ಭಾರತ vs ದ. ಆಫ್ರಿಕಾ: ಟೆಸ್ಟ್ ಸರಣಿ ಆಯ್ತು, ಮುಂದೆ ಏಕದಿನ ಕದನ: ಹೇಗಿದೆ ಭಾರತದ ಬಲಿಷ್ಠ ಆಡುವ ಬಳಗ!

ರೊಚ್ಚಿಗೆದ್ದು ಮಾತನಾಡಿದ ರಾಹುಲ್ ಕೊಹ್ಲಿ ಮಾತು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ | Oneindia Kannada

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಅಂತ್ಯವಾಗಿದೆ. ಭಾರತ ಅಂತಿಮ ಪಂದ್ಯದಲ್ಲಿಯೂ ಸೋಲು ಕಾಣುವ ಮೂಲಕ ಟೆಸ್ಟ್ ಸರಣಿಯನ್ನು 1-2 ಅಂತರದಿಂದ ಆತಿಥೇಯ ದಕ್ಷಿಣ ಆಫ್ರಿಕಾಗೆ ಬಿಟ್ಟುಕೊಟ್ಟಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ಮತ್ತೊಂದು ಬಾರಿ ಕನಸಾಗಿಯೇ ಉಳಿದುಕೊಂಡಿದೆ. ಈ ಸರಣಿ ಸೋಲಿನ ಬಳಿಕ ಟೆಸ್ಟ್ ನಾಯಕನಾಗಿದ್ದ ವಿರಾಟ್ ಕೊಹ್ಲಿ ಈ ಜವಾಬ್ಧಾರಿಯಿಂದಲೂ ಕೆಳಗಿಳಿದಿದ್ದಾರೆ.

ಇದೀಗ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಟೆಸ್ಟ್ ಸರಣಿಯಲ್ಲಿ ಆಡಲು ಸಜ್ಜಾಗಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ತಂಡದ ಖಾಯಂ ನಾಯಕನಾಗಿ ಇತ್ತೀಚೆಗಷ್ಟೇ ಆಯ್ಕೆಯಾಗಿರುವ ರೋಹಿತ್ ಶರ್ಮಾ ಹೊರಗುಳಿದಿರುವ ಕಾರಣ ಕೆಎಲ್ ರಾಹುಲ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಕೇವಲ ಬ್ಯಾಟರ್ ಆಗಿ ತಂಡದಲ್ಲಿದ್ದಾರೆ.

ಟೆಸ್ಟ್ ನಾಯಕತ್ವವನ್ನೂ ತೊರೆದ ಕೊಹ್ಲಿ: ವಿರಾಟ್ ನಿರ್ಧಾರಕ್ಕೆ ಕ್ರಿಕೆಟ್ ತಾರೆಯರ ಅಚ್ಚರಿ, ಬಿಸಿಸಿಐ ಪ್ರತಿಕ್ರಿಯೆಟೆಸ್ಟ್ ನಾಯಕತ್ವವನ್ನೂ ತೊರೆದ ಕೊಹ್ಲಿ: ವಿರಾಟ್ ನಿರ್ಧಾರಕ್ಕೆ ಕ್ರಿಕೆಟ್ ತಾರೆಯರ ಅಚ್ಚರಿ, ಬಿಸಿಸಿಐ ಪ್ರತಿಕ್ರಿಯೆ

ಹಾಗಾದರೆ ಈ ಸರಣಿಯಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ಕಣಕ್ಕಿಳಿಯುವ ಭಾರತದ ಆಡುವ ಬಳಗ ಹೇಗಿದೆ ಎಂಬುದನ್ನು ಮುಂದೆ ಓದಿ..

ಆರಂಭಿಕರಾಗಿ ರಾಹುಲ್‌ಗೆ ಯಾರು ಸಾಥ್ ನೀಡಲಿದ್ದಾರೆ

ಆರಂಭಿಕರಾಗಿ ರಾಹುಲ್‌ಗೆ ಯಾರು ಸಾಥ್ ನೀಡಲಿದ್ದಾರೆ

ಇನ್ನು ಟೀಮ್ ಇಂಡಿಯಾದ ಖಾಯಂ ಆರಂಭಕ ಆಟಗಾರನಗೂ ಆಗಿರುವ ರೋಹಿತ್ ಶರ್ಮಾ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಕೆಎಲ್ ರಾಹುಲ್‌ಗೆ ಆರಂಭಿಕನಾಗಿ ಯಾರಯ ಸಾಥ್ ನೀಡಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಅನುಭವಿ ಶಿಖರ್ ಧವನ್‌ಗೆ ಈ ಸ್ಥಾನಕ್ಕೆ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಭಾರೀ ಪೈಪೋಟಿ ನೀಡುವುದು ಖಚಿತ. ದೇಶೀಯ ಕ್ರಿಕೆಟ್‌ನಲ್ಲಿ ಗಾಯಕ್ವಾಡ್ ನೀಡಿದ ಪ್ರದರ್ಶನ ಇದಕ್ಕೆ ಕಾರಣ. ಆದರೆ ಅನುಭವದ ಆಧಾರದಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಶಿಖರ್ ಧವನ್ ಆಡುವ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆರಂಭಿಕ ಜೋಡಿಯಾಗಿ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಕಣಕ್ಕಿಳಿಯಲಿದ್ದಾರೆ.

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಆಟಗಾರರು ಯಾರು ಎಂಬ ಪ್ರಶ್ನೆಗೆ ಉತ್ತರ ಕಠಿಣವಿಲ್ಲ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದರಲ್ಲಿ ಅನುಮಾನವಿಲ್ಲ. ವಿರಾಟ್ ಕೊಹ್ಲಿ ದಕ್ಷಿಣ ಆಪ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಏಕದಿನ ಸರಣಿಯಲ್ಲಿಯೂ ಈ ಫಾರ್ಮ್ ಮುಂದುವರಿಸುವ ವಿಶ್ವಾಸವಿದೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್ ಅವಕಾಶ ಪಡೆಯಲಿದ್ದಾರೆ. ಸೂರ್ಯಕುಮಾರ್ ಯಾದವ್ ಕೂಡ ಸಿಕ್ಕ ಅವಕಾಶದಲ್ಲಿ ಅದ್ಭುತ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದು ಹರಿಣಗಳ ನಾಡಿನಲ್ಲಿಯೂ ಅವಕಾಶ ಪಡೆಯಲಿದ್ದಾರೆ. ಇನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಶ್ರೇಯಸ್ ಐಯ್ಯರ್ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಟೆಸ್ಟ್ ಮಾದರಿಯಲ್ಲಿ ಕಣಕ್ಕಿಳಿದ ಐಯ್ಯರ್ ಅದ್ಭುತ ಆರಂಭವನ್ನು ಪಡೆದುಕೊಂಡಿದ್ದಾರೆ. ಆದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಂಡದ ಪ್ರಮುಖ ಭಾಗವಾಗಿರುವ ಐಯ್ಯರ್ ಮತ್ತೆ ತಂಡದ ಪರ ಮಿಂಚಲು ಕಾತರರಾಗಿದ್ದಾರೆ.

ವಿಕೆಟ್ ಕೀಪರ್ ಹಾಗೂ ಆಲ್‌ರೌಂಡರ್

ವಿಕೆಟ್ ಕೀಪರ್ ಹಾಗೂ ಆಲ್‌ರೌಂಡರ್

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರೆ. ಇತ್ತಿಚೆಗೆ ನಡೆದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಪಂತ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಇದರಿಂದಾಗಿ ಪಂತ್ ಆತ್ಮ ವಿಶ್ವಾಸ ಮತ್ತಷ್ಟು ಹೆಚ್ಚಾಗಿರುವುದರಲ್ಲಿ ಅನುಮಾನವಿಲ್ಲ. ಇದೇ ಫಾರ್ಮ್ ಮುಂದುವರಿಸುವ ವಿಶ್ವಾಸವಿದೆ. ಇನ್ನು ಬ್ಯಾಟಿಂಗ್ ಆಲ್‌ರೌಂಡರ್ ಆಗಿ ವೆಂಕಟೇಶ್ ಐಯ್ಯರ್ ಸ್ಥಾನ ಪಡೆಯುವ ಸಾಧ್ಯತೆಯಿದೆ. ಇನ್ನು ಬೌಲಿಂಗ್ ಆಲ್‌ರೌಂಡರ್ ಆಗಿ ಶಾರ್ದೂಲ್ ಠಾಕೂರ್ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗ

ಇನ್ನು ಬೌಲಿಂಗ್ ವಿಭಾಗಲ್ಲಿ ಸ್ಪಿನ್ನರ್ ಆಗಿ ಯುಜುವೇಂದ್ರ ಚಾಹಲ್ ಅವಕಾಶ ಪಡೆಯುವ ಸಾಧ್ಯತೆಯಿದೆ. ಇತ್ತಿಚೆಗೆ ಸೀಮಿತ ಓವರ್‌ಗ ಕ್ರಿಕೆಟ್‌ನಲ್ಲಿ ಮಿಂಚಿರುವ ಆರ್ ಅಶ್ವಿನ್ ಕೂಡ ಈ ಸ್ಥಾನಕ್ಕೆ ಪ್ರಬಲ ಪೈಪೋಟಿ ನೀಡಲಿದ್ದಾರೆ. ಆದರೆ ಆರ್ ಅಶ್ವಿನ್ ಸುದೀರ್ಘ ಕಾಲದಿಂದ ಏಕದಿನ ಕ್ರಿಕೆಟ್ ಆಡದಿರುವ ಕಾರಣ ಚಾಹಲ್‌ಗೆ ಮೊದಲ ಪ್ರಾಶಸ್ತ್ಯ ದೊರೆಯುವ ಸಾಧ್ಯತೆಯಿದೆ. ಚಾಹಲ್ ಕಳೆದ ಜುಲೈ ತಿಂಗಳಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮಿಂಚಿದ್ದರು. ಇನ್ನು ವೇಗಿಗಳಾದ ಜಸ್ಪ್ರಿತ್ ಬೂಮ್ರಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಕಣಕ್ಕಿಳಿಯುವ ಸಾಧ್ಯತೆಯಿದೆ.

ಟೀಮ್ ಇಂಡಿಯಾ ಆಡುವ ಬಳಗ

ಟೀಮ್ ಇಂಡಿಯಾ ಆಡುವ ಬಳಗ

ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್(ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಐಯ್ಯರ್, ರಿಷಭ್ ಪಂತ್, ವೆಂಕಟೇಶ್ ಐಯ್ಯರ್, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್

For Quick Alerts
ALLOW NOTIFICATIONS
For Daily Alerts
Story first published: Monday, January 17, 2022, 15:09 [IST]
Other articles published on Jan 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X