ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs SA T20: ಭಾರತದ ಬ್ಯಾಟಿಂಗ್ ಏನೋ ಬಲಿಷ್ಠವಾಗಿದೆ, ಆದರೆ ಬೌಲಿಂಗ್ ಸುಧಾರಿಸುವುದು ಯಾವಾಗ?

Ind Vs SA T20: Batting Is At Its Best But Bowling Become Big Concern For Team India

ಗುವಾಹಟಿಯ ಬರ್ಸಾಪುರ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 16 ರನ್‌ಗಳ ಜಯ ಸಾಧಿಸಿದೆ. ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ತವರಿನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಸರಣಿಯನ್ನು ಗೆದ್ದ ಸಾಧನೆ ಮಾಡಿದೆ.

ಭಾರತ ತಂಡದ ಬ್ಯಾಟಿಂಗ್ ಅತ್ಯುತ್ತಮವಾಗಿದೆ, ಎಲ್ಲಾ ಬ್ಯಾಟರ್ ಗಳು ಅದ್ಭುತ ಪ್ರದರ್ಶನ ನೀಡಿದ್ದರಿಂದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 237 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

T20 World Cup: ಜಸ್ಪ್ರೀತ್ ಬುಮ್ರಾ ಲಭ್ಯವಿಲ್ಲದಿದ್ದರೆ ಭಾರತ ಈತನನ್ನು ಸೇರಿಸಿಕೊಳ್ಳಬೇಕು; ಶೇನ್ ವ್ಯಾಟ್ಸನ್T20 World Cup: ಜಸ್ಪ್ರೀತ್ ಬುಮ್ರಾ ಲಭ್ಯವಿಲ್ಲದಿದ್ದರೆ ಭಾರತ ಈತನನ್ನು ಸೇರಿಸಿಕೊಳ್ಳಬೇಕು; ಶೇನ್ ವ್ಯಾಟ್ಸನ್

237 ರನ್ ಗಳಿಸಿದರೂ ಭಾರತ ತಂಡ ಒಂದು ಹಂತದಲ್ಲಿ ಆತಂಕಕ್ಕೆ ಒಳಗಾಗಬೇಕಾಯಿತು. ಆರಂಭದಲ್ಲೇ ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ನಂತರ ಕಂ ಬ್ಯಾಕ್ ಮಾಡಿತು.

ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ಮಾಡಿ ಶತಕ ಗಳಿಸಿದರು ಮತ್ತು ಕ್ವಿಂಟರ್ ಡಿ ಕಾಕ್ ಕೂಡ ಅಂತಿಮ ಓವರ್ ಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಅಂತಿಮವಾಗಿ 3 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿದ ದಕ್ಷಿಣ ಆಫ್ರಿಕಾ 16 ರನ್‌ಗಳ ಅಂತರದಿಂದ ಸೋತರು.

ಟೀಂ ಇಂಡಿಯಾ ಉತ್ತಮ ಬ್ಯಾಟಿಂಗ್

ಟೀಂ ಇಂಡಿಯಾ ಉತ್ತಮ ಬ್ಯಾಟಿಂಗ್

ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ, ಕೆಎಲ್ ರಾಹುಲ್ (57) ಮತ್ತು ರೋಹಿತ್ ಶರ್ಮಾ (43) ಮೊದಲ ವಿಕೆಟ್‌ಗೆ 96 ರನ್ ಗಳಿಸುವ ಉತ್ತಮ ಅಡಿಪಾಯ ಹಾಕಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ 22 ಎಸೆತಗಳಲ್ಲಿ 61 ರನ್ ಗಳಿಸುವ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ವಿರಾಟ್ ಕೊಹ್ಲಿ (49*) ಕೂಡ ಉತ್ತಮ ರನ್ ಗಳಿಸಿದರು.

ಅಂತಿಮ ಓವರ್ ನಲ್ಲಿ ಬ್ಯಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್ ಅಜೇಯ 17 ರನ್ ಗಳಿಸಿದರು. ಭಾರತ ಅಂತಿಮವಾಗಿ 3 ವಿಕೆಟ್ ಕಳೆದುಕೊಂಡು 237 ರನ್ ಕಲೆಹಾಕಿತು.

ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ

ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ

ದೀಪಕ್ ಚಾಹರ್ ಮೊದಲನೇ ಓವರ್‌ನಲ್ಲಿ ಮೇಡನ್ ಬೌಲಿಂಗ್ ಮಾಡುವ ಮೂಲಕ ಭಾರತಕ್ಕೆ ಉತ್ತಮ ಆರಂಭ ನೀಡಿದರು. ಅರ್ಶ್‌ದೀಪ್ ಸಿಂಗ್ ಎರಡನೇ ಓವರ್‌ನಲ್ಲಿ ರಿಲೀ ರೊಸ್ಸೌ ಮತ್ತು ಬವುಮಾ ಅವರನ್ನು ಡಕ್‌ ಔಟ್ ಮಾಡಿ ದಕ್ಷಿಣ ಆಫ್ರಿಕಾಗೆ ಶಾಕ್ ನೀಡಿದರು.

ಆರಂಭದಲ್ಲಿ ಭಾರತದ ಬೌಲಿಂಗ್ ದಾಳಿಯನ್ನು ನೋಡಿ ಭಾರತ ಸುಲಭವಾಗಿ ಪಂದ್ಯವನ್ನು ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆರಂಭಿಕ ಆಘಾತದಿಂದ ಚೇತರಿಸಿಕೊಂಡ ದಕ್ಷಿಣ ಆಫ್ರಿಕಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿತು.

ಅಂತಿಮ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟ ಟೀಂ ಇಂಡಿಯಾ

ಅಂತಿಮ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟ ಟೀಂ ಇಂಡಿಯಾ

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಮಿಂಚಿದರೂ ಬೌಲರ್‌ಗಳು ನಿರಾಸೆ ಮೂಡಿಸಿದ್ದಾರೆ. ಮೊದಲ ಆರು ಓವರ್‌ಗಳು ಪವರ್ ಪ್ಲೇನಲ್ಲಿ ದಕ್ಷಿಣ ಆಫ್ರಿಕಾ 2 ವಿಕೆಟ್ ಕಳೆದುಕೊಂಡು 45 ರನ್ ಗಳಿಸಲಷ್ಟೇ ಶಕ್ತವಾಯಿತು.

ನಂತರದ 14 ಓವರ್ ಗಳಲ್ಲಿ ದಕ್ಷಿಣ ಆಫ್ರಿಕಾ 176 ರನ್ ಗಳಿಸಿತು. ಪವರ್ ಪ್ಲೇನಲ್ಲಿ ಉತ್ತಮ ಬೌಲಿಂಗ್ ಮಾಡಿದರೂ, ನಂತರ ಅದನ್ನು ಮುಂದುವರೆಸುವಲ್ಲಿ ಭಾರತದ ಬೌಲರ್‌ಗಳು ವಿಫಲರಾದರು. ಅದರಲ್ಲೂ ಕೊನೆಯ ನಾಲ್ಕು ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ 78 ರನ್ ಕಲೆಹಾಕಿತು. ಭಾರತದ ಅಂತಿಮ ಓವರ್ ಗಳ ಚಿಂತೆ ಮತ್ತೆ ಶುರುವಾಗಿದೆ.

ಹೆಚ್ಚು ರನ್ ಬಿಟ್ಟುಕೊಟ್ಟ ಅರ್ಶ್‌ದೀಪ್, ಅಕ್ಷರ್, ಹರ್ಷಲ್‌

ಹೆಚ್ಚು ರನ್ ಬಿಟ್ಟುಕೊಟ್ಟ ಅರ್ಶ್‌ದೀಪ್, ಅಕ್ಷರ್, ಹರ್ಷಲ್‌

ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಪಡೆದ ಅರ್ಶ್‌ದೀಪ್ ಸಿಂಗ್ ಪವರ್‍‌ ಪ್ಲೇನಲ್ಲಿ ತಮ್ಮ ಎರಡು ಓವರ್‌ನಲ್ಲಿ 16 ರನ್ ಬಿಟ್ಟುಕೊಟ್ಟರು, ಮೊದಲ ಎರಡು ಓವರ್ ಗಳಲ್ಲಿ 21 ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಪಡೆದ ಅರ್ಶ್‌ದೀಪ್ ನಂತರ ಕೊನೆಯ ಎರಡು ಓವರ್‌ಗಳಲ್ಲಿ 41 ರನ್ ಬಿಟ್ಟುಕೊಟ್ಟು ದುಬಾರಿಯಾದರು.

ಡೇವಿಡ್ ಮಿಲ್ಲರ್ ಅಜೇಯ 106 ರನ್ ಮತ್ತು ಕ್ವಿಂಟನ್ ಡಿ ಕಾಕ್ ಅಜೇಯ 69 ರನ್ ಗಳಿಸಿ ನಾಲ್ಕನೇ ವಿಕೆಟ್‌ಗೆ ದಾಖಲೆಯ 174 ರನ್‌ಗಳ ಮುರಿಯದ ಜೊತೆಯಾಟವನ್ನು ನಡೆಸಿದರು. ಆದರೂ ದಕ್ಷಿಣ ಆಫ್ರಿಕಾ 16 ರನ್‌ಗಳ ಅಂತರದಲ್ಲಿ ಸೋಲನುಭವಿಸಿತು.

ಹರ್ಷಲ್ ಪಟೇಲ್ ಕೂಡ 4 ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆಯದೆ 45 ರನ್ ಬಿಟ್ಟುಕೊಟ್ಟರು. ಅಕ್ಷರ್ ಪಟೇಲ್ 4 ಓವರ್‌ಗಳಲ್ಲಿ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೂ, ಅಂತಿಮವಾಗಿ 53 ರನ್ ಬಿಟ್ಟುಕೊಟ್ಟರು. ಕಡಿಮೆ ಸ್ಕೋರ್ ಪಂದ್ಯಗಳಲ್ಲಿ ಇದೇ ರೀತಿ ಬೌಲಿಂಗ್ ಮಾಡಿದರೆ ಹೇಗೆ ಎನ್ನುವ ಚಿಂತೆ ಈಗ ಭಾರತವನ್ನು ಕಾಡಲು ಶುರುವಾಗಿದೆ.

Story first published: Monday, October 3, 2022, 14:45 [IST]
Other articles published on Oct 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X