IND vs SA: ಟಿ20, ಏಕದಿನ ಸರಣಿಗಾಗಿ ಭಾರತಕ್ಕೆ ಬಂದಿಳಿದ ಹರಿಣಗಳ ಪಡೆ; ಟೆಂಬಾ ಬವುಮಾ ಹೇಳಿದ್ದೇನು?

ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಏಕದಿನ ಮತ್ತು ಟಿ20 ಅಂತಾರಾಷ್ಟ್ರೀಯ ಸರಣಿಗೆ ಮುನ್ನ ಭಾರತಕ್ಕೆ ಭಾನುವಾರದಂದು ತಿರುವನಂತಪುರಕ್ಕೆ ಬಂದಿಳಿದಿದೆ.

ದಕ್ಷಿಣ ಆಫ್ರಿಕಾ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮತ್ತು ಅಷ್ಟೇ ಟಿ20 ಪಂದ್ಯಗಳನ್ನು ಆಡಲಿದೆ. ಪ್ರವಾಸವು ಸೆಪ್ಟೆಂಬರ್ 28ರಂದು ಟಿ20 ಸರಣಿಯೊಂದಿಗೆ ಪ್ರಾರಂಭವಾಗಲಿದೆ ಮತ್ತು ಅಕ್ಟೋಬರ್ 4ಕ್ಕೆ ಕೊನೆಗೊಳ್ಳಲಿದೆ.

IND-A vs NZ-A: ಕುಲದೀಪ್ ಯಾದವ್ ಹ್ಯಾಟ್ರಿಕ್ ಸಾಧನೆ; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವುIND-A vs NZ-A: ಕುಲದೀಪ್ ಯಾದವ್ ಹ್ಯಾಟ್ರಿಕ್ ಸಾಧನೆ; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಏಕದಿನ ಸರಣಿಯು ಅಕ್ಟೋಬರ್ 6ರಿಂದ ಪ್ರಾರಂಭವಾಗಿ ಅಕ್ಟೋಬರ್ 11ಕ್ಕೆ ಮುಕ್ತಾಯಗೊಳ್ಳಲಿದೆ, ನಂತರ ಎರಡೂ ತಂಡಗಳು ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಕ್ಕೆ ಪ್ರಯಾಣ ಬೆಳೆಸಲಿವೆ. ಭಾರತ ಸದ್ಯಕ್ಕೆ ಟಿ20 ಸರಣಿಗೆ ಮಾತ್ರ ತಂಡವನ್ನು ಪ್ರಕಟಿಸಿದ್ದು, ಏಕದಿನ ಪಂದ್ಯಗಳಿಗೆ ನಂತರದ ದಿನಗಳಲ್ಲಿ ಪ್ರಕಟಿಸಲಿದೆ.

ಸೆಪ್ಟೆಂಬರ್ 28ರಂದು ತಿರುವನಂತಪುರಂನಲ್ಲಿ ಮೊದಲ ಪಂದ್ಯ

ಸೆಪ್ಟೆಂಬರ್ 28ರಂದು ತಿರುವನಂತಪುರಂನಲ್ಲಿ ಮೊದಲ ಪಂದ್ಯ

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೆಪ್ಟೆಂಬರ್ 28ರಂದು ತಿರುವನಂತಪುರಂನಲ್ಲಿ ಆಡುವ ಮೂಲಕ ಪ್ರಾರಂಭವಾಗಲಿದೆ. ಎರಡನೇ ಪಂದ್ಯ ಅಕ್ಟೋಬರ್ 2ರಂದು ನಡೆಯಲಿದ್ದು ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಗುವಾಹಟಿಯಲ್ಲಿ ಈ ಪಂದ್ಯ ಆಯೋಜಿಸಲಾಗುತ್ತಿದೆ. ಮೂರನೇ ಟಿ20 ಪಂದ್ಯ ಇಂದೋರ್‌ನಲ್ಲಿ ನಡೆಯಲಿದೆ. ಏಕದಿನ ಸರಣಿಯ ಮೊದಲ ಪಂದ್ಯ ರಾಂಚಿಯಲ್ಲಿ ನಡೆದರೆ ಎರಡು ಹಾಗೂ ಮೂರನೇ ಪಂದ್ಯಗಳು ದೆಹಲಿಯಲ್ಲಿಯೇ ಆಯೋಜನೆಯಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ:

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.

ದಕ್ಷಿಣ ಆಫ್ರಿಕಾ ತಂಡವು ತಿರುವನಂತಪುರಕ್ಕೆ ಆಗಮಿಸಿದೆ

ದಕ್ಷಿಣ ಆಫ್ರಿಕಾ ತಂಡವು ತಿರುವನಂತಪುರಕ್ಕೆ ಆಗಮಿಸಿದೆ

ಭಾನುವಾರದಂದು ದಕ್ಷಿಣ ಆಫ್ರಿಕಾದ ಪುರುಷರ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯು ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯಕ್ಕಿಂತ ಮುಂಚಿತವಾಗಿ ತಂಡವು ತಿರುವನಂತಪುರಕ್ಕೆ ಆಗಮಿಸಿದೆ ಎಂದು ತಿಳಿಸುವ ಟ್ವೀಟ್ ಅನ್ನು ಪೋಸ್ಟ್ ಮಾಡಿದೆ.

ಟೆಂಬಾ ಬವುಮಾ ಮುಂಬರುವ ಪ್ರವಾಸದ ಬಗ್ಗೆ ಮಾತನಾಡುತ್ತಾ, "ಸುದೀರ್ಘ ಗಾಯದ ನಂತರ ಫಾರ್ಮ್ ಅನ್ನು ಮರಳಿ ಪಡೆಯಲು ಏಕದಿನ ಮತ್ತು ಟಿ20 ಸರಣಿಯನ್ನು ಬಳಸಿಕೊಳ್ಳುವುದಾಗಿ" ಹೇಳಿದರು.

ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಆ ಅವಕಾಶವನ್ನು ಬಳಸುತ್ತೇನೆ

ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಆ ಅವಕಾಶವನ್ನು ಬಳಸುತ್ತೇನೆ

"ನಾವು ಹುಡುಗರನ್ನು ಫಾರ್ಮ್‌ಗೆ ತರಲು ಬಯಸುತ್ತೇವೆ, ಅವರಲ್ಲಿ ಹೆಚ್ಚಿನವರು ಫಾರ್ಮ್‌ನಲ್ಲಿದ್ದಾರೆ. ಆದರೆ ನನ್ನಂತಹ ಆಟಗಾರರು, ನಾನು ಕಳೆದ ಮೂರು ತಿಂಗಳುಗಳಿಂದ ಹೊರಗುಳಿದಿದ್ದೇನೆ. ಆದ್ದರಿಂದ ಈಗ ನಾನು ಅದನ್ನು ಎದುರು ನೋಡುತ್ತಿದ್ದೇನೆ. ವೈಯಕ್ತಿಕವಾಗಿ, ನಾನು ಮೈದಾನದಲ್ಲಿ ಇರಲು ಬಯಸುತ್ತೇನೆ ಮತ್ತು ಆಟದ ಸಮಯವನ್ನು ಪಡೆಯಲು ನೋಡುತ್ತೇನೆ. ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಆ ಅವಕಾಶವನ್ನು ಬಳಸುತ್ತೇನೆ," ಎಂದರು.

"ಕಳೆದ ಕೆಲವು ತಿಂಗಳುಗಳು ಗಾಯದ ದೃಷ್ಟಿಯಿಂದ ಅತ್ಯಂತ ಕಠಿಣವಾಗಿತ್ತು ಮತ್ತು ಖಂಡಿತವಾಗಿಯೂ ನಿರಾಶಾದಾಯಕವಾಗಿತ್ತು. ನನ್ನ ಮೊಣಕೈಯಿಂದ ನಾನು ಯಾವಾಗ ಚೇತರಿಸಿಕೊಳ್ಳಲಿದ್ದೇನೆ ಎಂದು ನಿಜವಾಗಿಯೂ ತಿಳಿದಿಲ್ಲದ ಆ ಅವಧಿಯಲ್ಲಿ ಅದು ಮಾನಸಿಕವಾಗಿ ತುಂಬಾ ಕಷ್ಟಕರವಾಗಿತ್ತು," ಎಂದು ಟೆಂಬಾ ಬವುಮಾ ತಿಳಿಸಿದರು.

For Quick Alerts
ALLOW NOTIFICATIONS
For Daily Alerts
Story first published: Sunday, September 25, 2022, 20:17 [IST]
Other articles published on Sep 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X