ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA ಟಿ20 ಸರಣಿ: ಕೆಎಲ್ ರಾಹುಲ್ ನಾಯಕತ್ವದ ಕುರಿತು ಸುರೇಶ್ ರೈನಾ ಹೇಳಿದ್ದೇನು?

IND vs SA T20 Series: What Did Suresh Raina Say About KL Rahuls Captaincy?

ಕೆಎಲ್ ರಾಹುಲ್ ಅವರ ಇತ್ತೀಚೆಗಿನ ನಾಯಕತ್ವದ ತಂಡಗಳಿಗೆ ಶಾಂತ ಉಪಸ್ಥಿತಿಯನ್ನು ತರುವುದನ್ನು ನೋಡಿದ್ದೇನೆ. ಮುಂಬರುವ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಯುವ ತಂಡವನ್ನು ಮುನ್ನಡೆಸುತ್ತಿರುವ ಕರ್ನಾಟಕದ ಸ್ಟಾರ್ ಆಟಗಾರನ ನೇತೃತ್ವ ವಹಿಸಿರುವುದು ಸ್ವಾಗತಾರ್ಹ ಸುದ್ದಿ ಎಂದು ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಸುರೇಶ್ ರೈನಾ ಹೇಳಿದರು.

ಖಾಯಂ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಿರಿಯ ಆಟಗಾರರು ಟಿ20 ಸರಣಿಗೆ ವಿಶ್ರಾಂತಿ ಪಡೆದಿದ್ದು, ಅವರ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜೂನ್ 9ರಿಂದ 5 ಟಿ20 ಪಂದ್ಯಗಳಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡಕ್ಕೆ ಆತಿಥ್ಯ ವಹಿಸಿದಾಗ ಕೆಎಲ್ ರಾಹುಲ್ ನಾಯಕತ್ವದ 18 ಯುವ ಸದಸ್ಯರ ತಂಡವನ್ನು ಆಯ್ಕೆ ಮಾಡಲಾಯಿತು.

ಆಫ್ರಿಕಾ ಪ್ರವಾಸದ ಸಮಯದಲ್ಲಿ ಭಾರತ ಸೋತಿತ್ತು

ಆಫ್ರಿಕಾ ಪ್ರವಾಸದ ಸಮಯದಲ್ಲಿ ಭಾರತ ಸೋತಿತ್ತು

ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ಕೆಎಲ್ ರಾಹುಲ್ ಅವರ ನಾಯಕತ್ವದಲ್ಲಿ ಭಾರತವು ಟೆಸ್ಟ್ ಮತ್ತು ಎಲ್ಲಾ 3 ಏಕದಿನ ಪಂದ್ಯಗಳನ್ನು ಸೋತ ನಂತರ ಅವರ ನಾಯಕತ್ವವನ್ನು ಪ್ರಶ್ನಿಸಲಾಗಿತ್ತು. ಕೆಎಲ್ ರಾಹುಲ್ ಅವರು 2022ರ ಐಪಿಎಲ್ ಆವೃತ್ತಿಯಲ್ಲಿ ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಮತ್ತೊಮ್ಮೆ ಯಶ ಕಂಡಿದ್ದಾರೆ.

ರಾಹುಲ್ ಎಂದಿನಂತೆ 600ಕ್ಕೂ ಅಧಿಕ ರನ್ ಗಳಿಸುವ ಮೂಲಕ ಬ್ಯಾಟಿಂಗ್ ಮೂಲಕವೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಅದಕ್ಕಿಂತ ಮುಖ್ಯವಾಗಿ, ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್‌ನಲ್ಲಿ ಯುವ ಆಟಗಾರರ ಗುಂಪನ್ನು ಮುನ್ನಡೆಸಿದರು. ಅಲ್ಲದೇ ಹೊಸ ತಂಡವನ್ನು ಅದರ ಮೊದಲ ಋತುವಿನಲ್ಲಿ ಪ್ಲೇಆಫ್‌ವರೆಗೂ ಕರೆದೊಯ್ದರು.

ಕೆಎಲ್ ರಾಹುಲ್ ನಾಯಕನಾಗಿ ತುಂಬಾ ಶಾಂತವಾಗಿದ್ದಾರೆ

ಕೆಎಲ್ ರಾಹುಲ್ ನಾಯಕನಾಗಿ ತುಂಬಾ ಶಾಂತವಾಗಿದ್ದಾರೆ

"ಇತ್ತೀಚಿನ ದಿನಗಳಲ್ಲಿ ಕೆಎಲ್ ರಾಹುಲ್ ನಾಯಕನಾಗಿ ತುಂಬಾ ಶಾಂತವಾಗಿ ಮತ್ತು ಸಂಯೋಜನಾತ್ಮಕವಾಗಿದ್ದಾರೆ. ಭಾರತ ತಂಡಕ್ಕೆ ಆಯ್ಕೆಯಾದ ಆಟಗಾರರಿಗೆ ಕೆಎಲ್ ರಾಹುಲ್ ಅವರಂತಹ ನಾಯಕರ ಅಗತ್ಯವಿದೆ. ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಲ್ ಇದ್ದಾರೆ, ಇಬ್ಬರೂ ಒಟ್ಟಿಗೆ ಆಡುತ್ತಾರೆ ಎಂದು ಮಾಜಿ ಆಟಗಾರ ಸುರೇಶ್ ರೈನಾ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

ಉತ್ತಮ ಪ್ರದರ್ಶನ ನೀಡುವ ರಿಷಭ್ ಪಂತ್, ದಿನೇಶ್ ಕಾರ್ತಿಕ್

ಉತ್ತಮ ಪ್ರದರ್ಶನ ನೀಡುವ ರಿಷಭ್ ಪಂತ್, ದಿನೇಶ್ ಕಾರ್ತಿಕ್

"ಹೊಸ ವೇಗದ ಬೌಲರ್‌ಗಳಿದ್ದಾರೆ. ಉಮ್ರಾನ್ ಮಲಿಕ್ ಅವರು ಬೌಲಿಂಗ್ ಮಾಡಿದ ರೀತಿ ಚೆನ್ನಾಗಿದೆ ಮತ್ತು ಅವರ ಜೊತೆಗೆ ಮತ್ತೊಬ್ಬ ಯುವ ಬೌಲರ್ ಅರ್ಶ್‌ದೀಪ್ ಇದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಕೂಡ ಇರಲಿದ್ದಾರೆ. ಹಾಗಾಗಿ ಅವರ (ಕೆಎಲ್ ರಾಹುಲ್) ಉಪಸ್ಥಿತಿಯು ಶಾಂತತೆಯನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ. ದಕ್ಷಿಣ ಆಫ್ರಿಕಾದ ಆಟಗಾರರು ಸಹ ಉತ್ತಮರಾಗಿದ್ದಾರೆ, ಆದ್ದರಿಂದ ಇದು ಉತ್ತಮ ಸ್ಪರ್ಧೆಯಾಗಲಿದೆ," ಎಂದು ಮಾಜಿ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ವಿವರಿಸಿದರು.

ಏನ್ ಗುರೂ.... Hardik Pandya, ಬಗ್ಗೆ ಎಂಥಾ‌ ಮಾತು ಹೇಳ್ಬಿಟ್ರು Ravi Shastri | *Cricket | OneIndia Kannada
ರಿಷಭ್ ಪಂತ್ ಟಿ20 ಸರಣಿಗೆ ಉಪ ನಾಯಕ

ರಿಷಭ್ ಪಂತ್ ಟಿ20 ಸರಣಿಗೆ ಉಪ ನಾಯಕ

ರಿಷಭ್ ಪಂತ್ ಅವರನ್ನು ಟಿ20 ಸರಣಿಗೆ ಉಪ ನಾಯಕ ಎಂದು ಹೆಸರಿಸಲಾಗಿದೆ ಮತ್ತು ಎಲ್ಲಾ ಕಣ್ಣುಗಳು ಯುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕನ ಮೇಲೆ ಇರುತ್ತವೆ. ಗಮನಾರ್ಹವಾಗಿ, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ದಕ್ಷಿಣ ಆಫ್ರಿಕಾ ಟಿ20 ಪಂದ್ಯಗಳು ಮತ್ತು ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಎರಡಕ್ಕೂ ಭಾರತದ ತಂಡದ ಭಾಗವಾಗಿರುವ ಕೇವಲ 2 ಆಟಗಾರರಾಗಿದ್ದಾರೆ.

Story first published: Monday, June 6, 2022, 19:46 [IST]
Other articles published on Jun 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X