ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA T20: ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ಶರ್ಮಾ ಗಳಿಸಿರುವ ಶತಕ, ಅರ್ಧಶತಕ, ರನ್, ವಿಕೆಟ್‌ ಅಂಕಿ ಅಂಶ

Ind vs SA T20: Rohit Sharma Stats Against South Africa: Total Runs, Century, Wickets And More

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತವರಿನಲ್ಲಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. ಬುಧವಾರ (ಸೆಪ್ಟೆಂಬರ್ 28) ತಿರುವನಂತಪುರಂನಲ್ಲಿ 1 ನೇ ಟಿ20 ಪಂದ್ಯದೊಂದಿಗೆ ಸರಣಿ ಆರಂಭವಾಗಲಿದ್ದು, ಉಳಿದ ಎರಡು ಪಂದ್ಯಗಳು ಗುವಾಹಟಿ (ಅಕ್ಟೋಬರ್ 2) ಮತ್ತು ಇಂದೋರ್ (ಅಕ್ಟೋಬರ್ 4) ನಲ್ಲಿ ನಡೆಯಲಿವೆ.

India vs Pakistan: ಈ ಸ್ಥಳದಲ್ಲಿ ಭಾರತ vs ಪಾಕಿಸ್ತಾನ ಟೆಸ್ಟ್ ಪಂದ್ಯ?; ವಿವರಗಳು ಇಲ್ಲಿವೆIndia vs Pakistan: ಈ ಸ್ಥಳದಲ್ಲಿ ಭಾರತ vs ಪಾಕಿಸ್ತಾನ ಟೆಸ್ಟ್ ಪಂದ್ಯ?; ವಿವರಗಳು ಇಲ್ಲಿವೆ

ಟಿ20 ಸ್ವರೂಪದಲ್ಲಿ ರೋಹಿತ್ ಶರ್ಮಾ ಇತ್ತೀಚಿನ ಪ್ರದರ್ಶನಗಳನ್ನು ನೋಡಿದರೆ, ಅವರು ಯುಎಇಯಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ನಾಲ್ಕು ಪಂದ್ಯಗಳಲ್ಲಿ 33.25 ರ ಸರಾಸರಿಯಲ್ಲಿ ಮತ್ತು 151.14 ರ ಸ್ಟ್ರೈಕ್ ರೇಟ್‌ನಲ್ಲಿ 133 ರನ್ ಗಳಿಸಿದರು. ಶ್ರೀಲಂಕಾ ವಿರುದ್ಧ ದುಬೈನಲ್ಲಿ ನಡೆದ ಸೂಪರ್ 4 ಪಂದ್ಯದಲ್ಲೊ 41 ಎಸೆತಗಳಲ್ಲಿ 72 ರನ್ ಗಳಿಸಿದರು. ಲಂಕಾ ಆಟಗಾರರು 174 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕಾರಣ ಭಾರತ ಪಂದ್ಯದಲ್ಲಿ ಸೋಲನುಭವಿಸಿತು.

ಇತ್ತೀಚೆಗಷ್ಟೇ ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 8 ಓವರ್‌ಗಳಲ್ಲಿ 91 ರನ್ ಬೆನ್ನಟ್ಟಿದ ರೋಹಿತ್ 20 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

 ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ಉತ್ತಮ ಪ್ರದರ್ಶನ

ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ಉತ್ತಮ ಪ್ರದರ್ಶನ

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯು ವಿಶ್ವಕಪ್‌ಗೆ ಮೊದಲು ಭಾರತ ತಂಡಕ್ಕೆ ಕೊನೆಯ ಟಿ20 ಸರಣಿಯಾಗಿರಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಲು ರೋಹಿತ್ ಶರ್ಮಾ ಸಜ್ಜಾಗಿದ್ದಾರೆ.

ರೋಹಿತ್ ಇದುವರೆಗೆ ದಕ್ಷಿಣ ಆಫ್ರಿಕಾ ವಿರುದ್ಧ 13 ಟಿ20 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 32.90 ಸರಾಸರಿಯಲ್ಲಿ 134.07 ಸ್ಟ್ರೈಕ್ ರೇಟ್‌ನಲ್ಲಿ 362 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಅರ್ಧಶತಕಗಳನ್ನು ಗಳಿಸಿರುವ ರೋಹಿತ್ ಶರ್ಮಾ, ಒಂದು ಶತಕ ಗಳಿಸಿದ್ದಾರೆ.

Ind Vs SA T20: ಇಂದಿನ ಪಂದ್ಯದಲ್ಲಿ ಈತ ಆಡಿದರೆ ಭಾರತದ ಬೌಲಿಂಗ್ ಸಮಸ್ಯೆಗೆ ಪರಿಹಾರ: ವಾಸಿಂ ಜಾಫರ್

ದಕ್ಷಿಣ ಆಫ್ರಿಕಾ ವಿರುದ್ಧ ಶತಕ

ದಕ್ಷಿಣ ಆಫ್ರಿಕಾ ವಿರುದ್ಧ ಶತಕ

ಅಕ್ಟೋಬರ್ 2015 ರಲ್ಲಿ ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ಶರ್ಮಾ ಶತಕ ಗಳಿಸಿದರು, ಅವರು ಕೇವಲ 66 ಎಸೆತಗಳಲ್ಲಿ 106 ರನ್ ಗಳಿಸಿದರು, ಇದರಲ್ಲಿ 12 ಬೌಂಡರಿಗಳು ಮತ್ತು ಐದು ಸಿಕ್ಸರ್‌ ಬಾರಿಸಿದ್ದರು. ರೋಹಿತ್ ಶರ್ಮಾ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂದು 199 ರನ್ ಗಳಿಸಿತು. ಆದರೂ, ದಕ್ಷಿಣ ಆಫ್ರಿಕಾ 19.4 ಓವರ್‌ಗಳಲ್ಲಿ ಏಳು ವಿಕೆಟ್‌ಗಳು ಬಾಕಿ ಇರುವಂತೆಯೇ ಗುರಿಯನ್ನು ಬೆನ್ನಟ್ಟಿತು.

ರೋಹಿತ್ ಶರ್ಮಾ ಡರ್ಬನ್‌ನಲ್ಲಿ ನಡೆದ 2007 ರ ಟಿ 20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 40 ಎಸೆತಗಳಲ್ಲಿ ಅಜೇಯ 50 ಮತ್ತು ಜನವರಿ 2011 ರಲ್ಲಿ ಅದೇ ಸ್ಥಳದಲ್ಲಿ 34 ಎಸೆತಗಳಲ್ಲಿ 53 ರನ್ ಗಳಿಸಿದರು. ಸೆಪ್ಟೆಂಬರ್ 2019 ರಲ್ಲಿ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಅವರ ಕೊನೆಯ ಟಿ20 ಪಂದ್ಯದಲ್ಲಿ, ರೋಹಿತ್ ಶರ್ಮಾ 9 ರನ್‌ಗಳಿಗೆ ಔಟಾದರು.

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆ

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆ

ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ಒಂಬತ್ತು ಟೆಸ್ಟ್‌ಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಮೂರು ಶತಕಗಳೊಂದಿಗೆ 42.37 ಸರಾಸರಿಯಲ್ಲಿ 678 ರನ್ ಗಳಿಸಿದ್ದಾರೆ. 2019 ರ ಅಕ್ಟೋಬರ್‌ನಲ್ಲಿ ರಾಂಚಿಯಲ್ಲಿ 255 ಎಸೆತಗಳಲ್ಲಿ 28 ಬೌಂಡರಿಗಳು ಮತ್ತು ಆರು ಸಿಕ್ಸರ್‌ಗಳನ್ನು ಒಳಗೊಂಡ 212 ರನ್ ಗಳಿಸಿದ ರೋಹಿತ್ ಅವರ ಅತ್ಯುತ್ತಮ ಟೆಸ್ಟ್ ಸ್ಕೋರ್ ಆಗಿತ್ತು. ಈ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 202 ರನ್‌ಗಳ ಜಯ ಸಾಧಿಸಿತ್ತು.

ವಿಶಾಖಪಟ್ಟಣಂನಲ್ಲಿ ನಡೆದ ಅದೇ ಸರಣಿಯ ಮೊದಲ ಟೆಸ್ಟ್‌ನಲ್ಲಿ, ರೋಹಿತ್ ಶರ್ಮಾ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕಗಳನ್ನು ಬಾರಿಸಿದರು. ಬ್ಯಾಟಿಂಗ್ ತೆರೆಯಲು ಬಡ್ತಿ ಪಡೆದ ಅವರು 176 ಮತ್ತು 127 ಸ್ಕೋರ್‌ಗಳನ್ನು ದಾಖಲಿಸಿದರು. ಆತಿಥೇಯರು ಟೆಸ್ಟ್ ಅನ್ನು 203 ರನ್‌ಗಳಿಂದ ಗೆದ್ದಿದ್ದರಿಂದ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.

ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಶತಕ

ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಶತಕ

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ, ರೋಹಿತ್ ಶರ್ಮಾ 25 ಪಂದ್ಯಗಳಿಂದ 33.30 ಸರಾಸರಿಯಲ್ಲಿ ಮೂರು ಶತಕಗಳೊಂದಿಗೆ 766 ರನ್ ಗಳಿಸಿದ್ದಾರೆ. ಅಕ್ಟೋಬರ್ 2015 ರಲ್ಲಿ ಕಾನ್ಪುರದಲ್ಲಿ 133 ಎಸೆತಗಳಲ್ಲಿ 150 ರನ್ ಗಳಿಸಿದ್ದರು.

ಒಟ್ಟಾರೆಯಾಗಿ, ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ಎಲ್ಲಾ ಮೂರು ಮಾದರಿಯಲ್ಲಿ 47 ಪಂದ್ಯಗಳಲ್ಲಿ 1806 ಅಂತರಾಷ್ಟ್ರೀಯ ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಏಳು ಶತಕ ದಾಖಲಿಸಿದ್ದಾರೆ. ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ತಲಾ ಮೂರು ಮತ್ತು ಟಿ20 ಕ್ರಿಕೆಟ್‌ನಲ್ಲಿ ಒಂದು. ದಕ್ಷಿಣ ಆಫ್ರಿಕಾ ವಿರುದ್ಧ ಬೌಲಿಂಗ್ ಕೂಡ ಮಾಡಿರುವ ರೋಹಿತ್ ಶರ್ಮಾ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್‌ ಪಡೆದಿದ್ದಾರೆ.

Story first published: Wednesday, September 28, 2022, 14:15 [IST]
Other articles published on Sep 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X