ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈತನನ್ನು ಎದುರಿಸುವುದೇ ಕಷ್ಟ; ಸರಣಿಗೂ ಮುನ್ನವೇ ಭಾರತದ ಆಟಗಾರನ ಬಗ್ಗೆ ಭಯಪಟ್ಟ ದ.ಆಫ್ರಿಕಾ ನಾಯಕ!

IND vs SA: No one likes to face Umran Maliks 150 kmph speed deliveries says SA skipper Temba Bavuma

ಇಂಡಿಯನ್ ಪ್ರೀಮಿಯರ್ ಲೀಗ್ ಹದಿನೈದನೇ ಆವೃತ್ತಿ ಮುಕ್ತಾಯವಾದ ಬೆನ್ನಲ್ಲೇ ಟೀಮ್ ಇಂಡಿಯಾ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳತ್ತ ಮುಖ ಮಾಡಿದ್ದು, ಮೊದಲಿಗೆ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ.

IPL 2022: ಕಳಪೆ ಆಟ ಆಡಿದ್ರೂ ಈ ಮೂವರನ್ನು ಐಪಿಎಲ್ 2023ಕ್ಕೆ ತಂಡದಿಂದ ಕೈಬಿಡುವುದಿಲ್ಲ ಆರ್‌ಸಿಬಿ!IPL 2022: ಕಳಪೆ ಆಟ ಆಡಿದ್ರೂ ಈ ಮೂವರನ್ನು ಐಪಿಎಲ್ 2023ಕ್ಕೆ ತಂಡದಿಂದ ಕೈಬಿಡುವುದಿಲ್ಲ ಆರ್‌ಸಿಬಿ!

ಹೌದು, ದಕ್ಷಿಣ ಆಫ್ರಿಕಾ ಭಾರತ ಪ್ರವಾಸವನ್ನು ಕೈಗೊಂಡಿದ್ದು 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಸೆಣಸಾಡಲಿದೆ. ಇನ್ನು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಮುಂಬರುವ ಇಂಗ್ಲೆಂಡ್ ಸರಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಈ ಸರಣಿಯಿಂದ ಹೊರಗುಳಿದು ವಿಶ್ರಾಂತಿ ಪಡೆಯುತ್ತಿದ್ದು, ಕೆಎಲ್ ರಾಹುಲ್ ನಾಯಕತ್ವದ ಹಲವು ಯುವ ಆಟಗಾರರನ್ನೊಳಗೊಂಡ ಟೀಮ್ ಇಂಡಿಯಾ ಈ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯಲಿದೆ.

IND vs SA: ಸ್ಥಾನ ಉಳಿಸಿಕೊಳ್ಳಲು ಭಾರತದ ಈ ಮೂವರು ಚೆನ್ನಾಗಿ ಆಡಲೇಬೇಕು ಎಂದ ರೈನಾIND vs SA: ಸ್ಥಾನ ಉಳಿಸಿಕೊಳ್ಳಲು ಭಾರತದ ಈ ಮೂವರು ಚೆನ್ನಾಗಿ ಆಡಲೇಬೇಕು ಎಂದ ರೈನಾ

ಇನ್ನು ಈ ಟೀಮ್ ಇಂಡಿಯಾದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ ಕೆಲ ಆಟಗಾರರಿಗೆ ಸ್ಥಾನ ನೀಡಲಾಗಿದೆ. ಹಾಗಿದ್ದರೂ ಸಹ ಈ ತಂಡವನ್ನು ಭಾರತ ಬಿ ತಂಡವೆಂದು ನಾವು ಪರಿಗಣಿಸುವುದಿಲ್ಲ ಬದಲಾಗಿ ಈ ತಂಡ ಕೂಡ ಬಲಿಷ್ಠವಾಗಿಯೇ ಇದೆ ಎಂದು ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಇದೀಗ ಮತ್ತೊಮ್ಮೆ ಟೀಮ್ ಇಂಡಿಯಾ ಕುರಿತಾಗಿ ಮಾತನಾಡಿರುವ ಹರಿಣಗಳ ನಾಯಕ ಭಾರತದ ಯುವ ಆಟಗಾರನೋರ್ವನ ಕುರಿತು ತಮ್ಮಲ್ಲಿ ಭಯ ಉಂಟಾಗಿರುವುದನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ವಿವರ ಮುಂದೆ ಇದೆ ಓದಿ..

ಯಾರೂ ಕೂಡ ಈತನನ್ನು ಎದುರಿಸಲು ಬಯಸುವುದಿಲ್ಲ

ಯಾರೂ ಕೂಡ ಈತನನ್ನು ಎದುರಿಸಲು ಬಯಸುವುದಿಲ್ಲ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಸಾಲು ಸಾಲು ಅತಿ ವೇಗದ ಎಸೆತಗಳನ್ನು ಎಸೆದು ಸದ್ದು ಮಾಡಿದ್ದ ಉಮ್ರಾನ್ ಮಲಿಕ್ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯುತ್ತಿದ್ದು ಈತನ ಕುರಿತು ಟೆಂಬಾ ಬವುಮಾ ತುಸು ಆತಂಕವನ್ನು ಹೊರಹಾಕಿದ್ದಾರೆ. ನಾವು ದಕ್ಷಿಣ ಆಫ್ರಿಕಾದಲ್ಲಿ ವೇಗದ ಎಸೆತಗಳನ್ನು ಎದುರಿಸುತ್ತಾ ಬೆಳೆದಿದ್ದೇವೆ, ಆದರೂ ಸಹ ಯಾವ ಬ್ಯಾಟ್ಸ್‌ಮನ್‌ ಕೂಡ ಗಂಟೆಗೆ 150 ಕಿಲೋ ಮೀಟರ್ ವೇಗದ ಎಸೆತಗಳನ್ನು ಎಸೆಯುವ ಬೌಲರ್‌ನ್ನು ಎದುರಿಸಲು ಬಯಸುವುದಿಲ್ಲ, ಆದರೂ ಇದಕ್ಕೆ ನಾವು ಸಿದ್ಧರಾಗಿರಬೇಕು ಎಂದು ಹೇಳಿಕೆ ನೀಡಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿರುವ ಬವುಮಾ ನಮ್ಮ ತಂಡದಲ್ಲಿಯೂ ಅಷ್ಟು ವೇಗದ ಎಸೆತಗಳನ್ನು ಹಾಕುವ ಬೌಲರ್‌ಗಳಿದ್ದಾರೆ, ಆದರೆ ಉಮ್ರಾನ್ ಮಲಿಕ್ ಟೀಮ್ ಇಂಡಿಯಾಗೆ ದೊರಕಿರುವ ವಿಶೇಷ ಪ್ರತಿಭೆ ಆತ ಐಪಿಎಲ್ ಟೂರ್ನಿಯಲ್ಲಿ ತೋರಿದ ಪ್ರದರ್ಶನವನ್ನೇ ಇಲ್ಲಿಯೂ ತೋರಲಿದ್ದಾನೆ ಎಂಬ ವಿಶ್ವಾಸವಿದೆ ಎಂದು ಹೇಳಿಕೆ ನೀಡಿದ್ದಾರೆ.

ಉಮ್ರಾನ್ ಮಲಿಕ್ ಐಪಿಎಲ್ 2022ರ ಅಂಕಿ ಅಂಶ

ಉಮ್ರಾನ್ ಮಲಿಕ್ ಐಪಿಎಲ್ 2022ರ ಅಂಕಿ ಅಂಶ

ಉಮ್ರಾನ್ ಮಲಿಕ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ 14 ಪಂದ್ಯಗಳನ್ನಾಡಿದ್ದು, ಪ್ರತಿ ಪಂದ್ಯದಲ್ಲಿಯೂ ಅತಿ ವೇಗದ ಎಸೆತಗಳನ್ನು ಎಸೆಯುವುದರ ಜೊತೆಗೆ 22 ವಿಕೆಟ್‍ಗಳನ್ನು ಪಡೆದಿದ್ದಾರೆ. ಇದು ಭಾರತೀಯ ವೇಗಿಯೋರ್ವ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪಡೆದ ಅತಿ ಹೆಚ್ಚು ವಿಕೆಟ್ ಆಗಿದೆ.

ರೋಹಿತ್ ಇಲ್ದಿದ್ರೂ ನಾವು ಗೆಲ್ತೀವಿ: ರಾಹುಲ್ ದ್ರಾವಿಡ್ ನಿಷ್ಠುರ ನುಡಿ | Oneindia Kannada
ಸರಣಿಗೆ ಪ್ರಕಟವಾಗಿರುವ ತಂಡಗಳು

ಸರಣಿಗೆ ಪ್ರಕಟವಾಗಿರುವ ತಂಡಗಳು

ಭಾರತ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪನಾಯಕ ಮತ್ತು ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ವೈ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಆರ್ ಬಿಷ್ಣೋಯ್ , ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್


ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ತಬ್ರೈಜ್ ಶಂಬ್ಡರ್, ಟ್ರೈಸ್ಸೆ ಸ್ಟಬ್ಡರ್ , ಮಾರ್ಕೊ ಜಾನ್ಸೆನ್

Story first published: Wednesday, June 8, 2022, 9:45 [IST]
Other articles published on Jun 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X