ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೂಗಿನಲ್ಲಿ ರಕ್ತ ಸೋರುತ್ತಿದ್ರೂ, ಟೀಂ ಇಂಡಿಯಾವನ್ನ ಮುನ್ನಡೆಸಿದ ರೋಹಿತ್ ಶರ್ಮಾ!

Rohit sharma

ಗುವಾಹಟಿಯಲ್ಲಿ ದಕ್ಷಿಣ ಆಫ್ರಿಕಾವನ್ನು 16 ರನ್‌ಗಳಿಂದ ಸೋಲಿಸಿದ ಟೀಮ್ ಇಂಡಿಯಾ 3 ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೆ ಸರಣಿ ಜಯಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 237ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ವಿರೋಚಿತ ಹೋರಾಟ ಪ್ರದರ್ಶಿಸಿದ್ರೂ ಸಹ ಗೆಲುವಿನ ದಡ ತಲುಪಲು ಸಾಧ್ಯವಾಗಲಿಲ್ಲ. 3 ವಿಕೆಟ್ ನಷ್ಟಕ್ಕೆ 221ರನ್ ಕಲೆಹಾಕಿತು. ಡೇವಿಡ್ ಮಿಲ್ಲರ್ ಅಜೇಯ ಶತಕ ಸಿಡಿಸಿದ್ದು ವ್ಯರ್ಥವಾಯಿತು.

ಈಗ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯವು ಮಂಗಳವಾರ ಅಕ್ಟೋಬರ್ 4ರಂದು ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಏತನ್ಮಧ್ಯೆ, ಭಾರತೀಯ ನಾಯಕ ರೋಹಿತ್ ಶರ್ಮಾ ಅವರ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.. ಆ ವೀಡಿಯೋದಲ್ಲಿ ರೋಹಿತ್ ಅವರ ಮೂಗಿನಿಂದ ರಕ್ತಸ್ರಾವವನ್ನು ಕಾಣಬಹುದು.

ರೋಹಿತ್ ಶರ್ಮಾಗೆ ಏನಾಯಿತು?

ವಾಸ್ತವವಾಗಿ, ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಸಮಯದಲ್ಲಿ, ರೋಹಿತ್ ಶರ್ಮಾ ಅವರ ಮೂಗಿನಿಂದ ರಕ್ತಸ್ರಾವ ಕಂಡುಬಂದಿತು. ಹೆಚ್ಚಿನ ಶಾಖದಿಂದಾಗಿ ಇದು ಸಂಭವಿಸಿರಬಹುದು. ಸತತ ರಕ್ತಸ್ರಾವವಾಗುತ್ತಿದ್ದರೂ ಜಾಗವನ್ನ ಬಿಡದೆ ಗಟ್ಟಿಯಾಗಿ ನಿಲ್ಲುವ ಮೂಲಕ ರೋಹಿತ್ ಟೀಂ ಇಂಡಿಯಾವನ್ನ ಮುನ್ನಡೆಸಿದ್ರು.

ಮೂಗಿನಿಂದ ಸತತ ರಕ್ತ ಸೋರುತ್ತಿದ್ರೂ ಸಹ ಹಿಟ್‌ಮ್ಯಾನ್ ತನ್ನ ಮೂಗನ್ನು ಟವೆಲ್‌ನಿಂದ ಸ್ವಚ್ಛಗೊಳಿಸಿದರು . ಬೌಲರ್ ಹರ್ಷಲ್ ಪಟೇಲ್ ಮತ್ತು ಇತರ ಆಟಗಾರರಿಗೆ ಸೂಚನೆಗಳನ್ನು ನೀಡುವುದನ್ನು ಮುಂದುವರೆಸಿದನು. ರೋಹಿತ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಯಿತು. ಆದ್ರೆ ವೀಡಿಯೋ ಕಾಪಿ ರೈಟ್ಸ್ ಕಾರಣ ನಂತರದಲ್ಲಿ ಸಾಮಾಜಿಕ ಜಾಲತಾಣದಿಂದ ಡಿಲೀಟ್ ಆಗಿದೆ.

IPL 2023ರ ಸೀಸನ್‌ನಲ್ಲಿ ಚಿನ್ನಸ್ವಾಮಿ ಮೈದಾನಕ್ಕೆ ವಾಪಸ್ಸಾಗಲಿದ್ದಾರೆ ಎಬಿಡಿ! ಅಭಿಮಾನಿಗಳಿಗೆ ಗುಡ್‌ನ್ಯೂಸ್

ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದ ರೋಹಿತ್ ಶರ್ಮಾ

ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದ ರೋಹಿತ್ ಶರ್ಮಾ

ಗುವಾಹಟಿ ಟಿ20ಯಲ್ಲೂ ರೋಹಿತ್ ಶರ್ಮಾ ತಮ್ಮ ಬ್ಯಾಟ್‌ನಿಂದ ಶಕ್ತಿ ಪ್ರದರ್ಶಿಸಿದರು. ಅವರು 37 ಎಸೆತಗಳಲ್ಲಿ 43 ರನ್ ಗಳಿಸಿದರು. ಬ್ಯಾಟಿಂಗ್ ವೇಳೆ ಭಾರತ ಇನ್ನಿಂಗ್ಸ್ ನ ಎರಡನೇ ಓವರ್ ನಲ್ಲೂ ರೋಹಿತ್ ಗಾಯಗೊಂಡಿದ್ದರು. ವೇಯ್ನ್ ಪಾರ್ನೆಲ್ ಅವರ ಬೌಲಿಂಗ್‌ನಲ್ಲಿ ಚೆಂಡು ರೋಹಿತ್ ಅವರ ಬೆರಳಿಗೆ ಬಡಿದಿತು, ನಂತರ ಆಟವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು. ಫಿಸಿಯೋ ಕೂಡ ಮೈದಾನಕ್ಕೆ ಬಂದರು, ಆದರೆ ಹಿಟ್‌ಮ್ಯಾನ್ ಮೈದಾನದಿಂದ ಹೊರಬರಲಿಲ್ಲ. ಫಿಂಗರ್ ಸ್ಪ್ರೇ ಜೊತೆಗೆ, ಮಾತ್ರೆ ತೆಗದುಕೊಂಡ ನಂತರ, ಅವರು ಬ್ಯಾಟಿಂಗ್ ಮುಂದುವರಿಸಿದರು ಮತ್ತು ತಂಡಕ್ಕೆ ಉಪಯುಕ್ತ ಇನ್ನಿಂಗ್ಸ್ ಆಡಿದರು.

Ind Vs Sa T20: ಮೂರನೇ ಟಿ20 ಪಂದ್ಯದಲ್ಲಿ ಕೊಹ್ಲಿ, ರಾಹುಲ್‌ಗೆ ವಿಶ್ರಾಂತಿ, ಯಾರಿಗೆ ಸಿಗುತ್ತೆ ಅವಕಾಶ?

ರೋಹಿತ್ ಶರ್ಮಾ ವಿಶೇಷ ದಾಖಲೆ

ರೋಹಿತ್ ಶರ್ಮಾ ವಿಶೇಷ ದಾಖಲೆ

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಆರಂಭಿಕ 3 ರನ್‌ಗಳ ಮೂಲಕ ದೊಡ್ಡ ದಾಖಲೆಯೂ ಸಾಧ್ಯವಾಸಗಿದೆ. ವಾಸ್ತವವಾಗಿ, ಹಿಟ್‌ಮ್ಯಾನ್ ಒಂದು ಕ್ಯಾಲೆಂಡರ್ ವರ್ಷದಲ್ಲಿ 500 ಕ್ಕೂ ಹೆಚ್ಚು ಟಿ20 ಅಂತರಾಷ್ಟ್ರೀಯ ರನ್‌ಗಳನ್ನು ಗಳಿಸಿದ ಮೊದಲ ಭಾರತೀಯ ನಾಯಕರಾದರು. ಈ ವರ್ಷ ರೋಹಿತ್ 22 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ ಒಟ್ಟು 540 ರನ್ ಗಳಿಸಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಮೇಲೆ ಟೀಂ ಇಂಡಿಯಾ ಮತ್ತು ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ಶತಕ ಸಿಡಿಸಬಹುದು ಎಂದು ಸಹ ಅಂದಾಜಿಸಲಾಗಿದೆ. ಆದ್ರೆ ಟೀಂ ಇಂಡಿಯಾ ಪ್ರೈಮ್ ಬೌಲರ್ ಜಸ್ಪ್ರೀತ್ ಬುಮ್ರಾ ಇಂಜ್ಯುರಿಯಿಂದಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿರುವುದು ದೊಡ್ಡ ಮಟ್ಟಿನ ಹಿನ್ನಡೆಯಾಗಿದೆ. ಬದಲಿ ಆಟಗಾರನನ್ನು ಇನ್ನೂ ಘೋಷಿಸಲಾಗಿಲ್ಲ.

Story first published: Monday, October 3, 2022, 22:02 [IST]
Other articles published on Oct 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X