ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA: ಸರಣಿಯಿಂದ ಹೊರಬಿದ್ದು ತವರಿಗೆ ಪಯಣ ಬೆಳೆಸಿದ ದ. ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌

IND vs SA: South Africas batsman Aiden Markram ruled out of remainder of T20I series

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಭಾರತ ಪ್ರವಾಸವನ್ನು ಕೈಗೊಂಡು 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿದಿದೆ. ಇತ್ತಂಡಗಳ ನಡುವಿನ ಮೊದಲ 3 ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಮೊದಲೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಜಯ ಗಳಿಸಿದರೆ, ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಗೆಲುವಿನ ಖಾತೆ ತೆರೆದಿದೆ. ಈ ಮೂಲಕ ಇತ್ತಂಡಗಳ ನಡುವಿನ ಈ ಸರಣಿಯಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ 2-1 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಕೊನೆಗೂ ಟೀಂ ಇಂಡಿಯಾಗೆ ಆಯ್ಕೆಯಾದ ರಾಹುಲ್ ತ್ರಿಪಾಠಿ: ಅಭಿಮಾನಿಗಳ ಸಂಭ್ರಮಕೊನೆಗೂ ಟೀಂ ಇಂಡಿಯಾಗೆ ಆಯ್ಕೆಯಾದ ರಾಹುಲ್ ತ್ರಿಪಾಠಿ: ಅಭಿಮಾನಿಗಳ ಸಂಭ್ರಮ

ಹೀಗಾಗಿ ಇತ್ತಂಡಗಳ ನಡುವಿನ ನಾಲ್ಕನೇ ಟಿ ಟ್ವೆಂಟಿ ಪಂದ್ಯದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದ್ದು, ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುತ್ತಾ ಅಥವಾ ಟೀಮ್ ಇಂಡಿಯಾ ಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸುತ್ತಾ ಎಂಬ ಕುತೂಹಲ ಮೂಡಿದೆ.

IPL 2023: ಪ್ರಸಾರ ಹಕ್ಕು ಮಾರಾಟದಿಂದ ಪ್ರತಿ ಓವರ್‌, ಪ್ರತಿ ಬೌಲ್‌ನಿಂದ ಬಿಸಿಸಿಐ ಗಳಿಸುವ ಮೊತ್ತವೆಷ್ಟು?IPL 2023: ಪ್ರಸಾರ ಹಕ್ಕು ಮಾರಾಟದಿಂದ ಪ್ರತಿ ಓವರ್‌, ಪ್ರತಿ ಬೌಲ್‌ನಿಂದ ಬಿಸಿಸಿಐ ಗಳಿಸುವ ಮೊತ್ತವೆಷ್ಟು?

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಈ ಪಂದ್ಯ ಜೂನ್ 17ರ ಶುಕ್ರವಾರದಂದು ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೂ ಮುನ್ನವೇ ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರ ಸರಣಿಯಿಂದಲೇ ಹೊರ ಬಿದ್ದು ತವರಿಗೆ ಪಯಣ ಬೆಳೆಸಿದ್ದಾರೆ.

ಏಡನ್ ಮಾರ್ಕ್ರಮ್ ಸರಣಿಯಿಂದ ಹೊರಕ್ಕೆ

ಏಡನ್ ಮಾರ್ಕ್ರಮ್ ಸರಣಿಯಿಂದ ಹೊರಕ್ಕೆ

ಸರಣಿ ಮಧ್ಯದಲ್ಲಿಯೇ ಹೊರಬಿದ್ದಿರುವುದು ದಕ್ಷಿಣ ಆಫ್ರಿಕಾದ ಸ್ಪೋಟಕ ಆಟಗಾರ ಏಡನ್ ಮಾರ್ಕ್ರಮ್. ಕಳೆದ ವಾರ ಕೊರೋನಾವೈರಸ್ ರೋಗಕ್ಕೆ ಒಳಗಾಗಿದ್ದ ಏಡನ್ ಮಾರ್ಕ್ರಮ್ ಸರಣಿಯ ಯಾವುದೇ ಪಂದ್ಯದಲ್ಲಿಯೂ ಭಾಗವಹಿಸಿರಲಿಲ್ಲ. ಇದೀಗ ದಕ್ಷಿಣ ಆಫ್ರಿಕಾಗೆ ಮರಳಲಿರುವ ಏಡನ್ ಮಾರ್ಕ್ರಮ್ ಇನ್ನುಳಿದ 2 ಪಂದ್ಯಗಳಿಗೂ ಅಲಭ್ಯರಾಗಲಿದ್ದಾರೆ.

ವಿಶ್ರಾಂತಿಗೆಂದು ದಕ್ಷಿಣ ಆಫ್ರಿಕಾಗೆ ತೆರಳಿದ ಮಾರ್ಕ್ರಮ್

ವಿಶ್ರಾಂತಿಗೆಂದು ದಕ್ಷಿಣ ಆಫ್ರಿಕಾಗೆ ತೆರಳಿದ ಮಾರ್ಕ್ರಮ್

ಈ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಓರ್ವ ಆಟಗಾರನಿಗೆ ಕೊರೋನಾ ಸೋಂಕು ಅಂಟಿದಾಗ ಐಸೋಲೇಶನ್ ನಿಯಮ ಅನುಸರಿಸುವ ಕಾರಣ ಆತ ಮಾನಸಿಕ ಒತ್ತಡಕ್ಕೆ ಒಳಗಾಗಿರುತ್ತಾನೆ, ಹೀಗಾಗಿ ಆತನಿಗೆ ವಿಶ್ರಾಂತಿಯ ಅಗತ್ಯವಿದ್ದು, ಈ ನಿಟ್ಟಿನಿಂದ ಮನೆಗೆ ತೆರಳಲು ಅನುಮತಿ ನೀಡಲಾಗಿದೆ ಎಂದು ಹೇಳಿಕೊಂಡಿದೆ.

ಡಿಕಾಕ್ ಚೇತರಿಕೆ

ಡಿಕಾಕ್ ಚೇತರಿಕೆ

ಇನ್ನು ಪ್ರಥಮ ಟಿ ಟ್ವೆಂಟಿ ಪಂದ್ಯ ಮುಕ್ತಾಯವಾದ ನಂತರ ಗಾಯದ ಸಮಸ್ಯೆಯಿಂದಾಗಿ ದ್ವಿತೀಯ ಹಾಗೂ ತೃತೀಯ ಟಿ ಟ್ವೆಂಟಿ ಪಂದ್ಯಗಳಿಂದ ಹೊರಗುಳಿದಿದ್ದ ಕ್ವಿಂಟನ್ ಡಿ ಕಾಕ್ ಚೇತರಿಕೆ ಕಂಡಿದ್ದು, ನಾಲ್ಕನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂಬ ಮಾಹಿತಿಯನ್ನು ಕೂಡಾ ದಕ್ಷಿಣ ಆಫ್ರಿಕಾ ಕ್ರಿಕೆಟ್ ಬಿಟ್ಟುಕೊಟ್ಟಿದೆ.

ಸರಣಿಗೆ ಪ್ರಕಟವಾಗಿದ್ದ ದಕ್ಷಿಣ ಆಫ್ರಿಕಾ ಸ್ಕ್ವಾಡ್: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ಟ್ರೈಸ್‌ಟನ್ ಶಮ್ಸಿ ಮತ್ತು ಮಾರ್ಕೊ ಜಾನ್ಸೆನ್.

Story first published: Thursday, June 16, 2022, 9:56 [IST]
Other articles published on Jun 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X