ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA 1st T20: ತಿರುವನಂತಪುರಂ ತಲುಪಿದ ರೋಹಿತ್ ಬಳಗ; 'ಸಂಜು ಸಂಜು' ಎಂದು ಕೂಗಿದ ಫ್ಯಾನ್ಸ್

IND vs SA: Team India Arrives In Thiruvananthapuram For 1st T20I Against South Africa

ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು ಗೆದ್ದ ನಂತರ, ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಸೀಮಿತ ಓವರ್‌ಗಳ ಪ್ರವಾಸವನ್ನು ಪ್ರಾರಂಭಿಸಲು ಸೋಮವಾರ ತಿರುವನಂತಪುರಕ್ಕೆ ಆಗಮಿಸಿದೆ.

ಸೆಪ್ಟೆಂಬರ್ 28ರಂದು ತಿರುವನಂತಪುರಂನಲ್ಲಿರುವ ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ಭಾರತ ಕ್ರಿಕೆಟ್ ತಂಡ ಸೋಮವಾರ ನಗರಕ್ಕೆ ಬಂದಿತು.

IND vs SA: ಟಿ20, ಏಕದಿನ ಸರಣಿಗಾಗಿ ಭಾರತಕ್ಕೆ ಬಂದಿಳಿದ ಹರಿಣಗಳ ಪಡೆ; ಟೆಂಬಾ ಬವುಮಾ ಹೇಳಿದ್ದೇನು?IND vs SA: ಟಿ20, ಏಕದಿನ ಸರಣಿಗಾಗಿ ಭಾರತಕ್ಕೆ ಬಂದಿಳಿದ ಹರಿಣಗಳ ಪಡೆ; ಟೆಂಬಾ ಬವುಮಾ ಹೇಳಿದ್ದೇನು?

ತಿರುವನಂತಪುರಂ ವಿಮಾನ ನಿಲ್ದಾಣದ ಹೊರಗೆ ಕಾದು ನಿಂತಿದ್ದ ನೂರಾರು ಅಭಿಮಾನಿಗಳಿಂದ ಭಾರತ ಕ್ರಿಕೆಟ್ ತಂಡಕ್ಕೆ ಅದ್ದೂರಿ ಸ್ವಾಗತ ದೊರೆಯಿತು. ಭಾರತ ತಂಡವು 3 ಟಿ20 ಪಂದ್ಯಗಳನ್ನು ಆಡಲಿದೆ, ಇದು 2022ರ ಟಿ20 ವಿಶ್ವಕಪ್‌ಗೆ ಮೊದಲು ಭಾರತ ತಂಡದ ಕೊನೆಯ ಟಿ20 ಸರಣಿಯಾಗಲಿದೆ.

ಕೇರಳ ಕ್ರಿಕೆಟ್ ಸಂಸ್ಥೆಯಿಂದ ಅದ್ಧೂರಿ ಸ್ವಾಗತ

ಕೇರಳ ಕ್ರಿಕೆಟ್ ಸಂಸ್ಥೆಯಿಂದ ಅದ್ಧೂರಿ ಸ್ವಾಗತ

ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಂಡಕ್ಕೆ ಅಭಿಮಾನಿಗಳು ಮತ್ತು ಕೇರಳ ಕ್ರಿಕೆಟ್ ಸಂಸ್ಥೆಯಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ದಕ್ಷಿಣ ಆಫ್ರಿಕಾ ತಂಡ ಭಾನುವಾರವೇ ರಾಜ್ಯ ರಾಜಧಾನಿ ತಲುಪಿದ್ದು, ಸೋಮವಾರ ಅಭ್ಯಾಸ ಆರಂಭಿಸಿತು.

ಇನ್ನು ಭಾರತ ತಂಡದ ಆಗಮನವಾದಾಗ ಅಭಿಮಾನಿಗಳು 'ಸಂಜು.. ಸಂಜು..' ಎಂದು ಕೂಗಿದರು. ಸ್ಥಳೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಟಿ20 ವಿಶ್ವಕಪ್ ಸೇರಿದಂತೆ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಆಯ್ಕೆಯಾಗಿಲ್ಲ. ಇನ್ನು ನ್ಯೂಜಿಲೆಂಡ್ ಎ ತಂಡದ ವಿರುದ್ಧ ಸರಣಿಗೆ ಭಾರತ ಎ ತಂಡದ ನಾಯಕತ್ವ ವಹಿಸಲಾಗಿದೆ.

ಸೆಪ್ಟೆಂಬರ್ 27ರಂದು ಅಭ್ಯಾಸಕ್ಕಾಗಿ ಗ್ರೀನ್‌ಫೀಲ್ಡ್ ಮೈದಾನ ತಲುಪಲಿದೆ

"ಟೀಮ್ ಇಂಡಿಯಾ ಸೆಪ್ಟೆಂಬರ್ 27ರಂದು ಅಭ್ಯಾಸಕ್ಕಾಗಿ ಗ್ರೀನ್‌ಫೀಲ್ಡ್ ಮೈದಾನವನ್ನು ತಲುಪಲಿದೆ. ಅವರು ಸಂಜೆ 5ರಿಂದ ರಾತ್ರಿ 8ರವರೆಗೆ ಅಭ್ಯಾಸ ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡವು ಮಧ್ಯಾಹ್ನ 1.00 ರಿಂದ 4.00 ರವರೆಗೆ ಮೈದಾನದಲ್ಲಿ ಅಭ್ಯಾಸ ನಡೆಸಲಿದೆ," ಎಂದು ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಪ್ರಕಟಣೆಯಲ್ಲಿ ತಿಳಿಸಿದೆ.

ಕೇರಳ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರೆಜಿತ್ ರಾಜೇಂದ್ರನ್ ಮತ್ತು ತಿರುವನಂತಪುರಂ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಾಜೀವ್ ಅವರು ಭಾರತ ತಂಡವನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ರೋಹಿತ್ ಶರ್ಮಾ ನಾಯಕತ್ವದ ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿದ್ದು, ಹಾರ್ದಿಕ್ ಪಾಂಡ್ಯ ಮತ್ತು ದೀಪಕ್ ಹೂಡಾ ಮಾತ್ರ ವಿಶ್ರಾಂತಿ ಪಡೆದಿದ್ದಾರೆ.

ಅಕ್ಟೋಬರ್ 28ರಂದು ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ

ಅಕ್ಟೋಬರ್ 28ರಂದು ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯವು ಅಕ್ಟೋಬರ್ 28ರಂದು ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೆನ್ ಇನ್ ಬ್ಲೂ ಸೋಮವಾರದಂದು ಅರ್ಧದಿನ ಮಾತ್ರ ಅಭ್ಯಾಸ ನಡೆಸಿದೆ.

1,500 ರೂ.ಗಳ ಕಡಿಮೆ ಬೆಲೆಯ ಟಿಕೆಟ್‌ನ ಹೊರತಾಗಿಯೂ, ಇದೀಗ 75 ಪ್ರತಿಶತದಷ್ಟು ಟಿಕೆಟ್‌ಗಳು ಮಾರಾಟವಾಗಿರುವುದರಿಂದ ಇದು ಪೂರ್ಣ ಸಾಮರ್ಥ್ಯದ ಪ್ರೇಕ್ಷಕರ ಪಂದ್ಯವಾಗಲಿದೆ ಎಂದು ಕೇರಳ ಕ್ರಿಕೆಟ್ ಸಂಸ್ಥೆ ಭರವಸೆ ನೀಡಿದೆ.

ಸೆಪ್ಟೆಂಬರ್ 27ರಂದು ಮಾಧ್ಯಮಗಳ ಜೊತೆ ಎರಡು ತಂಡದ ನಾಯಕರು

ಸೆಪ್ಟೆಂಬರ್ 27ರಂದು ಮಾಧ್ಯಮಗಳ ಜೊತೆ ಎರಡು ತಂಡದ ನಾಯಕರು

ಸೆಪ್ಟೆಂಬರ್ 27ರಂದು ಪಂದ್ಯದ ಪೂರ್ವ ಸಂವಾದದ ಭಾಗವಾಗಿ ಎರಡು ತಂಡದ ನಾಯಕರು ಮಾಧ್ಯಮಗಳ ಜೊತೆ ಮಾತನಾಡಲಿದ್ದಾರೆ. ಪಂದ್ಯಕ್ಕೆ ಕೇವಲ 2,000 ಟಿಕೆಟ್‌ಗಳು ಮಾತ್ರ ಉಳಿದಿವೆ ಎಂದು ಕೆಸಿಎ ತಿಳಿಸಿದೆ. ಕ್ರೀಡಾಂಗಣವು 55,000 ಆಸನಗಳ ಸಾಮರ್ಥ್ಯವನ್ನು ಹೊಂದಿದೆ.

ಮೇಲಿನ ಹಂತ, ಪೆವಿಲಿಯನ್ ಮತ್ತು ಕೆಸಿಎ ಗ್ರ್ಯಾಂಡ್‌ಸ್ಟ್ಯಾಂಡ್‌ಗಳ ದರಗಳು ಕ್ರಮವಾಗಿ 1,500 ರೂ., 2,750 ರೂ. ಮತ್ತು 6,000 ರೂ.ಗಳನ್ನು ಒಳಗೊಂಡಿದ್ದು, ಗ್ರ್ಯಾಂಡ್‌ಸ್ಟ್ಯಾಂಡ್ ಸೀಟುಗಳ ಟಿಕೆಟ್‌ಗಳು ಆಹಾರದ ವೆಚ್ಚವನ್ನು ಒಳಗೊಂಡಿರುತ್ತವೆ.

Story first published: Monday, September 26, 2022, 22:52 [IST]
Other articles published on Sep 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X