ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ, ರಾಹುಲ್‌ಗೆ ವಿಶ್ರಾಂತಿ ನೀಡಿ ತಪ್ಪು ಮಾಡಿದಿರಿ ಎಂದ ಮಾಜಿ ಆಟಗಾರ

 Ind Vs Sa T20: Aakash Chopra Disappointed With Decision To Rest Virat Kohli And Kl Rahul

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯಕ್ಕೆ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್‌ಗೆ ವಿಶ್ರಾಂತಿ ನೀಡುವ ಟೀಮ್ ಮ್ಯಾನೇಜ್‌ಮೆಂಟ್ ನಿರ್ಧಾರದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ನಿರಾಸೆ ವ್ಯಕ್ತಪಡಿಸಿದ್ದಾರೆ.

'ಕಳೆದುಕೊಳ್ಳುವ ಧೈರ್ಯವಿದೆ': ಟಿ20 ವಿಶ್ವಕಪ್‌ನಿಂದ ಹೊರಗುಳಿದ ನಂತರ ಮೌನ ಮುರಿದ ಜಸ್ಪ್ರೀತ್ ಬುಮ್ರಾ'ಕಳೆದುಕೊಳ್ಳುವ ಧೈರ್ಯವಿದೆ': ಟಿ20 ವಿಶ್ವಕಪ್‌ನಿಂದ ಹೊರಗುಳಿದ ನಂತರ ಮೌನ ಮುರಿದ ಜಸ್ಪ್ರೀತ್ ಬುಮ್ರಾ

2022 ರ ಟಿ 20 ವಿಶ್ವಕಪ್‌ಗೆ ಮುನ್ನ ಕೊಹ್ಲಿ ಮತ್ತು ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಅಂತಿಮ ಟಿ 20 ಅಂತರರಾಷ್ಟ್ರೀಯ ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ. ಇಬ್ಬರೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ತಮ್ಮ ಫಾರ್ಮ್ ಕಂಡುಕೊಂಡಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಇಬ್ಬರೂ ಉತ್ತಮವಾಗಿ ರನ್ ಗಳಿಸುತ್ತಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಇವರು ಲಯ ಕಂಡುಕೊಂಡಿರುವುದು ಟೀಂ ಇಂಡಿಯಾ ಮಟ್ಟಿಗೆ ಸಾಕಷ್ಟು ಆತ್ಮವಿಶ್ವಾಸ ನೀಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ರಾಹುಲ್ 28 ಎಸೆತಗಳಲ್ಲಿ 57 ರನ್ ಗಳಿಸಿ 'ಪಂದ್ಯದ ಆಟಗಾರ' ಪ್ರಶಸ್ತಿಗೆ ಭಾಜನರಾದರು. ಏತನ್ಮಧ್ಯೆ, ಕೊಹ್ಲಿ 28 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿ ಭಾರತದ ಇನ್ನಿಂಗ್ಸ್ ಮುಕ್ತಾಯದ ವರೆಗೆ ತಮ್ಮ ವಿಕೆಟ್ ಉಳಿಸಿಕೊಂಡಿದ್ದರು.

ರಾಹುಲ್ ಬದಲಿಗೆ ಇನ್ನಿಂಗ್ಸ್ ಆರಂಭಿಸುವುದು ಯಾರು

ರಾಹುಲ್ ಬದಲಿಗೆ ಇನ್ನಿಂಗ್ಸ್ ಆರಂಭಿಸುವುದು ಯಾರು

ನಾಯಕ ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ರಾಹುಲ್‌ ಬದಲಿಗೆ ಈಗ ಯಾರು ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ನೋಡಬೇಕಿದೆ. ವಿರಾಟ್ ಕೊಹ್ಲಿ ಬದಲಿಗೆ ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನಪಡೆಯುವ ಸಾಧ್ಯತೆ ಇದ್ದು, ಆರಂಭಿಕರಾಗಿ ರಿಷಬ್ ಪಂತ್ ಕಣಕ್ಕಿಳಿಯುವ ಸಾಧ್ಯತೆ ಇದೆ.

ಆದಾಗ್ಯೂ, ವಿಶ್ರಾಂತಿ ಪಡೆದ ಜೋಡಿಯು ವಿಶ್ವಕಪ್‌ಗೆ ಮೊದಲು ಭಾರತದ ಅಂತಿಮ ಟಿ20 ಪಂದ್ಯವನ್ನು ಆಡಬೇಕಿತ್ತು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

T20 World Cup: ಬುಮ್ರಾ ಬದಲಿಗೆ ಸ್ಥಾನ ಪಡೆಯಲು ರೇಸ್‌ನಲ್ಲಿರುವ ಆಟಗಾರರು ಇವರು

 ಈ ಸಮಯದಲ್ಲಿ ವಿಶ್ರಾಂತಿ ಏಕೆ ನೀಡಬೇಕಿತ್ತು

ಈ ಸಮಯದಲ್ಲಿ ವಿಶ್ರಾಂತಿ ಏಕೆ ನೀಡಬೇಕಿತ್ತು

ಎಲ್ಲವೂ ಉತ್ತಮವಾಗಿ ನಡೆಯುತ್ತಿರುವಾಗ ವಿಶ್ರಾಂತಿ ಏಕೆ ಬೇಕು ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. "ಪ್ರಾಕ್ಟೀಸ್ ಮುಂದುವರಿಯುತ್ತದೆ, ಅದು ನೆಟ್ ಸೆಷನ್‌ಗಳು ಅಥವಾ ಅಭ್ಯಾಸ ಪಂದ್ಯಗಳಾಗಿರಲಿ, ಆದರೆ ಅಂತರರಾಷ್ಟ್ರೀಯ ಪಂದ್ಯ ಉಳಿದಿರುವಾಗ, ಅದನ್ನು ಯಾಕೆ ತಪ್ಪಿಸಿಕೊಳ್ಳಬೇಕು." ಎಂದು ಚೋಪ್ರಾ ಪ್ರಶ್ನಿಸಿದ್ದಾರೆ.

ಪುನರಾವರ್ತಿತ ಗಾಯದ ಸಮಸ್ಯೆಗಳಿಂದಾಗಿ ಹಲವಾರು ಪಂದ್ಯಗಳನ್ನು ಕಳೆದುಕೊಂಡ ನಂತರ ರಾಹುಲ್ ಏಷ್ಯಾಕಪ್‌ನಲ್ಲಿ ತಂಡಕ್ಕೆ ವಾಪಸಾಗಿದ್ದರು. ಜುಲೈನಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದ ನಂತರ ಕೊಹ್ಲಿಗೆ ದೀರ್ಘ ವಿರಾಮವನ್ನು ನೀಡಲಾಯಿತು. ಏಷ್ಯಾಕಪ್‌ಗೆ ಹಿಂದಿರುಗುವ ಮೊದಲು ಕೆರಿಬಿಯನ್ ಮತ್ತು ಜಿಂಬಾಬ್ವೆ ಪ್ರವಾಸಗಳಿಗಾಗಿ ಅವರು ವಿಶ್ರಾಂತಿ ಪಡೆದರು.

ಅವರಿಗೆ ಬದಲಾಗಿ ಯಾರು ಆಡುತ್ತಾರೆ?

ಅವರಿಗೆ ಬದಲಾಗಿ ಯಾರು ಆಡುತ್ತಾರೆ?

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಸದ್ಯಕ್ಕೆ ಹಾರ್ದಿಕ್‌ ಪಾಂಡ್ಯ ವಿಶ್ರಾಂತಿ ಪಡೆದಿದ್ದಾರೆ. ಅವರು 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ, ಮತ್ತು ವೇಗದ ಬೌಲಿಂಗ್ ವಿಭಾಗದಲ್ಲಿ ಭಾರತದ ಶಕ್ತಿಯಾಗಿದ್ದರು. ಈಗ ರಾಹುಲ್ ಮತ್ತು ಕೊಹ್ಲಿ ಸರಣಿಯ ಕೊನೆಯ ಪಂದ್ಯದಲ್ಲಿ ವಿಶ್ರಾಂತಿ ನೀಡಿದ್ದು, ತಂಡದ ಬ್ಯಾಟಿಂಗ್‌ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಗಾಯಗೊಂಡಿರುವ ದೀಪಕ್ ಹೂಡಾ ಬದಲಿಗೆ ತಂಡಕ್ಕೆ ಬಂದಿರುವ ಶ್ರೇಯಸ್ ಅಯ್ಯರ್ ಸಮರ್ಥ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ. ಭಾರತ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೇವಲ ಐದು ಬ್ಯಾಟರ್‌ಗಳೊಂದಿಗೆ ಸ್ಪರ್ಧೆಗೆ ಹೋಗಬೇಕಾಗುತ್ತದೆ ಎಂದು ಆಕಾಶ್ ಚೋಪ್ರಾ ಹೇಳಿದರು

ಆಲ್‌ರೌಂಡರ್ ಶಹಬಾಜ್ ಅಹ್ಮದ್‌ಗೆ ನೀಡಿ

ಆಲ್‌ರೌಂಡರ್ ಶಹಬಾಜ್ ಅಹ್ಮದ್‌ಗೆ ನೀಡಿ

"ವಿರಾಟ್ ಕೊಹ್ಲಿ ಸುದೀರ್ಘ ವಿರಾಮದ ನಂತರ ಏಷ್ಯಾಕಪ್‌ಗೆ ಬಂದರು, ಆಸ್ಟ್ರೇಲಿಯಾ ಸರಣಿಗೂ ಮೊದಲು 12 ದಿನಗಳ ವಿರಾಮವಿತ್ತು. ಈಗ ಅವರಿಗೆ ಮತ್ತೊಂದು 15 ದಿನಗಳ ವಿರಾಮ ಸಿಗಲಿದೆ."

ಶಹಬಾಜ್ ಅಹ್ಮದ್ ಈ ಪಂದ್ಯದಲ್ಲಿ ಸಮರ್ಥವಾಗಿ ಪದಾರ್ಪಣೆ ಮಾಡಬಹುದು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗಾಗಿ ಆಲ್ ರೌಂಡರ್ ನಿಯಮಿತವಾಗಿ ಕೆಳ-ಮಧ್ಯಮ ಕ್ರಮಾಂಕದಲ್ಲಿ ಪಿಂಚ್ ಹಿಟ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 4, ಮಂಗಳವಾರ ಇಂದೋರ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಎದುರಿಸಲಿದೆ.

Story first published: Tuesday, October 4, 2022, 16:10 [IST]
Other articles published on Oct 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X