ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind Vs SA T20: ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟಿ20 ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯ

Ind Vs SA T20: Virat Kohli Rested For 3rd T20I, Will Spend Time With Family

ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ತೆರಳುವ ಮುನ್ನ ವಿರಾಟ್ ಕೊಹ್ಲಿ ಮೂರು ದಿನ ವಿಶ್ರಾಂತಿ ಪಡೆಯಲಿದ್ದಾರೆ. ಇಂದೋರ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದಾರೆ.

ಟಿ 20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಗೆ ತೆರಳುವ ಮುನ್ನ ಅವರು ಮುಂಬೈನಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲಿದ್ದಾರೆ. ವಿಶ್ವಕಪ್ ಮುಗಿದ ತಕ್ಷಣ ನ್ಯೂಜಿಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾ ಭಾಗವಹಿಸಲಿದ್ದು, ಸುದೀರ್ಘ ಪ್ರವಾಸದ ಮೊದಲು ಕುಟುಂಬದ ಜೊತೆ ಸಮಯ ಕಳೆಯದಲಿದ್ದಾರೆ. ಭಾರತದ 15 ಸದಸ್ಯರ ತಂಡ ಅಕ್ಟೋಬರ್ 6 ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದೆ.

T20 World Cup: ಇಂಗ್ಲೆಂಡ್ ಜೊತೆ ಆಡಲು ಇತರೆ ತಂಡಗಳು ಭಯಪಡುತ್ತವೆ ಎಂದ ಮೊಯಿನ್ ಅಲಿT20 World Cup: ಇಂಗ್ಲೆಂಡ್ ಜೊತೆ ಆಡಲು ಇತರೆ ತಂಡಗಳು ಭಯಪಡುತ್ತವೆ ಎಂದ ಮೊಯಿನ್ ಅಲಿ

ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಇದ್ದ ಆತಂಕಗಳು ಮಾಯವಾಗಿವೆ. ಅವರು ಏಷ್ಯಾ ಕಪ್‌ನಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ್ದರು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸರಣಿಗಳಲ್ಲಿ ಕೂಡ ಉತ್ತಮ ರನ್ ಗಳಿಸಿದ್ದಾರೆ. ಏಷ್ಯಾಕಪ್‌ ಮೊದಲು ಒಂದು ತಿಂಗಳ ವಿರಾಮ ಪಡೆದಿದ್ದ ವಿರಾಟ್ ಕೊಹ್ಲಿ ಕ್ರಿಕೆಟ್‌ಗೆ ಮರಳಿದ ನಂತರ ತಮ್ಮ ಫಾರ್ಮ್ ಕಂಡುಕೊಂಡಿದ್ದರು. ಏಷ್ಯಾಕಪ್‌ನಲ್ಲಿ ತಮ್ಮ 71ನೇ ಶತಕವನ್ನು ಗಳಿಸಿದ್ದರು.

ಹತ್ತು ಪಂದ್ಯಗಳಿಂದ ಅತ್ಯುತ್ತಮ ಬ್ಯಾಟಿಂಗ್

ಹತ್ತು ಪಂದ್ಯಗಳಿಂದ ಅತ್ಯುತ್ತಮ ಬ್ಯಾಟಿಂಗ್

ಒಂದು ತಿಂಗಳ ವಿಶ್ರಾಂತಿಯ ನಂತರ ಏಷ್ಯಾಕಪ್‌ನಲ್ಲಿ ವಾಪಸಾದ ವಿರಾಟ್ ಕೊಹ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. 10 ಪಂದ್ಯಗಳಲ್ಲಿ ಒಂದು ಶತಕ ಮತ್ತು 3 ಅರ್ಧ ಶತಕಗಳನ್ನು ಗಳಿಸಿದ್ದಾರೆ. 10 ಪಂದ್ಯಗಳಿಂದ ವಿರಾಟ್ ಕೊಹ್ಲಿ 57.71 ಸರಾಸರಿಯಲ್ಲಿ ರನ್ ಗಳಿಸುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ 49 ರನ್ ಗಳಿಸಿದ ಕೊಹ್ಲಿ 1 ರನ್ ಅಂತರದಲ್ಲಿ ಅರ್ಧಶತಕವನ್ನು ಕಳೆದುಕೊಂಡರು. ಅರ್ಧಶತಕ ಗಳಿಸಲು ಸ್ಟ್ರೈಕ್ ನೀಡಲು ಸಿಂಗಲ್ ಓಡುತ್ತೇನೆ ಎಂದ ದಿನೇಶ್ ಕಾರ್ತಿಕ್‌ಗೆ ಬೌಂಡರಿ ಗಳಿಸುವಂತೆ ಹೇಳುವ ಮೂಲಕ ಕೊಹ್ಲಿ ಅಭಿಮಾನಿಗಳ ಮನ ಗೆದ್ದರು.

ಆಸ್ಟ್ರೇಲಿಯಾ ನೆಲದಲ್ಲಿ ಅಪಾರ ಕ್ರಿಕೆಟ್ ಆಡಿ ಅನುಭವ ಇರುವ ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ.

15 ಸದಸ್ಯರ ತಂಡ ಆಸ್ಟ್ರೇಲಿಯಾಕ್ಕೆ ಪ್ರಯಾಣ

15 ಸದಸ್ಯರ ತಂಡ ಆಸ್ಟ್ರೇಲಿಯಾಕ್ಕೆ ಪ್ರಯಾಣ

ಟಿ20 ವಿಶ್ವಕಪ್‌ಗಾಗಿ 15 ಸದಸ್ಯರ ತಂಡವು ಅಕ್ಟೋಬರ್ 6 ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮುಕ್ತಾಯದ ನಂತರ ಮೀಸಲು ಆಟಗಾರರು ಆಸ್ಟ್ರೇಲಿಯಾದಲ್ಲಿ ತಂಡವನ್ನು ಸೇರಿಕೊಳ್ಳುತ್ತಾರೆ.

ಟಿ20 ವಿಶ್ವಕಪ್‌ಗೆ ಮೂರು ವೇಗಿಗಳಾದ ಕುಲದೀಪ್ ಸೇನ್, ಚೇತನ್ ಸಕರಿಯಾ ಮತ್ತು ಮುಖೇಶ್ ಚೌಧರಿ ಅವರನ್ನು ನೆಟ್ ಬೌಲರ್‌ಗಳಾಗಿ ತೆಗೆದುಕೊಳ್ಳಲು ಟೀಮ್ ಇಂಡಿಯಾ ಸಜ್ಜಾಗಿದೆ. ವೇಗದ ಬೌಲರ್ ಉಮ್ರಾನ್ ಮಲಿಕ್ ಜೊತೆಗೆ ಮೂವರು ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಜೊತೆಯಲ್ಲಿ ಇರಲಿದ್ದಾರೆ.

ಟಿ20 ವಿಶ್ವಕಪ್‌ಗಾಗಿ ಭಾರತ ತಂಡ

ಟಿ20 ವಿಶ್ವಕಪ್‌ಗಾಗಿ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ , ಅರ್ಷದೀಪ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.

Story first published: Monday, October 3, 2022, 16:44 [IST]
Other articles published on Oct 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X