ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೋಟೆಲ್ ಸಿಬ್ಬಂದಿಗಳೊಂದಿಗೆ ಕುಣಿದು ಗೆಲುವನ್ನು ಸಂಭ್ರಮಿಸಿದ ಕೊಹ್ಲಿ, ಪೂಜಾರ, ಮಯಾಂಕ್: ವಿಡಿಯೋ

Ind vs SA: Virat Kohli and Cheteshwar Pujara dance with hotel staff to celebrate Centurions victory

ಭಾರತ ಹಾಗೂ ದಕ್ಷಿಣ ಆಫ್ರಿಕಮಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಭಾರತ ಭರ್ಜರಿಯಾಗಿ ಗೆದ್ದುಕೊಂಡಿದೆ. ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯವನ್ನು ವಿರಾಟ್ ಕೊಹ್ಲಿ ಪಡೆ 5ನೇ ದಿನ 113 ರನ್‌ಗಳ ಅಂತರದಿಂದ ಗೆಲ್ಲುವ ಮೂಲಕ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಈ ಗೆಲುವು ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಮಾದರಿಯಲ್ಲಿ ಪಡೆದ ಕೇವಲ ನಾಲ್ಕನೇ ಗೆಲುವು. ಅದರಲ್ಲೂ ಸೆಂಚುರಿಯನ್‌ನ ಕ್ರೀಡಾಂಗಣದಲ್ಲಿ ಸಾಧಿಸಿದ ಪ್ರಪ್ರಥಮ ಗೆಲುವಾಗಿದೆ. ಹೀಗಾಗಿ ಈ ಗೆಲುವನ್ನು ಭಾರತೀಯ ತಂಡದ ಆಟಗಾರರು ಹೆಚ್ಚು ಸಂಭ್ರಮಿಸಿದ್ದಾರೆ.

ಇನ್ನು ಈ ಗೆಲುವಿನ ಸಂಭ್ರಮವನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೆಂಚುರಿಯನ್‌ನ ಹೋಟೆಲ್ ಸಿಬ್ಬಂದಿಗಳ ಜೊತೆಗೆ ಕುಣಿದು ಸಂಭ್ರಸಿದ್ದಾರೆ. ತಂಡದ ಆಟಗಾರರು ಹೋಟೆಲ್‌ಗೆ ಆಗಮಿಸುವ ಸಂದರ್ಭದಲ್ಲಿ ಸಂಗೀತದೊಂದಿಗೆ ಸ್ವಾಗತವನ್ನು ಕೋರಿದ್ದರು ಹೋಟೆಲ್ ಸಿಬ್ಬಂದಿಗಳು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರರು ಕೂಡ ಹೆಜ್ಜೆ ಹಾಕಿದ್ದಾರೆ. ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಜೊತೆಗೆ ತಂಡದ ಇತರ ಸದಸ್ಯರು ಕೂಡ ಸಾಥ್ ನೀಡಿದ್ದರು.

ಕನ್ನಡಿಗರ ಜೊತೆಯಾಟವೇ ನಿರ್ಣಾಯಕ: ದ. ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಗೆಲ್ಲಲು ಕಾರಣವಾದ 4 ಅಂಶಗಳುಕನ್ನಡಿಗರ ಜೊತೆಯಾಟವೇ ನಿರ್ಣಾಯಕ: ದ. ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಗೆಲ್ಲಲು ಕಾರಣವಾದ 4 ಅಂಶಗಳು

ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ 60 ರನ್‌ಗಳ ಕೊಡುಗೆ ನೀಡಿ ಪ್ರಮುಖ ಕೊಡುಗೆ ನೀಡಿದ್ದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಕೂಡ ಹೋಟೆಲ್ ಸಿಬ್ಬಂದಿಗಳೊಂದಿಗೆ ಹೆಜ್ಜೆ ಹಾಕಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ. ಅಲ್ಲದೆ ಅನುಭವಿ ಆಟಗಾರರಾದ ಆರ್ ಅಶ್ವಿನ್, ಚೇತೇಶ್ವರ್ ಪುಜಾರ ಹಾಗೂ ಮೊಹಮ್ಮದ್ ಸಿರಾಜ್ ಕೂಡ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಇನ್ನು ಮತ್ತೊಂದು ವಿಡಿಯೋದಲ್ಲಿ ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ ಹಾಗೂ ಆರ್ ಅಶ್ವಿನ್ ಕೂಡ್ ಹಾಗೂ ಮೊಹಮ್ಮದ್ ಸಿರಾಜ್ ಕೂಡ ಹೋಟೆಲ್ ಸಿಬ್ಬಂದಿಗಳ ಜೊತೆಗೆ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಆರ್ ಅಶ್ವಿನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ "ಸಾಮಾನ್ಯವಾಗಿ ಒಂದ್ಯ ಗೆದ್ದ ನಂತರದ ಚಿತ್ರಗಳು ಬೋರಿಂಗ್ ಆಗಿರುತ್ತದೆ. ಹಾಗಾಗಿ ಚೇತೇಶ್ವರ್ ಪೂಜಾರ ಪ್ರಥಮ ಬಾರಿಗೆ ನನ್ನ ಹಾಗೂ ಮೊಹಮ್ಮದ್ ಸಿರಾಜ್ ಅವರೊಂದಿಗೆ ಕಾಲು ಕುಣಿಸುವ ಮೂಲಕ ಈ ಕ್ಷಣವನ್ನು ಸ್ಮರಣೀಯ ಗೊಳಿಸುವ ನಿರ್ಧಾರ ಮಾಡಿದರು. ಎಂತಾ ಅದ್ಭುತವಾದ ಗೆಲುವು" ಎಂದು ಬರೆದುಕೊಂಡಿದ್ದಾರೆ ಆರ್ ಅಶ್ವಿನ್.

ಫ್ಲ್ಯಾಶ್‌ಬ್ಯಾಕ್ 2021: ಮುಂದುವರಿದ ಕೊಹ್ಲಿ ಶತಕದ ಬರ: ಈ ವರ್ಷ ಒಟ್ಟಾರೆ ವಿರಾಟ್ ಪ್ರದರ್ಶನ ಹೇಗಿತ್ತು?ಫ್ಲ್ಯಾಶ್‌ಬ್ಯಾಕ್ 2021: ಮುಂದುವರಿದ ಕೊಹ್ಲಿ ಶತಕದ ಬರ: ಈ ವರ್ಷ ಒಟ್ಟಾರೆ ವಿರಾಟ್ ಪ್ರದರ್ಶನ ಹೇಗಿತ್ತು?

ಇನ್ನು ಟೀಮ್ ಇಂಡಿಯಾದ ಬೌಲಿಂಗ್ ಮೊಹಮ್ಮದ್ ಶಮಿ ಹಾಗೂ ರಿಷಭ್ ಪಂತ್ ಈ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ದಾಖಲಿಸಿದ್ದಾರೆ. ಇದಕ್ಕಾಗಿ ವಿಶೇಷ ಕೇಕ್‌ಅನ್ನು ಹೋಟೆಲ್ ಸಿಬ್ಬಂದಿಗಳು ಸಿದ್ಧಪಡಿಸಿದ್ದರು. ಈ ಕೇಕ್‌ಅನ್ನು ಪಂತ್ ಹಾಗೂ ಶಮಿ ಕಟ್ ಮಾಡಿ ಸದಸ್ಯರಿಗೆ ಸಂಭ್ರಮ ಹಂಚಿಕೊಂಡರು. ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪಡೆದು ಮಹತ್ವದ ಮೈಲಿಗಲ್ಲು ಸಾಧಿಸಿದ್ದರೆ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಆಗಿ 100 ಬಲಿ ಪಡೆದು ಸಾಧನೆ ಮಾಡಿದ್ದಾರೆ. ಪಂತ್ ಎಂಎಸ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು ಭಾರತದ ಪರವಾಗಿ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ವಿಕೆಟ್ ಕೀಪರ್ ಎನಿಸಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಅವರ ಅದ್ಭುತ ಶತಕದ ನೆರವಿನಿಂದ ಭಾರತ ಸವಾಲಿನ ಮೊತ್ತವನ್ನು ಪೇರಿಸಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಭಾರತೀಯ ವೇಗಿ ಮೊಹಮ್ಮದ್ ಶಮಿ ದಾಳಿಗೆ ನಲುಗಿ 197 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ 130 ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿತ್ತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಭಾರತ ನೀಡಿದ 304 ರನ್‌ಗಳ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡವನ್ನು 200 ರನ್‌ಗಳಿಗೆ ಮುನ್ನವೇ ಆಲೌಟ್ ಮಾಡುವ ಮೂಲಕ ಭಾರತ 113 ರನ್‌ಗಳ ಅಂತರದಿಂದ ಭರ್ಜರಿ ಗೆಲುವಿಗೆ ಕಾರಣವಾದರು.

ಡೀನ್ ಎಲ್ಗರ್ ವಿಕೆಟ್ ಪಡೆಯಲು ಬುಮ್ರಾಗೆ ಸಹಾಯವಾಯಿತು ಕೊಹ್ಲಿ ಹೇಳಿದ ಆ ಒಂದು ಮಾತುಡೀನ್ ಎಲ್ಗರ್ ವಿಕೆಟ್ ಪಡೆಯಲು ಬುಮ್ರಾಗೆ ಸಹಾಯವಾಯಿತು ಕೊಹ್ಲಿ ಹೇಳಿದ ಆ ಒಂದು ಮಾತು

ಈ ಗೆಲುವಿನೊಂದಿಗೆ ಭಾರತ 2018ರಲ್ಲಿ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಕ್ಯಾಲೆಂಡರ್ ವರ್ಷವೊಂದರಲ್ಲಿ ಗೆದ್ದಿದ್ದ ದಾಖಲೆಯನ್ನು ಸರಿಗಟ್ಟಿದೆ. 2018ರಲ್ಲಿ 4 ವಿದೇಶಿ ಪಂದ್ಯಗಳಲ್ಲಿ ಭಾರತ ಗೆದ್ದಿತ್ತು. ಈ ಬಾರಿಯೂ ಆ ಸಾಧನೆಯನ್ನು ಪುನರಾವರ್ತಿಸಿದೆ. ಹೀಗಾಗಿ ಭಾರತೀಯ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾಧಿಸಿದ ವಿಶೇಷ ಸಾಧನೆಯಿಂದಾಗಿ 2021ಅನ್ನು ಸ್ಮರಣೀಯವಾಗಿಸಿದೆ.

Story first published: Friday, December 31, 2021, 11:14 [IST]
Other articles published on Dec 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X