ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ ದ್ವಿತೀಯ ಟೆಸ್ಟ್: ಮಿಂಚಿದ ಬುಮ್ರಾ, ಶಮಿ; ಮೊದಲ ದಿನ ಮೇಲುಗೈ ಸಾಧಿಸಿದ ಭಾರತ

IND vs SL Second Test: Sri Lanka trail by 166 runs on Day 1

ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ ಟಿ ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳಲ್ಲಿ ಸೆಣಸಾಟ ನಡೆಸುತ್ತಿದೆ. ಇತ್ತಂಡಗಳ ನಡುವೆ ಮೊದಲಿಗೆ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಎಲ್ಲಾ ಪಂದ್ಯಗಳಲ್ಲಿಯೂ ಜಯ ಸಾಧಿಸಿದ ಟೀಮ್ ಇಂಡಿಯಾ ಪ್ರವಾಸಿ ಶ್ರೀಲಂಕಾಗೆ ವೈಟ್ ವಾಷ್ ಬಳಿದಿದೆ. ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸಾಲು ಸಾಲು ಸರಣಿಗಳಲ್ಲಿ ವೈಟ್ ವಾಷ್ ಸಾಧನೆ ಮಾಡಿದೆ. ಹೀಗೆ ಸಾಲು ಸಾಲು ಸರಣಿಗಳಲ್ಲಿ ಜಯಗಳಿಸುತ್ತಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿರುವ ಟೀಂ ಇಂಡಿಯಾ ಸದ್ಯ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದ್ದು, ಮೊದಲನೇ ಟೆಸ್ಟ್ ಪಂದ್ಯದಲ್ಲಿ ಬೃಹತ್ ಇನ್ನಿಂಗ್ಸ್‌ ಗೆಲುವನ್ನು ದಾಖಲಿಸುವುದರ ಮೂಲಕ ಸರಣಿಯಲ್ಲಿ 1 - 0 ಅಂತರದ ಮುನ್ನಡೆಯನ್ನು ಸಾಧಿಸಿದೆ.

RCB Captain IPL 2022: ಕೊನೆಗೂ ನಾಯಕನ ಹೆಸರು ಬಹಿರಂಗಪಡಿಸಿದ ಆರ್‌ಸಿಬಿ; ಈತನೇ ಹೊಸ ಸಾರಥಿ!RCB Captain IPL 2022: ಕೊನೆಗೂ ನಾಯಕನ ಹೆಸರು ಬಹಿರಂಗಪಡಿಸಿದ ಆರ್‌ಸಿಬಿ; ಈತನೇ ಹೊಸ ಸಾರಥಿ!

ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 222 ರನ್‌ಗಳ ಬೃಹತ್ ಅಂತರದ ಇನ್ನಿಂಗ್ಸ್ ಗೆಲುವು ಸಾಧಿಸಿದ್ದ ಟೀಮ್ ಇಂಡಿಯಾ ಸದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಗಲು ರಾತ್ರಿ ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 252 ರನ್‌ಗಳಿಗೆ ಆಲ್ಔಟ್ ಆಗಿದ್ದು, 92 ರನ್‌ಗಳ ಕೊಡುಗೆ ನೀಡಿದ ಶ್ರೇಯಸ್ ಐಯ್ಯರ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಕೂಡ ಹೇಳಿಕೊಳ್ಳುವಂತ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾಗಲಿಲ್ಲ.

ಹೀಗೆ ಟೀಮ್ ಇಂಡಿಯಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಶ್ರೀಲಂಕಾ ಊಟದ ವಿರಾಮದ ನಂತರ ತನ್ನ ಮೊದಲನೇ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿ ಪ್ರಾರಂಭದಲ್ಲಿಯೇ ವೇಗವಾಗಿ ತನ್ನ ಮೊದಲ 3 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಆಂಜೆಲೋ ಮ್ಯಾಥ್ಯೂಸ್‌ ಜವಾಬ್ದಾರಿಯುತ ಆಟದಿಂದ ಅಲ್ಪ ಮಟ್ಟಕ್ಕೆ ಸುಧಾರಿಸಿಕೊಂಡ ಶ್ರೀಲಂಕಾ ಮೊದಲನೇ ದಿನದಾಟದಂತ್ಯಕ್ಕೆ 6 ವಿಕೆಟ್‍ಗಳನ್ನು ಕಳೆದುಕೊಂಡು 86 ರನ್ ಗಳಿಸಿದೆ. ಈ ಮೂಲಕ ಟೀಮ್ ಇಂಡಿಯಾ 166 ರನ್‌ಗಳ ಮುನ್ನಡೆ ಸಾಧಿಸಿದೆ. ಶ್ರೀಲಂಕಾ ಪರ ಕುಸಾಲ್ ಮೆಂಡಿಸ್ 2 ರನ್, ದಿಮುತ್ ಕರುಣರತ್ನೆ 4 ರನ್, ಲಹಿರು ತಿರಿಮನ್ನೆ 8 ರನ್, ಆಂಜಲೋ ಮ್ಯಾಥ್ಯೂಸ್‌ 43 ರನ್, ಧನಂಜಯ ಡಿ ಸಿಲ್ವಾ 10 ರನ್, ಚರಿತ್ ಅಸಲಂಕ 5 ರನ್ ಗಳಿಸಿದ್ದು, ನಿರೋಷನ್ ಡಿಕ್ವೆಲ್ಲಾ ಅಜೇಯ 13 ರನ್ ಹಾಗೂ ಲಸಿತ್ಎಂಬುಲ್ದೇನಿಯಾ ಅಜೇಯ 0 ರನ್ ಗಳಿಸಿದ್ದಾರೆ. ಸದ್ಯ ಮೊದಲನೇ ದಿನ 6 ವಿಕೆಟ್‍ಗಳನ್ನು ಕಳೆದುಕೊಂಡು 166 ರನ್ ಹಿನ್ನಡೆ ಅನುಭವಿಸಿರುವ ಶ್ರೀಲಂಕಾ ಎರಡನೇ ದಿನ ಇದೇ ರೀತಿ ವಿಕೆಟ್ ಕಳೆದುಕೊಳ್ಳುತ್ತಾ ಅಥವಾ ಜವಾಬ್ದಾರಿಯುತ ಆಟವನ್ನಾಡಿ ಪುಟಿದೇಳುತ್ತಾ ಕಾದುನೋಡಬೇಕಿದೆ.

ಐಪಿಎಲ್: ಕೊಹ್ಲಿ, ವ್ಯಾಟ್ಸನ್ ನಂತರ ಆರ್‌ಸಿಬಿ ನಾಯಕನಾದ ಫಾಫ್; ಆರ್‌ಸಿಬಿಯ ಎಲ್ಲಾ ನಾಯಕರ ಪಟ್ಟಿ ಇಲ್ಲಿದೆಐಪಿಎಲ್: ಕೊಹ್ಲಿ, ವ್ಯಾಟ್ಸನ್ ನಂತರ ಆರ್‌ಸಿಬಿ ನಾಯಕನಾದ ಫಾಫ್; ಆರ್‌ಸಿಬಿಯ ಎಲ್ಲಾ ನಾಯಕರ ಪಟ್ಟಿ ಇಲ್ಲಿದೆ

ಭಾರತ ಪ್ಲೇಯಿಂಗ್ ಇಲೆವೆನ್: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ (ನಾಯಕ), ಹನುಮ ವಿಹಾರಿ, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್‌), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

Chinnaswamy Stadiumನಲ್ಲಿ ಅಭಿಮಾನಿಗಳಿಗಾಗಿ Virat Kohli ಏನೇನ್ ಮಾಡಿದ್ರು?ವೈರಲ್ ವಿಡಿಯೋ | Oneindia Kannada

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ದಿಮುತ್ ಕರುಣಾರತ್ನೆ (ನಾಯಕ), ಲಹಿರು ತಿರಿಮನ್ನೆ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್‌), ಸುರಂಗ ಲಕ್ಮಲ್, ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ

Story first published: Saturday, March 12, 2022, 23:11 [IST]
Other articles published on Mar 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X