ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ನೆಲದಲ್ಲಿ ಅತಿಕೆಟ್ಟ ದಾಖಲೆ ಮಾಡಿದ್ದಾರೆ ಹಿರಿಯರು; ಇದನ್ನು ಅಳಿಸಿಹಾಕ್ತಾರಾ ಕನ್ನಡಿಗರು?

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿ ದಿನದಿಂದ ದಿನಕ್ಕೆ ಕುತೂಹಲ ಮತ್ತು ಕ್ರೇಜ್ ಪಡೆದುಕೊಳ್ಳುತ್ತಿದೆ. ಇತ್ತಂಡಗಳ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಈ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಭಾರತದ ಹಿರಿಯ ಕ್ರಿಕೆಟಿಗರು ಮಾಡಿರುವ ದಾಖಲೆಗಳು ಮತ್ತು ಕೆಟ್ಟ ದಾಖಲೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಹೌದು, ಹರಿಣಗಳ ನೆಲದಲ್ಲಿ ಭಾರತದ ಮಾಜಿ ಕ್ರಿಕೆಟಿಗರು ಹಲವು ದಾಖಲೆಗಳನ್ನು ನಿರ್ಮಿಸುವುದರ ಜತೆಗೆ ಬೇಡವಾದ ಕೆಟ್ಟ ದಾಖಲೆಗಳನ್ನು ಕೂಡ ಬಿಟ್ಟು ಹೋಗಿದ್ದಾರೆ.

ಸಹ ಆಟಗಾರರ ನಡವಳಿಕೆಯಿಂದ ನಿವೃತ್ತಿ ಘೋಷಿಸಲು ಚಿಂತಿಸಿದ್ದೆ ಎಂದು ಆ ಕೆಟ್ಟ ಘಟನೆ ಬಿಚ್ಚಿಟ್ಟ ಅಶ್ವಿನ್!ಸಹ ಆಟಗಾರರ ನಡವಳಿಕೆಯಿಂದ ನಿವೃತ್ತಿ ಘೋಷಿಸಲು ಚಿಂತಿಸಿದ್ದೆ ಎಂದು ಆ ಕೆಟ್ಟ ಘಟನೆ ಬಿಚ್ಚಿಟ್ಟ ಅಶ್ವಿನ್!

ಅದರಲ್ಲಿಯೂ ಈ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಾಗ ಭಾರತ ತಂಡದ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿರುವ ಆಟಗಾರರು ಅತಿ ಕೆಟ್ಟ ದಾಖಲೆಯನ್ನು ನಿರ್ಮಿಸಿದ್ದು, ಇದೀಗ ಆ ಕೆಟ್ಟ ದಾಖಲೆಯನ್ನು ಅಳಿಸಿ ಹಾಕುವ ಜವಾಬ್ದಾರಿ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಹೆಗಲ ಮೇಲಿದೆ. ಹೌದು, ದಕ್ಷಿಣ ಆಫ್ರಿಕಾ ವಿರುದ್ಧದ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು.

ರೋಹಿತ್ ಇಲ್ಲದೇ ಯಾರು ಆರಂಭಿಕರಾಗ್ತಾರೆ? ದ.ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡರೋಹಿತ್ ಇಲ್ಲದೇ ಯಾರು ಆರಂಭಿಕರಾಗ್ತಾರೆ? ದ.ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ

ಕಳೆದ ಕೆಲ ಸರಣಿಗಳಲ್ಲಿ ಶುಬ್ ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಸ್ಥಾನ ಪಡೆದುಕೊಳ್ಳುತ್ತಿದ್ದ ಕಾರಣದಿಂದಾಗಿ ಮಯಾಂಕ್ ಅಗರ್ವಾಲ್ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಿರಲಿಲ್ಲ. ಆದರೆ ಈ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ಶುಬ್ ಮನ್ ಗಿಲ್ ಇಬ್ಬರೂ ಇಲ್ಲದೇ ಇರುವುದರಿಂದ ಭಾರತ ಟೆಸ್ಟ್ ತಂಡದ ಉಪನಾಯಕ ಕೆಎಲ್ ರಾಹುಲ್ ಜೊತೆ ಕನ್ನಡಿಗ ಮಯಾಂಕ್ ಅಗರ್ವಾಲ್ ಆರಂಭಿಕನಾಗಿ ಕಣಕ್ಕಿಳಿಯುವುದು ಖಚಿತ. ಇನ್ನು ಸೆಂಚುರಿಯನ್ ಕ್ರೀಡಾಂಗಣ ತಲುಪಿರುವ ಮಯಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಈಗಾಗಲೇ ಕೋಚ್ ರಾಹುಲ್ ದ್ರಾವಿಡ್ ಸಲಹೆ ಅಡಿಯಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದು ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತೀಯ ಆರಂಭಿಕ ಆಟಗಾರರು ಹೊಂದಿರುವ ಕೆಟ್ಟ ದಾಖಲೆಯನ್ನು ಅಳಿಸುವ ಯೋಜನೆಯಲ್ಲಿದ್ದಾರೆ. ಹರಿಣಗಳ ನೆಲದಲ್ಲಿ ಭಾರತದ ಆರಂಭಿಕ ಆಟಗಾರರು ನಿರ್ಮಿಸಿರುವ ಆ ಕೆಟ್ಟ ದಾಖಲೆಗಳ ವಿವರದ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ಭಾರತೀಯ ಆರಂಭಿಕ ಜೋಡಿ ಜತೆಯಾಟ ಇತರೆ ದೇಶಗಳಿಗಿಂತ ದಕ್ಷಿಣ ಆಫ್ರಿಕಾದಲ್ಲೇ ಅತೀ ಕಡಿಮೆ!

ಭಾರತೀಯ ಆರಂಭಿಕ ಜೋಡಿ ಜತೆಯಾಟ ಇತರೆ ದೇಶಗಳಿಗಿಂತ ದಕ್ಷಿಣ ಆಫ್ರಿಕಾದಲ್ಲೇ ಅತೀ ಕಡಿಮೆ!

ಭಾರತ ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಾರು ಕ್ರಿಕೆಟ್ ದೇಶಗಳಿಗೆ ಪ್ರವಾಸವನ್ನು ಕೈಗೊಂಡು ಟೆಸ್ಟ್ ಸರಣಿಗಳನ್ನು ಆಡಿದೆ. ಹೀಗೆ ಭಾರತ ಅನ್ಯ ದೇಶಗಳ ಪ್ರವಾಸವನ್ನು ಕೈಗೊಂಡು ಆಡಿರುವ ಟೆಸ್ಟ್ ಪಂದ್ಯಗಳ ಪೈಕಿ ಭಾರತದ ಆರಂಭಿಕ ಆಟಗಾರರ ಜೋಡಿ ಅತಿ ಕಡಿಮೆ ಜತೆಯಾಟದ ರನ್ ಕಲೆಹಾಕಿರುವುದು ದಕ್ಷಿಣ ಆಫ್ರಿಕಾದ ನೆಲದಲ್ಲಿಯೇ. ಇದುವರೆಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ 39 ಇನ್ನಿಂಗ್ಸ್‌ ಆಡಿರುವ ಟೀಮ್ ಇಂಡಿಯಾ ಆರಂಭಿಕ ಆಟಗಾರರು 1075 ರನ್‌ಗಳ ಜತೆಯಾಟವನ್ನು ಆಡಿದ್ದಾರೆ. ಈ ಜತೆಯಾಟ 2 ಶತಕದ ಜತೆಯಾಟ ಮತ್ತು 2 ಅರ್ಧ ಶತಕದ ಜತೆಯಾಟವನ್ನು ಕೂಡ ಹೊಂದಿದೆ. 39 ಇನ್ನಿಂಗ್ಸ್‌ ಆಡಿ ಕೇವಲ 1075 ರನ್‌ ಗಳಿಸಿರುವ ಭಾರತದ ಆರಂಭಿಕ ಜೋಡಿ ಈ ರೀತಿಯ ಕೆಟ್ಟ ಆರಂಭವನ್ನು ಇತರ ಯಾವುದೇ ದೇಶಗಳಲ್ಲಿಯೂ ಕೂಡ ಮಾಡಿಲ್ಲ. ಅಷ್ಟೇ ಅಲ್ಲ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಇತರೆ ವಿದೇಶಿ ಆರಂಭಿಕ ಆಟಗಾರರು ಕೂಡ ಹರಿಣಗಳ ನೆಲದಲ್ಲಿ ಈ ರೀತಿಯ ಕೆಟ್ಟ ಇತಿಹಾಸವನ್ನು ಹೊಂದಿಲ್ಲ. ಹೀಗಾಗಿ ಈ ರೀತಿಯ ಕೆಟ್ಟ ದಾಖಲೆಯನ್ನು ಕೆ ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅಳಿಸಿಹಾಕಬೇಕಾದ ಅಗತ್ಯತೆ ತುಂಬಾ ದೊಡ್ಡ ಮಟ್ಟದಲ್ಲಿದೆ.

ಆರಂಭಿಕ ಆಟಗಾರರಾಗಿ ಉತ್ತಮ ಅಂಕಿಅಂಶ ಹೊಂದಿದ್ದಾರೆ ರಾಹುಲ್ ಮತ್ತು ಮಯಾಂಕ್

ಆರಂಭಿಕ ಆಟಗಾರರಾಗಿ ಉತ್ತಮ ಅಂಕಿಅಂಶ ಹೊಂದಿದ್ದಾರೆ ರಾಹುಲ್ ಮತ್ತು ಮಯಾಂಕ್

ಟೆಸ್ಟ್ ಆರಂಭಿಕ ಆಟಗಾರನಾಗಿ 18 ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದಿರುವ ಕೆಎಲ್ ರಾಹುಲ್ 808 ರನ್ ಕಲೆಹಾಕಿದ್ದು 3 ಶತಕ ಮತ್ತು 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಆಡಿರುವ 2 ಪಂದ್ಯಗಳಲ್ಲಿ ಕೆಎಲ್ ರಾಹುಲ್ ಗಳಿಸಿರುವುದು ಕೇವಲ 26 ರನ್ ಮಾತ್ರ.


ಇನ್ನು ಮಯಾಂಕ್ ಅಗರ್ವಾಲ್ ತನ್ನ ಅಂತಿಮ ಟೆಸ್ಟ್ ಪಂದ್ಯದಲ್ಲಿ 1 ಶತಕ ಮತ್ತು 1 ಅರ್ಧಶತಕವನ್ನು ಬಾರಿಸಿದ್ದು, 25 ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು 1247 ರನ್ ಬಾರಿಸಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಮಯಾಂಕ್ ಅಗರ್ವಾಲ್ 340 ರನ್ ಕಲೆಹಾಕಿದ್ದು, 2 ಶತಕಗಳನ್ನು ಬಾರಿಸಿದ್ದಾರೆ. ಹೀಗೆ ಭಾರತದ ಪರ ಆರಂಭಿಕ ಆಟಗಾರರಾಗಿ ಉತ್ತಮ ಅಂಕಿ ಅಂಶಗಳನ್ನು ಹೊಂದಿರುವ ಈ ಇಬ್ಬರು ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದೊಂದಿಗೆ ಹರಿಣಗಳ ನೆಲದಲ್ಲಿ ಕಣಕ್ಕಿಳಿದು ಉತ್ತಮ ಆರಂಭವನ್ನು ಮಾಡುವ ನಿರೀಕ್ಷೆಗಳು ಹೆಚ್ಚಿದ್ದು, ಈ ಹಿಂದಿನ ಭಾರತದ ಆರಂಭಿಕ ಆಟಗಾರರು ನಿರ್ಮಿಸಿರುವ ಕೆಟ್ಟ ದಾಖಲೆಯನ್ನು ಅಳಿಸಿ ಹಾಕುವ ಸಾಧ್ಯತೆಗಳು ಹೆಚ್ಚಿವೆ.

IPL 2022 Mega Auction ಬಗ್ಗೆ ಕಂಪ್ಲೀಟ್ ಮಾಹಿತಿ | Oneindia Kannada
2010ರ ಸೆಹ್ವಾಗ್ - ಗಂಭೀರ್ ಜೋಡಿಯದ್ದೇ ಅತ್ಯುತ್ತಮ ಆರಂಭ

2010ರ ಸೆಹ್ವಾಗ್ - ಗಂಭೀರ್ ಜೋಡಿಯದ್ದೇ ಅತ್ಯುತ್ತಮ ಆರಂಭ

2010ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಸೆಂಚೂರಿಯನ್ ಕ್ರೀಡಾಂಗಣದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ತಂಡದ ಆರಂಭಿಕ ಆಟಗಾರರಾದ ಗೌತಮ್ ಗಂಭೀರ್ ಮತ್ತು ವಿರೇಂದ್ರ ಸೆಹ್ವಾಗ್ ಜೋಡಿ 137 ರನ್‌ಗಳ ಜತೆಯಾಟವನ್ನು ಆಡಿತ್ತು. ಇದಾದ ಬಳಿಕ ಭಾರತದ ಯಾವುದೇ ಆರಂಭಿಕ ಜೋಡಿ ಕೂಡ ಈ ರೀತಿಯ ಉತ್ತಮ ಆರಂಭವನ್ನು ದಕ್ಷಿಣ ಆಫ್ರಿಕಾ ನೆಲದಲ್ಲಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿಯೇ ಇಲ್ಲ. ಹೀಗಾಗಿ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಜೋಡಿ ಈ ಕೆಟ್ಟ ದಾಖಲೆಯ ಸರಪಳಿಯನ್ನು ಕಡಿದುಹಾಕಬೇಕಿದೆ.

Story first published: Wednesday, December 22, 2021, 16:39 [IST]
Other articles published on Dec 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X