿಕ್ ಪಾಂಡ್ಯ ಅವರು ಗುರುವಾರ (ಜೂನ್ 9) ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಎದುರಿಸುವ ಸಲುವಾಗಿ ಮೆನ್-ಇನ್-ಬ್ಲೂ ತಂಡವನ್ನು ಸೇರಿಕೊಂಡಿದ್ದಾರೆ. ಮಂಗಳವಾರದಂದು ಅಭ್ಯಾಸ ಸೆಷನ್ಸ್‌ನಲ್ಲಿ ತಂಡವನ್ನು ಕೂಡಿಕೊಂಡಿದ್ದಾರೆ.

Ind vs SA: ಟಿ20 ಕ್ರಿಕೆಟ್‌ನಲ್ಲಿ ಅಶ್ವಿನ್ ದಾಖಲೆ ಹಿಂದಿಕ್ಕಲು ಎದುರು ನೋಡುತ್ತಿರುವ ಚಹಲ್Ind vs SA: ಟಿ20 ಕ್ರಿಕೆಟ್‌ನಲ್ಲಿ ಅಶ್ವಿನ್ ದಾಖಲೆ ಹಿಂದಿಕ್ಕಲು ಎದುರು ನೋಡುತ್ತಿರುವ ಚಹಲ್

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಭಾರತ ತಂಡಕ್ಕೆ ಸೇರ್ಪಡೆಗೊಂಡಿರುವ ಹೊಸ ಆಟಗಾರರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು. ಇನ್ನು ಐಪಿಎಲ್ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಈ ಋತುವಿನಲ್ಲಿ ಹೊಸ ತಂಡ ಗುಜರಾತ್ ಟೈಟನ್ಸ್ ಅನ್ನು ಪ್ರಶಸ್ತಿ ಗೆಲ್ಲುವವರೆಗೆ ಮುನ್ನಡೆಸಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ ಮಾತನಾಡಲೇಬೇಕಾಗುತ್ತದೆ.

ಹಾರ್ದಿಕ್ ಪಾಂಡ್ಯ ಈಗ ನಾಯಕತ್ವದ ಗುಂಪಿನ ಭಾಗವೇ?

ಹಾರ್ದಿಕ್ ಪಾಂಡ್ಯ ಈಗ ನಾಯಕತ್ವದ ಗುಂಪಿನ ಭಾಗವೇ?

ಕಳೆದ ವರ್ಷದ ಟಿ20 ವಿಶ್ವಕಪ್ ನಂತರ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ಭಾರತೀಯ ತಂಡಕ್ಕೆ ಮರಳಿದ್ದಾರೆ ಮತ್ತು ಅವರ ನಾಯಕತ್ವದ ಅರ್ಹತೆಗಳು ಪ್ರಸ್ತುತ ಚರ್ಚೆಯ ವಿಷಯವಾಗಿದೆ. ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾಧ್ಯಮವನ್ನುದ್ದೇಶಿಸಿ ಮಾತನಾಡುತ್ತಾ, ಐಪಿಎಲ್ ಗೆಲುವಿನ ಅರ್ಥ ಹಾರ್ದಿಕ್ ಪಾಂಡ್ಯ ಈಗ ನಾಯಕತ್ವದ ಗುಂಪಿನ ಭಾಗವೇ? ಎಂದು ಅಚ್ಚರಿಯಾಗಿ ಕೇಳಿದರು.

ಹಾರ್ದಿಕ್ ಪಾಂಡ್ಯ ನಾಯಕತ್ವವು ಪ್ರಭಾವಶಾಲಿಯಾಗಿತ್ತು

ಹಾರ್ದಿಕ್ ಪಾಂಡ್ಯ ನಾಯಕತ್ವವು ಪ್ರಭಾವಶಾಲಿಯಾಗಿತ್ತು

ನಂತರ ಮಾತು ಮುಂದುವರೆಸಿದ ರಾಹುಲ್ ದ್ರಾವಿಡ್, "ಪ್ರಸಕ್ತ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವವು ಪ್ರಭಾವಶಾಲಿಯಾಗಿತ್ತು. ನಾಯಕತ್ವದ ಗುಂಪಿನ ಭಾಗವಾಗಲು ನೀವು ನಾಯಕರಾಗಿ ನೇಮಕಗೊಳ್ಳುವ ಅಗತ್ಯವಿಲ್ಲ. ಉತ್ತಮ ಪ್ರದರ್ಶನ ನೀಡಿದರು, ನಮ್ಮ ದೃಷ್ಟಿಕೋನದಿಂದ ನಾವು ಅವರ ಆಟದ ಕೌಶಲ್ಯ, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಿಂದ ಅತ್ಯುತ್ತಮವಾದದನ್ನು ಪಡೆಯಲು ಬಯಸುತ್ತೇವೆ," ಎಂದು ತಿಳಿಸಿದರು.

ತಂಡವನ್ನು ಯಾರಾದರೂ ಮುನ್ನಡೆಸಲಿ ಅಥವಾ ಇಲ್ಲದಿರಲಿ. ಇದು ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಆಯ್ಕೆದಾರರು ನೋಡುವ ಮತ್ತು ಭವಿಷ್ಯದಲ್ಲಿ ಆಟಗಾರರ ಲಭ್ಯತೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದು ನಮಗೆ ಸಮಾಧಾನಕರವಾಗಿದ್ದು, ಈ ಐಪಿಎಲ್‌ನಲ್ಲಿ ಸಾಕಷ್ಟು ಭಾರತೀಯ ನಾಯಕರು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದರು.

ಕೆಕೆಆರ್‌ನಲ್ಲೂ ಶ್ರೇಯಸ್ ಅಯ್ಯರ್ ಸಾಧನೆ

ಕೆಕೆಆರ್‌ನಲ್ಲೂ ಶ್ರೇಯಸ್ ಅಯ್ಯರ್ ಸಾಧನೆ

ಅವರಲ್ಲಿ ಹಾರ್ದಿಕ್ ಪಾಂಡ್ಯ ಒಬ್ಬರು. ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿದರೆ, ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್‌ಗೆ ಉತ್ತಮ ನಾಯಕರಾಗಿದ್ದರು. ಅದೇ ರೀತಿ ಕೆಕೆಆರ್‌ನಲ್ಲೂ ಶ್ರೇಯಸ್ ಅಯ್ಯರ್ ಸಾಧನೆ ಮಾಡಿದ್ದಾರೆ ಎಂದರು.

ಇದು ಆಟಗಾರರಾಗಿ ಬೆಳೆಯಲು ಮತ್ತು ಉತ್ತಮ ಪ್ರದರ್ಶನ ಕಡೆ ಗಮನ ನೀಡಲು ಸಹಾಯ ಮಾಡುತ್ತದೆ. ಇದು ನಿಜವಾಗಿಯೂ ನೀವು ವ್ಯಕ್ತಿಯಾಗಿ ಬೆಳೆಯಲು ಸಹಾಯ ಮಾಡುತ್ತದೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದನ್ನು ನಮ್ಮ ದೃಷ್ಟಿಕೋನದಿಂದ ನೋಡುವುದು ಅದ್ಭುತವಾಗಿದೆ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟರು.

ಆಲ್‌ರೌಂಡರ್ ಕೌಶಲ್ಯಗಳನ್ನು ತಂಡಕ್ಕೆ ಬಳಸಿಕೊಳ್ಳಬೇಕು

ಆಲ್‌ರೌಂಡರ್ ಕೌಶಲ್ಯಗಳನ್ನು ತಂಡಕ್ಕೆ ಬಳಸಿಕೊಳ್ಳಬೇಕು

ಹಾರ್ದಿಕ್ ಪಾಂಡ್ಯ ಅವರ ಗಮನವು ಪ್ರಸ್ತುತ ಅವರು ಎಷ್ಟು ಓವರ್ ಬೌಲಿಂಗ್ ಮಾಡಬಹುದು ಮತ್ತು ಅವರ ಆಲ್‌ರೌಂಡ್ ಕೌಶಲ್ಯಗಳನ್ನು ತಂಡಕ್ಕೆ ಹೇಗೆ ಒದಗಿಸಬಹುದು ಎಂಬುದರ ಮೇಲೆ ಕೇಂದ್ರೀಕೃತವಾಗಿದೆ ಎಂದು ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ.

ಈ ಸಮಯದಲ್ಲಿ ಅವರು ಮತ್ತೆ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಎಂಬುದು ನಮ್ಮ ದೃಷ್ಟಿಕೋನದಿಂದ ನಿಜವಾಗಿದೆ ಮತ್ತು ಸಂತೋಷವಾಗಿದೆ. ಅದು ತಂಡಕ್ಕೆ ಯಾವ ಲಾಭವನ್ನು ತರುತ್ತದೆ ಎಂದು ನಿಮಗೆ ತಿಳಿದಿದೆ. ಒಬ್ಬ ಕ್ರಿಕೆಟಿಗನಾಗಿ ನಿಜವಾಗಿಯೂ ಅವರಿಂದ ನಾವು ಬೌಲಿಂಗ್‌ನಲ್ಲಿ, ಬ್ಯಾಟಿಂಗ್‌ನಲ್ಲಿ ಅತ್ಯುತ್ತಮವಾದದ್ದು ಪಡೆಯಬೇಕೆಂದು ಖಚಿತಪಡಿಸಿಕೊಳ್ಳಬೇಕಿದೆ ಎಂದು ಕೋಚ್ ರಾಹುಲ್ ದ್ರಾವಿಡ್ ಹೇಳಿದರು.

Story first published: Wednesday, June 8, 2022, 9:49 [IST]
Other articles published on Jun 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X