ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SL: ಮಹಿಳಾ ಟಿ20ಯಲ್ಲಿ ಮಿಥಾಲಿ ರಾಜ್ ದಾಖಲೆ ಹಿಂದಿಕ್ಕಿದ ಹರ್ಮನ್‌ಪ್ರೀತ್ ಕೌರ್

Ind vs SL: Harmanpreet Kaur To Surpass Mithali Rajs Record In Womens T20

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಶನಿವಾರ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಸಾಧನೆಯನ್ನು ಹಿಂದಿಕ್ಕಿ ಮಹಿಳಾ ಟಿ20 ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ ಸ್ಕೋರರ್ ಎನಿಸಿಕೊಂಡಿದ್ದಾರೆ.

IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆIND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ

ಶ್ರೀಲಂಕಾ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಈ ಸಾಧನೆ ಮಾಡಿದರು, ಈ ಪಂದ್ಯದಲ್ಲಿ ಕೌರ್ 31 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮ ಪಂದ್ಯ ದಂಬುಲ್ಲಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಜೂನ್ 27ರಂದು ನಡೆಯಲಿದ್ದು, ವೈಟ್‌ವಾಶ್ ಮೇಲೆ ಭಾರತೀಯ ತಂಡ ಕಣ್ಣಿಟ್ಟಿದೆ.

123 ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ 2,372 ರನ್

123 ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ 2,372 ರನ್

ಪ್ರಸ್ತುತ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 123 ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ 2,372 ರನ್ ಗಳಿಸಿದ್ದಾರೆ. ಅವರು ಒಂದು ಶತಕ ಮತ್ತು ಆರು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಮಹಿಳಾ ಕ್ರಿಕೆಟ್‌ನ ಲೆಜೆಂಡ್ ಮಿಥಾಲಿ ರಾಜ್ ನಿವೃತ್ತಿಯ 16 ದಿನಗಳ ನಂತರ ಹರ್ಮನ್‌ಪ್ರೀತ್ ಕೌರ್ ಈ ದಾಖಲೆಯನ್ನು ನಿರ್ಮಿಸಿದರು.

ಮಾಜಿ ಆಟಗಾರ್ತಿ ಮಿಥಾಲಿ ರಾಜ್ 89 ಟಿ20 ಪಂದ್ಯಗಳಲ್ಲಿ 17 ಅರ್ಧಶತಕಗಳೊಂದಿಗೆ 38ರ ಸರಾಸರಿಯಲ್ಲಿ 2,364 ರನ್ ಗಳಿಸಿದ್ದಾರೆ.

ಭಾರತ ಸರಣಿಯಲ್ಲಿ 2-0 ಮುನ್ನಡೆ

ಭಾರತ ಸರಣಿಯಲ್ಲಿ 2-0 ಮುನ್ನಡೆ

ಹರ್ಮನ್‌ಪ್ರೀತ್ ಕೌರ್ ನಾಯಕಿಯ ಆಟವಾಡಿದರು ಮತ್ತು ಅವರ 31 ರನ್‌ಗಳ ನೆರವಿನಿಂದ ಭಾರತವು ಶನಿವಾರದಂದು ದಂಬುಲ್ಲಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಐದು ವಿಕೆಟ್‌ಗಳ ಜಯ ಸಾಧಿಸಲು ಸಹಾಯ ಮಾಡಿತು. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ, ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈ ವಶ ಮಾಡಿಕೊಂಡಿದೆ.

ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರ 39 ರನ್‌ಗಳು ಎರಡನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಚೇಸಿಂಗ್‌ಗೆ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು.

ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ 30 ರನ್ ಜೊತೆಯಾಟ

ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ 30 ರನ್ ಜೊತೆಯಾಟ

126 ರನ್ ಬೆನ್ನಟ್ಟಿದ ಭಾರತೀಯ ಮಹಿಳಾ ತಂಡ ಆರಂಭಿಕ ಜೋಡಿ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ 30 ರನ್ ಜೊತೆಯಾಟದೊಂದಿಗೆ ಉತ್ತಮ ಆರಂಭ ನೀಡಿದರು. ಅಲ್ಲಿಂದ ಮುಂದೆ ಹಿಂತಿರುಗಿ ನೋಡದ ಭಾರತ, ಐದು ಎಸೆತಗಳು ಬಾಕಿ ಇರುವಂತೆಯೇ ಐದು ವಿಕೆಟ್‌ಗಳ ಜಯ ಸಾಧಿಸಿತು. ಶ್ರೀಲಂಕಾ ಪರ ಇನೋಕಾ ರಣವೀರ ಮತ್ತು ಓಷದಿ ರಣಸಿಂಘೆ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ದೊಡ್ಡ ಮೊತ್ತವನ್ನು ಗಳಿಸುವಲ್ಲಿ ವಿಫಲವಾಯಿತು. ಲಂಕಾ ಪಡೆಗೆ ಉತ್ತಮ ಆರಂಭ ದೊರೆತರೂ ನಂತರದ ಬ್ಯಾಟರ್‌ಗಳಿಮದ ದೊಡ್ಡ ಮೊತ್ತ ಬರಲಿಲ್ಲ. ಹೀಗಾಗಿ ಸಾಧಾರಣ ಗುರಿಯನ್ನು ಭಾರತದ ಮುಂದಿಟ್ಟಿತು. ಇದನ್ನು ಭಾರತೀಯ ತಂಡ ಸುಲಭವಾಗಿ ಬೆನ್ನಟ್ಟುವ ಮೂಲಕ ಎರಡನೇ ಜಯ ಸಾಧಿಸಿತು.

7 ವಿಕೆಟ್ ಕಳೆದುಕೊಂಡು 125 ರನ್‌ ಗಳಿಸಿದ್ದ ಶ್ರೀಲಂಕಾ

7 ವಿಕೆಟ್ ಕಳೆದುಕೊಂಡು 125 ರನ್‌ ಗಳಿಸಿದ್ದ ಶ್ರೀಲಂಕಾ

ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಲಂಕಾ ತಂಡದ ಆರಂಭಿಕ ಆಟಗಾರ್ತಿಯರಾದ ವಿಶ್ಮಿ ಗುಣರತ್ನೆ (45 ರನ್) ಹಾಗೂ ನಾಯಕಿ ಚಾಮರಿ ಅಟ್ಟಪಟ್ಟು (43 ರನ್) ಸೇರಿಕೊಂಡು 87 ರನ್‌ಗಳ ಜೊತೆಯಾಟ ನೀಡಿದರು. ಆದರೆ ಇದಕ್ಕಾಗಿ ಅವರು 13.5 ಓವರ್‌ಗಳನ್ನು ಬಳಸಿಕೊಂಡರು.

ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಶ್ರೀಲಂಕಾ ತಂಡ ನಾಟಕೀಯ ಕುಸಿತ ಕಾಣುತ್ತಾ ಸಾಗಿತು. ಈ ಇಬ್ಬರು ಆಟಗಾರ್ತಿಯರು ಹೊರತುಪಡಿಸಿ ಮತ್ತೆ ಯಾವ ಬ್ಯಾಟರ್‌ಗಳು ಕೂಡ ಎರಡಂಕಿ ದಾಟಲು ಕೂಡ ಸಾಧ್ಯವಾಗಲಿಲ್ಲ. ಹೀಗಾಗಿ 7 ವಿಕೆಟ್ ಕಳೆದುಕೊಂಡು 125 ರನ್‌ಗಳಿಸಲಷ್ಟೇ ಶ್ರೀಲಂಕಾ ಶಕ್ತವಾಯಿತು.

Story first published: Sunday, June 26, 2022, 11:42 [IST]
Other articles published on Jun 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X