
ಹಾರ್ದಿಕ್ ಪಾಂಡ್ಯರನ್ನು ರವಿಶಾಸ್ತ್ರಿ ಆಯ್ಕೆ ಮಾಡಿದ್ದಾರೆ
ಈಗ ರವಿಶಾಸ್ತ್ರಿ ಆಯ್ಕೆ ಮಾಡಿರುವ ಭಾರತದ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಅವರನ್ನು ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾಗಿ ಆಯ್ಕೆ ಮಾಡಿದ್ದಾರೆ. ಆದರೆ ಐಪಿಎಲ್ನಲ್ಲಿ ಆರ್ಸಿಬಿ ಪರ ಮಿಂಚಿದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ಗೆ ರವಿಶಾಸ್ತ್ರಿಯ ತಂಡದಲ್ಲಿ ಅವಕಾಶ ನೀಡಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರಲ್ಲಿ ಗುಜರಾತ್ ಟೈಟನ್ಸ್ (ಜಿಟಿ) ತಂಡಕ್ಕಾಗಿ ಅದ್ಭುತ ಪ್ರದರ್ಶನ ನೀಡಿದ ನಂತರ ಭಾರತೀಯ ತಂಡಕ್ಕೆ ಪುನರಾಗಮನ ಮಾಡಿದ ಹಾರ್ದಿಕ್ ಪಾಂಡ್ಯರನ್ನು ರವಿಶಾಸ್ತ್ರಿ ಆಯ್ಕೆ ಮಾಡಿದ್ದಾರೆ.

ರಾಹುಲ್, ರುತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭ
ಭಾರತ ತಂಡದ ಮ್ಯಾನೇಜ್ಮೆಂಟ್ ಮೊದಲು ಈ ಆಟಗಾರರಿಗೆ ಮನ್ನಣೆ ನೀಡುತ್ತಾರೆ ಎಂದು ನಾನು ಭಾವಿಸಿದ್ದೇನೆಂದು ರವಿಶಾಸ್ತ್ರಿ ತಿಳಿಸಿದ್ದು, ಕೆಎಲ್ ರಾಹುಲ್, ರುತುರಾಜ್ ಗಾಯಕ್ವಾಡ್ ಬಹುಶಃ ಇವರು ಇನ್ನಿಂಗ್ಸ್ ಆರಂಭಿಸುತ್ತಾರೆ. ಈ ಆಟದಲ್ಲಿ ಇಶಾನ್ ಕಿಶನ್ಗೆ ವಿರಾಮ ನೀಡುತ್ತಾರೆ ಅಥವಾ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ ಎಂದು ಮಾಜಿ ಕೋಚ್ ರವಿಶಾಸ್ತ್ರಿ ಸ್ಟಾರ್ ಸ್ಪೋರ್ಟ್ಸ್ ಶೋ 'ಗೇಮ್ ಪ್ಲಾನ್'ನಲ್ಲಿ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.
"ನೀವು ಇಶಾನ್ ಕಿಶನ್ರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ, 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, 5ನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಮತ್ತು 6ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುತ್ತಾರೆ," ಎಂದು ರವಿಶಾಸ್ತ್ರಿ ಅಂದಾಜಿಸಿದ್ದಾರೆ.

ಅರ್ಶ್ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಆಯ್ಕೆಯಲ್ಲಿ ದ್ವಂದ್ವ
ಬೌಲಿಂಗ್ ವಿಭಾಗದಲ್ಲಿ ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ ಮತ್ತು ಯುಜ್ವೇಂದ್ರ ಚಹಾಲ್ ಅವರು ರವಿಶಾಸ್ತ್ರಿ ರಚಿತ ತಂಡದ ಖಚಿತ ಬೌಲರ್ಗಳಾಗಿದ್ದಾರೆ. ಆದರೆ ಐಪಿಎಲ್ 2022ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅರ್ಶ್ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಅವರ ಆಯ್ಕೆಯ ಬಗ್ಗೆ ದ್ವಂದ್ವದಲ್ಲಿರುವ ರವಿಶಾಸ್ತ್ರಿ ಎರಡು ಹೆಸರನ್ನು ಒಂದು ಸ್ಥಾನಕ್ಕೆ ಸೂಚಿಸಿದ್ದಾರೆ.
7ನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಆಡುತ್ತಾರೆ, ಎಂಟನೇ ಕ್ರಮಾಂಕದಲ್ಲಿ ಭುವನೇಶ್ವರ್ ಕುಮಾರ್ ಬ್ಯಾಟಿಂಗ್ ಮಾಡಿದರೆ, ನಂತರ ಯುಜ್ವೇಂದ್ರ ಚಹಾಲ್, ಹರ್ಷಲ್ ಪಟೇಲ್ ಆನಂತರ ಅರ್ಶ್ದೀಪ್ ಸಿಂಗ್/ ಉಮ್ರಾನ್ ಮಲಿಕ್ ಮೈದಾನ ಮತ್ತು ಪಿಚ್ ಹೇಗಿದೆ ಎಂಬುದನ್ನು ಅವಲಂಬಿಸಿ ಕಣಕ್ಕಿಳಿರುತ್ತಾರೆ ಎಂದು ರವಿಶಾಸ್ತ್ರಿ ಹೆಸರಿಸಿದ್ದಾರೆ.

ರವಿಶಾಸ್ತ್ರಿ ಆಡುವ ಹನ್ನೊಂದರ ಬಳಗ ಹೀಗಿದೆ
"ಭುವನೇಶ್ವರ್ ಕುಮಾರ್ ಆಡಿದರೆ ಉಮ್ರಾನ್ ಮಲಿಕ್ ಉತ್ತಮ ಎಂದು ನಾನು ಭಾವಿಸುತ್ತೇನೆ. ಭುವಿ ಡೆತ್ ಓವರ್ನಲ್ಲಿ ತಂಡಕ್ಕಾಗಿ ಕೆಲಸ ಮಾಡಬಹುದು. ಮತ್ತೆ ನೀವು ಸ್ಲಾಗ್ ಓವರ್ನಲ್ಲಿ ಹರ್ಷಲ್ ಪಟೇಲ್ ಖಂಡಿತ ತಂಡಕ್ಕೆ ನೆರವಾಗಲಿದ್ದಾರೆ," ಎಂದು ಮಾಜಿ ಕೋಚ್ ಅಂದಾಜಿಸಿದ್ದಾರೆ.
ಇದೇ ವೇಳೆ ರವಿಶಾಸ್ತ್ರಿ ಅವರು ತಮ್ಮ ಮೊದಲ ಟಿ20 ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ವೆಂಕಟೇಶ್ ಅಯ್ಯರ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಹೊರಗಿಟ್ಟಿದ್ದಾರೆ.
ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್/ ಉಮ್ರಾನ್ ಮಲಿಕ್, ಹರ್ಷಲ್ ಪಟೇಲ್.