ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಸೆಂಚುರಿಯನ್ ಅಂಗಳದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ವಿಶ್ವದ ಗ್ರೇಟೆಸ್ಟ್ ವಿಕೆಟ್ ಕೀಪರ್ಗಳಲ್ಲಿ ಒಬ್ಬಾತ ಮಹೇಂದ್ರ ಸಿಂಗ್ ಧೋನಿಯ ದಾಖಲೆಯನ್ನ ಮುರಿದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 100 ವಿಕೆಟ್ ಬಲಿ ಪಡೆದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ಸಾಧನೆ ಮಾಡಿದ್ದಾರೆ. ರಿಷಭ್ ಪಂತ್ 26 ಪಂದ್ಯಗಳಲ್ಲಿ ವಿಕೆಟ್ ಹಿಂಬದಿ 100 ವಿಕೆಟ್ ಬಲಿ ಪಡೆದಿದ್ದು, ಇದೇ ಸಾಧನೆ ಮಾಡಲು ಧೋನಿ ಮತ್ತು ವೃದ್ದಿಮಾನ್ ಸಾಹಾ 36 ಪಂದ್ಯಗಳನ್ನ ತೆಗೆದುಕೊಂಡಿದ್ದಾರೆ.
IND vs SA 1st Test: ದಕ್ಷಿಣ ಆಫ್ರಿಕಾ 197ರನ್ಗಳಿಗೆ ಆಲೌಟ್, ಭಾರತಕ್ಕೆ 146ರನ್ಗಳ ಮುನ್ನಡೆ
ದಕ್ಷಿಣ ಆಫ್ರಿಕಾದ ಮೊದಲ ಇನ್ನಿಂಗ್ಸ್ ಕಣಕ್ಕಿಳಿದಾಗ ನಾಲ್ವರು ಬ್ಯಾಟ್ಸ್ಮನ್ಗಳು ಪಂತ್ ಕೈಗೆ ಕ್ಯಾಚಿತ್ತರು. ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ನಾಯಕ ಡೀನ್ ಎಲ್ಗರ್ ವಿಕೆಟ್ ಕೀಪರ್ ರಿಷಭ್ ಪಂತ್ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ರೆ, ಟೆಂಬಾ ಬವುಮಾ, ವಿಯಾನ್ ಮುಲ್ಡರ್, ಕಗಿಸೊ ರಬಾಡ ರಿಷಭ್ ಪಂತ್ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಬಿಟ್ರು.
ಈ ಮೂಲಕ ರಿಷಭ್ ಪಂತ್ ಅತ್ಯಂತ ಕಡಿಮೆ ಪಂದ್ಯದಲ್ಲಿ 100 ವಿಕೆಟ್ ಬಲಿ ಪಡೆದ ಸಾಧನೆ ತಮ್ಮದಾಗಿಸಿಕೊಂಡ್ರು.
ಭಾರತ ಪರ ವೇಗವಾಗಿ 100 ವಿಕೆಟ್ ಪಡೆದ ವಿಕೆಟ್ ಕೀಪರ್ಸ್
26 ರಿಷಭ್ ಪಂತ್
36 ಎಂ.ಎಸ್ ಧೋನಿ/ವೃದ್ದಿಮಾನ್ ಸಾಹಾ
39 ಕಿರಣ್ ಮೊರೆ
41 ಎನ್ ಮೊಂಗ್ಯಾ
42 ಎಸ್, ಕಿರ್ಮಾನಿ