ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಋತುರಾಜ್‌ಗೆ ಮತ್ತೊಂದು ಅವಕಾಶ ನೀಡಿ: 3ನೇ ಪಂದ್ಯಕ್ಕೆ 2 ಬದಲಾವಣೆ ಸೂಚಿಸಿದ ಆರ್‌ಸಿಬಿ ಕೋಚ್

Ind vs SA: RCB Coach Sanjay Bangar suggests 2 changes in Team India for 3rd T20I match

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ನಿರಾಸೆ ಅನುಭವಿಸಿದೆ. ಎರಡು ಪಂದ್ಯಗಳಲ್ಲಿ ಎರಡನ್ನು ಕೂಡ ಸೋತಿರುವ ಕಾರಣ ಈಗ ಭಾರತ ತಂಡದ ಮೇಲೆ ಒತ್ತಡ ಹೆಚ್ಚಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ ಮುಂದಿನ ಮೂರು ಪಂದ್ಯಗಳನ್ನು ಕೂಡ ಗೆಲ್ಲಬೇಕಾದ ಒತ್ತಡ ಭಾರತ ತಂಡದ ಮೇಲಿದೆ. ಹೀಗಾಗಿ ಈ ಮಹತ್ವದ ಪಂದ್ಯಗಳಲ್ಲಿ ಭಾರತ ತಂಡ ಯಾವ ರೀತಿಯ ಬದಲಾವಣೆಗಳು ಮಾಡಬೇಕು ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ.

ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಹಾಲಿ ಆರ್‌ಸಿಬಿ ತಂಡದ ಕೋಚ್ ಸಂಜಯ್ ಬಂಗಾರ್ ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿಯೂ ವೈಫಲ್ಯ ಅನುಭವಿಸಿರುವ ಯುವ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಬಗ್ಗೆ ಭರವಸೆ ವ್ಯಕ್ತಪಡಿಸಿರುವ ಬಂಗಾರ್ ತಂಡದಲ್ಲಿ ಎರಡು ಬದಲಾವಣೆಗಳು ಅಗತ್ಯ ಎಂದಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 10 ವರ್ಷಗಳ ಬಳಿಕ ಈ ವಿಶೇಷ ದಾಖಲೆ ಮಾಡಿದ ಭುವನೇಶ್ವರ್ ಕುಮಾರ್ಟಿ20 ಕ್ರಿಕೆಟ್‌ನಲ್ಲಿ 10 ವರ್ಷಗಳ ಬಳಿಕ ಈ ವಿಶೇಷ ದಾಖಲೆ ಮಾಡಿದ ಭುವನೇಶ್ವರ್ ಕುಮಾರ್

ಹಾಗಾದರೆ ಬಂಗಾರ್ ಹೇಳಿದ ಆ ಎರಡು ಬದಲಾವಣೆಗಳು ಯಾವುದು? ಗಾಯಕ್ವಾಡ್‌ಗೆ ಅವಕಾಶ ಮುಂದುವರಿಸಲು ಹೇಳಿದ್ಯಾಕೆ? ಮುಂದೆ ಓದಿ..

ಋತುರಾಜ್‌ಗೆ ಮತ್ತೊಂದು ಅವಕಾಶ ನೀಡಬೇಕು

ಋತುರಾಜ್‌ಗೆ ಮತ್ತೊಂದು ಅವಕಾಶ ನೀಡಬೇಕು

ದಕ್ಷಿಣ ಆಫ್ರಿಕಾ ವಿರುದ್ಧಧ ಸರಣಿಗೆ ಮುನ್ನ ನಾಯಕನಾಗಿ ಆಯ್ಕೆಯಾಗಿದ್ದ ಕೆಎಲ್ ರಾಹುಲ್ ಗಾಯದ ಕಾರಣದಿಂದಾಗಿ ಸರಣಿಯಿಂದ ಹೊರಗುಳಿದರು. ಹೀಗಾಗಿ ಋತುರಾಜ್ ಗಾಯಕ್ವಾಡ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಅವಕಾಶ ಗಳಿಸಿಕೊಂಡರು. ಆದರೆ ಮೊದಲ ಎರಡು ಪಂದ್ಯಗಳಲ್ಲಿಯೂ ಯುವ ಆಟಗಾರನಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಹೀಗಾಗಿ ಬೇರೆ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಆದರೆ ಸಂಜಯ್ ಬಂಗಾರ್ ಗಾಯಕ್ವಾಡ್‌ಗೆ ಮತ್ತೊಂದು ಅವಕಾಶವವನ್ನು ನೀಡಬೇಕು ಎಂದಿದ್ದಾರೆ. ಆತನಲ್ಲಿ ಸಾಮರ್ಥ್ಯವಿದ್ದು ಅದಕ್ಕಾಗಿ ಅವಕಾಶ ನೀಡಬೇಕು ಎಂದಿದ್ದಾರೆ ಬಂಗಾರ್. "ಋತುರಾಜ್‌ಗೆ ಮತ್ತೊಂದು ಅವಕಾಶ ನೀಡಬೇಕು. ಆದರೂ ಅವರು ಬ್ಯಾಟಿಂಗ್ ಮಾಡುವ ಅಂತರ ನನಗೆ ಅಚ್ಚರಿ ಮೂಡಿಸಿದೆ. ಅಷ್ಟು ಅಗತ್ಯವಿದೆಯಾ? ನನ್ನ ಪ್ರಕಾರ ಆತ ಮುಂಚಿತವಾಗಿಯೇ ನಿರ್ಧರಿಸಿ ಚೆಂಡನ್ನು ಬಾರಿಸುವ ಪ್ರಯತ್ನ ಮಾಡುತ್ತಿದ್ದಾರೆ" ಎಂದಿದ್ದಾರೆ ಸಂಜಯ್ ಬಂಗಾರ್.

ಗಾಯಕ್ವಾಡ್ ಮೇಲಿದೆ ಎಲ್ಲರ ನಿರೀಕ್ಷೆ

ಗಾಯಕ್ವಾಡ್ ಮೇಲಿದೆ ಎಲ್ಲರ ನಿರೀಕ್ಷೆ

ಮುಂದುವರಿದು ಮಾತನಾಡಿದ ಸಂಜಯ್ ಬಂಗಾರ್ "ದೊಡ್ಡ ಹೆಚ್ಚು ಮುಂದಿಟ್ಟು ಆಕ್ರಮಣಕಾರಿ ಆಟವಾಡಲು ಸಾಧ್ಯವಿಲ್ಲ. ಯಾಕೆಂದರೆ ನಿಮ್ಮ ಹೆಚ್ಚಿನ ಭಾರ ಹಿಂಗಾಲಿನ ಮೇಲಿರುತ್ತದೆ. ಹಾಗಾಗಿ ಆತ ಪಾಯಿಂಟ್ ಕಡೆಗೆ ತಳ್ಳುತ್ತಿದ್ದಾರೆ. ಋತುರಾಜ್ ಗಾಯಕ್ವಾಡ್ ಮೇಲೆ ಭಾರತೀಯ ತಂಡದಲ್ಲಿ ಭಾರು ದೊಡ್ಡ ನಿರೀಕ್ಷೆಯಿದೆ. ಆತನನ್ನು ಭವಿಷ್ಯದ ಅಗ್ರಕ್ರಮಾಂಕದ ಆಟಗಾರ ಎಂಬ ನಂಬಿಕೆಯಿದೆ. ಹಾಗಾಗಿ ಈ ಸರಣಿಯಲ್ಲಿ ಆತನ ಬ್ಯಾಟಿಂಗ್‌ಅನ್ನು ದುರ್ಬೀನ್ ಇಟ್ಟು ನೋಡುತ್ತಾರೆ" ಎಂದಿದ್ದಾರೆ ಸಂಜಯ್ ಬಂಗಾರ್.

ಪುಟಿನ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಬ್ರಿಟನ್ ! | *Defence | OneIndia Kannada
ಭಾರತದ ಪರ ಋತು ನೀಡಿಲ್ಲ ಭರವಸೆಯ ಪ್ರದರ್ಶನ

ಭಾರತದ ಪರ ಋತು ನೀಡಿಲ್ಲ ಭರವಸೆಯ ಪ್ರದರ್ಶನ

ಇನ್ನು ಐಪಿಎಲ್‌ನಲ್ಲಿ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಕಳೆದ ಎರಡು ಆವೃತ್ತಿಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ಋತುರಾಜ್ ಗಾಯಕ್ವಾಡ್ ಭಾರತ ಕ್ರಿಕೆಟ್ ತಂಡದ ಪರವಾಗಿ ಸಿಕ್ಕ ಅವಕಾಶದಲ್ಲಿ ಮಿಂಚಲು ವಿಫಲವಾಗಿದ್ದಾರೆ. ಈವರೆಗೆ ಐದು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತದ ಪರವಾಗಿ ಆಡುವ ಅವಕಾಶ ಪಡೆದುಕೊಂಡಿರುವ ಋತು ಗಳಿಸಿದ್ದು 63 ರನ್ ಮಾತ್ರ. ಇದಕ್ಕಾಗಿ ಅವರು ಎದುರಸಿಇದ್ದು 55 ಎಸೆತ. ಅವರ ಸರಾಸರಿ 12.60 ಇದ್ದರೆ ಸ್ಟ್ರೈಕ್‌ರೇಟ್ 114.55 ಆಗಿದೆ. ಕೇವಲ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಮಾತ್ರವೇ ಬಂದಿದೆ. ಹೀಗಾಗಿ ಋತುರಾಜ್ ಗಾಯಕ್ವಾಡ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವ ಅನಿವಾರ್ಯತೆಯಿದೆ.

ಎರಡು ಬದಲಾವಣೆ ಮಾಡಲಿ ಎಂದ ಸಂಜಯ್

ಎರಡು ಬದಲಾವಣೆ ಮಾಡಲಿ ಎಂದ ಸಂಜಯ್

ಇನ್ನು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲು ಅವಕಾಶವಿದೆ ಎಂದಿದ್ದಾರೆ ಸಂಜಯ್ ಬಂಗಾರ್. ಅಕ್ಷರ್ ಪಟೇಲ್ ದುಬಾರಿಯಾಗುತ್ತಿರುವ ಕಾರಣ ಯುವ ಸ್ಪಿನ್ನರ್ ರವಿ ಬಿಷ್ಣೋಯ್‌ಗೆ ಅವಕಾಶ ನೀಡಬೇಕು ಎಂದ ಬಂಗಾರ್ ವೇಗದ ಬೌಲಿಂಗ್‌ನಲ್ಲಿಯೂ ಒಂದು ಬದಲಾವಣೆಗೆ ಸೂಚಿದಿದ್ದಾರೆ. ಮೊದಲ ಆರು ಓವರ್‌ಗಳ ಪವರ್‌ಪ್ಲೇನಲ್ಲಿ ಹೆಚ್ಚಿನ ಅವಕಾಶಗಳು ಇರುವ ಕಾರಣ ಡೆತ್ ಓವರ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಬೌಲರ್ ಸೇರ್ಪಡೆಗೊಳಿಸುವ ಅಗತ್ಯವಿದೆ ಎಂದಿದ್ದಾರೆ ಸಂಜಯ್ ಬಂಗಾರ್. ಹಾಗಾಗಿ ಆವೇಶ್ ಖಾನ್ ಬದಲಿಗೆ ಅರ್ಷ್‌ದೀಪ್ ಸಿಂಗ್‌ ಅವರನ್ನು ಆಡುವ ಬಳಗದಲ್ಲಿ ಸೇರ್ಪಡೆಗೊಳಿಸಬೇಕು ಎಂದಿದ್ದಾರೆ.

Story first published: Monday, June 13, 2022, 16:06 [IST]
Other articles published on Jun 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X