ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA ODI: ಟೀಂ ಇಂಡಿಯಾಗೆ ಆಯ್ಕೆಯಾದ ಈ ಮುಕೇಶ್ ಕುಮಾರ್ ಯಾರು?

Mukesh kumar

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಈಗಾಗಲೇ ಟೀಂ ಇಂಡಿಯಾ ಸ್ಕ್ವಾಡ್ ಘೋಷಣೆಯಾಗಿದ್ದು, ಶಿಖರ್ ಧವನ್ ನಾಯಕತ್ವದಲ್ಲಿ ಮುನ್ನಡೆಯಲಿರುವ ಭಾರತ ತಂಡಕ್ಕೆ ಇಬ್ಬರು ಹೊಸ ಆಟಗಾರರು ಸೇರ್ಪಡೆಗೊಂಡಿದ್ದಾರೆ.

ಒಬ್ಬರು ಮಧ್ಯಪ್ರದೇಶದ ಬ್ಯಾಟ್ಸ್‌ಮನ್, ಆರ್‌ಸಿಬಿ ಪ್ಲೇಯರ್ ರಜತ್ ಪಾಟೀಧಾರ್ ಮತ್ತು ಇನ್ನೊಬ್ಬರು ಬಂಗಾಳದ ವೇಗದ ಬೌಲರ್ ಮುಖೇಶ್ ಕುಮಾರ್. ಈ ವಾರದಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಇವರಿಬ್ಬರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಈ ಇಬ್ಬರು ಆಟಗಾರರಿಗೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಪರ ಆಡುವ ಅವಕಾಶ ಲಭಿಸಿದೆ.

ದೇಶೀಯ ಕ್ರಿಕೆಟ್‌ನ ಸ್ಟಾರ್ ಪ್ಲೇಯರ್‌ಗಳಾದ ಪಾಟೀದಾರ್ ಮತ್ತು ಮುಕೇಶ್

ದೇಶೀಯ ಕ್ರಿಕೆಟ್‌ನ ಸ್ಟಾರ್ ಪ್ಲೇಯರ್‌ಗಳಾದ ಪಾಟೀದಾರ್ ಮತ್ತು ಮುಕೇಶ್

ನ್ಯೂಜಿಲೆಂಡ್ ಎ ವಿರುದ್ಧದ ಸರಣಿಯಲ್ಲಿ ಮಿಂಚಿದ್ದ ಮುಕೇಶ್ ಕುಮಾರ್ ಮೂಲತಃ ಬಂಗಾಳದವರು. ಇರಾನಿ ಟ್ರೋಫಿಯಲ್ಲೂ ಮಿಂಚಿದ್ದ ಮುಕೇಶ್‌ಗೆ ಟೀಂ ಇಂಡಿಯಾ ಪರ ಆಡುವ ಬಾಗಿಲು ತೆರೆದಿದೆ. ಇನ್ನು ರಣಜಿ ಟ್ರೋಫಿ ಫೈನಲ್‌ನಲ್ಲಿ ಹಾಗೂ ನ್ಯೂಜಿಲೆಂಡ್ ಎ ವಿರುದ್ಧದ ಸರಣಿಯಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದ ರಜತ್ ಪಾಟೀದಾರ್ ಶತಕ ಸಿಡಿಸಿ ಮಿಂಚಿದ್ದರು.

ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ಇಬ್ಬರು ಯುವ ಬ್ಯಾಟರ್‌ಗಳು ಭಾರತ ಪರ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಲು ಕಾತುರರಾಗಿದ್ದಾರೆ.

ಬೆಂಗಾಲ್ ತಂಡದ ಸ್ಟಾರ್ ಆಟಗಾರ ಮುಕೇಶ್ ಕುಮಾರ್

ಬೆಂಗಾಲ್ ತಂಡದ ಸ್ಟಾರ್ ಆಟಗಾರ ಮುಕೇಶ್ ಕುಮಾರ್

ರಜತ್ ಪಾಟೀದಾರ್ ಬಗ್ಗೆ ನಿಮಗೆಲ್ಲಾ ತಿಳಿದಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಮಿಂಚಿದ್ದ ರಜತ್ ಕಳೆದ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಜೇಯ ಶತಕ (112*) ಸಿಡಿಸಿದ್ದರು. ಆದ್ರೆ ಮುಕೇಶ್ ಕುಮಾರ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ.

ಮುಖೇಶ್ ಕುಮಾರ್ ಬಂಗಾಳದ ಬಲಗೈ ವೇಗದ ಬೌಲರ್ ಅಗಿದ್ದಾರೆ. ಪ್ರಸ್ತುತ, ಆಟಗಾರ ಇರಾನಿ ಟ್ರೋಫಿಯಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಆಡುತ್ತಿದ್ದಾರೆ. ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಮುಖೇಶ್ ಮೊದಲ ಇನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು. ಮುಖೇಶ್ ಅವರ ಪ್ರದರ್ಶನವು ಸೌರಾಷ್ಟ್ರವನ್ನು ಮೊದಲ ದಿನದಲ್ಲಿ ಕೇವಲ 98 ರನ್‌ಗಳಿಗೆ ರೆಸ್ಟ್ ಆಫ್ ಇಂಡಿಯಾ ಆಲೌಟ್ ಮಾಡಲು ಮಾಡಲು ಸಹಾಯ ಮಾಡಿತು. ಜೊತೆಗೆ, ಕಳೆದ ತಿಂಗಳು ನ್ಯೂಜಿಲೆಂಡ್ ಎ ವಿರುದ್ಧದ ಅನಧಿಕೃತ ಟೆಸ್ಟ್ ಸರಣಿಯಲ್ಲೂ ಮುಖೇಶ್ ಅದ್ಭುತ ಪ್ರದರ್ಶನ ನೀಡಿದ್ದರು.

360 ಡಿಗ್ರಿ ಹೋಗ್ಲಿ, 180 ಡಿಗ್ರಿ ಶಾಟ್ಸ್ ಆದ್ರೂ ಹೊಡೀರಿ: ಪಾಕ್ ತಂಡದ ವಿರುದ್ಧ ವಾಸಿಂ ಅಕ್ರಂ ಗರಂ

2015ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ

2015ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ

ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳ ಪರ ಆಡುತ್ತಿರುವ ಮುಕೇಶ್ ಕುಮಾರ್, 2015 ರಲ್ಲಿ ರೋಟಕ್‌ನಲ್ಲಿ ಹರಿಯಾಣ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.

ಮುಕೇಶ್ 2016 ರಲ್ಲಿ ಗುಜರಾತ್ ವಿರುದ್ಧ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಡಿಸೆಂಬರ್ 2015 ರಲ್ಲಿ ಉತ್ತರ ಪ್ರದೇಶ ವಿರುದ್ಧ ಲಿಸ್ಟ್ ಎ ಚೊಚ್ಚಲ ಪಂದ್ಯವನ್ನು ಆಡಿದರು. ಮುಕೇಶ್ ಇದುವರೆಗೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 18 ಪಂದ್ಯಗಳಿಂದ 5.17 ಎಕಾನಮಿ ದರದಲ್ಲಿ 17 ವಿಕೆಟ್ ಪಡೆದಿದ್ದಾರೆ.

ವಿಶ್ವದ ಅಗ್ರ 5 ಟಿ20 ಆಟಗಾರರಲ್ಲಿ ಭಾರತದ ಈತನಿಗೆ ಅಗ್ರಸ್ಥಾನ ನೀಡಿದ ಆ್ಯಡಮ್ ಗಿಲ್‌ಕ್ರಿಸ್ಟ್‌

ಮುಕೇಶ್ ಕುಮಾರ್ ಟಿ20 ವೃತ್ತಿಜೀವನ

ಮುಕೇಶ್ ಕುಮಾರ್ ಟಿ20 ವೃತ್ತಿಜೀವನ

ಮುಕೇಶ್ ಕುಮಾರ್ ತಮ್ಮ ಟಿ20 ವೃತ್ತಿಜೀವನದಲ್ಲಿ ಇದುವರೆಗೆ 17 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 19 ವಿಕೆಟ್‌ಗಳನ್ನು 7.25 ಎಕಾನಮಿ ರೇಟ್‌ನಲ್ಲಿ ಪಡೆದಿದ್ದಾರೆ. ಸ್ಟಾರ್ ಪ್ಲೇಯರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರಭಾವಶಾಲಿ ಪ್ರದರ್ಶನ ನೀಡಿದ್ದಾರೆ. ಮುಖೇಶ್ ಇದುವರೆಗೆ 30 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದು, 109 ವಿಕೆಟ್ ಪಡೆದಿದ್ದಾರೆ. ಇದು ಸರಾಸರಿ 22.75 ರಲ್ಲಿ 2.75 ರ ಅದ್ಭುತ ಎಕಾನಮಿ ಹೊಂದಿದೆ.

ಕಳೆದ ತಿಂಗಳು ನ್ಯೂಜಿಲೆಂಡ್ ಎ ವಿರುದ್ಧದ ಮೂರು ಅನಧಿಕೃತ ನಾಲ್ಕು ದಿನಗಳ ಪಂದ್ಯಗಳಲ್ಲಿ ಈ ವೇಗಿ 9 ವಿಕೆಟ್‌ಗಳನ್ನು ಪಡೆದಿದ್ದರು. ಕಳೆದ ಋತುವಿನ ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಅಗ್ರ ವಿಕೆಟ್ ಪಡೆದವರಲ್ಲಿ ಮುಖೇಶ್ ಕೂಡ ಒಬ್ಬರು. ವೇಗಿ ಒಂಬತ್ತು ಇನ್ನಿಂಗ್ಸ್‌ಗಳಿಂದ 20 ವಿಕೆಟ್ ಪಡೆದರು.

ICC T20 Ranking: ನಂಬರ್ 1 ಸ್ಥಾನಕ್ಕೇರಲು ಸಿದ್ಧವಾದ ಸೂರ್ಯಕುಮಾರ್ ಯಾದವ್

ಏಕದಿನ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್

ಏಕದಿನ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್

ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ (ಉಪನಾಯಕ), ರಜತ್ ಪಾಟಿಧರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಕೇಶ್ ಕುಮಾರ್, ಆವೇಶ್‌ ಖಾನ್, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಹಾರ್.

Story first published: Monday, October 3, 2022, 15:09 [IST]
Other articles published on Oct 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X