ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಂಬಾ ಬವುಮಾ ದ. ಆಫ್ರಿಕಾ ತಂಡದ ನಾಯಕನ ಸ್ಥಾನ ಉಳಿಸಿಕೊಳ್ಳುವುದು ಕಷ್ಟ ಎಂದ ಮಖಾಯ ಎಂಟಿನಿ

Ind Vs SA T20: Temba Bavuma’s position as South Africa’s captain Under Threat : Makhaya Ntini

ಟಿ20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾದ ನಾಯಕನಾಗಿ ಟೆಂಬಾ ಬವುಮಾ ಅವರ ಸ್ಥಾನ ಉಳಿಯುವುದು ಖಚಿತವಿಲ್ಲ ಎಂದು ದಕ್ಷಿಣ ಆಫ್ರಿಕಾ ಮಾಜಿ ವೇಗದ ಬೌಲರ್ ಮಖಾಯ ಎಂಟಿನಿ ಹೇಳಿದ್ದಾರೆ. ಸದ್ಯ ಟಿ20 ಸ್ವರೂಪದ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಟೆಂಬಾ ಬವುಮಾ, ಟಿ20 ವಿಶ್ವಕಪ್‌ ವೇಳೆಗೆ ತಂಡನ ನಾಯಕನ ಸ್ಥಾನ ಉಳಿಸಿಕೊಳ್ಳುತ್ತಾರ ಎಂದು ನೋಡಬೇಕಿದೆ.

Ind Vs SA T20: ಟಾಸ್‌ ಗೆದ್ದಿದ್ದು ನಮಗೆ ತುಂಬಾ ಪ್ರಯೋಜನಕಾರಿಯಾಯಿತು ಎಂದ ಅರ್ಶ್‌ದೀಪ್ ಸಿಂಗ್Ind Vs SA T20: ಟಾಸ್‌ ಗೆದ್ದಿದ್ದು ನಮಗೆ ತುಂಬಾ ಪ್ರಯೋಜನಕಾರಿಯಾಯಿತು ಎಂದ ಅರ್ಶ್‌ದೀಪ್ ಸಿಂಗ್

ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ಟೆಂಬಾ ಬವುಮಾ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎಸ್‌ಎ20 ಟಿ20 ಲೀಗ್‌ನಲ್ಲಿ ಮಾರಾಟವಾಗದೇ ಉಳಿದಿದ್ದರು. ಒಂದು ದೇಶದ ತಂಡದ ನಾಯಕನಾಗಿದ್ದರು ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ. ಈ ಬಗ್ಗೆ ಸ್ವತಃ ಟೆಂಬಾ ಬವುಮಾ ಬೇಸರ ವ್ಯಕ್ತಪಡಿಸಿದ್ದರು.

ದಕ್ಷಿಣ ಆಫ್ರಿಕಾದ ಟಿ20 ತಂಡದಲ್ಲಿ ಆಟಗಾರ ಮತ್ತು ನಾಯಕನಾಗಿ ಬವುಮಾ ಅವರ ಸ್ಥಾನದ ಬಗ್ಗೆ ನಿರಂತರವಾಗಿ ಪ್ರಶ್ನೆಗಳು ಕೇಳಿ ಬರುತ್ತಿವೆ. 32 ವರ್ಷ ವಯಸ್ಸಿನ ಟೆಂಬಾ ಬವುಮಾ ಟಿ20 ಮಾದರಿ ಕ್ರಿಕೆಟ್‌ನಲ್ಲಿ ಪ್ರಭಾವಶಾಲಿ ದಾಖಲೆ ಹೊಂದಿಲ್ಲ, ಅವರು ಟಿ20 ಮಾದರಿಗೆ ಹೊಂದುವ ಆಟಗಾರ ಅಲ್ಲ ಎನ್ನಲಾಗುತ್ತದೆ. ಸೆಪ್ಟೆಂಬರ್ 28 ರಂದು ತಿರುವನಂತಪುರದಲ್ಲಿ ನಡೆದ ಭಾರತದ ವಿರುದ್ಧದ ಆರಂಭಿಕ ಟಿ20 ಪಂದ್ಯದಲ್ಲಿ ಅವರು ಡಕ್‌ಗೆ ಔಟಾದರು.

ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ದ. ಆಫ್ರಿಕಾ

ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ದ. ಆಫ್ರಿಕಾ

ಸೆಪ್ಟೆಂಬರ್ 28 ರಂದು ತಿರುವನಂತಪುರದಲ್ಲಿ ನಡೆದ ಭಾರತದ ವಿರುದ್ಧದ ಆರಂಭಿಕ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕಳಪೆ ಪ್ರದರ್ಶನ ನೀಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರಿಣಗಳ ಪಡೆ, ಭಾರತದ ವೇಗಿಗಳ ದಾಳಿಗೆ ತತ್ತರಿಸಿತು.

9 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ಟೆಂಬಾ ಬವುಮಾ ಸೇರಿ ನಾಲ್ವರು ಬ್ಯಾಟರ್ ಗಳು ಶೂನ್ಯಕ್ಕೆ ಔಟಾದರು. ವೇಯ್ನ್ ಪಾರ್ನೆಲ್ ಮತ್ತು ಕೇಶವ್ ಮಹಾರಾಜ್, ಮಾಕ್ರಮ್ ಬ್ಯಾಟಿಂಗ್ ಸಹಾಯದಿಂದ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್‌ಗೆ 106 ರನ್ ಗಳಿಸಿದರು. 107 ರನ್ ಗಳ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ 16.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದರು.

ಕೋವಿಡ್‌-19 ಸೋಂಕಿನಿಂದ ಗುಣಮುಖರಾದ ಮೊಹಮ್ಮದ್ ಶಮಿ, ಹೃದಯರಕ್ತನಾಳ ಪರೀಕ್ಷೆ ಬಾಕಿ

ಕಳಪೆಯಾಗಿದೆ ಬವುಮಾ ಟಿ20 ಅಂಕಿ ಅಂಶ

ಕಳಪೆಯಾಗಿದೆ ಬವುಮಾ ಟಿ20 ಅಂಕಿ ಅಂಶ

ಬಲಗೈ ಬ್ಯಾಟರ್ ಟೆಂಬಾ ಬವುಮಾ 26 ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದಾರೆ ಮತ್ತು 25.54 ರ ಸರಾಸರಿಯಲ್ಲಿ ಮತ್ತು 120 ಸ್ಟ್ರೈಕ್ ರೇಟ್‌ನಲ್ಲಿ 562 ರನ್ ಗಳಿಸಿದ್ದಾರೆ. ಇನ್ನಿಂಗ್ಸ್ ಆರಂಭಿಸುವ ಟೆಂಬಾ ಬವುಮಾ ಇದುವರೆಗೂ ಕೇವಲ ಒಂದು ಅರ್ಧಶತಕವನ್ನು ಮಾತ್ರ ಗಳಿಸಿದ್ದಾರೆ.

ಟೆಂಬಾ ಬವುಮಾ ಅವರ ಟಿ20 ವೃತ್ತಿಜೀವನ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಗಂಭೀರವಾಗಿ ಮರುಪರಿಶೀಲಿಸುವಂತೆ ಮಖಾಯ ಎಂಟಿನಿ ಒತ್ತಾಯಿಸಿದ್ದಾರೆ. ಅವರ ಬ್ಯಾಟಿಂಗ್ ವೈಫಲ್ಯ ತಂಡದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ನಾಯಕನ ಸ್ಥಾನಕ್ಕೆ ಕುತ್ತು

ನಾಯಕನ ಸ್ಥಾನಕ್ಕೆ ಕುತ್ತು

ಟಿ20 ತಂಡದಲ್ಲಿ ಬವುಮಾ ಅವರ ಸ್ಥಾನವು ಸುರಕ್ಷಿತವಾಗಿದೆ ಎಂದು ನೀವು ಭಾವಿಸುತ್ತೀರಾ ಎಂದು ಎಂಟಿನಿಯನ್ನು ಕೇಳಿದ ಪ್ರಶ್ನೆಗೆ, ಪ್ರಾಮಾಣಿಕವಾಗಿ ಉತ್ತರ ನೀಡಿದ್ದಾರೆ.

"ಇದು ಒಂದು ಟ್ರಿಕಿ ಆಗಿದೆ. ನಾನು ನಿಮಗೆ ಸುಳ್ಳು ಹೇಳಲು ಬಯಸುವುದಿಲ್ಲ. ವಿಶೇಷವಾಗಿ ಈಗ ಅವರು ದಕ್ಷಿಣ ಆಫ್ರಿಕಾದಲ್ಲಿ ಘೋಷಿಸಲಾದ ಟಿ 20 ಲೀಗ್‌ನ ಭಾಗವಾಗಿಲ್ಲ, ಆತನಿಗೆ ತನ್ನ ಸಾಮರ್ಥ್ಯ ಸಾಬೀತುಪಡಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಟಿ20 ವಿಶ್ವಕಪ್ ಬರುತ್ತಿದೆ. ಯಾರು ನಾಯಕರಾಗಲಿದ್ದಾರೆ? ಅವನು ನಾಯಕನಾಗಿ ಉಳಿಯಲಿದ್ದಾನೋ ಅಥವಾ ಅವರು ಅದನ್ನು ಬದಲಾಯಿಸಲು ಮತ್ತು ಬೇರೆಯವರಿಗೆ ನೀಡಲಿದ್ದಾರೆಯೇ? ಎನ್ನುವುದು ಖಚಿತವಾಗಿಲ್ಲ" ಎಂದು ಮಖಾಯ ಎಂಟಿನಿ ಹೇಳಿದ್ದಾರೆ.

ರೀಜಾ ಹೆಂಡ್ರಿಕ್ಸ್‌ಗೆ ಅವಕಾಶ ನೀಡಬೇಕು

ರೀಜಾ ಹೆಂಡ್ರಿಕ್ಸ್‌ಗೆ ಅವಕಾಶ ನೀಡಬೇಕು

ಟೆಂಬಾ ಬವುಮಾ ತಮ್ಮ ಸುತ್ತ ಇರುವ ಆಟಗಾರರ ಬಗ್ಗೆ ಯೋಚಿಸಬೇಕಾಗಿದೆ. ಇನ್-ಫಾರ್ಮ್ ಬ್ಯಾಟರ್ ರೀಜಾ ಹೆಂಡ್ರಿಕ್ಸ್ ತಂಡದಲ್ಲಿ ಸ್ಥಾನ ಪಡೆಯಬೇಕು. ತಂಡವನ್ನು ಪ್ರತಿನಿಧಿಸಲು ಇದು ಒಂದು ಉತ್ತಮ ಅವಕಾಶವಾಗಿದೆ. ವರು ಸತತ ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ. ಬವುಮಾ ಈ ಬಗ್ಗೆ ಯೋಚಿಸಬೇಕು ಎಂದು ಎಂಟಿನಿ ಒತ್ತಾಯಿಸಿದ್ದಾರೆ.

ರೀಜಾ ಹೆಂಡ್ರಿಕ್ಸ್ ಈ ವರ್ಷದ ಜುಲೈ ಮತ್ತು ಆಗಸ್ಟ್ ನಡುವೆ ಐದು ಸತತ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕ್ರಮವಾಗಿ 57, 53, 70, 74 ಮತ್ತು 42 ರನ್ ದಾಖಲಿಸಿದ್ದಾರೆ. ಮೊದಲ ಮೂರು ಅರ್ಧಶತಕ ಇಂಗ್ಲೆಂಡ್ ವಿರುದ್ಧ ಮತ್ತು ಕೊನೆಯ ಎರಡು ಇನ್ನಿಂಗ್ಸ್ ಐರ್ಲೆಂಡ್ ವಿರುದ್ಧ ಬಂದಿವೆ.

"ನಾಯಕರಾಗಿದ್ದಾಗ ನೀವು ತಂಡವನ್ನು ಮುನ್ನಡೆಸಬೇಕು. ನಾಯಕನಾಗಿ ನೀವು ಏನೇ ಮಾಡಿದರೂ ಎಲ್ಲರೂ ಅನುಸರಿಸುತ್ತಾರೆ ಎಂದು ನಿಮಗೆ ಅರಿವಿರಬೇಕು. ನೀವು ಸ್ಕೋರ್ ಮಾಡದಿದ್ದಾಗ, ಅದು ನಿಮಗೆ ಕಷ್ಟವಾಗುತ್ತದೆ," ಎಂದು ಎಂಟಿನಿ ಹೇಳಿದ್ದಾರೆ.

Story first published: Thursday, September 29, 2022, 12:25 [IST]
Other articles published on Sep 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X