ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs SA T20: ಕ್ರೀಸ್‌ನಲ್ಲೇ ಇರು ಎಂದು ಟ್ರಿಸ್ಟಾನ್ ಸ್ಟಬ್ಸ್‌ಗೆ ವಾರ್ನ್‌ ಮಾಡಿದ ದೀಪಕ್ ಚಾಹರ್

 Ind Vs SA T20: Deepak Chahar Warned Tristan Stubbs To Stay On His Crease In 3rd T20I

ಭಾರತದ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ ಇಂಗ್ಲೆಂಡ್‌ನ ಚಾರ್ಲಿ ಡೀನ್‌ರನ್ನು ಲಾರ್ಡ್ಸ್‌ ಅಂಗಳದಲ್ಲಿ ನಾನ್‌ ಸ್ಟ್ರೈಕರ್ ಎಂಡ್‌ನಲ್ಲಿ ರನೌಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಅದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಲೇ ಇರುವಾಗಲೇ, ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಸ್ವಾರಸ್ಯಕರ ಘಟನೆ ನಡೆದಿದೆ.

ದೀಪಕ್ ಚಹಾರ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ನಡುವೆ ಇದೇ ರೀತಿಯ ಘಟನೆ ಸಂಭವಿಸಿದೆ. ಇದು 16 ಓವರ್‌ಗಳ ಪ್ರಾರಂಭದಲ್ಲಿ ಸಂಭವಿಸಿತು, ದೀಪಕ್ ಚಹಾರ್ ಬೌಲಿಂಗ್ ಮಾಡಲು ಓಡುತ್ತಿದ್ದರು ಆದರೆ ಅವರು ತಮ್ಮ ರನ್-ಅಪ್‌ನಲ್ಲಿ ನಿಲ್ಲಿಸಿದರು ಮತ್ತು ಸ್ಟಬ್ಸ್‌ಗೆ ತಮ್ಮ ಕ್ರೀಸ್‌ನಲ್ಲಿ ಉಳಿಯಲು ಎಚ್ಚರಿಕೆ ನೀಡಿದರು.

ಲೆಜೆಂಡ್ಸ್‌ ಲೀಗ್: ಯೂಸುಫ್ ಮತ್ತು ಮಿಚೆಲ್ ಜಾನ್ಸನ್ ನಡುವೆ ಕಿರಿಕ್, ಪಠಾಣ್‌ರನ್ನ ನೂಕಿದ ಜಾನ್ಸನ್!ಲೆಜೆಂಡ್ಸ್‌ ಲೀಗ್: ಯೂಸುಫ್ ಮತ್ತು ಮಿಚೆಲ್ ಜಾನ್ಸನ್ ನಡುವೆ ಕಿರಿಕ್, ಪಠಾಣ್‌ರನ್ನ ನೂಕಿದ ಜಾನ್ಸನ್!

ಸ್ಟಬ್ಸ್‌ ಆಗಲೇ ಕ್ರೀಸ್‌ನಿಂದ ದೂರವಿದ್ದರು, ದೀಪಕ್ ಚಾಹರ್ ಮನಸ್ಸು ಮಾಡಿದ್ದರೆ ಸುಲಭವಾಗಿ ರನೌಟ್ ಮಾಡಬಹುದಾಗಿತ್ತು. ಆದರೆ, ದೀಪಕ್ ಚಾಹರ್ ರನೌಟ್ ಮಾಡಲು ಮುಂದಾಗಲಿಲ್ಲ, ಬದಲಾಗಿ ಸ್ಟಬ್ಸ್‌ಗೆ ಎಚ್ಚರಿಕೆ ನೀಡಿದರು. ಈ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಕೆಲವರು ದೀಪಕ್ ಚಾಹರ್ ಕ್ರೀಡಾಸ್ಫೂರ್ತಿ ಮೆರೆದರು ಎಂದು ಹೇಳಿದ್ದರೆ, ಮತ್ತೆ ಕೆಲವರು ರನೌಟ್ ಮಾಡಿದ್ದರೆ ಏನು ತಪ್ಪಿಲ್ಲ ಎಂದು ಹೇಳಿದ್ದಾರೆ.

 Ind Vs SA T20: Deepak Chahar Warned Tristan Stubbs To Stay On His Crease In 3rd T20I

ಬೃಹತ್ ಮೊತ್ತ ಕಲೆ ಹಾಕಿದ ದಕ್ಷಿಣ ಆಫ್ರಿಕಾ

ಇಂದೋರ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ 3ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು ಆದರೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಸಣ್ಣ ಮೈದಾನದಲ್ಲಿ ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು.

ಕ್ವಿಂಟನ್ ಡಿ ಕಾಕ್ 43 ಎಸೆತಗಳಲ್ಲಿ 68 ರನ್ ಗಳಿಸಿ ಮಿಂಚಿದರೆ, ರಿಲೀ ರೊಸೊವ್ ಭರ್ಜರಿ ಶತಕ ಗಳಿಸಿ ಮಿಂಚಿದರು. 48 ಎಸೆತಗಳಲ್ಲಿ 7 ಬೌಂಡರಿ 8 ಸಿಕ್ಸರ್ ಸಹಿತ ಅಜೇಯ 100 ರನ್ ಗಳಿಸಿದರು. 5 ಬಾಲ್‌ಗಳಲ್ಲಿ ಡೇವಿಡ್ ಮಿಲ್ಲರ್ 19 ರನ್ ಗಳಿಸಿದ್ದರಿಂದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 227 ರನ್ ಗಳಿಸಿತು.

ದಕ್ಷಿಣ ಆಫ್ರಿಕಾ, ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್ , ಉಮೇಶ್ ಯಾದವ್,

ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಿಯನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎಂಗಿಡಿ, ಡ್ವೈನ್ ಪ್ರಿಟೋರಿಯಸ್,

Story first published: Tuesday, October 4, 2022, 21:53 [IST]
Other articles published on Oct 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X