ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಆಟಗಾರನಿಗೆ ಟೀಮ್ ಇಂಡಿಯಾದಲ್ಲಿ ಖಂಡಿತಾ ಸ್ಥಾನವಿದೆ: ಪ್ರತಿಭಾನ್ವಿತ ಆಟಗಾರನ ಬಗ್ಗೆ ಬಂಗಾರ್ ವಿಶ್ವಾಸ

Ind vs SA: Sanjay Bangar praises Shardul thakur definitely a place for Him

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಈವರೆಗೆ ಟೆಸ್ಟ್ ಸರಣಿ ಗೆಲ್ಲಲು ವಿಫಲವಾಗಿರುವ ಭಾರತೀಯ ತಂಡ ಈ ಬಾರಿ ಆ ಕೆಟ್ಟ ದಾಖಲೆಯನ್ನು ಅಳಿಸಿಹಾಕುವ ಆತ್ಮವಿಶ್ವಾಸದಲ್ಲಿದೆ. ಹೀಗಾಗಿ ಆಡುವ ಬಳಗದ ಸಂಯೋಜನೆ ಸಾಕಷ್ಟು ಕುತೂಹಲಕಾರಿಯಾಗಿದೆ. 18 ಮಂದಿ ಆಟಗಾರರ ಸ್ಕ್ವಾಡ್‌ನಲ್ಲಿ ಅಂತಿಮ 11ರ ಬಳಗದ ಆಯ್ಕೆ ಮ್ಯಾನೇಜ್‌ಮೆಂಟ್ ಪಾಲಿಗೆ ಸವಾಲಾಗಿದ್ದರೂ ಪ್ರತಿಭಾನ್ವಿತ ಆಟಗಾರರೇ ತುಂಬಿರುವುದರಿಂದಾಗಿ ದಕ್ಷಿಣ ಆಫ್ರಿಕಾದ ಸವಾಲನ್ನು ಭಾರತ ದಿಟ್ಟವಾಗಿ ಎದುರಿಸುವ ವಿಶ್ವಾಸದಲ್ಲಿದೆ.

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಈ ಸರಣಿಯಲ್ಲಿ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಈ ಆಟಗಾರ ಖಂಡಿತವಾಗಿಯೂ ಸ್ಥಾನವನ್ನು ಪಡೆಯುತ್ತಾರೆ ಎಂಬ ವಿಶ್ವಾಸವನ್ನು ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ವ್ಯಕ್ತಪಡಿಸಿದ್ದಾರೆ. ಸಂಜಯ್ ಬಂಗಾರ್ ಹೀಗೆ ಆತ್ಮ ವಿಶ್ವಾಸದಿಂದ ಮಾತನಾಡಿದ್ದು ಶಾರ್ದೂಲ್ ಠಾಕೂರ್ ಬಗ್ಗೆ.

ಅಂದು ಸಚಿನ್‌ಗೆ ಪೆಟ್ಟಾಗಿದ್ರೆ, ನನ್ನನ್ನು ಜೀವಂತವಾಗಿ ಸುಡುತ್ತಿದ್ರು!: ಶೋಯೆಬ್ ಅಖ್ತರ್ಅಂದು ಸಚಿನ್‌ಗೆ ಪೆಟ್ಟಾಗಿದ್ರೆ, ನನ್ನನ್ನು ಜೀವಂತವಾಗಿ ಸುಡುತ್ತಿದ್ರು!: ಶೋಯೆಬ್ ಅಖ್ತರ್

ದಕ್ಷಿಣ ಆಫ್ರಿಕಾಗೆ ಟೆಸ್ಟ್ ಸರಣಿಗಾಗಿ ಪ್ರವಾಸಕೈಗೊಂಡಿರುವ ಭಾರತೀಯ ತಂಡದಲ್ಲಿರುವ 18 ಸದಸ್ಯರ ಪೈಕಿ ಆರು ವೇಗಿಗಳಿದ್ದಾರೆ. ಅದರೆ ಬ್ಯಾಟಿಂಗ್‌ನಲ್ಲಿಯೂ ಕೊಡುಗೆ ನೀಡಬಲ್ಲ ವೇಗಿ ಅಂದರೆ ಅದು ಶಾರ್ದೂಲ್ ಠಾಕೂರ್ ಮಾತ್ರ ಎಂಬುದು ಗಮನಾರ್ಹ ಸಂಗತಿ.

ಸ್ಟಾರ್‌ಸ್ಪೋರ್ಟ್ಸ್ ಜೊತೆಗೆ ಸಂವಾದದಲ್ಲಿ ಭಾಗಿಯಾಗಿದ್ದ ಸಂಜಯ್ ಬಂಗಾರ್ ಶಾರ್ದೂಲ್ ಠಾಕೂರ್ ಯಾವೆಲ್ಲಾ ಕಾರಣಗಳಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬುದನ್ನು ವಿವರಿಸಿದರು. "ಶಾರ್ದೂಲ್ ಠಾಕೂರ್ ಖಂಡಿತವಾಗಿಯೂ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯುತ್ತಾರೆ. ಕಳೆದ ಕ್ರಿಕೆಟ್ ಋತುವಿನಲ್ಲಿ ಭಾರತ ಯಾವೆಲ್ಲಾ ಪ್ರಮುಖ ಗೆಲುವಿಗಳನ್ನು ವಿದೇಶದಲ್ಲಿ ಸಾಧಿಸಿತೋ ಅದರಲ್ಲಿ ಶಾರ್ದೂಲ್ ಠಾಕೂರ್ ಅವರ ಕೊಡುಗೆ ಇತ್ತು. ಅವರು ವಿದೇಶಿ ನೆಲದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಬಲ್ಲರು. ಅಲ್ಲದೆ ವಿದೇಶಿ ಪಿಚ್‌ಗಳಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಕೊಡುಗೆ ನೀಡುವ ಆಟಗಾರರ ಅಗತ್ಯವಿರುತ್ತದೆ" ಎಂದಿದ್ದಾರೆ ಸಂಜಯ್ ಬಂಗಾರ್.

ಇನ್ನು ಶಾರ್ದೂಲ್ ಠಾಕೂರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿರುವುದನ್ನು ಬಂಗಾರ್ ವಿಶೇಷವಾಗಿ ಪ್ರಶಂಸಿಸಿದರು. "ಆತ ಆ ಸ್ಥಾನಕ್ಕೆ ಬಹಳ ಅರ್ಹವಾದ ಆಟಗಾರನಾಗಿದ್ದಾರೆ ಯಾಕೆಂದರೆ ಬ್ಯಾಟ್ ಮತ್ತು ಬೌಲಿಂಗ್‌ನಲ್ಲಿ ಆತನಿಂದ ತಂಡಕ್ಕೆ ಉತ್ತಮ ಕೊಡುಗೆ ದೊರೆಯುತ್ತದೆ. ಅವರು ಬೌಲಿಂಗ್‌ನಲ್ಲಿಯೂ ಒಂದೆರಡು ವಿಕೆ್ಟ್ಗಳನ್ನು ಪಡೆಯಬಲ್ಲ ಬೌಲರ್ ಆಗಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿಯೂ ನಾವು ಅದನ್ನು ಗಮನಿಸಿದ್ದೇವೆ" ಎಂದಿದ್ದಾರೆ ಸಂಜಯ್ ಬಂಗಾರ್.

Flashback 2021: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ 7 ಭಾರತದ ಕ್ರಿಕೆಟಿಗರುFlashback 2021: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ 7 ಭಾರತದ ಕ್ರಿಕೆಟಿಗರು

ಇನ್ನು ತಂಡದ ನಾಯಕ ವಿರಾಟ್ ಕೊಹ್ಲಿಯ ಆಲೋಚನೆಯ ಕ್ರಮದಲ್ಲಿಯೂ ಶಾರ್ದೂಲ್ ಠಾಕೂರ್ ತಂಡದಲ್ಲಿ ಸ್ಥಾನವನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ ಬಂಗಾರ್. ವಿದೇಶಿ ನೆಲದಲ್ಲಿ ವಿರಾಟ್ ಕೊಹ್ಲಿ ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್‌ನೊಂದಿಗೆ ಕಣಕ್ಕಿಳಿಯಲು ಬಯಸುತ್ತಾರೆ. ಇದು ಕೂಡ ಶಾರ್ದೂಲ್ ಠಾಕೂರ್ ಆಡುವ ಬಳಗದಲ್ಲಿ ಸೇರ್ಪಡೆಗೆ ಅವಕಾಶ ನೀಡಿದಂತಾಗುತ್ತದೆ ಎಂದಿದ್ದಾರೆ.

RCBಗೆ ನಾಯಕನನ್ನು ಆರಿಸುವುದು ಅಷ್ಟು ಸುಲಭವಲ್ಲ | Oneindia Kannada

ಇನ್ನು ಶಾರ್ದೂಲ್ ಠಾಕೂರ್ ಈವರೆಗೆ ಆಡಿದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 38ರಷ್ಟು ಉತ್ತಮ ಸರಾಸರಿಯೊಂದಿಗೆ 190 ರನ್‌ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕಗಳು ಕೂಡ ಒಳಗೊಂಡಿದೆ. ಐತಿಹಾಸಿಕ ಗಾಬಾ ಟೆಸ್ಟ್‌ನಲ್ಲಿ ಶಾರ್ದೂಲ್ ಠಾಕೂರ್ ಬಾರಿಸಿದ 67 ರನ್‌ಗಳ ಕೊಡುಗೆ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿಯೂ ಶಾರ್ದೂಲ್ ಅರ್ಧ ಶತಕ ಸಿಡಿಸಿದ್ದರು.

Story first published: Friday, December 17, 2021, 15:32 [IST]
Other articles published on Dec 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X