IND vs SA 2022: ಈ ವಿಚಾರಗಳಲ್ಲಿ ಸುಧಾರಣೆ ಕಾಣದಿದ್ದರೆ ಎರಡನೇ ಪಂದ್ಯದಲ್ಲೂ ಭಾರತಕ್ಕೆ ಸೋಲು ಖಚಿತ

ಲಕ್ನೋದಲ್ಲಿ ನಡೆದ ಮಳೆ-ಬಾಧಿತ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಒಂಬತ್ತು ರನ್‌ಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತು. ಟಾಸ್ ಸೋತ ನಂತರ ಮೊದಲು ಬೌಲಿಂಗ್ ಮಾಡಿದ ಭಾರತೀಯ ಬೌಲರ್‌ಗಳು 23ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಬವನ್ನು 4 ವಿಕೆಟ್‌ಗೆ 110 ರನ್‌ಗಳಿಗೆ ನಿರ್ಬಂಧಿಸುವ ಉತ್ತಮ ಕೆಲಸ ಮಾಡಿದರು.

ಆದರೂ, ಹೆನ್ರಿಕ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅಜೇಯ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ 40 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 249 ರನ್ ಗಳಿಸಿದರು.

ಬೂಮ್ರಾಗೆ ಈತನೇ ಸೂಕ್ತ ಬದಲಿ ಆಟಗಾರ: ಆಸಿಸ್ ನೆಲದಲ್ಲಿ ಮಿಂಚಬಲ್ಲ ವೇಗಿಯನ್ನು ಹೆಸರಿಸಿದ ರವಿ ಶಾಸ್ತ್ರಿಬೂಮ್ರಾಗೆ ಈತನೇ ಸೂಕ್ತ ಬದಲಿ ಆಟಗಾರ: ಆಸಿಸ್ ನೆಲದಲ್ಲಿ ಮಿಂಚಬಲ್ಲ ವೇಗಿಯನ್ನು ಹೆಸರಿಸಿದ ರವಿ ಶಾಸ್ತ್ರಿ

250 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ, ಶುಭಮನ್ ಗಿಲ್ ಮತ್ತು ನಾಯಕ ಶಿಖರ್ ಧವನ್ ಅವರನ್ನು ಬೇಗನೆ ಕಳೆದುಕೊಂಡಿತು. ರುತುರಾಜ್ ಗಾಯಕ್ವಾಡ್ (42 ಎಸೆತಗಳಲ್ಲಿ 19) ಮತ್ತು ಇಶಾನ್ ಕಿಶನ್ (37 ಎಸೆತಗಳಲ್ಲಿ 20) ನಿಧಾನಗತಿಯ ಬ್ಯಾಟಿಂಗ್ ಟೀಂ ಇಂಡಿಯಾ ಮೇಲಿನ ಒತ್ತಡವನ್ನು ಹೆಚ್ಚಿಸಿತು. ಅವರು ಔಟಾದ ನಂತರ, ಸಂಜು ಸ್ಯಾಮ್ಸನ್ (63 ಎಸೆತಗಳಲ್ಲಿ 86*) ಮತ್ತು ಶ್ರೇಯಸ್ ಅಯ್ಯರ್ (37 ಎಸೆತಗಳಲ್ಲಿ 50) ಉತ್ತಮ ಆಟದ ಹೊರತಾಗಿಯೂ ಭಾರತ 9 ರನ್‌ಗಳ ಸೋಲನುಭವಿಸಿತು.

ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಹಿನ್ನಡೆಯಲ್ಲಿದ್ದು, ಭಾನುವಾರ, ಅಕ್ಟೋಬರ್ 9 ರಂದು ರಾಂಚಿಯಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲೇಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಎರಡನೇ ಪಂದ್ಯದಲ್ಲಿ ಮೂರು ವಿಚಾರಗಳಲ್ಲಿ ಸುಧಾರಿಸಬೇಕಿದೆ.

ಟೀಂ ಇಂಡಿಯಾಕ್ಕೆ ಬೇಕು ಹೆಚ್ಚುವರಿ ಬೌಲರ್

ಟೀಂ ಇಂಡಿಯಾಕ್ಕೆ ಬೇಕು ಹೆಚ್ಚುವರಿ ಬೌಲರ್

ತಂಡದಲ್ಲಿ ಶಹಬಾಜ್ ಅಹ್ಮದ್ ಮತ್ತು ದೀಪಕ್ ಚಾಹರ್ ಅವರಂತಹವರು ಇದ್ದರೂ, ಟೀಮ್ ಇಂಡಿಯಾ ಕೇವಲ ಐದು ಬೌಲಿಂಗ್ ಆಯ್ಕೆಗಳೊಂದಿಗೆ ಮೊದಲನೇ ಏಕದಿನ ಪಂದ್ಯವನ್ನಾಡಿದರು. ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಮಾತ್ರ ತಮ್ಮ ಎಂಟು ಓವರ್‌ಗಳಿಂದ 2/35 ಅಂಕಗಳೊಂದಿಗೆ ತಂಡದ ಅತ್ಯುತ್ತಮ ಬೌಲರ್ ಆಗಿದ್ದರು.

ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (1/39) ಕೂಡ ಆರ್ಥಿಕವಾಗಿ ಮಿಂಚಿದರು. ಆದಾಗ್ಯೂ, ಇತರ ಮೂವರು ಬೌಲರ್‌ಗಳಾದ ಮೊಹಮ್ಮದ್ ಸಿರಾಜ್ (0/49), ಅವೇಶ್ ಖಾನ್ (0/51) ಮತ್ತು ರವಿ ಬಿಷ್ಣೋಯ್ (1/69) ಉತ್ತಮ ಬೌಲಿಂಗ್ ಪ್ರದರ್ಶನ ನೀಡಲಿಲ್ಲ. ಟೀಮ್ ಇಂಡಿಯಾಗೆ ಬೇರೆ ಯಾವುದೇ ಬೌಲಿಂಗ್ ಆಯ್ಕೆಗಳಿಲ್ಲದ ಕಾರಣ, ಇವರನ್ನೇ ಕೊನೆಯವರೆಗೂ ಬೌಲಿಂಗ್ ಮಾಡಿಸಲಾಯಿತು.

ಭಾರತ ಎರಡನೇ ಪಂದ್ಯದಲ್ಲಿ ಹೆಚ್ಚುವರಿ ಬೌಲರ್ ಹೊಂದುವ ಬಗ್ಗೆ ಚಿಂತಿಸಬೇಕಿದೆ. ಕೇವಲ 5 ಬೌಲಿಂಗ್ ಆಯ್ಕೆಯೊಂದಿಗೆ ಆಡುವುದು ಈ ಸಮಯದಲ್ಲಿ ಪ್ರಯೋಜನಕ್ಕೆ ಬಾರದು, ನೀವು 6-7 ಬೌಲಿಂಗ್ ಆಯ್ಕೆಗಳನ್ನು ಹೊಂದಿರಬೇಕು ಎಂದು ವಾಸಿಂ ಜಾಫರ್ ಹೇಳಿದ್ದಾರೆ.

ಮತ್ತೊಮ್ಮೆ ಎಡವಿದ ವಿಂಡೀಸ್: 2ನೇ ಟಿ20 ಪಂದ್ಯದಲ್ಲಿಯೂ ಗೆದ್ದು ಬೀಗಿದ ಆಸ್ಟ್ರೇಲಿಯಾ

ಟೀಂ ಇಂಡಿಯಾ ಬ್ಯಾಟಿಂಗ್ ಶಕ್ತಿ ಹೆಚ್ಚಿಸಿಕೊಳ್ಳಬೇಕು

ಟೀಂ ಇಂಡಿಯಾ ಬ್ಯಾಟಿಂಗ್ ಶಕ್ತಿ ಹೆಚ್ಚಿಸಿಕೊಳ್ಳಬೇಕು

ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವಲ್ಲಿ ಎಡವಿದ್ದು ಸೋಲಿಗೆ ಒಂದು ಕಾರಣವಾಯಿತು. ಸಂಜು ಸ್ಯಾಮ್ಸನ್ ಅತ್ಯುತ್ತಮವಾಗಿ ಆಡಿದರೂ, ಶಾರ್ದೂಲ್ ಠಾಕೂರ್ ಔಟಾದ ನಂತರ ಸ್ಯಾಮ್ಸನ್‌ಗೆ ಯಾರೂ ಸರಿಯಾದ ಬೆಂಬಲ ನೀಡದ ಕಾರಣ ಭಾರತ ಸೋಲನುಭವಿಸಿತು.

ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ದೀಪಕ್ ಚಹಾರ್, ಶಹಬಾಜ್ ಅಥವಾ ಇಬ್ಬರನ್ನು ಕರೆತರುವ ಬಗ್ಗೆ ಯೋಚಿಸಬೇಕಾಗಿದೆ. ಅವರ ಉಪಸ್ಥಿತಿಯು ಆತಿಥೇಯರಿಗೆ ಹೆಚ್ಚುವರಿ ಬೌಲಿಂಗ್ ಆಯ್ಕೆಗಳನ್ನು ನೀಡುವುದಲ್ಲದೆ, ಬ್ಯಾಟಿಂಗ್‌ನಲ್ಲೂ ಸಹಾಯ ಮಾಡಲಿದೆ.

ಫೀಲ್ಡಿಂಗ್‌ನಲ್ಲಿ ಸುಧಾರಣೆಯಾಗಬೇಕು

ಫೀಲ್ಡಿಂಗ್‌ನಲ್ಲಿ ಸುಧಾರಣೆಯಾಗಬೇಕು

ಫೀಲ್ಡಿಂಗ್‌ನಲ್ಲಿ ಟೀಂ ಇಂಡಿಯಾ ಸಾಕಷ್ಟು ಸುಧಾರಣೆಯಾಗಬೇಕಾಗಿದೆ. ಪ್ರಸ್ತುತ ಪೀಳಿಗೆಯ ಅತ್ಯುತ್ತಮ ಫೀಲ್ಡರ್ ರವೀಂದ್ರ ಜಡೇಜಾ ಅನುಪಸ್ಥಿತಿ ಸ್ಪಷ್ಟವಾಗಿ ಕಾಡುತ್ತಿದೆ. ಪಾಕಿಸ್ತಾನದ ವಿರುದ್ಧ ಭಾರತದ ಸೂಪರ್ 4 ಪಂದ್ಯದಲ್ಲಿ ಅರ್ಶ್‌ದೀಪ್‌ ಸಿಂಗ್ ಆಸಿಫ್ ಅಲಿ ನೀಡಿದ ಕ್ಯಾಚ್ ಕೈಬಿಟ್ಟಿದ್ದರು.

ಭಾರತ ಇತ್ತೀಚೆಗೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು ಗೆದ್ದಿದ್ದರೂ, ಅವರ ಫೀಲ್ಡಿಂಗ್ ಪ್ರಯತ್ನ ಉತ್ತಮವಾಗಿರಲಿಲ್ಲ. ಪ್ರತಿಯೊಂದು ಪಂದ್ಯದಲ್ಲೂ ಅವರು ಕಳಪೆ ಫೀಲ್ಡಿಂಗ್ ಮಾಡಿದ್ದರು. ಮೊದಲನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಮೂರು ಕ್ಯಾಚ್‌ಗಳನ್ನು ಕೈಬಿಟ್ಟರು.

ಗಿಲ್ ಒಂಬತ್ತನೇ ಓವರ್‌ನಲ್ಲಿ ಜನೆಮನ್ ಮಲಾನ್ ನೀಡಿದ ಕ್ಯಾಚ್ ಬಿಟ್ಟರೆ. ಗಾಯಕ್ವಾಡ್ 37 ನೇ ಓವರ್‌ನಲ್ಲಿ ಮಿಲ್ಲರ್‌ ನೀಡಿದ ಅವಕಾಶ ಕೈ ಚೆಲ್ಲಿದರು. ಕ್ಲಾಸೆನ್ ನೀಡಿದ ಕ್ಯಾಚ್‌ಅನ್ನು ಹಿಡಿಯಲು ಸಿರಾಜ್ ವಿಫಲರಾದರು. ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್ ಜೊತೆಗೆ ಫಿಲ್ಡಿಂಗ್‌ ಬಗ್ಗೆ ಕೂಡ ಹೆಚ್ಚಿನ ಗಮನ ನೀಡಬೇಕಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, October 7, 2022, 22:06 [IST]
Other articles published on Oct 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X