ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಭಾರತೀಯ ಬ್ಯಾಟರ್‌ಗೆ ಬೌಲಿಂಗ್ ಮಾಡುವುದು ಅತ್ಯಂತ ಕಠಿಣ: ಕೇಶವ್ ಮಹರಾಜ್

0

Ind vs SA: Keshav Maharaj says that bowling to Dinesh Karthik is very difficult

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಅಂತಿಮ ಘಟ್ಟಕ್ಕೆ ತಲುಪಿದೆ. ರಾಜ್‌ಕೋಟ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿತು. ನಾಲ್ಕನೇ ಪಂದ್ಯದಲ್ಲಿ ಭಾರತ ಆರಂಭಿಕ ಹಂತದಲ್ಲಿ ಹಿನ್ನಡೆ ಸಾಧಿಸಿದ್ದರೂ ಬಳಿಕ ಅದ್ಭುತವಾಗಿ ತಿರುಗಿಬಿದ್ದ ಪರಿಣಾಮವಾಗಿ ಸವಾಲಿನ ಗುರಿ ನಿಗದಿಪಡಿಸುವಲ್ಲಿ ಯಶಸ್ವಿಯಾಗಿತ್ತು. ನಂತರ ಬೌಲರ್‌ಗಳು ಆಫ್ರಿಕನ್ ಬ್ಯಾಟರ್‌ಗಳಿಗೆ ಆಘಾತ ನಿಡುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಲು ಕಾರಣವಾದರು.

ಈ ಪಂದ್ಯದ ಬಳಿಕ ದಕ್ಷಿಣ ಆಫ್ರಿಕಾದ ಅನುಭವಿ ಸ್ಪಿನ್ನರ್ ಕೇಶವ್ ಮಹರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದ ಓರ್ವ ಬ್ಯಾಟರ್‌ಗೆ ಬೌಲಿಂಗ್ ನಡೆಸುವುದು ಬಹಳ ಕಠಿಣ ಎಂದಿದ್ದಾರೆ. ಇದಕ್ಕೆ ಕೇಶವ್ ಮಹರಾಜ್ ಸೂಕ್ತ ಕಾರಣ ಕೂಡ ನೀಡಿದ್ದಾರೆ. ಹಾಗಾದರೆ ಕೇಶವ್ ಮಹರಾಜ್ ಹೇಳಿದ ಆ ಬ್ಯಾಟರ್ ಯಾರು? ಮುಂದೆ ಓದಿ

498 ರನ್ ಚಚ್ಚಿ ಇತಿಹಾಸ ಬರೆದ ಇಂಗ್ಲೆಂಡ್; ಏಕದಿನ ಕ್ರಿಕೆಟ್‍ನಲ್ಲಿ ಹೆಚ್ಚು ರನ್ ಕಲೆಹಾಕಿರುವ ತಂಡಗಳ ಪಟ್ಟಿ498 ರನ್ ಚಚ್ಚಿ ಇತಿಹಾಸ ಬರೆದ ಇಂಗ್ಲೆಂಡ್; ಏಕದಿನ ಕ್ರಿಕೆಟ್‍ನಲ್ಲಿ ಹೆಚ್ಚು ರನ್ ಕಲೆಹಾಕಿರುವ ತಂಡಗಳ ಪಟ್ಟಿ

ದಿನೇಶ್ ಕಾರ್ತಿಕ್‌ಗೆ ಬೌಲಿಂಗ್ ಕಠಿಣ

ದಿನೇಶ್ ಕಾರ್ತಿಕ್‌ಗೆ ಬೌಲಿಂಗ್ ಕಠಿಣ

ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಬೌಲಿಂಗ್ ಮಾಡಲು ಬಲು ಕಠಿಣ ಬ್ಯಾಟರ್ ಎಂದು ಹೆಸರಿಸಿದ್ದು ಭಾರತದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಬಗ್ಗೆ. ಅದ್ಭುತ ಫಾರ್ಮ್‌ನಲ್ಲಿರುವ ದಿನೇಶ್ ಕಾರ್ತಿಕ್ ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. ಅಂತಿಮ ಹಂತದಲ್ಲಿ ಆಫ್ರಿಕಾದ ಎಲ್ಲಾ ಬೌಲರ್‌ಗಳನ್ನು ದಂಡಿಸಿದ ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಕಂಗಾಲಾಗುವಂತೆ ಮಾಡಿದ್ದರು.

ಮೊದಲ ಅರ್ಧ ಶತಕ ಸಿಡಿಸಿದ ಡಿಕೆ

ಮೊದಲ ಅರ್ಧ ಶತಕ ಸಿಡಿಸಿದ ಡಿಕೆ

ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಅರ್ದ ಶತಕವನ್ನು ಸಿಡಿಸಿದ್ದಾರೆ. 27 ಎಸೆತಗಳನ್ನು ಎದುರಿಸಿದ ಡಿಕೆ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದಿಗೆ ಭರ್ಜರಿ 55 ರನ್ ಬಾರಿಸಿದರು. ಈ ಪ್ರದರ್ಶನದ ಬಳಿಕ ಕೇಶವ್ ಮಹರಾಜ್ ದಿನೇಶ್ ಕಾರ್ತಿಕ್ ಅವರನ್ನು ಟಿ20 ಮಾದರಿಯ ಶ್ರೇಷ್ಠ ಫಿನಿಷರ್‌ಗಳಲ್ಲಿ ಒಬ್ಬರು ಎಂದಿದ್ದಾರೆ. ಈ ಸಂದರ್ಭದಲ್ಲಿ ದಿರ್ನೇಶ ಕಾರ್ತಿಕ್‌ಗೆ ಬೌಲಿಂಗ್ ಮಾಡುವುದು ಯಾಕೆ ಕಠಿಣ ಎಂದಿದ್ದಾರೆ ಕೇಶವ್ ಮಹರಾಜ್.

ಟಿ20 ಅರ್ಧಶತಕ ಸಿಡಿಸಿದ ಹೆಚ್ಚು ವಯಸ್ಸಾದ ಕ್ರಿಕೆಟಿಗರ ಪಟ್ಟಿ; ಧೋನಿ ಸೇರಿದಂತೆ ಇಬ್ಬರನ್ನು ಹಿಂದಿಕ್ಕಿದ ಡಿಕೆ!

ಅತ್ಯುತ್ತಮ ಫಿನಿಷರ್‌ಗಳಲ್ಲಿ ಒಬ್ಬರು

ಅತ್ಯುತ್ತಮ ಫಿನಿಷರ್‌ಗಳಲ್ಲಿ ಒಬ್ಬರು

"ದಿನೇಶ್ ಕಾರ್ತಿಕ್ ಫಿನಿಷರ್ ಕಾರ್ಯವನ್ನು ನಿರ್ವಹಿಸುತ್ತಿದ್ದು ಅದ್ಭುತವಾದ ಫಾರ್ಮ್‌ನಲ್ಲಿದ್ದಾರೆ. ಅವರು ಖಂಡಿತವಾಗಿಯೂ ಈ ಮಾದರಿಯ ಅತ್ಯುತ್ತಮ ಫಿನಿಶರ್‌ಗಳಲ್ಲಿ ಒಬ್ಬರು. ಅವರು ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತಿದ್ದಾರೆ. ಹಾಗಾಗಿ ಅವರಿಗೆ ಬೌಲಿಂಗ್ ಮಾಡಲು ಬಹಳ ಕಠಿಣವಾಗುತ್ತಿದೆ. ಐಪಿಎಲ್‌ನಲ್ಲಿಯೂ ಅವರು ಅದ್ಭುತ ಪ್ರದರ್ಶನ ನೀಡಿದ್ದರು. ಇಂದು ಮತ್ತೊಮ್ಮೆ ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ" ಎಂದು ದಿನೇಶ್ ಕಾರ್ತಿಕ್ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾರೆ.

ಐಪಿಎಲ್‌ನಲ್ಲಿಯೂ ಅಮೋಘ ಫಾರ್ಮ್‌ನಲ್ಲಿದ್ದ ಡಿಕೆ

ಐಪಿಎಲ್‌ನಲ್ಲಿಯೂ ಅಮೋಘ ಫಾರ್ಮ್‌ನಲ್ಲಿದ್ದ ಡಿಕೆ

ದಿನೇಶ್ ಕಾರ್ತಿಕ್ ಈ ಬಾರಿಯ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಫಿನಿಷರ್ ಆಗಿ ದಿನೇಶ್ ಕಾರ್ತಿಕ್ ನೀಡಿದ ಪ್ರದರ್ಶನದಿಂದಾಗಿ ಕ್ರಿಕೆಟ್ ಅಭಿಮಾನಿಗಳ ಮನೆಮಾತಾದರು. ಈ ಪ್ರದರ್ಶನದ ಕಾರಣದಿಂದಾಗಿಯೇ ಅವರು ಸುಮಾರು ಮೂರು ವರ್ಷಗಳ ಬಳಿಕ ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪರವಾಗಿ ಆಡಬೇಕು ಎಂಬ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡಿದ್ದಾರೆ.

Story first published: Saturday, June 18, 2022, 17:57 [IST]
Other articles published on Jun 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X