ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ.ಆಫ್ರಿಕಾ ವಿರುದ್ಧದ ಸರಣಿಗೆ ಮುನ್ನ ಟೀಮ್ ಇಂಡಿಯಾಗೆ ಅಮೂಲ್ಯ ಸಲಹೆ ನೀಡಿದ ವಾಸಿಂ ಜಾಫರ್

Ind vs SA: Wasim Jaffer gives valuable suggestion to Team india for 1st test against south africa

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಈವರೆಗೆ ಟೆಸ್ಟ್ ಸರಣಿ ಗೆಲ್ಲಲು ಸಾಧ್ಯವಾಗದಿರುವ ಕಾರಣದಿಂದಾಗಿ ಈ ಬಾರಿ ಈ ಕೆಟ್ಟ ದಾಖಲೆಯನ್ನು ಅಳಿಸಿ ಹಾಕಲು ವಿರಾಟ್ ಕೊಹ್ಲಿ ಪಡೆ ಸರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ಭಾರತೀಯ ಕ್ರಿಕೆಟ್ ತಂಡಕ್ಕೆ ಅಮೂಲ್ಯವಾದ ಸಲಹೆಯೊಂದನ್ನು ನೀಡಿದ್ದಾರೆ. ಹಿಂದಿನ 2018ರ ಸರಣಿಯಲ್ಲಿ ಮಾಡಿದ ತಪ್ಪನ್ನು ಉಲ್ಲೇಖಿಸಿರುವ ಜಾಫರ್ ಇದಕ್ಕೆ ಯಾವ ರೀತಿಯಾಗಿ ಸಿದ್ಧತೆಯನ್ನು ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ 2018ರಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಅನುಭವಿಸಿದ ಭಾರೀ ಹಿನ್ನೆಡೆಯನ್ನು ಬೊಟ್ಟು ಮಾಡಿದ್ದಾರೆ. ಆ ಹಿನ್ನೆಡೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ತಮಡದ ಸಂಯೋಜನೆಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಯನ್ನು ಕೂಡ ಸಲಹೆಯ ರೂಪದಲ್ಲಿ ತಿಳಿಸಿದ್ದಾರೆ. ಜಾಫರ್ ನೀಡಿರುವ ಈ ಸಲಹೆ ಕುತೂಹಲ ಕೆರಳಿಸುವಂತಿದೆ.

ಕಪಿಲ್ ದೇವ್ ನೋಡಿ ಕಲಿಯಿರಿ: ಕೊಹ್ಲಿ-ರೋಹಿತ್‌ಗೆ ಸಲಹೆ ನೀಡಿದ ಬಲ್ವಿಂದರ್ ಸಿಂಗ್ ಸಂದುಕಪಿಲ್ ದೇವ್ ನೋಡಿ ಕಲಿಯಿರಿ: ಕೊಹ್ಲಿ-ರೋಹಿತ್‌ಗೆ ಸಲಹೆ ನೀಡಿದ ಬಲ್ವಿಂದರ್ ಸಿಂಗ್ ಸಂದು

ಒಮ್ಮೆ ಮಾತ್ರ 250ರ ಗಡಿ ದಾಟಿತ್ತು ಎಂದ ಜಾಫರ್

ಒಮ್ಮೆ ಮಾತ್ರ 250ರ ಗಡಿ ದಾಟಿತ್ತು ಎಂದ ಜಾಫರ್

2018ರಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾಗೆ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಮೂರು ಪಂದ್ಯಗಳನ್ನು ಆಡಿತ್ತು. ಈ ಮೂರು ಪಂದ್ಯಗಳ ಆರು ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಕೇವಲ ಒಂದು ಬಾರಿ ಮಾತ್ರವೇ 250 ರನ್‌ಗಳ ಗಡಿ ದಾಟಲು ಯಶಸ್ವಿಯಾಗಿತ್ತು. ಈ ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡ ಎಲ್ಲಾ 20 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೂ 2-1 ಅಂತರದಿಂದ ಸರಣಿಯನ್ನು ಕಳೆದುಕೊಂಡಿತ್ತು ಎಂಬ ಅಂಶವನ್ನು ವಾಸಿಂ ಜಾಫರ್ ಉಲ್ಲೇಖಿಸಿದ್ದಾರೆ.

7+4 ಸಂಯೋಜನೆಯ ಸಲಹೆ ನೀಡಿದ ಜಾಫರ್

7+4 ಸಂಯೋಜನೆಯ ಸಲಹೆ ನೀಡಿದ ಜಾಫರ್

ಭಾರತ ಹಾಗೂ ದಕ್ಷಿಣ ಆಫ್ರಿಕಾದ ಈ ಟೆಸ್ಟ್ ಸರಣಿಯ ಬಗ್ಗೆ ಮಾತನಾಡಿರುವ ವಾಸಿಂ ಜಾಫರ್ ಟೀಮ್ ಇಂಡಿಯಾ ಈ ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಯಾವ ರೀತಿಯ ಸಂಯೋಜನೆಯೊಂದಿಗೆ ಕಣಕ್ಕಿಳಿಯಬೇಕೆಂದು ಸಲಹೆಯನ್ನು ನೀಡಿದ್ದಾರೆ. ವಾಸಿಂ ಜಾಫರ್ ತಮ್ಮ ಪ್ರಕಾರ ಭಾರತ 7+4 ಮಾದರಿಯಲ್ಲಿ ಕಣಕ್ಕಿಳಿಯುವುದು ಉತ್ತಮ ಎಂದಿದ್ದಾರೆ. ಬೂಮ್ರಾ, ಶಮಿ, ಸಿರಾಜ್ ಮತ್ತು ಆರ್ ಅಶ್ವಿನ್ ಬೌಲರ್‌ಗಳಾಗಿ ಕಣಕ್ಕಿಳಿಯುವುದು ಉತ್ತಮ ಎಂದಿದ್ದಾರೆ ವಾಸಿಂ ಜಾಫರ್.

ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚುವರಿ ಬ್ಯಾಟರ್ ಅಗತ್ಯ

ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚುವರಿ ಬ್ಯಾಟರ್ ಅಗತ್ಯ

ಇನ್ನು ಈ ಹಿಂದಿನ 2018ರ ಸರಣಿಯಲ್ಲಿ ಭಾರತ ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿಸಿರುವ ಹಿನ್ನೆಡೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಟೀಮ್ ಇಂಡಿಯಾ ಓರ್ವ ಹೆಚ್ಚುವರಿ ಬ್ಯಾಟರ್‌ನಿಂದಿಗೆ ಕಣಕ್ಕಿಳಿಯುವುದು ಉತ್ತಮ ಎಂದಿದ್ದಾರೆ. ಅಂದರೆ ಇತ್ತೀಚಿನ ವಿದೇಶಿ ಸರಣಿಯಲ್ಲಿ ಭಾರತ ತಂಡ ಪಾಲಿಸಿಕೊಂಡು ಬರುತ್ತಿರುವ ಆರು ಮಂದಿ ದಾಂಡಿಗರು ಹಾಗೂ ಐವರು ಬೌಲರ್‌ಗಳ ಬದಲಿಗೆ 7 ಮಂದಿ ಬ್ಯಾಟರ್ ಹಾಗೂ ನಾಲ್ಕು ಮಂದಿ ಬ್ಯಾಟರ್‌ಗಳು ಉತ್ತಮ ಎಂಬ ಸಲಹೆಯನ್ನು ನೀಡಿದ್ದಾರೆ ವಾಸಿಂ ಜಾಫರ್. ಈ ಮೂಲಕ ಭಾರತ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿದೆ ಎಂಬ ಅಭಿಪ್ರಾಯವನ್ನು ಜಾಫರ್ ವ್ಯಕ್ತಪಡಿಸಿದ್ದಾರೆ.

Virat ಟೈಮ್ ಮುಗೀತು ಈಗ Ganguly ಟೈಮ್ ಅಂತಾ ರವಿ ಶಾಸ್ತ್ರಿ ಹೇಳಿದ್ಯಾಕೆ? | Oneindia Kannada
ಭಾರತ ದಕ್ಷಿಣ ಆಫ್ರಿಕಾ ಸರಣಿ

ಭಾರತ ದಕ್ಷಿಣ ಆಫ್ರಿಕಾ ಸರಣಿ

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್ 26ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಸೆಂಚೂರಿಯನ್‌ನಲ್ಲಿ ನಡೆದರೆ ಎರಡನೇ ಪಂದ್ಯ ಜನವರಿ 3-7ರವರೆಗೆ ಜೊಹನ್ಸ್‌ಬರ್ಗ್‌ನಲ್ಲಿ ನಡೆಯಲಿದೆ. ನಾಲ್ಕನೇ ಪಂದ್ಯ ಕೇಪ್‌ಟೌಟ್‌ನಲ್ಲಿ ಜನವರಿ 11ರಿಂದ 15ರವರೆಗೆ ನಡೆಯಲಿದೆ. ಈ ಟೆಸ್ಟ್ ಸರಣಿಯ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಕೂಡ ನಡೆಯಲಿದ್ದು ಈ ಪಂದ್ಯಗಳು ಜನವರಿ 19, 21 ಹಾಗೂ 23ರಂದು ನಡೆಯಲಿದೆ.

ಟೀಮ್ ಇಂಡಿಯಾ ಸ್ಕ್ವಾಡ್: ವಿರಾಟ್ ಕೊಹ್ಲಿ (ನಾಯಕ), ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ಪ್ರಿಯಾಂಕ್ ಪಾಂಚಾಲ್, ಶ್ರೇಯಸ್ ಅಯ್ಯರ್, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮೀಸಲು ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ಅರ್ಜನ್ ನಾಗ್ವಾಸ್ವಾಲ್ಲಾ, ದೀಪಕ್ ಚಾಹರ್

Story first published: Friday, December 24, 2021, 16:37 [IST]
Other articles published on Dec 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X