ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ. ಆಫ್ರಿಕಾ: 64ನೇ ಅರ್ಧ ಶತಕವನ್ನು ಪುತ್ರಿಗೆ ಅರ್ಪಿಸಿದ ಕೊಹ್ಲಿ: ವಿಡಿಯೋ

Ind vs SA: Virat Kohli hits 64th ODI half-century, dedicates to his daughter Vamika
ವೈರಲ್ ಆಯ್ತು ವಾಮಿಕ ವಿರಾಟ್ ಫೋಟೋ | Oneindia Kannada

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿಯೂ ಅರ್ಧ ಶತಕವನ್ನು ಸಿಡಿಸಿ ಮಿಂಚಿದ್ದಾರೆ. ಈ ಅರ್ಧ ಶತಕವನ್ನು ಕೂಡ ವಿರಾಟ್ ಕೊಹ್ಲಿಗೆ ಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ದಕ್ಷಿಣ ಆಪ್ರಿಕಾ ವಿರುದ್ಧ ಮತ್ತೊಂದು ಅದ್ಭುತ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ 84 ಎಸೆತಗಳಲ್ಲಿ 65 ರನ್‌ಗಳನ್ನು ಗಳಿಸಿ ಕೇಶವ್ ಮಹರಾಜ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್‌ಗೆ ಸೇರಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿಯೂ ತಮ್ಮ 71ನೇ ಶತಕವನ್ನು ಬಾರಿಸಲು ವಿಫಲವಾಗಿದ್ದು ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಆದರೆ ವಿರಾಟ್ ಕೊಹ್ಲಿ 64ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಾಮಿಕಾ ಕೂಡ ಸಾಕ್ಷಿಯಾಗಿದ್ದರು. ವಿರಾಟ್ ಕೊಹ್ಲಿ ತಮ್ಮ ಅರ್ಧ ಶತಕವನ್ನು ಪುತ್ರಿಕೆ ಅರ್ಪಿಸಿ ಸಂಭ್ರಮಿಸಿದ್ದಾರೆ.

ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇವರೇ, ಇದಕ್ಕೆಲ್ಲಾ ವಿರಾಟ್ ಭಯ ಪಡಬಾರದು: ಮಾಜಿ ಕ್ರಿಕೆಟಿಗ!ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇವರೇ, ಇದಕ್ಕೆಲ್ಲಾ ವಿರಾಟ್ ಭಯ ಪಡಬಾರದು: ಮಾಜಿ ಕ್ರಿಕೆಟಿಗ!

ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿದ್ದ ಭಾರತ ಮೂರನೇ ಪಂದ್ಯದಲ್ಲಿ ಗೆಲುವಿನ ಗುರಿಯಿಟ್ಟು ಕಣಕ್ಕಿಳಿದಿತ್ತು. ಆದರೆ ದಕ್ಷಿಣ ಆಫ್ರಿಕಾ ತಂಡದ ಆನುಭವಿ ಆಟಗಾರ ಕ್ವಿಂಟನ್ ಡಿಕಾಕ್ ಭರ್ಜರಿ ಶತಕದ ನೆರವಿನಿಂದ 287 ರನ್‌ಗಳನ್ನು ಗಳಿಸಿದೆ. ಇದನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ನಾಯಕ ಕೆಎಲ್ ರಾಹುಲ್ ತಂಡದ ಮೊತ್ತ 18 ರನ್‌ಗಳಿದ್ದಾಗ ವಿಕೆಟ್ ಕಳೆದುಕೊಂಡರು. ನಂತರ ಎರಡನೇ ವಿಕೆಟ್‌ಗೆ ಜೊತೆಯಾದ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಮತ್ತೊಂದು ಅದ್ಭುತ ಜೊತೆಯಾಟವನ್ನಾಡಿದರು.

ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 98 ರನ್‌ಗಳ ಅದ್ಭುತ ಜೊತೆಯಾಟವನ್ನು ಆಡಿದರು. ಈ ಸಂದರ್ಭದಲ್ಲಿ 61 ರನ್‌ಗಳಿಸಿದ್ದ ಧವನ್ ವಿಕೆಟ್ ಕಲೆದುಕೊಂಡರು. ನಂತರ ವಿರಾಟ್ ಕೊಹ್ಲಿ ತಮ್ಮ ಎಚ್ಚರಿಕೆಯ ಆಟವನ್ನು ಮುಂದುವರಿಸಿದ್ದರು. ತಾಳ್ಮೆಯಿಮದ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ 84 ಎಸೆತಗಳನ್ನು ಎದುರಿಸಿ 5 ಬೌಂಡರಿಗಳ ನೆರವಿನಿಂದ 65 ರನ್‌ಗಳಿಸಿದರು.

ಈ ಸಂದರ್ಭದಲ್ಲಿ ಮಹಾರಾಜ್ ಎಸೆತಕ್ಕೆ ಎದುರಾಳಿ ತಂಡದ ನಾಯಕ ಟೆಂಬಾ ಬವುಮಾಗೆ ಕ್ಯಾಚ್ ನೀಡಿ ಕೊಹ್ಲಿ ನಿರ್ಗಮಿಸಿದ್ದಾರೆ. ವಿರಾಟ್ ಕೊಹ್ಲಿ ನಿರ್ಗಮನದ ಬಳಿಕ ಟೀಮ್ ಇಂಡಿಯಾ ಮತ್ತೊಂದು ಕುಸಿತವನ್ನು ಕಂಡಿತು. ಹೀಗಾಗಿ ಅಂತಿಮ ಪಂದ್ಯದಲ್ಲಿಯೂ ಭಾರತ ಸಂಕಷ್ಟದ ಸಂದರ್ಭವನ್ನು ಎದುರಿಸಿದೆ.

ಕೊಹ್ಲಿ, ರಾಹುಲ್ ನಡುವೆ ಬಿರುಕಿದೆ; ಇದಕ್ಕೆ ಪಂದ್ಯದ ವೇಳೆ ನಡೆದ ಈ ಘಟನೆಯೇ ಸಾಕ್ಷಿ ಎಂದ ಮಾಜಿ ಕ್ರಿಕೆಟಿಗಕೊಹ್ಲಿ, ರಾಹುಲ್ ನಡುವೆ ಬಿರುಕಿದೆ; ಇದಕ್ಕೆ ಪಂದ್ಯದ ವೇಳೆ ನಡೆದ ಈ ಘಟನೆಯೇ ಸಾಕ್ಷಿ ಎಂದ ಮಾಜಿ ಕ್ರಿಕೆಟಿಗ

ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಜಯಂತ್ ಯಾದವ್, ದೀಪಕ್ ಚಹಾರ್, ಪ್ರಸಿದ್ಧ್ ಕೃಷ್ಣ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್
ಬೆಂಚ್: ಋತುರಾಜ್ ಗಾಯಕ್ವಾಡ್, ನವದೀಪ್ ಸೈನಿ, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ವೆಂಕಟೇಶ್ ಅಯ್ಯರ್, ಭುವನೇಶ್ವರ್ ಕುಮಾರ್

ದಕ್ಷಿಣ ಆಫ್ರಿಕಾ ಆಡುವ ಬಳಗ: ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ಐಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಡ್ವೈನ್ ಪ್ರಿಟೋರಿಯಸ್, ಸಿಸಂದಾ ಮಗಾಲಾ
ಬೆಂಚ್: ವೇಯ್ನ್ ಪಾರ್ನೆಲ್, ಜಾರ್ಜ್ ಲಿಂಡೆ, ಕೈಲ್ ವೆರ್ರೆನ್ನೆ, ಜುಬೇರ್ ಹಮ್ಜಾ, ಮಾರ್ಕೊ ಜಾನ್ಸೆನ್, ತಬ್ರೈಜ್ ಶಮ್ಸಿ

Story first published: Monday, January 24, 2022, 10:19 [IST]
Other articles published on Jan 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X