ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA: ವಿರಾಟ್ ಕೊಹ್ಲಿಯ ಈ ದಾಖಲೆ ಬ್ರೇಕ್ ಮಿಸ್ ಮಾಡಿದ ಇಶಾನ್ ಕಿಶನ್

IND vs SA: Ishan Kishan Misses Out On Break This Virat Kohlis Record In 4th T20I

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಪರ ಬ್ಯಾಟಿಂಗ್ ಆರಂಭಿಸುತ್ತಿರುವ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್, ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ದಾಖಲೆಯನ್ನು ಬೆನ್ನಟ್ಟಿದರು. ಅದರೆ ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡರು.

ಟಿ20 ಪಂದ್ಯಗಳಲ್ಲಿ ಅತೀ ವೇಗವಾಗಿ 500 ರನ್‌ಗಳನ್ನು ಗಳಿಸಿದ ಭಾರತೀಯ ದಾಖಲೆಯನ್ನು ಪಡೆಯಲು ಇಶಾನ್ ಕಿಶನ್‌ಗೆ ಕೇವಲ 47 ರನ್‌ಗಳ ಅಗತ್ಯವಿತ್ತು. ಆದಾಗ್ಯೂ ಮೊದಲ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಅನ್ರಿಚ್ ನಾರ್ಟ್ಜೆ ಅವರ ಬೌಲಿಂಗ್‌ನಲ್ಲಿ 27 ರನ್ ಗಳಿಸಿ ಔಟಾದ ಕಾರಣ ಇಶಾನ್ ಕಿಶನ್ ಈ ದಾಖಲೆಯನ್ನು ಮುರಿಯಲು ವಿಫಲರಾದರು.

Ind vs SA 4ನೇ ಟಿ20: ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದ ಭಾರತ; ಬೆಂಗಳೂರಿನಲ್ಲಿ ನಿರ್ಣಾಯಕ ಪಂದ್ಯ!Ind vs SA 4ನೇ ಟಿ20: ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದ ಭಾರತ; ಬೆಂಗಳೂರಿನಲ್ಲಿ ನಿರ್ಣಾಯಕ ಪಂದ್ಯ!

ಇಶಾನ್ ಕಿಶನ್ 26 ಎಸೆತಗಳನ್ನು ಆಡಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 27 ರನ್ ಗಳಿಸಿದರು. ಅವರು ನಾರ್ಟ್ಜೆ ಅವರ ಸ್ಪೆಲ್‌ನ ಮೊದಲ ಎಸೆತದಲ್ಲಿ ವಿಕೆಟ್‌ಕೀಪರ್ ಕ್ವಿಂಟನ್ ಡಿ ಕಾಕ್‌ಗೆ ಕ್ಯಾಚ್ ನೀಡಿ ಔಟಾದರು.

ಒಂದು ವರ್ಷದ ಹಿಂದೆ ಟಿ20 ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಮುಂಬೈ ಇಂಡಿಯನ್ಸ್ ಆಟಗಾರ ಇಶಾನ್ ಕಿಶನ್, ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕಿಶನ್ ಇದುವರೆಗೆ 14 ಟಿ20 ಇನ್ನಿಂಗ್ಸ್‌ಗಳಿಂದ 36.92 ಸರಾಸರಿಯಲ್ಲಿ ಮತ್ತು 130.43 ಸ್ಟ್ರೈಕ್ ರೇಟ್‌ನಲ್ಲಿ 480 ರನ್ ಗಳಿಸಿದ್ದಾರೆ. ಇದೇ ವೇಳೆ ಅವರ ಹೆಸರಿನಲ್ಲಿ ನಾಲ್ಕು ಅರ್ಧಶತಕಗಳೂ ಇವೆ.

IND vs SA: Ishan Kishan Misses Out On Break This Virat Kohlis Record In 4th T20I

ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಭಾರತ
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ನಾಲ್ಕನೇ ಪಂದ್ಯ ಇಂದು (ಶುಕ್ರವಾರ, ಜೂನ್ 17) ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಭಾರತ ತಂಡ 82 ರನ್‌ಗಳ ಅಂತರದಿಂದ ಗೆದ್ದು ಬೀಗಿದ್ದು, ಐದು ಪಂದ್ಯಗಳ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಬವುಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ರಿಷಭ್ ಪಂತ್ ನಾಯಕತ್ವದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 169 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾಕ್ಕೆ 170 ರನಗಳ ಸವಾಲಿನ ಗುರಿ ನೀಡಿತ್ತು.

ಹಾರ್ದಿಕ್ ಪಾಂಡ್ಯಾಗೆ ಸೇಡು ತೀರಿಸಿಕೊಳ್ಳೋದಕ್ಕೆ ಚಾನ್ಸ್ ಕೊಡದ DK ಮಾಡಿದ್ದೇನು?? |*Cricket | OneIndia Kannada

ಸವಾಲಿನ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 87 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತು ಮತ್ತು ನಾಯಕ ತೆಂಬಾ ಬವುಮಾ ಗಾಯದಿಂದ ನಿವೃತ್ತರಾದರು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಹೋದ ದಕ್ಷಿಣ ಆಫ್ರಿಕಾ ಪರ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (20), ಕ್ವಿಂಟನ್ ಡಿ ಕಾಕ್ (14) ಮತ್ತು ಮಾರ್ಕೊ ಜಾನ್ಸೆನ್ (12) ಬಿಟ್ಟರೆ ಉಳಿದವರಾರು ಪ್ರತಿರೋಧ ತೋರಲಿಲ್ಲ.

Story first published: Friday, June 17, 2022, 23:25 [IST]
Other articles published on Jun 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X