ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA: ಉತ್ತಮವಾಗಿ ಆಡಿದ್ರೂ ಶಿಖರ್ ಧವನ್‌ಗೆ ಏಕೆ ಅವಕಾಶವಿಲ್ಲ? ಇಲ್ಲಿದೆ ಕಾರಣ!

Shikhar dhawan

ಬಿಸಿಸಿಐ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಇಬ್ಬರು ಹೊಸಬರನ್ನು ಒಳಗೊಂಡಂತೆ ಇತ್ತೀಚೆಗೆ ಫಾರ್ಮ್‌ನಲ್ಲಿರುವ ಹೆಚ್ಚಿನ ಆಟಗಾರರನ್ನು ಭಾರತ ತಂಡಕ್ಕೆ ಪರಿಗಣಿಸಲಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ ಕೆ.ಎಲ್ ರಾಹುಲ್ ಭಾರತವನ್ನು ಮುನ್ನಡೆಸಲಿದ್ದಾರೆ. ಭಾರತ ತಂಡಕ್ಕೆ ಹಲವು ಅಗ್ರ ಆಟಗಾರರನ್ನು ಪರಿಗಣಿಸಲಾಗಿದ್ದರೂ, ಕೆಲವು ಆಟಗಾರರ ಅನುಪಸ್ಥಿತಿಯು ಕರಿನೆರಳು ಬೀರಿತು. ಇವುಗಳಲ್ಲಿ ಶಿಖರ್ ಧವನ್ ಕೂಡ ಒಬ್ಬರು.

ಭಾರತದ ಹಿರಿಯ ಎಡಗೈ ಆರಂಭಿಕ ಆಟಗಾರ ಐಪಿಎಲ್‌ನಲ್ಲಿ ಸ್ಥಿರವಾಗಿ ಆಡುತ್ತಿದ್ದಾರೆ. ಈ ಬಾರಿ ಪಂಜಾಬ್ ಕಿಂಗ್ಸ್ ಸ್ಟಾರ್ ಧವನ್ 14 ಪಂದ್ಯಗಳಲ್ಲಿ 460 ರನ್ ಗಳಿಸಿದ್ದರು. ಧವನ್ ಸ್ಟ್ರೈಕ್‌ರೇಟ್‌ 122.36 ಆಗಿದೆ. ದಿನೇಶ್ ಕಾರ್ತಿಕ್ ಸೇರಿದಂತೆ ಭಾರತ ತಂಡಕ್ಕೆ ವಾಪಸ್ ಕರೆಸಿಕೊಂಡರೂ ಧವನ್ ಅವರನ್ನು ಕೈಬಿಟ್ಟಿರುವುದರ ವಿರುದ್ಧ ಟೀಕೆ ಬಲವಾಗಿದೆ. ಒಂದು ಹಂತದಲ್ಲಿ ಶಿಖರ್ ಧವನ್ ಕೂಡ ಭಾರತವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ತಂಡ ಪ್ರಕಟವಾದಾಗ ಧವನ್ ತಂಡದಲ್ಲೇ ಇಲ್ಲದಿರುವುದು ಆಶ್ಚರ್ಯಕ್ಕೆ ಕಾರಣವಾಯಿತು.

ರಾಹುಲ್ ದ್ರಾವಿಡ್ ನಿರ್ಧಾರ

ರಾಹುಲ್ ದ್ರಾವಿಡ್ ನಿರ್ಧಾರ

ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ನಿರ್ಧಾರವೇ ಧವನ್ ಅವರನ್ನು ಕೈಬಿಡಲು ಕಾರಣ ಎಂದು ವರದಿಯಾಗಿದೆ. ಬಿಸಿಸಿಐನ ಹಿರಿಯ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ಇದನ್ನು ವರದಿ ಮಾಡಿದೆ. ತಂಡ ಪ್ರಕಟವಾಗುವ ಮುನ್ನವೇ ಈ ಬಗ್ಗೆ ದ್ರಾವಿಡ್ ಧವನ್ ಗೆ ಹೇಳಿದ್ದರು ಎಂದು ಅವರು ಬಹಿರಂಗಪಡಿಸಿದ್ದಾರೆ.

''ಶಿಖರ್ ಧವನ್ ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಸೇವೆ ಸಲ್ಲಿಸಿದ ಆಟಗಾರ. ಆದರೆ ಟಿ20ಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಬೇಕಿದೆ. ಅಂತಹ ದೃಢ ನಿರ್ಧಾರ ತೆಗೆದುಕೊಂಡ ರಾಹುಲ್ ದ್ರಾವಿಡ್ ಅವರ ನಿರ್ಧಾರವನ್ನ ಬೆಂಬಲಿಸಿದ್ದೇವೆ. ತಂಡವನ್ನು ಆಯ್ಕೆ ಮಾಡುವ ಮೊದಲು ದ್ರಾವಿಡ್ ಧವನ್ ಅವರಿಗೆ ತಿಳಿಸಿದ್ದರು" ಎಂದು ಬಿಸಿಸಿಐ ಮೂಲಗಳು ಇನ್‌ಸೈಡ್ ಸ್ಪೋರ್ಟ್ಸ್‌ಗೆ ತಿಳಿಸಿವೆ.

ಅಕ್ಟೋಬರ್‌ನಲ್ಲಿ ನಡೆಯಲಿದೆ ಐಸಿಸಿ ಟಿ20 ವಿಶ್ವಕಪ್

ಅಕ್ಟೋಬರ್‌ನಲ್ಲಿ ನಡೆಯಲಿದೆ ಐಸಿಸಿ ಟಿ20 ವಿಶ್ವಕಪ್

ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್‌ ಎದುರಾಗಲಿದ್ದು, ಭಾರತ ಉತ್ತಮ ತಂಡವನ್ನು ಸಿದ್ಧಪಡಿಸಬೇಕಿದೆ. ಆಸ್ಟ್ರೇಲಿಯಾದ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಧವನ್ ಅನುಭವದ ಹೊರತಾಗಿಯೂ, ಸ್ಟ್ರೈಕ್‌ರೇಟ್‌ ಕಳಪೆಯಾಗಿದೆ. ವೇಗವಾಗಿ ರನ್‌ ಗಳಿಸುವ ಸಾಮರ್ಥ್ಯವಿರುವ ಯುವ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿರುವ ಕಾರಣ ಭಾರತ ಧವನ್ ಅವರನ್ನು ಪರಿಗಣಿಸದಿದ್ದರೂ ಆಶ್ಚರ್ಯವಿಲ್ಲ. ಟಿ20 ವಿಶ್ವಕಪ್‌ನಲ್ಲಿ ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಓಪನಿಂಗ್‌ ಬ್ಯಾಟಿಂಗ್ ಇಳಿಯಲು ಯುವ ಆಟಗಾರರ ಪೈಪೋಟಿ

ಓಪನಿಂಗ್‌ ಬ್ಯಾಟಿಂಗ್ ಇಳಿಯಲು ಯುವ ಆಟಗಾರರ ಪೈಪೋಟಿ

ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್ ಮತ್ತು ಪೃಥ್ವಿ ಶಾ ಅವರು ಆರಂಭಿಕ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಧವನ್ ಅವರನ್ನು ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ಪರಿಗಣಿಸಿಲ್ಲ. ಹೀಗಾಗಿ ಭಾರತ ಧವನ್ ಅವರನ್ನು ಕೈಬಿಟ್ಟಿದೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಧವನ್ ಭಾರತದ ಪ್ರಮುಖ ಪರಿಗಣನೆಯಾಗಿದೆ. ಇದೇ ಫಾರ್ಮ್‌ನಲ್ಲಿ ಮುಂದುವರಿದರೆ, 2023ರ ಏಕದಿನ ವಿಶ್ವಕಪ್‌ನಲ್ಲಿ ಧವನ್‌ಗೆ ರೋಹಿತ್‌ನೊಂದಿಗೆ ಓಪನಿಂಗ್ ಅವಕಾಶ ಸಿಗಬಹುದು.

ನೋ ಬಾಲ್ ಗೆ ರನ್ ಔಟ್ ಆಗೋದು ಅಂದ್ರೆ ಇದೇನಾ | OneIndia Kannada
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತದ ಸ್ಕ್ವಾಡ್‌

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತದ ಸ್ಕ್ವಾಡ್‌

ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ) (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

Story first published: Wednesday, May 25, 2022, 10:05 [IST]
Other articles published on May 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X